ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶವದ ಪೆಟ್ಟಿಗೆಯಿಂದ ಶವವು ಮೇಲಕ್ಕೆ ಎತ್ತಲ್ಪಟ್ಟಿತು, ಶಚೀಂದ್ರನು ಅದನ್ನು ಪರೀಕ್ಷಿಸುವುದಕ್ಕೆ ತೊಡಗಿದನು. ಮಿಕ್ಕವರೆಲ್ಲರುಾ ನೋಡುತ್ತ ನಿಂತಿದ್ದರು. ಮೃತನಾದ ಯುವಕನು ಉಟ್ಟಿದ್ದುದು ತೆಳ್ಳಗಿದ್ದ ಸ್ವದೇಶದ ಪಂಚೆ, ತೊಟ್ಟಿದ್ದುದು ಬೇಲುದಾರಿ ಮೊಗಲಾಯಿ ಜುಬ್ಬ, ತಲೆಯ ಮೇಲೆ ಸಾಚಾ ಕಲಾಪತ್ತಿನ ಟೋಪಿ ಬಲಗೈಯ ಮಧ್ಯದ ಬೆರಳಿನಲ್ಲಿಯೂ, ಅನಾಮಿಕೆಯಲ್ಲಿಯೂ ವಜ್ರದುಂಗುರಗಳು.,ಗಡಿಯಾರದ ಜೇಬಿನಲ್ಲಿ ಒಂದು ಭಂಗಾರದ ಗಡಿಯಾರ ಮತ್ತು ಸರಸಳಿ.ಒಳಗಿನ ಜೇಬಿನಲ್ಲಿ ಸೀಸದ ಕಡ್ಡಿಯನ್ನು ಬರೆಯುವ ಒಂದು ಸಣ್ಣ ಚಾಕು, ಒಂದು ಬೀಗದ ಕೈಗಳ ಗೊಂಚಲು, ಇಪ್ಪತ್ತು ರೂಪಾಯಿಗಳ ನೋಟುಗಳು, ನಾಲ್ಕುರೂಪಾಯಿಗಳು,ನಾಲ್ಕಾಣೆಗಳು, ಮೂರು ದೊಡ್ಡಾಣೆಗಳು, ಎರಡು ರೇಷ್ಮೆ ಚೌಕಗಳು, (ಒಂದು ಬಣ್ಣದ್ದು; ಒಂದು ಬಣ್ಣವಿಲ್ಲದ್ದು) ಬಂದು ಸಣ್ಣ ಪಿಸ್ತೂಲ್, ಮತ್ತು ಕೆಲವು ಕಾಗದ ಪತ್ರಗಳು. ಕಾಗದದಲ್ಲಿ ಏನೇನೋ ಬರೆದಿದ್ದುವು.ಅವುಗಳ ಮೇಲಿನ ವಿಳಾಸವು ಈ ರೀತಿಯಾಗಿದ್ದಿತು. ಷೇಕ್‌ ಕಬೀರುದ್ದ೯ ನಂ.... .ಗಲ್ಲಿ.....ಸೂಳೆಗೇರಿ, ಬಿದರಪುರ. ಈರೀತಿಯಾಗಿದ್ದ ಮೇಲುವಿಳಾಸವನ್ನು ನೋಡಿದಮೇಲೆ, ಅಲ್ಲಿದ್ದವರಾರಿಗೂ ಮೃತಯುವಕನ ಹೆಸರು, ವಾಸಸ್ಥಾನ, ಇವುಗಳ ವಿಷಯವಾಗಿ ಯಾವವಿಧದಿಂದ ಸಂಶಯವೂ ಇರಲಿಲ್ಲ. ಬಳಿಕ ದೇವೇಂದ್ರನು - ರಾಮಕೃಷ್ಣಬಾಬು, ಜ್‌ಮೆಲೆಯು ಈಗ ಎಲ್ಲಿ ಸಿಕ್ಕುವಳು ಎಂಬು