ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಕಥಾಸಂಗ್ರಹ -೪ ನೆಯ ಭಾಗ ರಾದ ಅವರನ್ನು ವಧಿಸಿ ಪತ್ನಿಯನ್ನು ತೆಗೆದು ಕೊಂಡು ಬರುವುದಕ್ಕೆ ಕೈಯಲ್ಲಿ ಹರಿ ಯದೆ ಬಿಟ್ಟು ಬಿಟ್ಟನು ಎಂದು ಲೋಕದ ಜನರು ನನ್ನನ್ನು ಹೀಯಾಳಿಸುವರು ಎಂಬ ಯೋಚನೆಯಿಂದ ಬಂದು ನಿನ್ನನ್ನು ತೆಗೆದು ಕೊಂಡು ಬಂದ ರಾವಣನನ್ನು ಅವನ ಪತ್ರ ಮಿತ್ರ ಬಾ೦ಧವಾದಿಗಳೊಡನೆ ಕೊಂದು ನಿನ್ನನ್ನು ಸೆರೆಯಿಂದ ಬಿಡಿಸಿದೆನೇ ಹೊರತು ಪುನಃ ನಿನ್ನೊಡನೆ ಕೂಡಿ ಬಾಳಬೇಕೆಂಬ ದುರಾಲೋಚನೆಯಿಂದಲ್ಲ. ಒಂದು ಸಂವತ್ಸರದಿಂದಲೂ ದುಷ್ಟರೂ ಮೂರ್ಖರೂ ಪಾಪಕರ್ಮಾಸಕ್ತರೂ ಆದ ರಾಕ್ಷಸರ ಮನೆಯಲ್ಲಿದ್ದ ನಿನ್ನೊಡನೆ ನಾನು ತಿರಿಗಿ ಕೂಡಿ ಬದುಕಿದರೆ ಜಗತ್ತಿನ ಜನರು ಒಪ್ಪರು, ನೀನು ಭೂಮಿಯ ಮಗಳು, ಮಹಾ ಪತಿವ್ರತೆಯು, ಒಳ್ಳೆಯ ನಡತೆಯುಳ್ಳವಳು ಎಂಬುದನ್ನು ನಾನು ಚೆನ್ನಾಗಿ ಬಲ್ಲೆನು, ಆದಾಗ್ಯೂ ಲೋಕಾಪ ವಾದಕ್ಕೆ ಅಂಜಿ ನಡೆವುದು ಉತ್ತಮ ಕುಲದಲ್ಲಿ ಹುಟ್ಟಿದವರಿಗೆ ಆವಶ್ಯಕ ಧರ್ಮವು. ನಾನು ಏಕಪತ್ನಿವ್ರತಸ್ಥನಾದುದರಿಂದ ನಿನ್ನನ್ನು ಬಿಟ್ಟ ಮೇಲೆ ಮತ್ತೊಬ್ಬಳನ್ನು ಮದುವೆಯಾಗುವುದಿಲ್ಲ, ಇನ್ನು ಮೇಲೆ ನಾನು ಅಯೋಧ್ಯಾನಗರಕ್ಕೆ ಹೋಗಿ ನಾನು ಬರುವುದನ್ನೇ ನಿರೀಕ್ಷಿಸುತ್ತ ಪ್ರಾಣಧಾರಣೆಯನ್ನು ಮಾಡಿಕೊಂಡಿರುವ ಭರತನನ್ನು ಸಮ್ಮತಿಪಡಿಸಿ ಆತನಿಗೆ ಪಟ್ಟಾಭಿಷೇಕವನ್ನು ಮಾಡಿ ವೃದ್ದ ಭೂ ನನಗೆ ತಾಯಿಯ ಮತ್ತು ಪೂಜ್ಯಳೂ ಆದ ಕೌಸಲ್ಯಾದೇವಿಯನ್ನು ಸಂಗಡ * ಕರೆದು ಕೊಂಡು ತಪೋವ ನಕ್ಕೆ ಹೋಗಿ ಅಲ್ಲಿ ಪಾರಮಾರ್ಥಿಕ ಫಲಾಪೇಕ್ಷೆಯಿಂದ ದೇಹಾವಸಾನಕಾಲದ ವರೆ ಗೂ ತಪಸ್ಸನ್ನು ಮಾಡಿಕೊಂಡಿರುವೆನು, ನೀನು ನಿನ್ನ ತಂದೆಯಾದ ಜನಕರಾಜನ ಮನೆಗಾದರೂ ಅಥವಾ ನಿನ್ನ ಮನಸ್ಸು ಬಂದ ಇನ್ಯಾವ ಕಡೆಗಾದರೂ ಹೋಗ ಬಹುದು ಎಂದು ಹೇಳಿ ಸುಮ್ಮನಾಗಲು ; ಆಗ ಸೀತೆಯು ತನ್ನ ಮನಸ್ಸಿನಲ್ಲಿ ಸರ್ವಜ್ಞನಾದ ಈ ರಾಮಚಂದ್ರನು ಸಕಲ ಜಗಜೀವಿಜಾಲದ ಮನೋಗತಗಳನ್ನು ಚೆನ್ನಾಗಿ ಬಲ್ಲವನಾದಾಗ್ಯೂ ಆಕಳಂ ಕನಾದ ತಾನು ತನಗೆ ಬರುವ ಲೋಕಾಪವಾದವನ್ನು ತಪ್ಪಿಸಿಬಿಡುವುದಕ್ಕೋಸ್ಕರ ನನಗಿಂಥ ಮಾತುಗಳನ್ನು ಹೇಳುತ್ತಿರುವನು, ನಾನು ಮಹಾತ್ಯನಾದ ಈತನ ಚಿತ್ಯ ವೃತ್ತಿಗನುಸಾರವಾಗಿ ನಡೆದು ನನ್ನ ಸತ್ಯವನ್ನು ತೋರಿಸಿಕೊಳ್ಳುವೆನೆಂದು ಯೋಚಿಸಿ, ಗಡಗಡನೆ ನಡುಗಿ ಕಣ್ಣೀರುಗಳನ್ನು ಸುರಿಸುತ್ತ ನಮಸ್ಕರಿಸಿ ಶ್ರೀರಾಮನನ್ನು ಕುರಿತು--ಎಲೈ ಪ್ರಾಣಕಾಂತನೇ, ನೀನು ಕರುಣಿಸಿ ನನ್ನ ಕೈಹಿಡಿದಂದಿನಿಂದ ಅಯೋಧ್ಯೆಯಲ್ಲಿ ದ್ವಾದಶಸಂವತ್ಸರಗಳೂ ಅರಣ್ಯದಲ್ಲಿ ಹದಿಮರು ಸಂವತ್ಸರಗಳೂ ನಿನ್ನ ಸೇವೆಯನ್ನು ಮಾಡಿಕೊಂಡು ನಿನ್ನೊಡನೆ ಇದ್ದೆನಷ್ಟೆ, ಈ ವರೆಗೂ ನನ್ನ ನಡತೆ ಯಲ್ಲಿ ಎಳ್ಳಷ್ಟಾದರೂ ತಪ್ಪನ್ನು ಕಂಡಿಯಾ ? ಹಾಗೆ ಕಂಡಿದ್ದರೆ ಹೇಳು. ನಾನು ಇದುವರೆಗೂ ಲಂಕೆಯಲ್ಲಿ ಹೇಗಿದ್ದೆ ನೋ ಆ ಸ್ಥಿತಿಯನ್ನೆಲ್ಲಾ ಚೆನ್ನಾಗಿ ಕಂಡುಬಂದಿ ರುವ ನಿನ್ನ ಪ್ರಿಯ ದೂತನಾದ ಆಂಜನೇಯನು ಇದೋ ! ಇಲ್ಲೇ ನಿಂತಿರುವನು. ಇವನು ಆ ವರ್ತಮಾನವನ್ನೆಲ್ಲಾ ನಿನಗೆ ಮೊದಲೇ ಹೇಳಿರಬಹುದು, ನಿನಗಿಷ್ಟವಾದರೆ ಈಗಲೂ ನನ್ನೆದುರಿಗೆ ಕೇಳು. ಸರ್ವಪ್ರಕಾರದಲ್ಲೂ ನನಗೆ ಪತಿಯಾಗಿರುವೆ ನೀನು