816 ಕರ್ಣಾಟಕಕವಿಚರಿತ [17 ನೆಯ
ಇವನ ಗ್ರಂಥ ಬೇಹಾರಗಣಿತ
ಇದು ಸಾಹಿಕವಾಗಿ ಕಂದದಲ್ಲಿ ಬರೆದಿದೆ; ಅಲ್ಲಲ್ಲಿ ಕೆಲವು ಸಾಂಗ ತ್ಯಗಳೂ ಪಟ್ಟದಿಗಳೂ ಇವೆ. ಗ್ರಂಥವು 8 ಅಧಿಕಾರಗಳಾಗಿ ಭಾಗಿಸಲ್ಪಟ್ವಿದೆ; ಸೂತ್ರ, ಟೀಕೆ, ಉದಾಹರಣ ಇವುಗಳನ್ನು ಒಳಗೊಂಡಿದೆ. ಇದರಲ್ಲಿ ಚಕ್ರಬಡ್ಡಿಯ ಸೂತ್ರ, ಪದಪಿನ ಸೂತ್ರ, ಪದಕದ ಸೂತ್ರ, ಮಟ್ಟದ ಸೂತ್ರ, ದೇವಗತಿಸಂಯೋಗದ ಸೂತ್ರ, ಬಿರುದಿನ ಲೆಕ್ಕ, ಅಡುಗೂಲಿ ಸೂತ್ರ, ಟಿಂಕಸಾಲೆಯಲ್ಲಿ ಕಟ್ಟುವ ಇಚ್ಛಾವರ್ಣಕ್ಕೆ ಸೂತ್ರ ಇವೇ ಮೊದಲಾದ ವಿಷಯಗಳು ಹೇಳಿವೆ. ಗ್ರಂಧಾವತಾರದಲ್ಲಿ ಈಶ್ವರಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಸೂತ್ರಗಳನ್ನು ತೆಗೆದು ಬರೆಯುತ್ತೇವೆ...
ತುರಗ ಹಡಗೇಟ ಖಂಡೈ | ತರೆ ವಾರಿಧಿಯೊಳುಪಚಾರಮೆನಲೆಲ್ಲರ್ಗ೦ | ಸರಿಸರಿಯಂ ಕುಡೆ ತುರಗಂ | ಸರಿಯಾದುವು ಕಡೆಗೆ ಹಡಗಿನಶ್ವವ್ರಜವೇಂ || ಇದು ೭ ಹಡಗಿಗೆ ಕುದುರೆ ನಿಂತಮಾರ್ಗ ಲೇ ೧೫ ೨೯ ೫೭ ೧೧೩ ೨೨೫ ೪೪೯ ಕಡೆಗೆ ಎಲ್ಲಕ್ಕು ಸರಿಯಾಗಿ ನಿಂತ ಕುದರೆ ೧೨೮ ೧೨ಲೇ ೧೨ಲೇ ೧೨ಲೇ ೧೨೮ ೧೨ಲೇ ೧೨ಲೇ ಇದು ಸರಿ. ದ್ವಾದಶಜಿನಚೈತ್ಯಾಲಯಂಗಳಮುಂದೆ | ದ್ವಾದಶತಾವರೆಗೊಳನು | ವೇದಜ್ಞ ಮ.ಚುಗೆ ದ್ವಿಗುಣಸಂಖ್ಯೆ ವೂಜೆಗೆ | ಯಾದುದ ಪೇಯಿ ಲೆಕ್ಕಿಗನೇ ||
ತಂದ ಪುಷ್ಪ ೪೦೯ ೫, ಅರ್ಚನೆಯ ಪುಷ್ಪ ೪೦೯೬ ಸರಿ. ಟೀಕು. [೧೧೧೧೧/೧೧/೧/೧೧/೧೧] ಇವು ಚೈತ್ಯಾಲಯಂಗಳು. [೨೨೨೨೨/೨೨೨೨/೨/೨೨] ಇವು ಪುಷ್ಪಗುಣವಾದುದು. ಗುಣಿಸುವ ವಿವರ || ಈ ಎರಡುಲೆಕ್ಕ ಸ್ಥಾಪಿಸಿ ಇದ್ದ ರಾಶಿ ೧೨ನೂ ಆಡಲು ಗುಣಿಸೆ ೪೦೯೬, ಇದು ಅರ್ಚನಾಪಷ್ಟ ! ಇನ್ನು ತಂದ ಪುಷ್ಪವ ಅwವುದಕ್ಕೆ ಗುಣಿಸುವ ವಿವರ || ಪ್ರಧನರಾಶಿಯ ಮೇಗಣ ಒಂದನು ಕೆಳಗಣ ಎರಡನೂ ಬಿಟ್ಟು ಬಿಡುವುದು || ಮುಂದಣ ಎರಡನೆಯ ರಾಶಿ ೨ಕ್ಕೆ ಮೇಗಣ ಚೈತ್ಯಾಲಯ ೧ನೂ ಕೂಡಲು ಮುೂರು || ಇದನು ರಾಶಿಯ ಕೆಳಗಣ ೨ಯo ಗುಣಿಸೆ ೬|| ಇದಕ್ಕೆ ವೇಗಣ ಚೈತ್ಯಾಲಯ ೧ ಕೂಡಲು ೭|| ಇನ್ನು ನಾಲ್ಕನೆಯ ರಾಶಿಯ ೨ಯಂ ಗುಣಿಸೆ ೧೪ ॥ ಈ ಮೇಲಿನ ಚೈತ್ಯಾಲಯ ೧ ಕೂಡುಲು ೧೫, ೩ ಯರ