ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೨೩

ಲ್ಲವೆ? ಇದಕ್ಕೆ ತಕ್ಕಷ್ಟು, ನಿನ್ನ ವಯೋಮಾನಕ್ಕೆ ಒಪ್ಪುವಷ್ಟು ಪ್ರತಿಭಾ ವಿಶೇಷವು ನಿನ್ನಲ್ಲಿರಬೇಡವೆ? ಚೆನ್ನಾಗಿ ಯೋಚಿಸಿನೋಡು. ಇವುಗಳಲ್ಲಿ ನೀನು ವಿಶೇಷ ಗಮನವಿಟ್ಟು ಶ್ರಮ ಸಹಿಷ್ಣುತೆಯಿಂದ ಅದನ್ನು ಅಭ್ಯಾಸಮಾಡಬೇಕೆಂಬುದೇ ನಮ್ಮ ಮುಖ್ಯ ಆಶಯವಾಗಿದೆ. ಅಷ್ಟೇ ಅಲ್ಲದೆ, ನಿನ್ನಲ್ಲಿ ನಮಗೆ ಉದಾಸೀನಕ್ಕೆ ಕಾರಣವಿಲ್ಲ. ನಿನ್ನ ಶ್ರೇಯೋಭಿವೃದ್ಧಿಗಾಗಿ ನಿನ್ನ ತಂದೆ ಪಡುತ್ತಿರುವ ಶ್ರಮವನ್ನು ಇಲ್ಲಿ ನಿನಗೆ ಹೇಗೆ-ಎಷ್ಟೆಂದು ವಿವರಿಸಿ ತಿಳಿಸಲಿ?

ಮಗುವೆ! ಇನ್ನಾದರೂ ಸಮಾಧಾನವನ್ನು ಹೊಂದು, ನಿನ್ನ ಒಡಹುಟ್ಟಿದವರಲ್ಲಿ ಮರುಕವನ್ನೂ, ನಿನ್ನ ಒಡನಾಡಿಗಳಲ್ಲಿ ಆಕೃತಿಮ ಸ್ನೇಹವನ್ನೂ, ನಿನ್ನ ಅಪ್ತ ವರ್ಗದಲ್ಲಿ ವಿಶ್ವಾಸಗೌರವವನ್ನೂ, ನಿನ್ನನ್ನು ಹೆತ್ತ ತಾಯಿತಂದೆಗಳಲ್ಲಿ ಮತ್ತು ಇತರ ಗುರು ಜನರಲಿ ದೈವಿಕ ಪ್ರೇಮದ ವಿಶುದ್ಧವಾದ ಭಕ್ತಿಭಾವವನ್ನೂ ಪ್ರದರ್ಶಿಸುವುದು ನಿನ್ನ ಮುಖ್ಯಧರ್ಮವೆಂದು ಚೆನ್ನಾಗಿ ನಂಬು, ಸುಕುಮಾರ ಮತ್ತೇನು ಹೇಳಲಿ?

ರವಿ:- (ತಲೆದೂಗುತ್ತ) ಅಮ್ಮ! ನೀವು ಏನನ್ನು ಹೇಳಿದರೂ ಕೇಳಲು ಹಿಂತೆಗೆಯುವವನಲ್ಲ, ಮತ್ತೆ ಯಾರ ವಿಚಾರದಲ್ಲಿಯಾದರೂ ನಾನು ಅವಿಧೇಯನಾಗಿರುವೆನಲ್ಲದೆ, ನಿಮ್ಮ ವಿಚಾರದಲ್ಲಿ ನನ್ನ ಮನೋಭಾವವು ಹೇಗಿರುವುದೆಂಬುದನ್ನು ಮಾತ್ರ ಹೇಳಿ ತಿಳಿಸಲಾರೆನು.

ವಸು:- ( ಆನಂದೋದ್ರೇಕದ ಗದ್ಗಸ್ವರದಿಂದ): ಸುಕುಮಾರ ನಮ್ಮ ವಿಚಾರದಲ್ಲಿ ಈಗ ನಿನಗಿರುವ ಗೌರವವೇ ಮುಂದೆಯೂ, ಎಂದೆಂದೂ ಸ್ಥಿರವಾಗಿರುತ್ತಿದ್ದರೆ, ನೀನು ಸುಪತ್ರನೆನ್ನಿಸುವುದರಲ್ಲಿ ಸಂಶಯವಿಲ್ಲ. ಆದರೆ ಈ ಕಾಲದ ಸೊಕ್ಕಿನ ಮಕ್ಕಳಂತೆ, ಕೇವಲ ತಮ್ಮ ಕಾರ್ಯ ಸಾಧನೆಯಾಗುವವರೆಗೆ ಮಾತ್ರ ಎಂದರೆ - ತಮ್ಮ ಬಾಹುಗಳಲ್ಲಿ ಶಕ್ತಿಯೂ ಅಂತರಂಗದಲ್ಲಿ ಇಂದ್ರಿಯಪಟುತ್ವವೂ ಅವುಗಳನ್ನು