ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೨
ಸತೀಹಿತೈಷಿಣಿ

ನಾವು ಪರಮಾಪ್ತರಂತೆ ನಟಿಸಿ, ಕಾಠ್ಯ ಸಾಧನೆಯನ್ನು ಮಾಡಿಕೊಳ್ಳುವ ಕುಹಕವೇ ಈಗ ಸರಿಯೆಂದು ಹೇಳಬಲ್ಲೆನು.
( ತೆರೆಯಲ್ಲಿ ) ಬರುತ್ತೇನೆ, ಪ್ರಿಯಮಿತ್ರರೆ! ಬರುತ್ತೇನೆ; ಕೋ ಪಿಸಬೇ ಡಿರಿ, ಅಲ್ಲಲ್ಲಿಗೂ ವಿಷಯ ಸಂಗ್ರಹವಾಗುತ್ತಿದ್ದರೆ ಬಿಟ್ಟು ಹೇಗೆ ಬರುವುದು ? 5 ಹೇಳಿರಿ.
ರವಿ:- ಸರಿಸರಿ! ಆದೀಗ ಸರಿಯಾದ ಉಪಾಯ. ಇದೊ ಅವನು ಶಾಲೆಗೆ ಬರುವುದಕ್ಕೆ ಮೊದಲು ನಾವೇ ಹೋಗಿ ಮರೆಯಾ ಗಿದ್ದು, ಆತನನ್ನು ಚನ್ನಾಗಿ ಪರೀಕ್ಷಿಸುವ: ಇನ್ನು ನಡೆಯಿರಿ, (ಹೋಗುವರು) to
(ಸೌಮ್ಯ, ಸುಮುಖ,ಯುವಾನರೆಂಬ ಸಹಾಧ್ಯಾಯಿಗಳೊಡನೆ ರಮಾನಂದನ ಪ್ರವೇಶ)
ಸೌಮ್ಯ:- ರಮಾನಂದ! ಇದೇನಿದು ಅಲ್ಲಿ ಗಲ್ಲಿಗೆ ನಿಂತು ನಿಂತು, ಮದುಮಗನಂತೆ ಮೆಲ್ಲ ಡಿಯಿಡುತ್ತ ಬರುತ್ತಿರುವೆ?
ರಮಾ:- ಆಪ್ತರೇ! ಮನಸ್ಸು ವಿವಿಧ ವಸ್ತು ಸಂಗ್ರಹದಲ್ಲಿ ಗಮನಿಸುತ್ತಿದ್ದರೆ, ಪ್ರಕೃತಿಸ್ಥಿತಿಯೇ ಹೀಗಾಗುವುದಿಲ್ಲ ವೇ? ಇದರಲಿ ಆಶ್ಚರ್ಯವೇನು? ಮದವಣಿಗನ ಮನಸ್ಸು, ನೂತನವಾದ ವಿಷಯ ರಸಾಸ್ವಾದನೆ ಮಾಡಲು ಹೇಗೆ ವಿಚಾರ ಮಾಡತೊಡಗುವದೋ, ಹಾಗೆಯೇ ನನ್ನ ಮನಸ್ಸು ಇಂದು ವಿಶೇಷ ವಿಚಾರವಿಮರ್ಶೆಯಲ್ಲಿ ಗಮಕಿಯಾಗಿದೆ. ಬಾಧಕವೇನು?
ಸುಮುಖ:- ಬಾಧಕವಾಗಲೀ, ಆಶ್ಚರ್ಯವಾಗಲೀ, ಮತ್ತಾ 20 ವುದೂ ಇಲ್ಲ, ನಿನ್ನ ಬುದ್ಧಿಶಕ್ತಿ ಅವ್ಯಾಹತವಾಗಿ ಮೇಲೆ ಯೇ ಲೇರಿ ಬರುತ್ತಿರುವುದೇ ನಿನ್ನನ್ನು ವಸ್ತು ವಿಚಾರ ವಿಮರ್ಶೆಯಲ್ಲಿ ದಕ್ಷ ನನ್ನಾಗಿ ಮಾಡುತ್ತಿದೆ. ಅದಿಲ್ಲದೆ, ನಮ್ಮಂತಹರಿಗೆ ಬೇಕೆಂದರೂ, ವಿಚಾರಸಂಗ್ರಹವು ಲಭಿಸುವುದು ದುಸ್ತರವೇ ಸರಿ.
ಯುವಾನ:- ಸುಮುಖನು ಸರಿಯಾಗಿ ಹೇಳಿದನು, ಪ್ರತಿಭಾ 25 ಸಂಪನ್ನ ನಾದ ನಿನ್ನ ಬುದ್ಧಿಶಕ್ತಿಯನ್ನು ನೋಡಿಯೇ ಗುರುಗಳು