ಮಧುಸೂದನ 35
ತಾನು ಹೇಗೆ ಬಂದನೆಂಬುವುದು ಅವನಿಗೆ ಗೊತ್ತಾಗಲಿಲ್ಲ. ಕತ್ತಿನಲ್ಲಿ ಹೂವಿನ ಮಾಲೆ ಇರಲು ಅದು ಹೇಗೆ ಬಂದಿತೆಂದು ಯೋಚಿಸಿದನು. ಅವನಿಗೆ ಯಾವದೂ ಬಗೆ ಹರಿಯಲಿಲ್ಲ. ಮೆಲ್ಲಗೆ ಎದ್ದು ತಮ್ಮ ಸಂಘದ ಮನೆಯ ಬಳಿಗೆ ಹೋದನು. ಅಲ್ಲಿದ್ದ ಇಬ್ಬರು ಮೆಂಬರುಗಳು "ಹರಿಚಂದ್ರಾ ಇದೇನು ಬಂದದ್ದು. ರಾತ್ರಿ ನೀನು ಮಾತನಾಡಿದ್ದನ್ನು ನೋಡಿ ನೀನು ಕುಡಿದಿದ್ದೀ ಎಂದೇ ಯೋಚಿಸಿದ್ದೆವು” ಎಂದು ಹೇಳಿದರು.
ಹರಿಚಂದ್ರ:-ಏನು ? ರಾತ್ರಿ ಇಲ್ಲಿ ಮಾತನಾಡಿದೆನೇ ? ಏನೇನು ಹೇಳಿದೆನು ? ನನಗಾವುದೂ ಜ್ಞಾಪಕವಿಲ್ಲವಲ್ಲ.
ಮೆಂಬರುಗಳು:-ಚೆನ್ನಾಗಿ ಹೇಳಿದೆ. ಹಾಗಾದರೆ ಖಂಡಿತವಾಗಿಯೂ ನೀನು ಕುಡಿದಿದ್ದೀ. ಸರ್ಕಾರದವರಮೇಲೇ ತಿರಿಗಿಬೀಳಬೇಕೆಂದು ಹೇಳಿದೆಯಲ್ಲಾ ! ಕುಡಿದು ಬೀದಿಯಲ್ಲೇನಾದರೂ ಹೇಳೀಯಾ ? ಹುಷಾರ್.
ಇತ್ತ ಭಾಸ್ಕರನು ಬೆಳಗಾದಕೂಡಲೇ ಎದ್ದು ಕಾಳಿಕೀಶೋರನೆಂಬ ಲಾಯರಿಗೆ ಇಂತು ಕಾಗದ ಬರೆದನು. ನಿಮ್ಮ ಮಗಳನ್ನು ಹರಿಚಂದ್ರನಿಗೆ ಕೊಡಬೇಡಿ. ಏನಾದರೂ ಕಾರಣ ಹೇಳುತ್ತಾ ನಿಧಾನಿಸುತ್ತಾ ಇರಿ. ಮುಂದಲಿಂದ ಎಲ್ಲಾ ವಿಷಯಗಳನ್ನೂ ತಿಳಿಸುತ್ತೇನೆ. ಪತ್ತೇದಾರ ಭಾಸ್ಕರ
ಕಾಗದವನ್ನು ಬರೆದು ತಪ್ಪಾಲಿಗೆ ಹಾಕಿಬಿಟ್ಟು ತನ್ನ ಕೊಟಡಿಯಲ್ಲಿ ಕುಳಿತುಕೊಂಡು ಯೋಚಿಸಲಾರಂಭಿಸಿದನು. " ಮಧುಸೂದನನೇನೋ ಅವರ ಕೈಯಲ್ಲಿ ಶಿಕ್ಕಿಬಿದ್ದಿದ್ದಾನೆ. ಆದರೆ ಅವನು ಎಲ್ಲಿದ್ದಾನೆಂಬುದೂ, ಏನುಮಾಡುತ್ತಿ ರುವನೆಂಬದೂ ತಿಳಿಯದು. ಎಲ್ಲವನ್ನೂ ತಿಳಿಯುವುದಕ್ಕೆ ಅವರ ಗುಪ್ತಗೃಹವನ್ನು ಪ್ರವೇಶಮಾಡಲೇಬೇಕು. ಅಲ್ಲಿಗೆ ಹೇಗೆ ಹೋಗುವುದು. ? ಆದದ್ದಾಗಲಿ ! ನಮ್ಮ ಹರಿಚಂದ್ರನಿದ್ದಾನೆ.
ಭಾಸ್ಕರನು ಆ ದಿವಸ ಸಾಯಂಕಾಲ ಹಿಂದಿನದಿನಗಳ ಹಾಗೆಯೇ ಮದ್ಯದಂಗ ದಿಗೆ ಹೋಗಿ ಹರಿಚಂದ್ರನನ್ನು ಮರಳುಮಾಡಿ ಅವನನ್ನು ಗೋವಿಂದನ ಮನೆಗೆ ಕರದು ಕೊಂಡು ಬಂದು ಒಂದು ಕೊಠಡಿಯಲ್ಲಿ ಶೆರೆಹಾಕಿಬಿಟ್ಟು ತಾನು ಅವನ ಉಡುಪನ್ನು ಧರಿಸಿಕೊಂಡು ಸಂಘದ ಗೃಹದ ಬಳಿಗೆ ಹೋಗಿ, ತಾನು ಗುಪ್ತಗೃಹದೊಳಕ್ಕೆ ಹೋಗ ಬೇಕೆಂದು ಹೇಳಿದನು. ತಕ್ಷಣವೇ ಇವನನ್ನು ಕರೆದುಕೊಂಡುಹೋಗಿ ಅಲ್ಲಿದ್ದ ಒಂದು ಕೊಠಡಿಯಲ್ಲಿ ಕೆಳಕ್ಕೆ ಹಾಸಿದ್ದ ಜಮಖಾನವನ್ನು ತೆಗೆದು ನೆಲದಮೇಲೆ ಇದ್ದ ಒಂದು