ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

62

ಅವಳ ಅಂತರಂಗ ಭಾಗದ ಗುರುತು ಕಾಳಿದಾಸನಿಗೆ ತಿಳಿಯಬೇಕಾದರೆ ಅದನ್ನವನು ಕಣ್ಣಾರ ನೋಡಿರಬೇಕು, ಅದು ನಿಜವೇ ಆದರೆ ಅವಳಿಗೂ ಅವನಿಗೂ ರಹಸ್ಯವಾಗಿ ಸಂಬಂಧವಿರಲೇಬೇಕು. ಹಾಗಿಲ್ಲದಿರುವುದು ಸಾಧ್ಯವಿಲ್ಲ." ಹೀಗೆಂದು ಯೋಚಿಸಿ, ಕಡೆಗೆ ಕಾಳಿದಾಸನಿಂದ ತನ್ನ ಸತಿಯು ಪಾತಿವ್ರತ್ಯವು ಕೆಟ್ಟು ಹೋಯಿತೆಂದು ನಿಶ್ಚಯಿಸಿದನು. ಹಾಗೆಯೇ ನಿಶ್ಚಯಿಸಿ, ಕಾಳಿದಾಸನಿಗೆ ಶಿರಚ್ಛೇದನ ಶಿಕ್ಷೆಯನ್ನು ವಿಧಿಸಿದನು, ಬುದ್ದಿ ಶಾಲಿಯಾದ ಭೋಜನ ಮಂತ್ರಿಯು ಈ ಸಂಗತಿಗಳನ್ನೆಲ್ಲಾ ತಿಳಿದು, ಕಾಳಿದಾಸನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು ಅವನ ತಲೆಯು ತೆಗೆಯುಲ್ಪಟ್ಟಿತೆಂದು ಅರಸಿಗೆ ವಿಜ್ಞಾಗಿಸಿದನ. ಆಮೇಲೆ ಸ್ವಲ್ಪ ಕಾಲ ಜರುಗಿತು.

ಒಂದಾನೊಂದುದಿನ ಭೋಜಪುತ್ರನು ಬೇಟೆಗಾಗಿ ಕಾಡಿಗೆ ಹೋದನು, ಕೆಲಸವಿಲ್ಲದ ಸೋಮಾರಿಗಳಿಗೆ "ಇಸ್ಪೀಟು " ಆಟವು ಹೇಗೆ ಪ್ರಿಯವೋ, ಮೃಗಯಾವ್ಯಸನವು ರಾಜಪುತ್ರರಿಗೆ ಹಾಗೆ "ಇಸ್ಪೀಟು" ಆಡಲು ಕೂತವರು ಹೇಗೆ ಆಟವನ್ನು ಬಿಡಲು, ಇಷ್ಟಪಡುವುದಿಲ್ಲವೋ, ಹಾಗೆಯೇ ರಾಜಪುತ್ರರು ಬೇಟೆಯಿಂದ ಹಿಂದಿರುಗಲು ಇಪ್ಪವುಳ್ಳವರಾಗುವುದಿಲ್ಲ, ಭೋಜನ ಮಗನು ಯಾವುದೋ ಒಂದು ಪ್ರಾಣಿಯನ್ನು ಹಿಂಬಾಲಿಸಿ ಕಾಡಿನೊಳಕ್ಕೆ ಬಲುದೂರಹೋದನು, ಅವನ ಚಾರರು ಅವನನ್ನು ಅನುಸರಿಸಲಾರದೆ ಹೋದರು, ಅಷ್ಟರಲ್ಲಿಯೇ ಸೂರ್ಯನು ಅಸ್ತಂ ಗತನಾದನು.

ವ್ಯಸನಿನ ಇವ ವಿದ್ಯಾ ಕ್ಷೀಯತೇ ಪಂಕಜಶ್ರೀಃ
ಗುಣಿನ ಇವ ವಿದೇಶೇ ದೈನ್ಯಮಾಯಾಂತಿ ಭೃಂಗಾಃ।
ಕುನೃಪತಿರಿವ ಲೋಕಂ ಪಿಡಿಯತ್ಯಂಧಕಾರಃ
ಧನಮಿವ ಕೃಪಣಸ್ಯ ವ್ಯರ್ಥತಾಮೇತಿ ಚಕ್ಷುಃ॥ (ಕಾಳಿದಾಸ)