ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

24

ಳವರೆಗೂ ಯಾರಿಗೂ ಏನೂ ತೋರದೆ, ಎಲ್ಲರ ಕಂಬಗಳಂತೆ ನಿಂತಿದ್ದರು. ಸಾಲಭಂಜಿಕೆಯು 'ಮರಳಿ ಹೀಗೆಂದಿತು: "ಎಲೈ ರಾಜನೆ, ನಿನ್ನಲ್ಲಿ ವಿಕ್ರಮಾದಿತ್ಯನಲ್ಲಿದ್ದ ಶೌರ್ಯ, ಔದಾರ್ಯ, ಸಾಹಸ, ಸದ್ಗುಣಗಳು ಇರುವುದಾದರೆ ನೀನೀ ಸಿಂಹಾಸನವನ್ನೇರಲು ಯೋಗ್ಯನು.

ರಾಜ:__ವಿಕ್ರಮಾರ್ಕನ ಗುಣಗಳು ನನ್ನಲ್ಲಿಯೂ ಇವೆ. ಆತನಿಗಿಂತಲೂ ಹೆಚ್ಚಾಗಿಯೇ ನಾನು ವಾಚಕರನ್ನು ತೃಪ್ತಿಗೊಳಿಸಬೇಕೆಂದು ಇರುವೆನು."

ಸಾಲಭಂಜಿಕೆ:__ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳುವುದೊಂದು ಸದ್ಗಗುಣವೊ? "

ರಾಜನು ಇನ್ನೇನು ತಾನೆ ಹೇಳಿಯಾನು! ಸುಮ್ಮನಾಗಿ ತಲೆ ಬಗ್ಗಿಸಿ, ಆಶಾಭಂಗದಿಂದ ಬೇಯಿಸಲ್ಪಟ್ಟ ಹೃದಯವುಳ್ಳವನಾಗಿ ಅಂತಃಪುರವನ್ನು ಸೇರಿದನು."

***

ಕೆಲವು ದಿನಗಳು ಕಳೆದಮೇಲೆ ಪುನಃ ಭೋಜಮ ಹಾರಾಜನು ವಿಕ್ರಮ ಪೀಠವನ್ನಡರಲು ಯತ್ನಿಸಿದನು. 'ಈಸಲ ಎರಡನೆಯ ಸೋಪಾನದ ಸಾಲಭಂಜಿಕೆಯು ಈರೀತಿ ನುಡಿಯಿತು:

"ಎಲೈ ರಾಜನೆ, ಲಾಲಿಸು, ಪೂರ್ವದಲ್ಲಿ ವಿಕ್ರಮಾದಿತ್ಯನು ರಾಜನಾಗಿದ್ದಾಗ ಒಬ್ಬಾನೊಬ್ಬ ಬ್ರಾಹ್ಮಣನು ಚಿತ್ರಕೂಟಪ ರ್ವತದ ಬಳಿಯೆ ಅರಣ್ಯದಲ್ಲಿ ಬಹುಕಾಲ ಅತ್ಯುಗ್ರವಾಗಿ ತಪಸ್ಸು ಮಾಡುತ್ತಿದ್ದನು. ಆತನು ಜಗದಂಬಿಕೆಯನ್ನು ತೃಪ್ತಿಗೊಳಿಸು ವುದಕ್ಕಾಗಿ ಮಾಡಿದ ಹೋಮದ ಬೂದಿಯು ಬೆಟ್ಟ ಬೆಟ್ಟಗಳಾಗಿ