ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

3

ಅನೇಕ ದೇವಸ್ಥಾನಗಳೂ ಧರ್ಮಸತ್ರಗಳೂ ಆತನ ಔದಾರ್ಯವನ್ನು ಹೊಗಳುತ್ತಿವೆ. ಕಾಲಕ್ರಮದಲ್ಲಿ ಆ ಮಾರಾಯನು ಈ ಲೋಕವನ್ನು ಬಿಟ್ಟನು. ಆಗ ಆತನ ಧರ್ಮಪತ್ನಿಯು ಗರ್ಭವನ್ನು ಧರಿಸಿದ್ದಳು.ಪುರಾತನ ಸಂಪ್ರದಾಯದಂತೆ, ಆತನ ಸಿಂಹಾಸನಕ್ಕೆ ಆತನ ಮಗನೇ ಬಾಧ್ಯನಾಗಿದ್ದ ಕಾರಣ, ಜನರು ಆತನ ಪಟ್ಟದ ರನಿಯ ಬಸಿರಲ್ಲಿದ್ದ ಮಗುವನ್ನು ರಾಜನೆಂದೆಣಿಸಿ, ಆಕೆಯು ಹೆತ್ತಮೇಲೆ ಅದನ್ನು ಗಾದಿಯ ಮೇಲೆ ಕೂಡಿಸ ಬೇಕೆಂದು ನಿಶ್ಚಯಿಸಿದರು.

"ಆದರೆ ಆರಾಜನಿಗೆ ಬಲುದುಷ್ಟನಾದ ಒಬ್ಬ ತಮ್ಮನಿದ್ದನು, ಅವನು ರಾಜ್ಯವನ್ನ ಪಹರಿಸಬೇಕೆಂದು ಚಿಂತಿಸಿ, ಕೆಲವು ಕೆಟ್ಟ ಜನರ ಸಹಾಯದಿಂದ ತನ್ನ ಅತ್ತಿಗೆಯನ್ನು ಬಲುವಿಧವಾಗಿ ಕಾಡಿಸಿ, ಕಾಡಿಗೆ ಅಟ್ಟಿದನು

"ಅಯ್ಯೋ ಪಾಪ! ಆಕೆಯು ಮಹಾರಾಣಿ; ಅದರಲ್ಲಿಯೂ ಬಸುರಿ; ಎಂದೂ ನಡೆದವಳಲ್ಲ; ಕಷ್ಟಪಟ್ಟವಳಲ್ಲ, ಅಂತಹವಳಿಗೆ ಈಗ ಕಲ್ಲು ಮುಳ್ಳುಗಳಮೇಲೆ ನಡೆದು, ಎಲೆ ಕಾಯಿಗಳನ್ನು ತಿನ್ನುವಗತಿ ಬಂದಿತು....

"ಹೀಗಿರಲಾಗಿ, ಒಂದಾನೊಂದು ದಿನ ಅವಳೊಂದು ಕಡೆ ಜ್ಞಾನ ವಿಲ್ಲದೆ ಬಿದ್ದಿದ್ದಳು; ಅವಳ ಪಕ್ಕದಲ್ಲಿ ಆಗತಾನೆ ಹುಟ್ಟಿದ ಕೂಸೊಂದು ಬಿದ್ದಿತ್ತು. ಅದನ್ನಾರೋ ಆದಾರಿಯಲ್ಲಿ ಹೋಗುತ್ತಿದ್ದವರು ಕಂಡು, ಅವರನ್ನು ಪಕ್ಕದಲ್ಲಿದ್ದ ಗ್ರಾಮಕ್ಕೆ ಕರೆದುಕ್ಕೊಂಡುಹೋಗಿ