ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರೀಕ್ಷಿಸಿಕೊಂಡಿದ್ದನು.

   ಕೊಂಚ ಹೊತ್ತಾದ ಮೇಲೆ ಭೂಮಿಯಿಂದ ಶವದ ಪೆಟ್ಟಿಗೆಯು ಹೊರಗೆ ತೆಗೆಯಲ್ಪಟ್ಟಿತು. ಅದು ಬಲುಭಾರವಾಗಿದ್ದಿತು. ಅದರಿಂದ ಅವರೆಲ್ಲರೂ ಶವದ ಪೆಟ್ಟಿಗೆಯು ಬರಿದಾಗಿಲ್ಲ, ಅದರಲ್ಲಿ ಜುಮೆಲೆಯ ಮೃತದೇಹವು ಇರುವುದು, ಎಂದು ತಿಳಿದುಕೊಂಡರು. ದೇವೇಂದ್ರನು ಅಷ್ಟು ಜನರ ಇದಿರಿಗೆ ತನಗೆ ಎಲ್ಲಿ ಅವಮಾನವಾಗುವುದೋ ಎಂದು ಬಹಳವಾಗಿ ಯೋಚನೆಯಿಂದ ತಲ್ಲಣಿಸಿ ಹೋದನು. ಇ೯ಸ್ಪೆಕ್ಟರ್ ರಾಮಕೃಷ್ಣನು ದೇವೇಂದ್ರನ ಮುಖವನ್ನೇ ನೋಡಿಕೊಂಡು ಪರಿಹಾಸವನ್ನು ಸೂಚಿಸುವಂತೆ ಹುಬ್ಬನ್ನು ಕುಣಿಸುತ್ತಿದ್ದನು.                                  
   ದೇವೇಂದ್ರವಿಜಯನು ಈ ರಹಸ್ಯದ ವಿಷಯವಾಗಿ ಅನುಮಾನದಿಂದ ಅನೇಕ ಸಂಗತಿಗಳನ್ನು ತಿಳಿದುಕೊಂಡಿದ್ದನು. ಉತ್ತರಕ್ಷಣದಲ್ಲಿಯೇ ಶವದ ಪೆಟ್ಟಿಗೆಯ ಬಾಗಿಲು ತೆರೆಯಲ್ಪಟ್ಟಿತು. ಆಗ ದೇವೇಂದ್ರನ ಬತ್ತಿ ಹೋಗಿದ್ದ ಮುಖವು ವಿಕಸಿತವಾಗಲಾರಂಭಿಸಿತು. ಎಲ್ಲರ ಬಾಯಿಂದಲೂ ಒಂದು ವಿಧವಾದ ಆಶ್ಚರ್ಯದಿಂದೊಡಗೂಡಿದ ಶಬ್ದವು ಹೊರಟಿತು. ಎಲ್ಲರೂ ಚಮಕಿತರಾಗಿ ರೆಪ್ಪೆ ಹಾಕದ ದೃಷ್ಟಿಯಿಂದ ಶವದ ಪೆಟ್ಟಿಗೆಯೊಳಗೆ ನೋಡಿದರು. ಅವರೆಲ್ಲರೂ ಪೆಟ್ಟಿಗೆಯಲ್ಲಿ ಶವವನ್ನೇನೋ ನೋಡಿದರು, ಆದರೆ ಆ ಶವವಾದರೋ, ಜುಮೆಲೆಯದಲ್ಲ-ಹೆಂಗಸಿನದೇ ಅಲ್ಲ- ಅದು ಗಂಡಸಿನ ಶವವಾಗಿದ್ದಿತು. ದೊಡ್ಡ ಮನುಷ್ಯನಿಗೆ ತಕ್ಕ ವೇಷವನ್ನು ಧಾರಣಮಾಡಿದ ಸುಂದರನಾದ ಯುವಕನೊಬ್ಬನು ಮೃತನಾಗಿಬಿದ್ದಿದ್ದನು. ಇದೇನು ಹೀಗಾಗಿ ಹೋಯಿತು?