ಸೀತಾಪಹಾರದ ಕಥೆ 59 ತಾನೂ ಲಕ್ಷ್ಮಣನೂ ಜಡೆಯನ್ನು ಧರಿಸಿಕೊಂಡು ರಥದೊಡನೆ ಸುಮಂತ್ರನನ್ನು ಅಯೋಧ್ಯೆಗೆ ಸಾಗಕಳುಹಿಸಿ ಆ ಮೇಲೆ ಗುಹನ ಸಹಾಯದಿಂದ ಓಡೆಯ ಮೇಲೆ ಗಂಗಾನದಿಯನ್ನು ದಾಟಿ ಸೀತಾಲಕ್ಷ್ಮಣರೊಡನೆ ಹೊರಟು ಕಾಲ್ನಡಿಗೆಯಿಂದಲೇ ಪ್ರಯಾಗವೆಂಬ ಸ್ಥಳಕ್ಕೆ ಬಂದು ಅಲ್ಲಿರುವ ಭರದ್ವಾಜಮಹರ್ಷಿಯನ್ನು ಕಂಡು ವಂದಿಸಿ ಆತನು ಮಾಡಿದ ಆತಿಥ್ಯವನ್ನು ಸ್ವೀಕರಿಸಿ ಅನಂತರದಲ್ಲಿ ಆತನ ಅಪ್ಪಣೆಯನ್ನು ಹೊಂದಿ ಚಿತ್ರಕೂಟಪರ್ವತಕ್ಕೆ ಬಂದು ಅಲ್ಲಿ ಲಕ್ಷ್ಮಣನಿಂದ ನಿರ್ಮಿತವಾದ ಪರ್ಣಶಾ ಲೆಯಲ್ಲಿ ವಾಸಮಾಡಿಕೊಂಡಿದ್ದನು. 3, RAYANA SE17ES AND CARRIES ORE SITE TO LANKA. ೩, ಸೀತಾಪಹಾರದ ಕಥೆ. ರಾಮನು ಸೀತಾಲಕ್ಷ್ಮಣರೊಡನೆ ಕೂಡಿದವನಾಗಿ ಅರಣ್ಯ ಪ್ರವೇಶವನ್ನು ಮಾಡಿದುದರಿಂದ ಅಯೋಧ್ಯೆಯಲ್ಲಿ ದಶರಥನು ಪತ್ರ ವಿಯೋಗದಿಂದುಂಟಾದ ಅಪಾರ ದುಃಖವನ್ನು ತಾಳಲಾರದೆ ರಾಮಾ, ರಾಮಾ ಎಂದು ಹಂಬಲಿಸುತ್ತ ವ್ಯಥಿತನಾಗಿ ಮೃತನಾದನು. ಆಗ ಸುಮಂತ್ರನೇ ಮೊದಲಾದ ಮಂತ್ರಿಗಳೂ ಪರೋಹಿತನಾದ ವಶಿಷ್ಟ ಮಹರ್ಷಿಯ ಕೇಕಯರಾಜನ ಪಟ್ಟಣದಿಂದ ಭರತಶತ್ರುಘ್ನು ರನ್ನು ಕರಿಸಿ ಕೊಂಡು ಅವರಿಂದ ದಶರಥನ ಪ್ರೇತಕೃತ್ಯಗಳನ್ನು ಮಾಡಿಸಿ ಅನಂತರದಲ್ಲಿ ಭರತನನ್ನು ಕುರಿತ-ನೀನು ರಾಜ್ಯಾಭಿಷಿಕ್ತನಾಗೆಂದು ಹೇಳಿದರು. ಆಗ ಭರತನು ಅವರನ್ನು ನೋಡಿ-ದುರ್ಮಾರ್ಗಪ್ರವರ್ತಕಳೂ ನನ್ನ ತಾಯಿಯೂ ಆದ ಕೈಕೇಯಿಯು ತಂದೆ ಗಿಂತಲೂ ಹೆಚ್ಚಾಗಿ ಕಾಪಾಡುತ್ತಿದ್ದ ನನ್ನ ಅಣ್ಣನನ್ನು ಕಾಡಿಗಟ್ಟಿ ಮಹಾತ್ಮನಾದ ನನ್ನ ತಂದೆಯನ್ನು ಕೊಂದು ನನಗೆ ಕೊನೆ ಮೊದಲಿಲ್ಲದ ದುಃಖಸಂತಾಪಗಳನ್ನುಂಟು ಮಾಡಿದಳು ಪಿತೃಸದೃಶನಾದ ಹಿರಿಯಣ್ಣನಿರುವಲ್ಲಿ ಅಶಾಶ್ವತವಾದ ಐಹಿಕ ಭೋಗಕ್ಕೆ ಳಸಿ ನಾನು ರಾಜ್ಯಾಭಿಷಿಕ್ತನಾಗಿ ಇವಳ ದುರಾಶೆಯನ್ನು ಎಂದಿಗೂ ನೆರವೇರಿಸಲಾ ರೆನು, ನಾನು ಈಗಲೇ ನಮ್ಮ ನಿರುವ ಮಹಾರಣ್ಯವನ್ನು ಪ್ರವೇಶಿಸಿ ಆತನ ಕಾಲ್ಯ ಳನ್ನು ಹಿಡಿದು ದೈನ್ಯದಿಂದ ಪ್ರಾರ್ಥಿಸಿ ಸಮ್ಮತಿಪಡಿಸಿ ತಿರಿಗಿ ಅಯೋಧ್ಯೆಗೆ ಕರೆದು ಕೊಂಡು ಬರುವೆನು. ಆತನೇ ರಾಜ್ಯಾಭಿಷೇಕಕ್ಕೆ ಯೋಗ್ಯನು. ನಾನು ಆತನ .ದಾಸನು ಎಂದು ಹೇಳಿ ಸಕಲಸರಿವಾರಸಮೇತನಾಗಿ ಹೊರಟು ರಾಮನಿರುವ ಚಿತ್ರ ಕೂಟಾಚಲಕ್ಕೆ ಬಂದು ದುಃಖಿಸುತ್ತ ಆತನಿಗೆ ನಮಸ್ಕರಿಸಿ ತಂದೆಯು ಪರಲೋಕವಾಸಿ ಯಾದುದನ್ನು ತಿಳಿಸಿ ಆತನೊಡನೆಯ ಮಹಾದುಃಖವನ್ನನುಭವಿಸಿ ಆತನನ್ನು ಕುರಿತು-ನೀನು ಈಗಲೇ ಅಯೋಧ್ಯಾ ಪಟ್ಟಣಕ್ಕೆ ಬಂದು ಪಟ್ಟಾಭಿಷಿಕ್ತನಾಗ `ಬೇಕೆಂದು ನಾನಾವಿಧವಾಗಿ ಪ್ರಾರ್ಥಿಸಿಕೊಂಡನು. ಅನಂತರದಲ್ಲಿ ರಾಮನು ಭರತನ ದೈನ್ಯಕ್ತಿಗಳಿಂದ ಕೂಡಿದ ಪ್ರಾರ್ಥನೆಗೆ ಒಪ್ಪದೆ-ನಾನು ನನ್ನ ತಂದೆಯ ಆಜ್ಞೆಯನ್ನು ಎಂದಿಗೂ ಮಾರುವುದಿಲ್ಲ, ಆತನ
ಪುಟ:ಕಥಾ ಸಂಗ್ರಹ - ಭಾಗ ೨.djvu/೬೯
ಗೋಚರ