ಅಧ್ಯಾ. ೨.] ದಶಮಸ್ಕಂಧವು. ೧೭೩೬ ಸೇರಿ, ದೇವಕಿಯಿದ್ದ ಸೆರೆಮನೆಗೆ ಒಂದು, ಗರ್ಭಸ್ಥನಾದ ಶ್ರೀಹರಿಯನ್ನು ದೇಶಿಸಿ ಹೀಗೆಂದು ಸ್ತುತಿಸುವರು. ಹ್ಮ ರುದ್ರಾದಿಗಳು ದೇವಕೀಗರ್ಭಸ್ಥನಾದ } w+{ ಬ್ರಹ್ಮ
ಹರಿಯನ್ನು ಸ್ತುತಿಸಿದುದು, #: ಓ ದೇವಾ! ನೀನು ಸತ್ಯಸಂಕಲ್ಪನು. ಸತ್ಯವೆಂದು ಕರೆಯಲ್ಪಡುವ ಚಿದಚಿದಾತ್ಮಕವಾದ ಈ ಸಮಸ್ಯಪ್ರಪಂಚಕ್ಕಿಂತಲೂ ವಿಲಕ್ಷಣನು. ಮತ್ತು ಪ್ರಕೃತಿ ಪುರುಷ ಕಾಲ ಶರೀರಕನು, ಸರೂಪವಾದ ಈ ಜಗತ್ತಿಗೆ ನೀನೇ ಉತ್ಪತಿ ಸ್ಥಾನವು, ನಿದ್ವಿಕಾರವಾದ ಪರಮಾಕಾಶದಲ್ಲಿ ನೆಗೆಲೋಂಡ ವನು. ನಿನಗೆ ಇತರಜೀವಗಳಂತೆ ಜ್ಞಾನಸಂಕೋಚಾದಿಗಳಿಲ್ಲದುದರಿಂದ, ನೀನು ಸತ್ಯವೆನಿಸಿಕೊಂಡ ಜೀವನಿಗಿಂತಲೂ ಅತಿಶಯವಾದ ಸತ್ಯಸ್ವರೂಪ ವುಳ್ಳವನು. ಸೂರಚಂದ್ರರಿಬ್ಬರನ್ನೂ ನೇತ್ರವಾಗಿ ಉಳ್ಳವನು. ವಿಕಾರವಿ ಲ್ಲದ ಸತ್ಯಸ್ವರೂಪನು. ಇಂತಹ ಸೀನು ಮರೆಹೊಕ್ಕ ನಮ್ಮನ್ನು ಅನುಗ್ರ, ಹಿಸಬೇಕು. ಓ ದೇವಾ ! ಕಾರಕಾರಣರೂಪವಾದ ಈ ಪ್ರಪಂಚವೆಂಬ ವೃಕಕ್ಕೆ ನೀನೊಬ್ಬನೇ ಆಧಾರದಂಡವು! ಸುಖದುಃಖಗಳೆಂಬಿವೆರಡೂ ಅದರ ಫಲ ಗಳು ! ಸತ್ವರಜಸ್ತಮಸ್ಸುಗಳೆಂಬ ಗುಣಗಳು ಮೂರೂ ಮೂರು ಬೇ ರುಗಳು! ಧರಾದಿಪುರುಷಾರಗಳು ನಾಲ್ಕೂ ನಾಲ್ಕು ರಸಗಳು ! ಭೂ ತಸೂಕಗಳೆದೂ ಐದು ಬಿಳಲುಗಳು ! ಹಸಿವು, ಬಾಯಾರಿಕೆ, ಶೋ ತ, ಮೋಹ, ಜರೆ, ಮರಣಗಳೆಂಬ ಷಡೂರಿಗಳೂ ಆರು ಇಂದ್ರಿಯ ಗಳು! ಚರ್ಮ, ಮಾಂಸ, ರಕ್ತ, ಕೆನ್ನೀರು, ಮೇದಸ್ಸು, ಮಜ್ಜೆ, ಅಸ್ಥಿಗಳೆ ಂಬ ಸಪ್ತಧಾತುಗಳೂ, ಅದರ ಏಳು ತೊಗಟೆಗಳು! ಕೈಗಳೆರಡು, ಕಾಲುಗಳೆ ರಡು ತಲೆ, ಕಂಠ, ಎದೆ, ಜಠರಗಳೆಂಬಿವೆಂದೂ ಎಂಟುಶಾಖೆಗಳು ! ಕಣ್ಣು,
- ಕ್ಷೀರಾಬ್ಲಿಶಾಯಿಯಾದ ಪರಮಪುರುಷನು, ಹಿಂದೆ ತನಗೆ ಕೊಟ್ಟ ಅಭ ಯವಾಕ್ಯವನ್ನು ಸತ್ಯವಾಗಿ ಮಾಡಿದುದನ್ನು ನೋಡಿ, ಬ್ರಹ್ಮಾದಿದೇವತೆಗಳು ಪರಮ ಸಂತೋಷದಿಂದುಬ್ಬಿದವರಾಗಿ, ಕೇವಲ ಸತ್ಯಸ್ವರೂಪನನ್ನಾಗಿಯೇ ಅವನನ್ನು ಸ್ತುತಿ ಸುವರೆಂದು ಶ್ರೀಧರೀಯವ್ಯಾಖ್ಯಾನವು,