50 ಕಾದಂಬರಿ ಸಂಗ್ರಹ ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ದ್ರವ್ಯದ ವಿಚಾರವನ್ನು ಹೇಳದೆ ಗುಟ್ಟನಿಂದಿದ್ದುದಕ್ಕೆ ಇದೇ ದಂಡ ದ್ರವ್ಯ ವೆಂದು ಭಾವಿಸಿದೇನೆ. ಆದರೆ ನಮ್ಮ ಅತ್ತೆಯ ಮಾತು ಸುಳ್ಳೆಂದೂ, ನಾನು ವ್ಯಾಜದಿಂದ ಹೆಂಡತಿಯ ದೋಷವನ್ನು ಮುಚ್ಚುವವನೆಂದೂ ಇರುವ ನಿಮ್ಮ ಭಾವವನ್ನು ಹೃದಯದಿಂದ ಈಚಿಗೆ ಕಿತ್ತು ಬಿಸುಡಿರಿ. ಧರ್ಮವು ಜಯಿಸುವುದೆಂಬುದನ್ನೂ ತಾವು ಆಲೋಚಿಸಿರಿ. ಅನ್ಯಾಯದಿಂದ ಐಶ್ವರ್ಯದ ಮೇಲೆ ಐಶ್ವರ್ಯವನ್ನು ಕೂಡಿಸಿ ನಿಜವನ್ನೂ ಪರೋಪಕಾರವನ್ನೂ ಮರೆಮಾಚುವ ಸ್ಥಿತಿಗೆ ಧಿಕ್ಕಾರವಿರಲಿ! ಪರಹಿಂಸಾರೂಪದಿಂದಗಳಿಸಿದ ಹಣದಿಂದ ಅಪಾಯವು ಎಂದೆಂದಿಗೂ ತಪ್ಪದಿರುವುದರಿಂದ ಅದಕ್ಕೆ ಧಿಕ್ಕಾರವಿರಲಿ! ಅನ್ಯಾಯಾರ್ಜನೆಯನ್ನು ಧಿಕ್! ಧಿಕ್!!! ನ್ಯಾಯಮಾರ್ಗದಿಂದ ಸಂತೋಷವಾಗಿ ಎಷ್ಟು ಅನುಭವಿಸಿದರೆ ಅಷ್ಟೇ ಸಾಕಾಗಿರುವುದು.
ಅಣ್ಣ-ನಿನ್ನ ನೀತಿ ಧರ್ಮಗಳನ್ನೆಲ್ಲಾ ದೂರದಲ್ಲಿ ಕಟ್ಟಿಡು. ನೀನು ಏನು ಹೇಳಿದರೂ ನನಗೆ ಈವಿಷಯದಲ್ಲಿ ಸಂಶಯವು ದೂರವಾಗದು.
ತಮ್ಮ-(ನಿಟ್ಟುಸಿರುಬಿಟ್ಟು) ಪುಜ್ಯಭ್ರಾತೃಗಳೆ! ಇಂದಿನವರೆಗೂ ನಾವಿಬ್ಬರೂ ಕ್ಷೀರೋದಕನ್ಯಾಯದಂತೆ ಒಟ್ಟು ಗೂಡಿದ್ದೆವು. ನಿರ್ಮಲವಾದ ಆಕಾಶಕ್ಕೆ ಮೋಡಮುಸುಕಿ ಮಸಕಾದಂತೆ ನಮ್ಮ ನಿಮ್ಮ ಬುದ್ದಿಗಳು ಪತ್ನಿಯರಪಾರ ಮಾರ್ಥಿಕಬೋಧೆಗಳಿಂದ ಇಂತು ಪರಿಣಮಿಸಿದುವು. ಲೋಕದಲ್ಲಿ ಅಣ್ಣ ತಮ್ಮಂದಿರಾಗಿ ಹುಟ್ಟಿದಮೇಲೆ ರಾಮಲಕ್ಷ್ಮಣರಂತೆ ಪೂಜ್ಯಪೂಜಕ ಭಾವದಿಂದ ಅನುವರ್ತಿಸುವ ಸೋದರರು ಈಕಾಲದಲ್ಲಿ ಅತಿವಿರಳ! ನಿಮ್ಮ ಎಷಯದಲ್ಲಿ ನನಗಿರುವ ಪೂಜ್ಯಭಾವವು ನನ್ನ ಮರಣಾವಧಿ ತಪ್ಪುವುದಲ್ಲವೆಂದು ತಾವು ನಿಜವಾಗಿ ಭಾವಿಸಬೇಕು. ಪ್ರಕೃತಿಸಂಸರ್ಗದಿಂದ ಶುದ್ದವಾದ ಪರಮಾತ್ಮ ವಸ್ತುವಿಗೆ ಸಂಸಾರಾದಿವ್ಯವಹಾರಜ್ಞಾನವು ಉತ್ಪನ್ನವಾಗುವಂತೆ ನಿಷ್ಕಲ್ಮಷಹೃದಯರಾದ ತಾವು ಇಂದು ಪ್ರಕೃತ್ಯಧೀನರಾಗಿ ಇಂತು ನನ್ನ ವಿಷಯದಲ್ಲೂ ನನ್ನ ಹೆಂಡತಿಯ ವಿಷಯದಲ್ಲೂ ಸಂಶಯಪಡುತ್ತಿರುವಿರಿ. ಚಿಂತೆಯಿಲ್ಲ. ನಿಮ್ಮೀಸಂದೇಹವು ಎಂದಾದರೊಂದು ದಿನ ಪರಿಹಾರವಾಗದೆ ಇರುವುದಿಲ್ಲ. ಇದುವರಿಗೂ ನಾವಿಬ್ಬರೂ ಒಂದು ಗೂಡಿದ್ದಂತೆ ಇನ್ನುಮೇಲೂ ಇರಬೇಕಾದರೆ__ ಪ್ರೀತಿಭಕ್ತಿಗಳೂ ಪೂರ್ವದಂತೆಯೇ ರಾರಾಜಿಸಬೇಕಾಗಿದ್ದರೆ__ ನಾವು ಏಕಗೃಹಕೃತ್ಯದಲ್ಲಿರುವುದು ಸರಿಬಾರದು. ಈ ವಿಧವಾಗಿ ಸಂಸಾರದಲ್ಲಿ ವಿಷಾಂಕುರವು ಉತ್ಪನ್ನ