ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಟ್ವಿರುವಂತೆ ಆತನಲ್ಲೂ ಇಟ್ಟು ಕೊಂಡಿರುವವಳಾಗು. ಬುದ್ದಿಶಾಲಿಗಳು ತಮ್ಮ ವಿಪ ತ್ಕಾಲದಲ್ಲಿ ಯಾರಿಂದ ಏನುಂಟಾದಾಗೂ ಅದನ್ನೆಲ್ಲಾ ಸಹಿಸಿಕೊಳ್ಳುತ್ತ ತಾಳ್ಮೆಯಿಂ ದಿರತಕ್ಕುದು ಸ್ವಾಭಾವಿಕವಲ್ಲವೇ ? ಎಂದು ಬಹುವಿಧವಾಗಿ ಹೇಳಿದನು. ಈ ಪ್ರಕಾರವಾಗಿ ನಯನೀತಿಭರಿತವಾದ ಮಗನ ಮಾತುಗಳನ್ನು ಕೇಳಿ ಒಡಂಬಟ್ಟ ರೂ ಶೋಕಾರ್ತಳಾದ ಕೌಸಲ್ಯಯು ರಾಮನನ್ನು ನೋಡಿ-ಎಲೈ ಕಂದಾ, ನಿನ್ನ ತಂದೆಯ ಆಜ್ಞೆಯಿಂದ ವನವಾಸದಲ್ಲಿ ನಿಶ್ಚಿತಬುದ್ಧಿಯುಳ್ಳವನಾಗಿ ರುವ ನಿನ್ನನ್ನು ತಡೆಯುವುದಕ್ಕೆ ನನಗೆ ಶಕ್ತಿ ಸಾಲದು. ಇದೆಲ್ಲವೂ ಅಘಟನೆ ಘಟನ ಸಮರ್ಥನಾದ ಭಗವಂತನ ಸಂಕಲ್ಪವು. ಇದನ್ನು ಮಾರಿ ನಡೆಯುವುದಕ್ಕೆ ಯಾರಿಗೆ ತಾನೆ ಸಾಧ್ಯವಾಗುವದು ? ಇಲ್ಲ ವು. ಅದು ಕಾರಣ ಹೊಗು, ಮಗನೇ, ನಿನಗೆ ಮಂಗಳವಾಗಲಿ, ವನವಾಸದಲ್ಲಿ ನಿಯುಕ್ತವಾದ ದಿನಗಳನ್ನೆಲ್ಲಾ ಕಳೆದು ತಂದೆಯ ಆಜ್ಞೆಯನ್ನೆಲ್ಲಾ ನೆರವೇರಿಸುವುದರಿಂದ ಕೃತಾರ್ಥನಾಗಿ ಬಂದ ನಿನ್ನನ್ನು ನೋಡುವುದ ರಿಂದ ಪರಮಸಂತೋಷವನ್ನು ಹೊಂದುವೆನು ಎಂದು ಹೇಳಿ ಮಗನಿಗೆ ಮಂಗಳಾ ಶಾಸನವನ್ನು ಮಾಡುವುದಕ್ಕಾಗಿ ಶುದ್ಧ ಜಲದಿಂದ ಸ್ನಾನಮಾಡಿ ದೌತವಸ್ತ್ರಗಳನ್ನು ಟ್ಟು ಕೊಂಡು ಶುದ್ದಾ ಚಮನವನ್ನು ಮಾಡಿ ಪೂರ್ವದಿಬ್ಬುಖಿಯಾಗಿ ಕುಳಿತು ತ್ರಿಜಗ ತೈವ್ಯನಾದ ಭಗವಂತನನ್ನು ಭಯಭರಿತ ಭಕ್ತಿಭಾವದಿಂದ ಧ್ಯಾನಿಸಿ ಸ್ತೋತ್ರಗಳನ್ನು ಸಮರ್ಪಿಸಿ-ಎಲೈ ದೀರ್ಘಾಯುಷ್ಯ೦ತನಾದ ಪುತ್ರನೇ, ನೀನು ಧೈರ್ಯದಿಂದಲೂ ನಿಯಮದಿಂದಲೂ ಯಾವ ಧರ್ಮವನ್ನು ಕಾಪಾಡುವೆಯೋ ಆ ಧರ್ಮವು ವನದಲ್ಲಿ ನಿನ್ನನ್ನು ಸುಖವಾಗಿ ರಕ್ಷಿಸಲಿ. ನೀನು ಪ್ರತಿನಿತ್ಯವೂ ಚೈತ್ಯದಲ್ಲಿಯ ದೇವಾಲಯ ಗಳಲ್ಲಿಯ ಮಹಾತ್ಮರಾದ ಯಾವ ದೇವತೆಗಳಿಗೆ ಭಕ್ತಿಯಿಂದ ನಮಸ್ಕರಿಸುತ್ತಿ ದೈಯೋ ಅವರೆಲ್ಲರೂ ನಿನ್ನನ್ನು ಕಾಡಿನಲ್ಲಿ ಕಾಪಾಡಲಿ, ಮತ್ತು ನೀನು ಮಹನೀಯ ರಾದ ಯಾವ ಯಾವ ಋಷಿಗಳನ್ನು ಪೂಜಿಸಿರುವೆಯೋ ಅವರೆಲ್ಲರ ಆಶೀರ್ವಾದವ ಅಡವಿಯಲ್ಲಿ ನಿನ್ನನ್ನು ಕಾಯಲಿ, ಪಾರ್ವತೀಸಮೇತನಾದ ಪರಮೇಶ್ವರನೂ ಷಣ್ಮು ಖನೂ ಬೃಹಸ್ಪತಿಯ ಚಂದ್ರನೂ ಶುಕ್ರನೂ ಇಂದ್ರಾದಿ ಸಕಲ ದೇವತೆಗಳೂ ಆದಿ ಶೇಷನೇ ಮೊದಲಾದ ಉರಗೇಂದ್ರರೂ ಬ್ರಹ್ಮನೂ ವಿಷ್ಣು ವೂ ಇವರೆಲ್ಲರೂ ಮಹಾ ರಣ್ಯದಲ್ಲಿ ನಿನ್ನನ್ನು ರಕ್ಷಿಸಲಿ, ವೃತ್ರಾಸುರಸಂಹಾರೋದ್ಯುಕ್ತನಾದಂಥ ತನ್ನ ಮಗ ನಾದ ಇಂದ್ರನಿಗೆ ಅದಿತಿಯು ಸಫಲವಾದ ಯಾವ ಮಂಗಳವನ್ನು ಮಾಡಿದಳೋ ಆ ಮಂಗಳವು ಅರಣ್ಯದಲ್ಲಿ ನಿನಗೆ ಕ್ಷೇಮದಾಯಕವಾಗಲಿ, ಅಮೃತವನ್ನು ತರುವುದ ಕ್ಯಾಗಿ ಸನ್ನದ್ಧನಾದ ಗರುಡನೆಂಬ ತನ್ನ ಮಗನಿಗೆ ವಿನತೆಯು ಯಾವ ಮಹಾ ಮಂಗ ಳವನ್ನು ಮಾಡಿದಳೊ ಆ ಮಂಗಳವು ಅರಣ್ಯದಲ್ಲಿ ನಿನಗೆ ಕಾರ್ಯಜಯವನ್ನುಂಟು ಮಾಡಲಿ ಎಂದು ರಾಮನಿಗೆ ಮಂಗಳಾಶಾಸನವನ್ನು ಮಾಡಿ ಅವನನ್ನು ಆಲಿಂಗಿಸಿ ಕೊಂಡು ನೀನು ಅರಣ್ಯದಲ್ಲಿ ಅರೋಗದೃಢಕಾಯನಾಗಿದ್ದು ಶೀಘ್ರವಾಗಿ ಇಲ್ಲಿಗೆ ಬರುವವನಾಗು. ಸೂರ್ಯವಂಶೀಯ ಮಹಾರಾಜ ಪರಂಪರಾಕ್ರಮಾರೋಹಿತವಾದ ಅಯೋಧ್ಯಾ ಸಿಂಹಾಸನದಲ್ಲಿ ಕುಳಿತು ಸೀತಾಸಮೇತನಾಗಿ ಪಟ್ಟಾ ಭಿಷಿಕ್ತನಾದಂಥ