ಪುಟ:ಕಥಾ ಸಂಗ್ರಹ - ಭಾಗ ೨.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು 29 ಜನದೊಡನೆ ಕೂಡಿ ಜಲಕ್ರೀಡೆಗಾಗಿ ನರ್ಮದಾನದಿಗೆ ಹೋಗಿದ್ದಾನೆ. ಇನ್ನು ಒಂದೆರಡು ಗಳಿಗೆಗಳೊಳಗಾಗಿ ಇಲ್ಲಿಗೆ ಬರುವನೆನಲು ; ಆ ಮಾತುಗಳನ್ನು ಕೇಳಿದ ದೂತನು ಅಲ್ಲಿಂದ ಹಿಂದಿರುಗಿ ಬಂದು ಆ ಸಂಗತಿಯನ್ನೆಲ್ಲಾ ರಾವಣನಿಗೆ ತಿಳಿಸಲು ; ಆಗ ರಾವಣನು-ಅಷ್ಟು ಹೊತ್ತಿನ ವರೆಗೂ ಸಾವಕಾಶ ಮಾಡುವುದರಿಂದ ಪ್ರಯೋಜ ನವೇನು ? ನಾನೇ ಅಲ್ಲಿಗೆ ಶೀಘ್ರವಾಗಿ ಹೋಗುವೆನೆಂದು ಹೊರಟು ನರ್ಮದಾನದಿ ಯನ್ನು ಹುಡುಕುತ್ತ ಅಗಮ್ಯವಾದ ವಿಂಧ್ಯಾರಣ್ಯ ಮಾರ್ಗವಾಗಿ ಬರುತ್ತಿರಲು ; ಆಗ ಬಲು ಬಿಸಿಗೆಯ ಹೊಯ್ಲಿ ನಿಂದ ಬಳಲಿ ಬಾಯಾರಿ ಕಡೆಗೆ ತನ್ನ ಆರು ಜನ ಪ್ರಧಾ ನರೊಡನೆ ಕೂಡಿ ನರ್ಮದೆಯನ್ನು ಕಂಡು ಅಲ್ಲಿ ಪುಷ್ಪಕ ವಿಮಾನವನ್ನಿಳಿಸಿ ನದೀತೀರದ ಲ್ಲಿರುವ ತರುಗಳ ಸಾಂದ್ರಛಾಯೆಯಿಂದ ಶೀತಲವಾದ ಮಳಲ್ಕಿಣ್ಣೆಗಳಲ್ಲಿ ಕುಳಿತು ಆಯಾಸವಿಶ್ರಾಂತಿಯನ್ನು ಹೊಂದಿ ಆ ಮೇಲೆ ಮಾರೀಚಪ್ರಹಸ್ತಾದಿ ಪ್ರಧಾನರನ್ನು ಕುರಿತು-ಈ ನದೀತೀರ ಪ್ರದೇಶವು ಬಹು ಪರಿಶುದ್ಧ ತೆಯುಳ್ಳುದಾಗಿರುವುದು, ಅದು ಕಾರಣ ಈ ನದಿಯ ನಿರ್ಮಲೋದಕದಲ್ಲಿ ಸ್ನಾನಮಾಡಿ ಶಂಕರನನ್ನು ಆರಾಧಿಸುವೆನು. ನೀವು ಪೂಜೆಗೆ ಯೋಗ್ಯವಾದ ಪತ್ರ ಪುಷ್ಪಾದಿಗಳನ್ನು ಒದಗಿಸಿಕೊಡಿರಿ ಎಂದು ಹೇಳಲು; ಆ ಮೇಲೆ ಅವರು ನದೀತೀರ ಪ್ರದೇಶದಲ್ಲಿ ಸಂಚರಿಸುತ್ತ ಬೇಕಾದಷ್ಟು ಪತ್ರ ಪುವ್ಯಾದಿ ಗಳನ್ನು ಒದಗಿಸಿಕೊಟ್ಟರು. ಅನಂತರದಲ್ಲಿ ನಿಶಾಚರೇಶ್ವರನು ನರ್ಮದಾನದಿಯ ನಿರ್ಮಲೋಕದಲ್ಲಿ ಮಿಂದು ಅದರ ದಡದಲ್ಲಿ ಕುಳಿತು ಭಸ್ಮಿಪುಂಡ್ರಾಂಕಿತನಾಗಿ ಮದ್ಯಾನ್ನೋಚಿತವಾದ ಕರ್ಮಗಳನ್ನು ನೆರವೇರಿಸಿ ನಿರ್ಮಲವಾದ ಮಳಲಿನಿಂದ ಲಿಂಗವನ್ನು ಮಾಡಿ ಮಂತ್ರಾವಾಹಿತನಾದ ಶಿವನನ್ನು ಅದರಲ್ಲಿ ಪ್ರತಿಷ್ಠಿಸಿ ಅರ್ವ್ಯ ಪಾದ್ಯಾದಿ ಷೋಡಶೋಪಚಾರಗಳನ್ನು ಮಾಡಿ ಶಿವಸಹಸ್ರನಾಮಾವಳಿಯನ್ನು ಉಚ್ಚ ರಿಸುತ್ತ ಕ್ರಮವಾಗಿ ಬಿಲ್ವಪತ್ರ ಪುಷ್ಪಗಳನ್ನರ್ಪಿಸುತ್ತ ಇದ್ದನು. ಹೀಗಿರುವಲ್ಲಿ ಇವನು ಪೂಜೆಮಾಡುತ್ತಿರುವ ಸ್ಥಳದ ಮುಂಗಡೆ ಒಂದಂಬಿನಿ ಸುಗೆಯಷ್ಟು ದೂರದಲ್ಲಿ ಆ ನದಿಯೊಳಗೆ ತನ್ನ ಸ್ತ್ರೀಯರೊಡನೆ ಕೂಡಿ ನೀರಾಟವ ನಾ ಡುತ್ತಿದ್ದ ಕಾರ್ತವೀರ್ಯಾರ್ಜುನನು ನೀರಿನೊಳಗೆ ಮುಳುಗಿ ಆಡಬೇಕೆಂಬ ಅಪೇಕ್ಷೆಯುಳ್ಳವನಾಗಿ ಆ ನದಿಯ ನೀರು ಸ್ವಲ್ಪವಾಗಿದ್ದುದರಿಂದ ಹೆಚ್ಚು ಮಾಡಿ ಕೊಳ್ಳುವುದಕ್ಕಾಗಿ ತನ್ನ ಎಡಗಡೆಯ ಐನೂರು ತೋಳುಗಳಿಂದ ಆ ನದಿಯ ಪ್ರವಾಹ ವನ್ನು ತಡೆದು ನೀರನ್ನು ಹೆಚ್ಚು ಮಾಡಿಕೊಂಡು ಬಲಗಡೆಯ ಐನೂರು ತೋಳುಗಳಿಂದ ಹೆಂಡಿರುಗಳೊಡನೆ ಮುಳುಗುತ್ತ ಏಳುತ್ತ ಜಲಕ್ರೀಡೆಯನ್ನು ಆಡುತ್ತಿದ್ದನು. ಆಗ ನರ್ಮದಾನದಿಯ ಪ್ರವಾಹವು ಅವನ ತೋಳುಗಳಿಂದ ತಡೆಯಲ್ಪಟ್ಟು ದರಿಂದ ಹೆಚ್ಚಿ ಹಿಂದಕ್ಕೆ ಒದೆಯಲು ; ಆ ನೀರಿನಿಂದ ರಾವಣನು ಪೂಜಿಸುತ್ತಿದ್ದ `ಸೈಕತಲಿಂಗವೂ ಪೂಜಾಸಾಮಗ್ರಿಗಳೂ ನೀರಿನಲ್ಲಿ ಕಲೆತು ನಿಶೇಷವಾಗಿ ಹೋಗಲು ; ಆಗ ಶಿವಪೂ ಜೆಯು ನೆರವೇರದೆ ಹೋದುದರಿಂದ ಮಹಾಕೋಪವುಳ್ಳವನಾದ ರಾವಣನು ಪ್ರವೃ ಜ್ಞಾನಾರ್ಥವಾಗಿ ದೂತರನ್ನು ಕಳುಹಿಸಿ, ನೀರು ಹೆಚ್ಚಾಗುವುದಕ್ಕೆ ಕಾರ್ತವೀ ರ್ಯಾರ್ಜುನನ ದುರುಳತನವೇ ಕಾರಣವೆಂದು ಅವರಿಂದ ತಿಳಿದು ಕೋಪದಿಂದ