49 ಸತ್ಯ ವಚರಿತ್ರೆ (M• ಕ ಅವನು ಕೋಟ್ಯಂತರ ಥನವನ್ನು ವೆಚ್ಚ ಮಾಡಿ ದೊಡ್ಡದಾಗಿ ಒಂದು ಗುಡಿಯನ್ನು ಕಟ್ಟಿಸಿ ಅದರಲ್ಲಿ ಪ್ರತಿಷ್ಟೆ ಮಾಡುವುದಕ್ಕೆ ತಕ್ಕ ದೇವರನ್ನು ಮಾಡಿ ಸಬೇಕೆಂದು ಕಾಶಿಯಿಂದ ಕೆಲಸಗಾರರನ್ನು ಕರೆಯಿಸಿ ದಿವ್ಯ ಸುಂದರವಿಗ್ರಹವುಳ್ಳ ದೇವರನ್ನು ಮಡಿ ಕೊಂಡು ಬನ್ನಿ ಎಂದು ಹೇಳಿದನು. ಸತ್ಯ-ಹಾಗೆ ಯಾರಾದರೂ ಮಾಡಿ ತಂದರೋ ? ಪಾರ್ವ-ಇಲ್ಲ, ಎಗ್ರಹ ಚೆನ್ನಾಗಿಲ್ಲದಿದ್ದರೆ ತಲೆ ತೆಗೆಯಿ ಸುವೆನೆಂದು ಅರಸನು ಹೆದರಿಸುತ್ತಿದ್ದನು. ಆದಕಾರಣ ಕೆಲಸಗಾರರೊಬ್ಬರೂ ಬರಲಿಲ್ಲ. ಹೀಗೆ ಕೆಲವು ಕಾಲ ಕಳೆದಮೇಲೆ ಒಂದು ದಿನ ಒಬ್ಬ ಮುದುಕನು ಉಳಿ ಸುತ್ತಿಗೆ ಮುಂತಾದುವನ್ನು ತೆಗೆದುಕೊಂಡು ಬಂದು ನೀನು ಅಪೇಕ್ಷಿಸಿದ ವಿಗ್ರಹವನ್ನು ಮಾಡುತ್ತೇನೆಂದು ಆ ರಾಜನ ಸಂಗತ ಹೇಳಿದನು, ಆ ಅರಸನು ವಿಗ್ರಹ ಚೆನ್ಯಾ ಗಿಲ್ಲದಿದ್ದರೆ ನಿನ್ನ ತಲೆ ತೆಗೆಯಿಸುತ್ತೇನೆಂದು ಅವನಿಗೂ ಹೇಳಿದನು, ಆದರೂ ಅವನು ಹೆದರದೆ ಹಾಗೆಯೇ ಆಗಲೆಂದು ಒಪ್ಪಿಕೊಂಡು ಒಂದನ್ನು ಮಾತ್ರ ಅಪೇಕ್ಷಿಸಿದನು. ಸತ್ಯ-ಅದೇನು ? ಪಾರ್ವ-ನಾನು ವಿಗ್ರಹದ ಕೆಲಸವನ್ನೆಲ್ಲಾ ಮಾಡಿ ಮುಗಿಸುವವರೆಗೂ ಯಾರೂ ಒಳಕ್ಕೆ ಬರಕೂಡದು. ಹಾಗೆ ಬಂದರೆ ಕೆಟ್ಟು ಹೋಗುವುದು, ನನ್ನ ಮೇಲೆ ತಪ್ಪಿಲ್ಲ ಎಂದು ಧೋರೆಗೆ ಹೇಳಿ ಒಪ್ಪಿಸಿ ಗುಡಿಯೊಳಗೆ ಹೊಕ್ಕು ಕದದ ಅಗುಳಿ ಯನ್ನು ಹಾಕಿಕೊಂಡನು. ಗುಡಿಯಲ್ಲಿ ಒಂದೇತರವಾಗಿ ರಾತ್ರಿಯೂ ಹಗಲೂ ಸುತ್ತಿಗೆಯ ಪೆಟ್ಟುಗಳು ಟಕ ಟಕ ಎಂದು ಕೇಳುತ್ತಿದ್ದುವು, ಹೀಗೆ ಮರು ತಿಂಗಳು ತುಂಬಿದಮೇಲೆ ಆ ಅರಸು ಅತಿ ಚಾಪಲ್ಯದಿಂದ ಆ ಮುದುಕನು ನಮ್ಮ ಗುಡಿಯ ಗೋಡೆಗಳನ್ನು ಒಡೆದುಹಾಕುತ್ತಿದಾನೆಯೋ ಏನೋ ಎಂದು ಕೊಂಡು ಬಾಗಿಲ ಹತ್ತಿರ ಬಂದು ಕೂಗಿದನು. ಎಷ್ಟು ಕೂಗಿದರೂ ಉತ್ತರವೇ ಬರಲಿಲ್ಲ. ಇದಲ್ಲದೆ ಗುಡಿಯಲ್ಲಿ ಎಲ್ಲೆಲ್ಲಿಯ ಸುತ್ತಿಗೆಯ ಪೆಟ್ಟುಗಳು ಮೊದಲಿ ಗಿಂತ ಹೆಚ್ಚಾಗಿ ಕೇಳಿಸಿದುವು. ಆಗ ಅರಸನು ಹಾರೆಗಳನ್ನು ತರಿಸಿ ಕದಗಳನ್ನು ಇಡರೆಸಿ ಒಳಗೆ ಹೋಗಿ ನೋಡಿದನು, ಅಲ್ಲಿ ವೆಂಡು ಕಾಲುಗಳ ಮೊಂಡ, ಕೈಗಳೂ ಉಳ್ಳ ಅಂಗವಿಕಾರವಾದ ಒಂದು ಬೊಂಬೆ ಇದ್ದಿತು. ಸತ್ಯ-ಆಗ ಅರಸು ಏನು ಮಾಡಿದನು ? ಪಾರ್ವ-ಇ೦ತಹ ವಿಗ್ರಹವನ್ನೆ ಕೆಮಾಡಿದೆ ಎಂದು ಕೇಳಿದನು. ಮುದುಕನು ನೀವು ನನ್ನ ಕೆಲಸ ಮುಗಿಯುವವರೆಗೆ ಒಳಗೆ ಬರದಿರಬೇಕಾಗಿದ್ದಿತು.
ಪುಟ:ಸತ್ಯವತೀ ಚರಿತ್ರೆ.djvu/೫೧
ಗೋಚರ