ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಕಥಾಸಂಗ್ರಹ-೪ ನೆಯ ಭಾಗ ರವೆಯಾ ದರೂ ಕರುಣವುಳ್ಳವಳಾಗಿಲ್ಲವಲ್ಲಾ ! ಹಗಲಿರುಳುಗಳಲ್ಲೆಲ್ಲಾ ಎಡೆಬಿಡದೆ ನನ್ನೊಡನೆಯೇ ಆಡಿಕೊಂಡಿದ್ದ ನನ್ನ ಮುದ್ದು ಮರಿಪಾರಿವಾಳವೇ, ದಾಸನಾದ ನನ್ನನ್ನು ಅನಾಥನನ್ನಾಗಿ ಮಾಡಿ ಎಲ್ಲಿಗೆ ಹೋದೆ ? ದನಿದೋರು ! ಚಕ್ಕನೆ ಬಂದು ನನ್ನನ್ನು ಆಲಿಂಗಿಸು ! ನನ್ನನ್ನು ಬದುಕಿಸು ! ಎಂದು ವಿಧವಿಧವಾಗಿ ಪ್ರಲಾಪಿಸುತ್ತ ಅನ್ನೋದಕಗಳನ್ನು ತೊರೆದು, ಬಳ್ಳಿಗಳ ಪೊದರುಗಳಲ್ಲಿಯ ಮರಗಳ ಪೊಟರೆಗಳ ಲ್ಲಿಯ ಗಿರಿಗಳ ಗುಹೆಗಳಲ್ಲಿಯ ಸರಸೀರಗಳಲ್ಲಿಯ ಹೊಳೆಗಳ ದಡಗಳಲ್ಲಿಯ ಹುಡುಕುತ್ತ ಹಸಿವಿನಿಂದಲೂ ಬಾಯಾರಿಕೆಯಿಂದ ಕಂಗೆಟ್ಟು ಕಳವಳಗೊಂಡು ಬರುತ್ತ ಲಕ್ಷ್ಮಣನನ್ನು ನೋಡಿ-ಎಲೈ ಲಕ್ಷ್ಮಣನೇ, ಬೇಗ ಧನುರ್ಬಾಣಗಳನ್ನು ಕೊಡು. ಇದೋ, ಇಲ್ಲಿ ಬಿದಿರುವ ರಾಕ ಸನು ನನ್ನ ಪತಿ ಯಾದ ಸೀತೆಯನು ತಿಂದಿರುವನೆಂದು ಹೇಳುತ್ತಿರುವ ರಾಮನ ಮಾತುಗಳನ್ನು ಕೇಳಿ ಕಿಂಚಿಚ್ಚೆತನ್ಯದಿಂದ ಕೂಡಿದ್ದ ಜಟಾಯುಪಕ್ಷಿಯು ರಾಮನನ್ನು ಕುರಿತು-ಎಲೈ ರಾಮನೇ, ನಾನು ನಿನ್ನ ಮಡದಿಯನ್ನು ತಿಂದ ರಾಕ್ಷಸನಲ್ಲ, ಅವಣಸಮುದ್ರದಲ್ಲಿ ತ್ರಿಕೂಟವೆಂಬ ಪರ್ವ ತವಿರುವುದು, ಅದರ ಶಿಖರದಲ್ಲಿರುವ ಲಂಕೆಯೆಂಬ ನಗರಕ್ಕೆ ದೊರೆಯಾದ ದಶಕಂ ಠನೆಂಬ ರಾಕ್ಷಸಾಧಮನು ನನ್ನ ಪ್ರಾಣಗಳಿಗೆ ಅಂತ್ಯಾವಸ್ಥೆಯನ್ನು ತಂದು ನಿನ್ನ ಪ್ರಾಣವಲ್ಲಭೆಯನ್ನು ತೆಗೆದು ಕೊಂಡು ಹೋದನೆಂದು ಹೇಳಿ ಕೂಡಲೆ ಮೃತ ವಾ. ತು. ಆಗ ರಾಮನು ತನ್ನ ತಂದೆಯ ಮಿತ್ರನಾದ ಈ ಜಟಾಯುವು ಸೀತೆಯ ನ್ನು ಬಿಡಿಸಿಕೊಂಡು ಬರುವುದಕ್ಕಾಗಿ ರಾವಣನೊಡನೆ ಘೋರವಾದ ಯುದ್ಧ ಮಾಡಿ ಕಡೆಗೆ ಅವನಿಂದ ಗಾಯವಡೆದು ಸತ್ತುಹೋದನೆಂದು ತಿಳಿದು--ಹಾ ! ಅಯ್ಯೋ ! ಎಂದು ಆ ಪಕ್ಷಿ ಶವದ ಮೇಲೆ ಬಿದ್ದು ಹೊರಳುತ್ತ-ಎಲೈ, ತಮ್ಮನಾದ ಲಕ್ಷ್ಮಣನೇ, ನನಗೆ ಆಪತ್ತಿನ ಮೇಲೆ ಆಪತ್ತು ಬಂದೊದಗುತ್ತಿರುವುದನ್ನು ನೋಡಿದೆಯಾ ? ಮೊದ ಲು ರಾಜ್ಯವನ್ನೂ ರಾಜಭೋಗವನ್ನೂ ಬಿಟ್ಟು ತಾಯಿ ತಮ್ಮಂದಿರನ್ನು ತೊರೆದು ಅರ ಣ್ಯವಾಸಿಯಾಗಿ ತಂದೆಯನ್ನು ಕಳೆದು ಕೊಂಡು ಪ್ರಾಣಭೂತಳಾದ ನಾರಿಯನ್ನು ನೀಗಿ ಕಡೆಗೆ ಪಿತೃಪ್ರಾಯನಾದ ಜಟಾಯುವನ್ನೂ ತೀರಿಸಿಕೊಂಡು ನಿರ್ಭಾಗ್ಯನಾದ ನನ್ನ ಮಹಾ ವ್ಯಥಾಸಂಕಲಿತವಾದ ದುಃಖಾಗ್ನಿ ಯು ಪ್ರಸಿದ್ದಾಗ್ನಿಯನ್ನೂ ಕೂಡ ದಹಿಸಬಲ್ಲುದಲ್ಲಾ ! ಅನಾಥನಾದ ನಾನು ಏನು ಮಾಡಲಿ ? ಎಲ್ಲಿಗೆ ಹೋಗಲಿ ? ಯಾರನ್ನು ಮರೆಹೊಗಲಿ ? ಈ ಮಹಾದುರ್ದಶೆಯನ್ನು ಯಾರಿಗುಸುರಲಿ ? ನಿರಾ ಶ್ರಯನಾದ ನನಗೆ ಗತಿ ಯಾರು ? ನಾನು ಈ ಪಕ್ಷಿರಾಜನ ಸಂಗಡವೇ ಪ್ರಾಣವನ್ನು ಬಿಟ್ಟು ಯಮಲೋಕವನ್ನು ಸೇರುವೆನು, ನೀನು ಹಿಂದಿರುಗಿ ಅಯೋಧ್ಯೆಗೆ ಹೋಗಿ ಈ ನನ್ನ ದುಸ್ಸಿತಿಯನ್ನು ಕೌಸಲ್ಯಾ ಭರತಾದಿಗಳಿಗೆ ತಿಳಿಸುವವನಾಗೆಂದು ಹೇಳುತ್ತ ದುಃಖವೆಂಬ ಕಡಲಿನಲ್ಲಿ ಮುಳುಗಿ ಕಡೆಗಾಣದೆ ಪುನಃ ಲಕ್ಷ್ಮಣನನ್ನು ಕುರಿತು... ದುಷ್ಟನಾದ ರಾವಣನು ನನ್ನ ಪತ್ನಿಯನ್ನೂ ಅಪಹರಿಸಿ ಆಕೆಯನ್ನು ಬಿಡಿಸಿ ನನಗೆ ಸಹಾಯಮಾಡುವುದಕ್ಕಾಗಿ ಹೋದ ಪಕ್ಷಿರಾಜನನ್ನೂ ಕೊಂದು ಓಡಿಹೋಗಿ