ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶ್ಲೋ||ನೂತಸರ್ವಗುಣೋಪೇತ ಸರ್ವಶಾಸ್ತ್ರ ವಿಶಾರದ|ತವದ
      ರ್ಶನಮಾತ್ರೇಣ ಸರ್ವಪಾಪಂ ವಿನಾಶಿತಂ|ಚರಿತಂ ಶ್ರೋತು
      ನಿಚ್ಛಾಮಃ ವಿಷ್ಣೋರದ್ಭುತ ಕರ್ಯಣಃ| ಪರಿಬ್ರೂಹಿ ದಯಾ
      ಸ೦ದ್ರ, ಸರ್ವಶಾಸ್ತ್ರಾರ್ಥವಾರಗ||

     ಸರ್ವಶಾಸ್ತ್ರವಿಶಾರದನಾದ ಸೂತನೆ! ನಿನ್ನ ದರ್ಶನದಿಂದ ನಾವು
ಪುನೀತರಾದೆವು. ಕಲ್ಯಾಣಗುಣಾಭಿರಾಮನಾದ ಶ್ರೀಮನ್ನಾರಾಯಣನ
ದಿವ್ಯಚರಿತ್ರವನ್ನು ನಿನ್ನಿಂದಕೇಳಲಿಚ್ಛಿಸುವೆವು. ಆದುದರಿಂದ ಭಗವಂ
ತನ ಲೀಲಾವಿಶೇಷಗಳನ್ನು ತಿಳಿಸತಕ್ಕ ಯಾವುದಾದರೊಂದು ಪುಣ್ಯ
ಚರಿತ್ರವನ್ನು ಅಭಿವರ್ಣಿಸಿ ಸಭಾಸದರನ್ನು ಸಂತೋಷಗೊಳಿಸು!
ಎಂದು ಪ್ರಾರ್ಥಿಸಲಾಗಿ ಸೂತನಿಂತೆಂದನು.

ಶಾ|| ಪ್ರಾಪ್ತಾನಂದರು ಬ್ರಹ್ಮಬೋಧನಕಳಾಪಾರೀಣರಾತ್ಮಪ್ರಭಾ|
     ಲುಪ್ತಾಜ್ಞಾನರವಾರಸಾರಹೃದಯರ್ ಕಾರುಣ್ಯಶೀಲರ್ಮನೋ|
     ಗುಪ್ತಾನೇಕಸುಶಾಸ್ತ್ರ ರಚ್ಚುತಕಥಾಪೀಯೂವನಾನೋರುಸಂ।
     ತೃಪ್ತರ್ ಮಾನ್ಯರುತಾವು ಬಲ್ಲಿರಖಿಲಂ ನಾಂ ವರ್ಣಿಸಲ್ಪಕ್ತನೇ||

     ಮಹಾತ್ಮರೇ ! ಸರ್ಯಶಾಸ್ತ್ರವಾರಂಗತರಾದ ತಮ್ಮ ಸನ್ನಿಧಿಯಲ್ಲಿ
ಕಥಾಪ್ರಸಂಗ ಮಾಡುವಷ್ಟು ಕುಶಲತೆಯು ನನಗಿರುವುದೆ! ತಾವರಿ
ಯದ ನೂತನ ಚರಿತ್ರೆಗಳನ್ನು ನಾನೇನು ಬಲ್ಲೆನು? ಆದಾಗ್ಗೂ ತಾವು
ನಿಷ್ಕಳಂಕವಾ ದಭಗವದ್ಭಕ್ತಿಯುಳ್ಳವರಾದುದರಿಂದಲೂ, ಪರಮಾತ್ಮನ
ಕಲ್ಯಾಣಗುಣಗಳನ್ನು ಎಷ್ಟುಸಾರಿ ಹೇಳಿದರೂ, ಎಷ್ಟುಸಾರಿ ಕೇಳಿ
ದರೂ ಎಂದೆಂದಿಗೂ ನೂತನವಾಗಿಯೇ ಕಾಣುವುದರಿಂದಲೂ, ತಮ್ಮ
ಸಮಾಗಮವು ನನಗೆ ವರಮ ಸಂತೋಷಕರವಾದುದರಿಂದಲೂ ಶ್ರೀಮ
ನ್ನಾರಾಯಣಮರ್ತಿಯು ಲೋಕರಕ್ಷಣಾರ್ಥವಾಗಿ ಶ್ರೀ ಕೃಷಾ
ವತಾರದಲ್ಲಿ ತೋರ್ಪಡಿಸಿದ ಅದ್ಭುತಲೀಲಾವಿಶೇಷಗಳಿಂದ ಶೋಭಿತ
ಮಾದ “ಶ್ರೀ ಕೃಷ್ಯಲೀಲೆ” ಎಂಬ ಪುಣ್ಯಚರಿತ್ರೆಯನ್ನು ಪ್ರಸಂಗ
ಮಾಡುವೆನು. ಸಾವಧಾನ ಚಿತ್ತರಾಗಿ ಕೇಳಿರಿ, ಎಂಬದಾಗಿ ನಿಶ್ಚ
ಯಿಸಿ, ಸೂತಪೌರಾಣಿಕನು ಶೌನಕಾದಿ ಮಹರ್ಷಿಗಳಿಗೆ ಶ್ರೀ ಕೃಷ್ಟ