ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮಾನಂದ
೧೦೩

ವಾದಿಗಳಾಗಬೇಕು? ನಮಗೇನು ಗೊತ್ತು?
ಉಪಾ:- ಇರಲಿ, ರಮಾನಂದನು ನಾಟಕಶಾಲೆಗೆ ಹೋಗುತ್ತಿದ್ದು ದಾದರೂ ನಿಜವಷ್ಟೆ ?
ಸುಮುಖ:- ಪೂಜ್ಯರೆ! ಮೇಲೆ ಹೇಳಿರುವುದು ನಿಜವಾದಾ ಗಲೇ ಇದೂ ನಿಜವಾಗಬೇಕು, ಅಲ್ಲಿಯವರೆಗೆ ಇವೆಲ್ಲ ವೂ ಸುಳ್ಳೇ ಸರಿ, ರಮಾನಂದನು ಅಗ್ನಿಯಂತೆ ಪರಮ ಪವಿತ್ರ ಮೂರ್ತಿ, ಆತ ನನ್ನು ಮತ್ತಾವ ದುರ್ವ್ಯಸನರೋಗಗಳು ಮುಟ್ಟುವಂತಿಲ್ಲ, ಇದರ ನಿಜಾಂಶವು ಪರ್ಯವಸಾನದಲ್ಲಿ ತಿಳಿದೇ ತಿಳಿವುದು.
ಉಪಾ:- ಪರ್ಯವಸಾನವು ಮತ್ತಾವಾಗ?
ಸುಮುಖ: ರಮಾನಂದನು ಬಂದ ಬಳಿಕ.
ಉಪಾ:- ಅದೂ ಆಗಲಿ. ಆದರೆ, ಈಗಲಾದರೂ ನಿಜವನ್ನು ಹೇಳಿರಿ, ಇಲ್ಲಿ ನೀವು ಆರುಮಂದಿಗಳಲ್ಲದೆ ಮತ್ತಾರೂ ಇಲ್ಲ. ನೀವಲ್ಲದೆ ಇಲ್ಲಿಗೆ ಹೊರಗಿನವರಾರೂ ಬಂದಿಲ್ಲ, ನಿನ್ನೆ ರಾತ್ರಿಯಲ್ಲಿ ನಾನು ಇಲ್ಲಿ ನನ್ನ ಕೈ ಪೆಟ್ಟಿಗೆಯಲ್ಲಿ ಟ್ಟಿದ್ದ ಕೈ ಬಳೆ, ಮುದ್ರೆಗಳು ಈಗ ಇಲ್ಲದೆ ಹೋಗಿರಲು ಕಾರಣವೇನು ? ಕದ್ದವರಾರು ? ಕಂಡವರಾರು ?

(ಸೌಮ್ಯ-ಯುವಾನರು ಮೌನದಿಂದ ತಲೆವಾಗಿ ನಿಲ್ಲುವರು )

ಸುಮುಖ:- (ಮೆಲ್ಲನೆ) ಇದರ ವಿಚಾರವೂ ಕಳಿಂಗ ಮತ್ತು ರವಿವರ್ಮರಿಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು.

ರವಿ:- ನನಗೇನು ಗೊತ್ತು? ನಾನೇನು ಬಲ್ಲೆ ನು? ಉಪಾ:- ಏನಯ್ಯಾ, ಕಳಿಂಗ! ನಿನಗೆಷ್ಟರಮಟ್ಟಿಗೆ ತಿಳಿದಿದೆ?
ಕಳಿಂಗ:- ನಾನು ಸ್ವಲ್ಪ ಮಾತ್ರ ಬಲ್ಲೆ ನು.
ಉಪಾ:- ಏನು ಬಲ್ಲೆ?
ಕಳಿಂಗ:- ನಿನ್ನೆ ರಾತ್ರಿ, ನಾವು ತಮ್ಮಿಂದ ಅಪ್ಪಣೆ ಹೊಂದಿ, ಮಂದಿರಕ್ಕೆ ಹೋಗುತ್ತಿದ್ದಾಗ, ದಾರಿಯಲ್ಲಿ ರಮಾನಂದನ ಭೃತ್ಯನು