ಪುಟ:Vimoochane.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧

ಪಾತವಾದ ವಿಮರ್ಶೆ ಮಾಡಬೇಕೆಂಬುದೇ ನನ್ನ ಬಯಕೆ."
"ವಿಮರ್ಶಕರೂ ಆದ ನೀವೇ ಸ್ವತಃ ನಿಮ್ಮ ಕಾದಂಬರಿಯನ್ನು
ವಿಮರ್ಶಿಸಲ್ಲಿರಾ?"
"ಅದೊಳ್ಳೆಯ ಪ್ರಶ್ನೆ ಅದು ಯೋಗ್ಯ ಆಹ್ವಾನ. ಆ ಕೆಲಸ
ಮಾಡಬಲ್ಲೆ ಸ್ವಾಮಿಾ, ಖಂಡಿತವಾಗಿಯೂ ಮಾಡಬಲ್ಲೆ."
ಸಮಾಧಾನಗೊಂಡ ಅವರು, "ಇನ್ನೊಂದು ವಿಷಯ ಕೇಳಬೇ
ಕೂಂತ," ಎಂದರು.
"ಹತ್ ತುಕೇಳಿ"
"ಸಾಹಿತ್ಯ ವ್ಯವಸಾಯಿಯಾದ ನೀವು ಈಗಾಗಲೇ ಜೀವನದ
ನಾನಾ ಮುಖಗಳನ್ನು ಸಾಕಷ್ಟು ಕಂಡಿದ್ದೀರಿ... ಶ್ರಮಜೀವಿಗಳ
ಹೋರಾಟ, ರಾಜಕಾರಣ, ನಾಡಿನ ನಾನಾ ಭಾಗಗಳ ಜನ ಜೀವನ
......ನೀವು ಸ್ನಾನಮಾಡಿರುವ ಇಂಥ ಪುಣ್ಯ ತೀರ್ಥಗಳೆಷ್ಟೊ !”
"ದಿವಂಗತರಿಗೆ ಶ್ರದ್ಧಾಂಜಲಿ ಅನ್ನುವ ರೀತಿ ಹೇಳ್ತಿದೀರಲ್ಲ!"
"ಕ್ಷಮಿಸಿ. ನಿಮ್ಮ ಕಾದಂಬರಿ ಎಂದಾಗ ಓದುಗರಲ್ಲಿ ಒಂದು
ನಿರ್ದಿಷ್ಟ ಇರುತ್ತದೆ. ಈ ಕಾದಂಬರಿಯಿಂದ—"
"ಕೆಲವರಿಗೆ ಆಶ್ಚರ್ಯವಾಗಬಹುದಲ್ಲವೆ? ಆದರೆ ಆಗಲೇ
ಹೇಳಿದೆನಲ್ಲ, ಇದು ಒಬ್ಬ ವ್ಯಕ್ತಿಯ ಆವಾರಾ ಕತೆಯಲ್ಲ–ಇದು
ಬಾಳ್ವೆಯ ಕತೆ. ಪರಿಣಾಮಕಾರಿಯಾಗಿ ಬರಲೆಂಬ ಉದ್ದೇಶದಿಂದ,
ಒಂದು ಪ್ರಯೋಗವೆಂತ, ಈ ಪಾತ್ರಗಳನ್ನು ಸೃಷ್ಟಿಸಿದೆ. ಹೌದು,
ನಾನು ಬರೆಯಬೇಕೆಂದು ಯೋಚಿಸಿರುವ ಹಲವಾರು ವಸ್ತುಗಳು
ಹಾಗೆಯೆ ಉಳಿದಿವೆ. ನಾಡಿನ ದಕ್ಷಿಣಕ್ಕಿರುವ ಕಯ್ಯೂರು ರೈತರು,
ಉತ್ತರ ಕರ್ನಾಟಕದ ಕಾರವಾರದ ರೈತರು, ಮೈಸೂರಿನ ಕಾಗೋಡು
ರೈತರು, ಹೊಸ ಇತಿಹಾಸ ರಚಿಸಿದ್ದಾರೆ. ನಮ್ಮ ಕಾಫಿ ತೋಟಗಳ
ಕೆಲಸಗಾರರು, ಚಿನ್ನದ ಗಣಿಯ ಕಾರ್ಮಿಕರು,'ವರ್ಣರಂಜಿತ ಜೀವನ'
ನಡೆಸುತಿದ್ದಾರೆ. ಇವುಗಳಿಂದೆಲ್ಲ ಬರೆಹಗಾರ ಪ್ರಭಾವಿತನಾಗದೆ ಇರು
ವುದು ಸಾಧ್ಯವಿಲ್ಲ.... ಛಾಯಾಗ್ರಹಣವಾಗಬೇಕೆಂದು, ವರದಿ
ಯಾಗಬೇಕೆಂದು, ನಾನು ಹೇಳುವುದಿಲ್ಲ. ಹಾಗಾಗುವುದು ಸರಿಯಲ್ಲ.