ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೪೦೬ ತ್ರಯೋದಶಾಶ್ವಾಸಂ ನೆನೆದವನೆಂದು ಮಹಾಲೋ ಚನನೊರ್ಮೊದಲ ಆದನವಧಿ ಲೋಚನದಿಂದಂ ೧೫೬ !! {} ೧೫೭ ! ಅ೦ತದ೦ ಗರುಡಾಧಿಪನಪ್ಪ ಮಹಾಲೋಚನನದು ಬಹು ವಿದ್ಯಾ ಪರಿ ವಾರವನುಳ್ಳ ಸಿ೦ಹವಾಹಿನಿಯುಂ ಗರುಡವಾಹಿನಿಯುಮೆಂಬೆರಡು ವಿದ್ಯೆಗಳು ಮಂ ದಿವ್ಯಾಸ್ತ್ರಂಗಳುಮನುಯು ಕುಡೆಂದು ನಿಜಾನುಚರನಪ್ಪ ಚಿಂತಾವೇಗನೆಂಬ ದೇವಂಗೆ ಬೆಸಸುವುದುಮಾತಂ ಬ೦ದು ಸಿಂಹವಾಹಿನಿಯಂ ಶ್ರೀರಾಮಂಗೆ ಗರುಡ ವಾಹಿನಿಯಂ ಲಕ್ಷ್ಮೀಧರಂಗೆ ಸದ್ಭಾವದಿನೀವುದುಂ ಕಂ 1 ಮನ್ನಿಸಿ ಚಿಂತಾವೇಗಮ ಹೋನ್ನತನಂ ಜೈನ ಪೂಜೆಗೆಯ ತಿರ್ಹ ! ತನ್ನ ಪುಲಕಾವಲೀ ಸ೦ ಛನ್ನ ಶರೀರರ್ ಬಲಾಚ್ಯುತರ್ ಬಗೆಗೊಂಡರ್ ಚ : ಪ್ರಣತ ಜಗಜ್ಜನಂ ತ್ರಿಭುವನ ಪ್ರಭು ಕಾವ್ಯ ಕಲಾ ವಿಲಾಸಿನೀ ಪ್ರಣಯಿ ಪರಾರ್ಥ ಕಲ್ಪತರು ನಮ್ಮ ಮನೋರಥ ಸಿದ್ದಿ ದೇಶ ಭೂ !! ಪಣ ಕುಲಭೂಷಣ ಪ್ರತಿ ಪದಾಂಬುಜ ಸೇವೆಯಿನಾದುದೆಂದು ಸ ದ್ಗುಣ ಮಣಿಭೂಷಣಂ ಪುಲಕನಂ ತಳೆದಂ ಕವಿತಾ ಮನೋಹರ೦ ೧೨೮॥ ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣ ನಖಕಿರಣ ಚಂದ್ರಿಕಾ ಚಕೋರ ಭಾರತೀ ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ಬಲಾಚ್ಯುತ ಪುಣ್ಯ ಪ್ರಭಾವೋದಯ ವರ್ಣನಂ ತ್ರಯೋದಶಾಶ್ವಾಸಂ ಸ