ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

61

ಹೇಳಿದನು. ಚಿತ್ರಗಾರನು ಇದ್ದ ಸಂಗತಿಯನ್ನು ಬಿನ್ನಯಿಸಲು, ಕವಿಕುಲತಿಲಕನಾದ ಕಾಳಿದಾಸ ಕೆಲವು ನಿಮಿಷಗಳು ಆ ಲೋಚಿಸಿ, "ಎಲೈ, ಅ ದರಂತೆ ಇರಲಿ! ಅದು ಆಕೆಯ ದೇಹದಲ್ಲಿರುವ ಕುರುಹನನ್ನೇ ಸೂಚಿಸುವದು? " ಎಂದನು. ಚಿತ್ರಗಾರನು ಆ ಪತ್ರದಿಂದ ಪ್ರತ್ಯುತ್ತರದಿಂದ ಸಂತುಷ್ಟುನಾದನು ವರಕವಿಗೆಳಿಗೂ ಶಾಸ್ತ್ರಜ್ಞರಿಗೂ ಇದೇ ವ್ಯತ್ಯಾಸ, ಶಾಸ್ತ್ರಜ್ಞರು ತಮ್ಮ ಶಾಸ್ತ್ರಗಳನ್ನು ಅಕ್ಷರಶಃ- ಚಾಚು ತಪ್ಪದಂತೆ ಅನುಸರಿಸುವರು, ವರಕವಿಗಳಾದರೋ ನಿಶ್ಚಯ ತತ್ತ್ವವನ್ನು ಮೊದಲೇ ತಿಳಿದಿರುವರು.

ಚಿತ್ರವು ದೊರೆಯಬಳಿಗೆ ಒಯ್ಯಲ್ಪಟ್ಟಿತು ಕಹಿಕಾಗ್ರೇಸರನಾದ ಭೋಜನ ಅದನ್ನು ನೋಡಿ ಆನಂದಿಸಿದರು ಆತನು ಆ ಚಿತ್ರದಲ್ಲಿನ ಮೂರ್ತಿಯ ಅಂಗಸೌಷ್ಟವವನ್ನು ನೋಡುತ್ತಿರುವಾಗ ಆತನ ದೃಷ್ಟಿಯು ಹರತ್ತಾಗಿ, ಆ ಕರಿಚುಕ್ಕೆಯ ಮೇಲೆ ಬೀಳಲೇಬಿತ್ತು! ಒಡವೇಯೇ ದೊರೆಯು ಚುಬ್ಬಂಟಿಕ್ಕಿದನು' ನಸುನಗುವಿನಿಂದ ಸೊಗಯಿಸುತ್ತಿದ್ದ ಮುಖವು ಕೋಪದಿಂದ ಸಂಕುಚಿತವಾಯಿತು! ಕ್ರೂರಭಾವದಿಂದ " ಏನೈ! ಈ ಮಚ್ಚೆಯಿರುವ ಸಂಗತಿಯ, ನಿನಗೆ ಹೇಗೆ ತಿಳಿಯಿತು? ಅದನ್ನು ಕುರಿತು ನಿನಗೆ ಹೇಳಿದವರಾರು? ಹೇಳದಿದ್ದರೆ, ಮರಣಶಾಸನವನ್ನು ವಿಧಿಸಿಯೇನು! "ಎಂದು ಗರ್ಜಿಸಿದನು. ಇನ್ನೇನುಗತಿ! ಚಿತ್ರಗಾರನ ಚಿಂತಗೆ ಪಾರವೇ ಇಲ್ಲ, ದಿಕ್ಕತೋರದೆ ಅವನು ಕಾಳಿದಾಸನ ಹೆಸರನ್ನು ಹೇಳಿಯೇಬಿಟ್ಟನು, ಭೋಜರು ವಿಸ್ಮಿತನಾದನು. ಕಾಳಿದಾಸನು ಅಲ್ಲಿಯೇ ಇದ್ದ ಚಿತ್ರಗಾರನಹೇಳಿಕೆ ಯನ್ನು ಕೇಳಿ ದನಾದರೂ ಬಾಯಿಬಿಡಲಿಲ್ಲ, ಭೋಜನ ಏನೇನೋ ಯೋಚಿಸಲಾರಂಭಿಸಿದನು. "ಅದು ಹೇಗಾದೀತು? ಆ ಗುರುತು ನನಗಲ್ಲದ ಮತ್ತೂಬ್ಬ ಪುರುಷನಿಗೆ ಹೇಗೆ ತಿಳಿದೇತು?