88 ಕಥಾಸಂಗ್ರಹ-೪ ನೆಯ ಭಾಗ ಎಂಬಂತೆ ಥಳಥಳಾಯಮಾನವಾಗಿ ಚಂದ್ರನು ಉದಯಿಸಲು ; ಆ ಮೇಲೆ ಮಾರು ತಿಯು ಸುತ್ತಲೂ ದೃಷ್ಟಿ ಯಿಟ್ಟು ನೋಡಲು ; ಆಗ ಅಶೋಕವನವು ಸ್ಪಷ್ಟ ಫಲಭರಿತ ಗಳಾದ ವೃಕ್ಷಗಳಿಂದಲೂ ನಾನಾವಿಧ ಕುಸುಮ ರಂಜಿತವಾದ ಲತೆಗಳಿಂದಲೂ ಕಮಲ ಪುಂಜರಂಜಿತಗಳಾದ ಸರಸ್ಸುಗಳಿಂದಲೂ ಅತಿರಮ್ಯತೆಯನ್ನು ಹೊಂದಿ ಸ್ವರ್ಗಲೋಕದ ನಂದನವನದ ಸೊಬಗಿಗೆ ಇಮ್ಮಡಿಯಾಗಿ ಶೋಭಿಸುತ್ತಿದ್ದಿತು. ಅನಂತರದಲ್ಲಿ ಆ೦ಜ ನೇಯನು ಅತ್ಯಂತ ಸಂತೋಷವನ್ನು ಹೊಂದಿ ತಾನು ಕೂತಿದ್ದ ಸ್ಥಳದಿಂದ ಅಶೋಕ ವನಕ್ಕೆ ಹಾರಿ ಅದರ ಮಧ್ಯಪ್ರದೇಶದಲ್ಲಿ ಸುವರ್ಣದ ವೇದಿಕೆಗಳಿಂದ ಯುಕ್ತವಾಗಿ ಮೇರುಪರ್ವತದೋಪಾದಿಯಲ್ಲಿ ದಿವಾಕರಮಾರ್ಗವನ್ನು ಆಕ್ರಮಿಸಿಕೊಂಡು ವಿಸ್ಕಾ ರವಾದ ಶಾಖೆಗಳಿಂದ ನಿಬಿಡಛಾಯೆಯುಳ್ಳುದಾಗಿ ಒಪ್ಪುತ್ತಿರುವ ಒಂದು ಶಿಂಶುಪ ವೃಕ್ಷವನ್ನು ಕಂಡು ಅಲ್ಲಿ ರಾಘವನ ಪ್ರಿಯ ಪತ್ನಿ ಯಾದ ಸೀತಾದೇವಿಯು ರಾಮನನ್ನು ಚಿಂತಿಸುತ್ತ ರೋದಿಸುತ್ತಿರುವ ಧ್ವನಿಯನ್ನು ಕೇಳಿ ಇದೇನಿರಬಹುದೆಂದು ಬಂದು ಆ ವೃಕ್ಷದ ಕೊಂಬೆಯನ್ನೇರಿ ಕುಳಿತು ಕೊಂಡು ನೋಡಲು, ಅದರ ಬುಡದಲ್ಲಿ ಮಲನ ವಸ್ತ್ರವನ್ನು ಟ್ಟು ಉಪವಾಸದಿಂದ ಕೃಶಾಂಗಿಯಾಗಿ ಹುಲಿಗಳ ಮಧ್ಯದಲ್ಲಿ ಸಿಕ್ಕಿರುವ ಹರಿಣಿಯಂತೆಯ ಓದದಲ್ಲಿ ಬಿದ್ದಿರುವ ಗಜಪೋತದಂತೆಯ ರಾಕ್ಷಸಸ್ತ್ರೀಯರ ಸೆರೆಯಲ್ಲಿ ಸಿಕ್ಕಿ ಸುವರ್ಣದ ವೇದಿಕೆಯ ಮೇಲಿರುವ ಸೀತಾದೇವಿಯನ್ನು ಕಂಡು ಕಣ್ಣೀರನ್ನು ತುಂಬಿ ಒಂದು ಮುಹೂರ್ತಮಾತ್ರ ಧ್ಯಾನಾಸಕ್ತನಾಗಿದ್ದು ಅನಂತ ರದಲ್ಲಿ ಸೀತೆಯನ್ನು ಕುರಿತು-ಎಲೈ ಜಾನಕಿಯೇ, ಕೇಳು, ಶ್ರೀರಾಮನು ಪ್ರಸ್ತ ವಣಗಿರಿಗೆ ಬಂದು ಸುಗ್ರೀವನೊಡನೆ ನಿನ್ನ ಚಿಂತೆಯಿಂದಲೇ ಇದ್ದಾನೆ. ಆತನು ಇಲ್ಲಿಗೆ ಬೇಗ ಬಂದು ರಾವಣನನ್ನು ಸಂಹರಿಸಿ ನಿನ್ನನ್ನು ಕರೆದು ಕೊಂಡು ಹೋಗುವನು. ಈಗ ಲಂಕಾ ಪಟ್ಟಣವನ್ನು ನೋಡಿಬರುವಂತೆ ನನ್ನನ್ನು ಮಾತ್ರ ಕಳುಹಿಸಿದನು ಎಂದು ಹೇಳಲು ; ಸೀತೆಯು ಆ ಮಾತುಗಳನ್ನು ಕೇಳಿದರೂ ಭಯದಿಂದ ಮಾತಾಡದೆ ಸುಮ್ಮನೆ ಇರಲು ; ಆಗ ಆಂಜನೇಯನು ರಪ್ಪೆಯನ್ನು ಮುಚ್ಚದೆ ಸೀತಾದೇವಿಯನ್ನೇ ನೋಡುತ್ತಿದ್ದನು. ಅಷ್ಟರಲ್ಲಿ ಬೆಳಗಿನ ಜಾವವಾಗಲು ; ದಶಕಂಠನು ಎಚ್ಚೆತ್ತು ತನ್ನ ಸ್ತ್ರೀಯರ ನೈಲಾ ಜತೆಯಲ್ಲಿ ಕರೆದು ಕೊಂಡು ನಿಜಾಲಯದಿಂದ ಹೊರಡಲು ; ಕೂಡಲೆ ಅನೇಕ ಜನ ರಾಕ್ಷಸರು ಬೊಂಬಾಳಗಳನ್ನು ಹಿಡಿದು ಕೊಂಡು ಮುಂದೆ ನಡೆದರು. ಆಗ ರಾವಣನು ಪುಷ್ಟಕವನ್ನೇರಿ ಬಂದು ಅಶೋಕವನಮಧ್ಯ ದಲ್ಲಿಳಿದು ಅತಿ ಶೀಘ್ರದಿಂದ ರಾಕ್ಷಸಿಯರು ತಂದಿಟ್ಟ ಮಣಿಪೀಠದ ಮೇಲೆ ಲೋಕಸುಂದರಿಯಾದ ಮಂಡೋದರಿ ಯೊಡನೆ ಕುಳಿತುಕೊಳ್ಳಲು ; ಸೀತಾದೇವಿಯು ತಲೆಯನ್ನು ಬೊಗ್ಗಿಸಿ ಕಣ್ಣುಗಳನ್ನು ಮುಚ್ಚಿ ಕೊಂಡು ಹೇಮಲತೆಯಂತಿರುವ ತನ್ನ ಶರೀರವನ್ನು ತನ್ನ ತಲೆಗೂದಲಿಂದ ಮುಚ್ಚಿಕೊಂಡು ಭೂಮಿಯನ್ನೇ ನೋಡುತ್ತ ಮನಸ್ಸಿನಲ್ಲಿ ಶ್ರೀರಾಮಚಂದ್ರನ ಪಾದ ಗಳನ್ನೇ ಧ್ಯಾನಿಸುತ್ತಿದ್ದಳು. ಆಗ ಸ್ಮಶಾನದಲ್ಲಿ ತಂದಿಟ್ಟ ದೇವತಾ ಪ್ರತಿಮೆಯಂತಿ ರುವ ಸೀತೆಯ ಬಳಿಗೆ ದುಷ್ಟನಾದ ರಾವಣನು ತನ್ನ ದೂತಿಯರನ್ನು ಕಳುಹಿಸಲು ;
ಪುಟ:ಕಥಾ ಸಂಗ್ರಹ - ಭಾಗ ೨.djvu/೯೮
ಗೋಚರ