ಪುಟ:ಕಥಾ ಸಂಗ್ರಹ - ಭಾಗ ೨.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

73 ಸುಗ್ರೀವಸಖ್ಯದ ಕಥೆ ಗಳಿಂದ ತುಂಬಲ್ಪಟ್ಟ ಹುತ್ತಗಳಂತೆ ನಿಮ್ಮ ಬೆನ್ನಿನಲ್ಲಿ ಅಲಗುಗಳಿಂದ ತುಂಬಲ್ಪಟ್ಟ ಬತ್ತ ಳಿಕೆಗಳು ವಿರಾಜಿಸುತ್ತಿರುವುವು, ಜಡೆಗಳಿಂದ ಕೂಡಿದ ನಿಮ್ಮ ಶಿರಸ್ಸುಗಳು ಬೀಳಲು ಗಳಿಂದ ಒಪ್ಪುವ ಆಲದ ಮರಗಳನ್ನು ಹೋಲುತ್ತಿರುವುವ, ಮುನಿಗಳಂತೆ ನಾರ್ಮ ಡಿಗಳನ್ನೂ ಕೃಷ್ಣಾಜಿನಗಳನ್ನೂ ಧರಿಸಿರುವಿರಿ. ನಿಮ್ಮ ಮುಖಗಳ ತೇಜಸ್ಸನ್ನೂ ನಿಮ್ಮ ಅಂಗೋಪಾಂಗಗಳಲ್ಲಿರುವ ಮಹಾಪುರುಷಲಕ್ಷಣಗಳನ್ನೂ ನೋಡಿದರೆ ಸಂಚಾ ಶತ್ರೋಟಿಯೋಜನೆ ವಿಸ್ತೀರ್ಣವಾದ ಈ ಭೂಮಂಡಲವನ್ನು ಪರಿಪಾಲಿಸತಕ್ಕ ಪುರುಷ ಶ್ರೇಷ್ಟರಾಗಿ ಕಾಣಿಸುತ್ತೀರಿ. ಇಂಥ ನೀವೂ ಪಾದಚಾರಿಗಳಾಗಿ ಈ ಅರಣ್ಯ ಭೂಮಿಗೆ ಬರುವುದಕ್ಕೆ ಕಾರಣವೇನು ? ಇತ್ಯಾದಿ ವಿಷಯಗಳನ್ನೆಲ್ಲಾ ದಯೆಯಿಟ್ಟು ನನಗೆ ವಿಸ್ತಾರವಾಗಿ ಹೇಳಬೇಕು, ನಾನು ವಾಲಿಯೆಂಬ ಕಪಿರಾಜನಿಂದ ತಿರಸ್ಕರಿಸಲ್ಪಟ್ಟು ವನ ದಲ್ಲಿರುವ ಸೂರ್ಯಕುಮಾರನಾದ ಸುಗ್ರೀವನೆಂಬ ಕಪಿರಾಜನ ಮಂತ್ರಿಯು, ನಾನು ಕೇಸರಿಯೆಂಒ ಕವಿಶ್ರೇಷ್ಟನ ಪತ್ನಿ ಯಾದ ಅಂಜನಾದೇವಿಯಲ್ಲಿ ವಾಯುದೇವತಾ ಪ್ರಸಾದದಿಂದ ಹುಟ್ಟಿದವನು, ಜನರು ನನ್ನನ್ನು ಹನುಮಂತನೆಂದು ಕರೆಯುತ್ತಿರುವರು. ನನ್ನೊಡೆಯನಾದ ಸುಗ್ರೀವನು ನಿಮ್ಮ ಸ್ನೇಹಸಂಬಂಧವನ್ನು ಬಯಸುತ್ತಿ ರುವನು ಎಂದು ವಿನಯದಿಂದ ಹೇಳಲು ; ಆಗ ಲಕ್ಷ್ಮಣನು ಆತನನ್ನು ಕುರಿತು ನಾವು ಸಾಕೇತನಗರ ನಾಯಕನಾದ ದಶರಥ ಭೂಪನ ಕುವರರು. ಈತನು ನನ್ನಣ್ಣನು. ಈತ ನಿಗೆ ರಾಮನೆಂದು ಹೆಸರು. ಲಕ್ಷ್ಮಣನೆಂದು ನನಗಭಧಾನವ, ಮಹಾತ್ಯ ನಾದ ಈ ರಾಮಚಂದ್ರನು ತಾತಾಜ್ಜಾನುಸಾರವಾಗಿ ಒಟಾಚೀರೆಗಳನ್ನು ಧರಿಸಿ ಸೀತೆಯೆಂಬ ಸತಿಯೊಡನೆಯ ನನ್ನೊಡನೆಯೂ ಕೂಡಿ ದಂಡ ಕವನದಲ್ಲಿ ವಾಸಮಾಡುತ್ತಿರುವವ ನಾಗಿ ಅಲ್ಲಿದ್ದ ಖರಾದಿ ರಾಕ್ಷಸರನ್ನು ಸಂಹರಿಸಿದನು. ಆ ಹಗೆತನದಿಂದ ದುಷ್ಟನಾದ ರಾವಣನೆಂಬ ರಾಕ್ಷಸನು ಈತನ ಪತ್ನಿ ಯಾದ ಸೀತೆಯನ್ನು ನಾವಿಲ್ಲದ ವೇಳೆಯಲ್ಲಿ ಅಪಹರಿಸಿಕೊಂಡು ಹೋದನು. ಆದುದರಿಂದ ಅವನನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಬಯಸಿ ಇಲ್ಲಿಗೆ ಬಂದನು ಎಂದು ಹೇಳಿದನು. ಹನುಮಂತನು ಆ ಮಾತುಗಳನ್ನು ಕೇಳಿ ಸಂತೋಷಪಟ್ಟು ಸನ್ಯಾಸಿರೂಪವನ್ನು ಬಿಟ್ಟು ಮೊದಲಿನ ರೂಪವನ್ನು ಧರಿಸಿ ರಾಮಲಕ್ಷ್ಮಣರನ್ನು ತನ್ನ ಹೆಗಲುಗಳ ಮೇಲೆ ಕುಳ್ಳಿರಿಸಿಕೊಂಡು ಅಲ್ಲಿಂದ ಲಂಘಿಸಿ ಋಷ್ಯಮಕಗಿರಿಗೆ ಬಂದು ಅಲ್ಲಿನ ನಳನಳಿಸುವ ಚಿಗುರುಗಳನ್ನು ತಂದು ರಾಮಲಕ್ಷ್ಮಣರಿಗೆ ಹಾಸಿಕೊಟ್ಟು ಕುಳ್ಳಿರಿಸಿ ಆ ಪರ್ವತದ ಗುಹೆಯಲ್ಲಿರುವ ಸುಗ್ರೀವನನ್ನು ಕಂಡು ವೃತ್ತಾಂತವನ್ನೆಲ್ಲಾ ತಿಳಿಸಿ ನಳನೀಲಾದಿ ಕಪಿ ಸೇನಾಪತಿಗಳೊಡನೆ ಅವನನ್ನು ಕರತರಲು ; ಆಗ ಸುಗ್ರೀವನು ರಾಮನಿಗೆ ಸಾಷ್ಟಾಂ ಗನಮಸ್ಕಾರವನ್ನು ಮಾಡಿದನು, ರಾಮನು ಆತನನ್ನು ತನ್ನ ಬಾಹುಗಳಿಂದ ಬಿಗಿದಪ್ಪಿ ಸಂತೋಷಿಸಿದನು, ಆ ಮೇಲೆ ರಾಮಸುಗ್ರೀವರು ತಮ್ಮ ತಮ್ಮ ಕಷ್ಟಗಳನ್ನು ಒಬ್ಬರಿ ಗೊಬ್ಬರು ತಿಳಿಸಿಕೊಂಡ ಮೇಲೆ ರಾಮನು ಸುಗ್ರೀವನನ್ನು ನೋಡಿ-ನಿನ್ನ ಹಗೆ ಯಾದ ವಾಲಿಯನ್ನು ಕೊಂದು ನಿನಗೆ ಕಪಿರಾಜ್ಯಾಭಿಷೇಕವನ್ನು ಮಾಡಿಸುವೆನೆಂದು ವಾಗ್ದಾನಮಾಡಿದನು. ಸುಗ್ರೀವನು ರಾಮನನ್ನು ನೋಡಿ-ಪಾಪಿಯಾದ ರಾವ