ಪುಟ:ಭವತೀ ಕಾತ್ಯಾಯನೀ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

27

ಯನ ಅರ್ಧಾಂಗಿಯೆನಿಸುವ ನಿನಗೆ ಆತ್ಮಜ್ಞಾನಪಡೆಯಲು ಏನು ಪ್ರಯಾಸವಾಗುವದು?

ಕಾತ್ಯಾಯನೀ-- ಮೈತ್ರೇಯಿಾ, ನಿನ್ನ ಮಾತು ಒಂದೂ ಸುಳ್ಳಲ್ಲ . ಹತ್ತರ

ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆಗಾಗಿ ಮನೆಮನೆ ತಿರುಗಿದಂತೆ ನನ್ನ ಗತಿಯಾ ಗಿದೆ. ನನ್ನ ಪತಿಯಮಹತ್ವವನ್ನು ತಿಳಿದುಕೊಳ್ಳುವ ಯೋಗ್ಯತೆಯೂ ನನ್ನಲ್ಲಿಲ್ಲ. ಇಂದು ನನ್ನ ಮೇಲೆ ನೀನು ದೊಡ್ಡ ಉಪಕಾರ ಮಾಡಿದಂತಾಯಿತು . ಸಖೀ,ಆತ್ಮ ಜ್ಞಾನಪ್ರಾಪ್ತಿಗಾಗಿ ನಾನು ಇನ್ನು ಅವರಿಗೆ ಶರಣು ಹೋಗುವೆನು. ಪ್ರತ್ಯಕ್ಷ ನನ್ನ ಪತಿಯ ಚಿರಸಹವಾಸದ ಮಹಾತ್ಮ್ಯದಿಂದ ನನಗಾಗದೆಯಿದ್ದ ಜಾಗ್ರತಿಯು, ಇಂದು ನಿನ್ನ ಸಹವಾಸದಿಂದ ಆಗಿರುತ್ತದೆ. ನಿನ್ನ ಈ ಉಪಕಾರವನ್ನು ನಾನು ಎಂದೂ ಮರೆಯಲಾರೆನು .

ಈ ಮೇರೆಗೆ ಸಂಭಾಷಣವು ನಡೆದಿರುವಾಗ ಕಾತ್ಯಾಯನಿಯ ಒಬ್ಬ ಸೇವಕನು

ಪಲ್ಲಕ್ಕಿಯನ್ನು ತಕ್ಕೊ೦ಡು ಮಿತ್ರನ ಮನೆಯಬಳಿಗೆ ಬಂದನು . ಈ ವರ್ತಮಾನ ವನ್ನು ಆತನು ಕಾತ್ಯಾಯನಿಗೆ ತಿಳಿಸಲು, ಆಕೆಯು ಸೇವಕನನ್ನು ಒಳಗೆ ಕರೆಸಿಕೊಂ ಡಳು , ಸೇವಕನು ಭಗವತೀ-ಕಾತ್ಯಾಯನಿಯನ್ನು ನಮಸ್ಕರಿಸಿ--" ದೇವೀ, ತಾವು ಇಲ್ಲಿಗೆ ಬಂದು ಬಹಳ ಹೊತ್ತಾದದ್ದರಿಂದ ಹುಡುಗರು ತಮ್ಮ ಹಾದಿಯನೋಡುತ್ತ ಒಂದೇಸವನೆ ಚಡಪಡಿಸುತ್ತಿರುವವು . ತಮ್ಮನ್ನು ಯಾವಾಗ ನೋಡೇವೆನ್ನುವಹಾಗೆ ಅವಕ್ಕೆ ಆಗಿದೆ . ಹೊತ್ತು ಮುಣುಗುತ್ತ ಬಂದಿತು. ತಮ್ಮ ಪಲ್ಲಕ್ಕಿಯು ಹೊರಗೆ ಸಿದ್ದವಾಗಿದೆ. ದೇವಿಯವರ ಅಪ್ಪಣೆಯಂತೆ ನಡೆದುಕೊಳ್ಳುವೆನು ” ಎಂದು ಹೇಳಿ ದನು . ಸೇವಕನ ಈ ಮಾತುಗಳನ್ನು ಕೇಳಿದ ಕೂಡಲೆ ಕಾತ್ಯಾಯನಿಗೆ ಮಕಳ ನೆನ ಪಾಗಿ, ತಾನು ಮನೆಗೆ ಯಾವಾಗ ಹೋದೇನೆನ್ನುವಾಗೆ ಆಯಿತು . ಆಕೆಯು ಆಧ್ಯಾ ತ್ಮಿಕ ವಿಷಯವನ್ನು ಕುರಿತು ಮಾತಾಡುತ್ತ ಕುಳಿತುಕೊಂಡದ್ದು ಇದೇ ಮೊದಲು. ತನ್ನ ಮಕ್ಕಳ ನೆನಪಾದ ಕೂಡಲೆ ಆಕೆಗೆ ಚಡಪಡಿಕೆಯಾಯಿತು. ಇಷ್ಟು ಹೊತ್ತಿಗೆ ತಾನು ಮಾಡಿಸಬೇಕಾಗಿದ್ದ ಮನೆಗೆಲಸಗಳೆಲ್ಲ ಹಾಗೇ ಉಳಿದದ್ದರಿಂದ ಆಕೆಯ ಮನಸ್ಸು ಅಸ್ಥಿರವಾಯಿತು. ಒಣ ಮಾತಿನಿಂದ ಕಾಲಹರಣವಾದಾಗ ಕರ್ತವ್ಯನಿಷ್ಠರಿಗೆಲ್ಲ ಹೀಗೆಯೇ ಚಡಪಡಿಕೆಯಾಗುವದು . ಕಾತ್ಯಾಯನಿಯು ಅತ್ಯಂತ ಕರ್ತವ್ಯನಿಷ್ಠಳು; ಸುವ್ಯವಸ್ಥಿತಳು ; ಆಲಸ್ಯರಹಿತಳು. ಆಕೆಯ ಬಲವತ್ತರವಾದ ಸಂಸಾರವಾಸನೆಯು ಆಕೆಯನ್ನು ಹಿಡಿದೆಳೆಯಹತ್ತಿತು. ಆಕೆಯು ಅವಸರದಿಂದ ಕುಂಕುಮ ಹಚ್ಚಿಸಿ ಕೊಂಡು ಮೈತ್ರೇಯಿಯ ಅನುಜ್ಞೆಪಡೆದು ಪಲ್ಲಕ್ಕಿಯಲ್ಲಿ ಕುಳಿತು ಮನೆಗೆ ಬಂದಳು.