ವಿಷಯಕ್ಕೆ ಹೋಗು

ಪುಟ:ಕುರುಕ್ಷೇತ್ರ ಗ್ರಂಥ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಕುರುಕ್ಷೇತ್ರ ವಾಚಕರು ತರ್ಕಿಸಬಹುದು ; ಆದರೂ, ಭಾವುಸಾಹೇಬನ ಪರಮ ಮಿತ್ರನೆನಿಸಿ, ಸ್ವಾರ್ಥದ ಮೇಲೆ ಕೈ ಊರಿ ಅತ್ತಿತ್ತ ಎರಡೂ ಪಕ್ಷಗಳ ಕಡೆಗೆ ಟ ಕನಕ ನೋಡು ಇ, ಎತ್ತ ಕಡೆಗೆ ಸರಿದರೆ ತನ್ನ ಕಾರ್ಯವಾದೀತೆಂದು ಯೋಚಿಸುತ್ತ ಕುಳಿತಿದ್ದ ಸುಜಾಉದೌಲನ ಸಾರ್ಥದ ಸಡಗರವು ಬೈಲಿಗೆ ಬೀಳುವದಕ್ಕಾಗಿಯೆ ಉಮೆ ಯು ಆತನ ಛಾವಣಿಯನ್ನು ಸುರಕ್ಷಿತವಾಗಿ ಪ್ರವೇಶಿಸಿದಳೆಂದು ಹೇಳಬಹುದು. ಸುಜಾನು ಸಾಮಾನ್ಯ ಕೂಟಯೊಳಗಿನ ಮನುಷ್ಯನಿದ್ದಿಲ್ಲ, ಆತನು ಮಹಾಬಲಾ ಡ್ರನೂ, ರಾಜಕಾರಣ ಪಟುವೂ, ಧರ್ತ ನೂ ಆಗಿದ್ದನು. ಆತನು ನದೆನ್ಮತ ವಾದ ಆನೆಯ ಹಿಂಗಾಲುಗಳಿಗೆ ತನ್ನ ಕಾಲು ಕೊಟ್ಟು, ಆದರ ಬಾಲವನ್ನು ಹಿಡಿದು ಹಿಂದಕ್ಕೆ ಜಗ್ಗ ಹತ್ತಿದರೆ, ಆನೆಗೆ ಮುಂದಕ್ಕೆ ಹೆಜ್ಜೆಯಿಡುವ ಪ್ರಾಣ ವಾಗುತ್ತಿದ್ದಿಲ್ಲವಂತೆ ! ಆತನು ಬಲಿಷ್ಟ ನಿದ್ದಂತೆ ಚಲುವನೂ ಇದ್ದು, ಆಡಂಬರಕ್ಕೆ ಮೆಚ್ಚಿದವನಿದ್ದನು. ರಾಜ್ಯ ವೃದ್ಧಿಯಲ್ಲಿ ಅವನ ಆಸಕ್ತಿ ಬಹಳ. ಭಾವುಸಾಹೇ ಬನ ಸಹಾಯದಿಂದ ದಿಲ್ಲಿಯ ಬಾದಶಾಹಿಯವಜೀರಾಯ ತಿಯನ್ನು ಸಂಪಾದಿಸಿ ಲು ಆತನು ಹವಣಿಸುತ್ತಿದ್ದನು; ಆದ್ದರಿಂದ ಅಂತರಂಗದಲ್ಲಿ ಆತನು ಮರಾಟರ ವಿಜಯವನ್ನು ಇಚ್ಛಿಸುತ್ತಿದ್ದನು; ಆದರೆ ಅದನ್ನು ಹೊರಗೆ ತೋರಿಸದೆ, ಅಬ ದಾಲಿ ಯ ಪಕ್ಷ ವಹಿಸಿ ಅವನ ಕಚ್ಚೆಯನ್ನು ಹಿಡಿದವನಂತೆ ಆಚರಿಸುತ್ತಿದ್ದನು. ಸುಜಾನು ಅತ್ಯಂತ ವಿಷಯಾಸಕ್ತನೂ ಇದ್ದನು. ಅಂತಃಪುರದೊಳಗಿನ ಸುಂದರಯುವತಿಸಮೂಹದೊಡನೆ ಕ್ರೀಡಿಸುವಲ್ಲಿ ಆತನ ಕಾಲಹರಣವು ವಿಶೇಷ ವಾಗಿ ಆಗುತ್ತಿತ್ತು. ತನ್ನ ಈ ವಿಷಯ ಸುಖೋಪಭೋಗದ ಶಕ್ತಿಯು ಹೆಚ್ಚು ವದಕ್ಕಾಗಿ ಯಾವಾಗಲೂ ವಾಜೀಕರಣವನ್ನು ಉಪಯೋಗಿಸುತ್ತಿದ್ದನು. ಆತನು ತನ್ನ ಆಡಳಿತದಲ್ಲಿ ತನ್ನ ರಾಜಧಾನಿಯಾದ ಲಖನೂರನ್ನು ಹಲವು ಸುಂದರ ಮಂದಿರಗಳಿಂದ ಅಲಂಕರಿಸಿದ್ದನಲ್ಲದೆ, ಚಿನ್ನ ದೆ೦ದು ತಾತ ಮಾಡಿಸಿ ಆದ ರಲ್ಲಿ ತನ್ನ ಸು೦ದರವಾದ ಮುಂಡಾಸವನ್ನೂ, ತುರಾಯಿ-ಶಿರಸೇಚ ಮೊದಲಾದ ಅಲಂಕಾರಗಳನ್ನೂ ಇಟ್ಟಿದ್ದನಂತೆ! ಆತನ ರಾಜಧಾನಿಯ ಸಂಪತ್ತು ವಿಪುಲವಾ ಗಿತ್ತು, ಅಲ್ಲಿ ಆನೆಗಳಿಗೆ ಕೊರತೆಯಿದ್ದಿಲ್ಲ. ಅಗಸರ ಅರಿವೆಯ ಮೊಟ್ಟೆಗಳನ್ನು ಹೊರಲಿಕ್ಕೂ ಚಿಟ್ಟಾನೆಗಳನ್ನು ಉಪಯೋಗಿಸುತ್ತಿದ್ದರಂತೆ! ಸುಜಾನ ಔದಾ ರ್ಯವೂ ವಿಕ್ಷ ಣವಾಗಿತ್ತು. ಆತನು ಪ್ರತಿವರ್ಷ ಒಬ್ಬ ತಿರುಕನನ್ನು ಶ್ರೀಮಂ ತನನ್ನಾಗಿ ಮಾಡುತ್ತಿದ್ದನು. ತನು ಯಾವಾಗಾದರೂ ರಾಜಧಾನಿಯಲ್ಲಿ ತಿರು ಗಾಡಲಿಕ್ಕೆ ಹೊರಟಾಗ, ಯಾವನಾದರೂ ಒಬ್ಬ ಸುಸ್ವರೂಪಿಯಾದ ತಿರುಕನು ಕಣ್ಣಿಗೆ ಬಿದ್ದು, ತನ್ನ ಮನಸ್ಸಿಗೆ ಬಂದರೆ, ಆತನನ್ನು ತನ್ನ ವಾಡೆಗೆ ಕರಕೊಂಡು ಹೋಗಿ ಉತ್ತಮವಸ್ತ್ರಾಭರಣಗಳಿಂದ ಅಲಂಕರಿಸಿ, ಸುಂದರಯೊಡನೆ ಆತನ ಲಗ್ನ ಮಾಡುತ್ತಿದ್ದನು. ಬಳಿಕ ಆತನಿಗೆ ಇರುವದಕ್ಕಾಗಿ ಒಂದು ಸುಂದರ ಮಂದಿ ರವನ್ನು ಕಟ್ಟಿಸಿಕೊಟ್ಟು, ಮಾನ-ಮರ್ಯಾದೆಗಳಿಂದ ಆತನನ್ನು ದೊಡ್ಡ ಪದವಿಗೆ ಏರಿಸುತ್ತಿದ್ದನು; ಆದ್ದರಿಂದ ಜನರಲ್ಲಿ ಸುಜಾನ ಸಂಬಂಧದಿಂದ-'ಜಿನ ಕೋನದೇ ಮ” ಲಾ, ಉಸದೇ ಸುಜಿಸಿ ಉದ್ಲಾ 'ಎಂಬ ಉಕ್ತಿ ಯುರೂಢವಾಗಿತ್ತು,