ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 49 ವಿಪತ್ಕಾಲದಲ್ಲಿ ಹಿರಿಯ ಹೆಂಡತಿಯಾಗಿಯೂ ಹಿತಚಿಂತಕಳಾಗಿಯ ಸಕಲ ಧರ್ಮ ಗಳನ್ನೂ ತಿಳಿದವಳಾಗಿಯ ಇರುವ ನೀನು ಪುಣ್ಯಪ್ರದವಾದ ಪತಿಯ ಶುಕ್ರೂಷೆ ಯನ್ನು ಇಂಥ ಕಾಲದಲ್ಲಿ ಬಿಟ್ಟು ಅವಿಚಾರದಿಂದ ನನ್ನೊಡನೆ ಬಂದರೆ ಈ ಲೋಕದಲ್ಲಿ ಅಪಕೀರ್ತಿಯ ಪರಲೋಕದಲ್ಲಿ ಸದ್ದತಿಹಾನಿಯ ನಮ್ಮಿಬ್ಬರಿಗೂ ಸಂಭವಿಸುವುವೆಂಬು ದನ್ನು ಪುತ್ರನಾದ ನಾನು ನಿನಗೆ ಹೇಳಬೇಕಾದುದಿಲ್ಲವಷ್ಟೆ? ಅದು ಕಾರಣ ನನ್ನ ಅರಣ್ಯ ಪ್ರಯಾಣಕ್ಕಾಗಿ ಅಪ್ಪಣೆಯನ್ನು ಕೊಡುವವಳಾಗು ಇನ್ನು ಮೇಲೆ ನಾನು ಹೊರ ಡುವೆನು, ನನ್ನ ಪ್ರಾಣಸಾಕ್ಷಿಯಾಗಿ ನನ್ನ ಪ್ರಯಾಣಕ್ಕೆ ವಿಘ್ನು ಕರವಾದ ಮಾತುಗ ಳನ್ನಾಡಬೇಡ. ನಾನು ಹದಿನಾಲ್ಕು ಸಂವತ್ಸರಗಳ ವರೆಗೂ ವನದಲ್ಲಿದ್ದು ನನ್ನ ತಂದೆಯ ಆಜ್ಞೆಯನ್ನು ನೆರವೇರಿಸಿ ಆ ಮೇಲೆ ಬಂದು ನಿನ್ನ ಸನ್ನಿಧಾನವನ್ನು ಸೇರುವೆನು. ನಿನಗೂ ನನಗೂ ಸೀತೆಗೂ ಲಕ್ಷ್ಮಣನಿಗೂ ಸುಮಿತ್ರೆಗೂ ವೃದ್ಧನಾದ ದಶರಥನ ಅಪ್ಪಣೆಯ ಮೇರೆಗೆ ನಡೆಯತಕ್ಕುದೇ ಮುಖ್ಯವಾದ ಧರ್ಮವಾಗಿರುವುದು. ಆದುದ ರಿಂದ ವಿಚಾರಸರಳಾದ ನೀನು ಶೋಕವನ್ನು ಸಹಿಸಿಕೊಂಡು ಆಶೀರ್ವಾದವನ್ನು ಮಾಡಿ ಅಪ್ಪಣೆ ಕೊಟ್ಟು ನನ್ನನ್ನು ವನಕ್ಕೆ ಕಳುಹಿಸಿಕೊಡು ಎಂದು ಬೇಡಿಕೊಂಡನು. ಆಗ ಕೌಸಲ್ಯಯು ಆ ಮಾತುಗಳನ್ನು ಕೇಳಿ ತನಗೆ ಪ್ರಾಪ್ತವಾಗುವ ಪುತ್ರನಿ ಯೋಗ ದುಃಖವನ್ನು ಸಹಿಸಲಾರೆನೆಂಬ ಮಹಾವ್ಯಥೆಯಿಂದ ಬಾಧಿತಳಾಗಿ ಭೂಮಿ ಯಲ್ಲಿ ಬಿದ್ದು ಮೂರ್ಛಿತಳಾದಳು. ಆಗ ಲಕ್ಷ್ಮಣನೂ ರಾಮನ ಕಾಲುಗಳ ಮೇಲೆ ಬಿದ್ದು ಮರ್ಲೆಹೊಂದಿದನು. ಕೂಡಲೆ ಸುಮಿತ್ರೆಯೇ ಮೊದಲಾದ ದಶರಥನ ಅಂತಃಪುರದ ಸ್ತ್ರೀಯರೆಲ್ಲರೂ ಗುಂಪಾಗಿ ಬಂದು--ಹಾ! ರಾಮಾ, ರಾಮಾ ಎಂದು ಮೊರೆಯಿಟ್ಟು ದೀನಧ್ವನಿಯನ್ನು ಮಾಡುತ್ತ-ನಮ್ಮೆಲ್ಲರಿಗೂ ಪ್ರಾಣಭೂತನಾಗಿದ್ದ ನೀನು ನಮ್ಮೆಲ್ಲರನ್ನೂ ಬಿಟ್ಟು ವನಕ್ಕೆ ಹೋಗುವೆಯಾ ? ನಿನ್ನ ತಾಯಿಯಾದ ಕೌಸ ಲೈಯಲ್ಲಿಟ್ಟಿರುವಂತೆ ನಮ್ಮೆಲ್ಲರಲ್ಲೂ ಮಾತೃಭಕ್ತಿಯನ್ನಿಟ್ಟು ನಡೆದು ಕೊಳ್ಳುತ್ತಿದ್ದೆಯ ಲ್ಯಾ ! ನೀನು ಒಂದು ದಿನವಾದರೂ ನಮ್ಮಲ್ಲಿ ಅಪ್ರಿಯವನ್ನು ಮಾಡಿದವನಲ್ಲವಲ್ಲಾ! ಎಂದಾದರೂ ನೀನಾಡಿದ ಕ್ರೂರವಚನವನ್ನು ನಮ್ಮ ಕಿವಿಗಳಿಂದ ಕೇಳಿದುದಿಲ್ಲವಲ್ಲಾ! ಏನಾದರೂ ಒಂದು ಕಾರಣದಿಂದ ನಾವು ಚಿಂತೆಪಡುತ್ತಿದ್ದರೆ ಶೀಘ್ರವಾಗಿ ನಮ್ಮ ಸಮಿಾಪಕ್ಕೆ ಬಂದು ನಿನ್ನ ಮೃದುವಚನಗಳಿಂದ ನಮ್ಮನ್ನು ಸಮಾಧಾನಮಾಡುತ್ತಿ ದೈ ಯಲ್ಲಾ! ಇಂಥ ವಿನೀತನಾದ ನೀನು ನಮ್ಮೆಲ್ಲರನ್ನೂ ಬಿಟ್ಟು ಕಾಡಿಗೆ ಹೋದರೆ ನಮಗೇನು ಗತಿ ? ವೃದ್ರರಿಗೆ ಬುದ್ಧಿ ಮಾಂದ್ಯವೆಂಬ ಲೋಕದ ಗಾದೆಗನುಸಾರವಾಗಿ ಮುದುಕನಾದ ಈ ದಶರಥನು ವಿವೇಕವಿಲ್ಲದೆ ಸರ್ವಲೋಕ ಪ್ರಿಯನಾದ ನಿನ್ನನ್ನು ಅನ್ಯಾಯವಾಗಿ ವನಕ್ಕೆ ಕಳುಹಿಸುವನು ಎಂದು ರೋದನಧ್ವನಿಗಳನ್ನು ಮಾಡುತ್ತ ಅನಾಥೆಯರಂತೆ ರಾಮನ ಮುಂದೆ ಬಿದ್ದು ಮೂರ್ಛಹೊಂದಲು; ಆಗ ರಾಮನು ಅವರನ್ನು ನೋಡಿ ಮಹಾದುಃಖದಿಂದ ಕೂಡಿದವನಾದಾಗ ಧೈರ್ಯಯುಕ್ತ ನಾಗಿ ತನ್ನ ದುಃಖವನ್ನು ಹೊರಗೆ ತೋರ್ಪಡಿಸದೆ ಹೃದಯದಲ್ಲೇ ಅಡಗಿಸಿಕೊಂಡು ತಾನು ಮಾಡಿದ ಶೈತ್ಯೋಪಚಾರದಿಂದ ಎಲ್ಲರನ್ನೂ ಚೇತರಿಸಿಕೊಳ್ಳುವಂತೆ ಮಾಡಿ ಎಲ್ಲ
ಪುಟ:ಕಥಾ ಸಂಗ್ರಹ - ಭಾಗ ೨.djvu/೫೯
ಗೋಚರ