ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

2

ನೆಲವೇ ತಿಂದು ಬಿಟ್ಟಿತು,_ಅವು ಮೊಳೆಯಲೇ ಇಲ್ಲ. ಮುದುಕಿಯು ಹಿಂದಿನ ವರ್ಷ ಸೇರಿಸಿಟ್ಟಿದ್ದ ಕಾಳು ಕಡ್ಡಿಯೆಲ್ಲವೂ ಚಳಿಗಾಲದ ವೇಳೆಗೇ ಮುಗಿದು ಹೋಯಿತು. ಇನ್ನು ಅವಳೂ ಅವಳ ಮಗನೂ ತಿನ್ನುವು ದೇನು? ಸೊಪ್ಪುಸೊದೆ ಕೂಡ ದೊರೆಯದು, ಮಾಡುವುದೇನು?__'ಉಪವಾಸವೊಂದೇ, ಮುದುಕಿಯು ಅದನ್ನೇ ಮಾಡಲು ಪ್ರಾರಂಭಿಸಿ, ಮಗನಿಗೆ ಮಾತ್ರ ಏ ನೇನೋ ಸಾಹಸದಿಂದ ಸಲ್ಪ ಗಂಜಿಮಾಡಿ ಹಾಕುತ್ತಿದ್ದಳು. ಎಷ್ಟು ದಿನ ತಾನೇ ಉಪವಾಸ ಮಾಡಲಾಗು ವುದು? ಅವಳಿಗೂ ಕಡೆಗಾಲವು ಸಮೀಪಿಸಿತು. ಅದ ಇವಳು ತಿಳಿದುಕೊಂಡು, ಮಗನಾದ ಪೃಥಿಪಾಲನನ್ನು ಬಳಿಗೆ ಕರೆದು, ಕುಳ್ಳಿರಿಸಿ, ಮುದ್ದಿಟ್ಟು, ಮೈದಡವಿ, ಹೀಗೆಂದಳು:__

ಕಂದ, ನಾನು ಹೇಳುವುದ ಕೇಳು, ಯಮಭಟರು ಬಂದು ನನ್ನನ್ನು ಕರೆಯುತ್ತಿರುವರು. ಅವರು ನನ್ನನ್ನು ಎಳೆದು ಕೊಂಡರಲ್ಲಿ ಹೋಗುವಷ್ಟರೊಳಗಾಗಿ ಒಂದು ವಿಷಯವನ್ನು ಹೇಳುವೆನು. ಅದನ್ನು ಈ ಹನ್ನೆರಡು ವರ್ಷಗಳಿಂದ ನಿನಗೆ ಹೇಳದೆ ಗುಟ್ಟಾಗಿಟ್ಟಿದ್ದೆನು. ಈಗ ಬಿಚ್ಚಿ ಹೇಳಬೇಕಾದಕಾಲ ಬಂದಿದೆ, ಕೇಳು....

ರಾಮಗಂಗೆಯ ಆಚೆಯದಡದಲ್ಲಿ ಪೂರ್ವದಲ್ಲಿ ಒಬ್ಬ ಮಹಾರಾಜನು ರಾಜ್ಯವಾಳುತ್ತಿದ್ದನು. ಆತನು ಚಂದ್ರ ವಂಶದವನು. ಆತನು ದೇವರ ಕೃಪೆಗೂ ಪ್ರಜೆಗಳ ವಿಶ್ವಾಸಕ್ಕೂ ಪಾತ್ರನಾಗಿದ್ದನು. ಆತನು ಕಟ್ಟಿಸಿದ