ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ ಶಾಂತವೀರದೇಶಿಕ 377 ಮುಂದಕ್ಕು ಇದೇ ಮೇರೆಗೆ ಗುಣಿಸಲು ೪೦೯೫|| ಇದೀಗ ತಂದ ಪುಷ್ಪ ಸರಿ!! ಈ ಮೇರೆಯಲ್ಲಿ ಎಷ್ಟು ದೇವಸ್ಥಾನಕ್ಕೆ ಹೋದರೂ ಈ ನ್ಯಾಯದಮೇಲೆ ಗುಣಿಸಿ ಹೇಟಿವದು ||

      ಪತಿ ಸತಿಯು ಮುನಿದು ಪೋಗಲ್ | ಸತತಂ ಗಾವುದವ ಸಪ್ತ ದಿವಸಾಂತರದಿಂ ||
      ಪತಿ ಗಾವುದರೆಯನನುದಿನ ಗತಿ ನಡೆಯಲ್ ಸತಿಯನೆಂದು ಪತಿಯ್ಕೆದುಗುಮೋ|| ದಿ ೧ಕ್ಕಂ ಸತಿ ನಡೆವ ೧ ಮುಂಚಿತ್ತಾಯಿತು ದಿನ ೭ ದಿನ ೧ಕ್ಕಂ ಪತಿ ನಡೆವ ಗಾವುದ ಇನ್ನು ಎಷ್ಟು ದಿನಕ್ಕೆ ಕೂಡುವನೆಂದೊಡೆ | ಅಬ್ಬಸಂಯೋಗದ ದಿನ ೧೪ ಸಮಗಾವುದ ೨೧ ೨೧
    ॥ಟೀಕು॥ ದಿ ೭ನೂ ಸಮಗತಿಯ ೧ಯಂ ಗುಣಿಸಲು ೭ಇದನು ಪ್ರತಿಯ ನಿಟ್ಟು ಗಾವುದಗಳ |೩| ಇದನು ಮುಂದಿರ್ದ ೭ನೂ ಸಮಚ್ಛೇದಂಮಾಡಲು ತೆ

೧೪ ಈ ಈ ೧೪ನೂ ೩೧ಂ ಭಾಗಿಸಲು ಸಮಾನಯೋಜನಮಕ್ಕುಂ°ll ಆ ಸಮಾ ನಯೋಜನ ೨೧ ಆಟೊಳಗೆ ೭ ಕಳೆಯಲು ೧೪ ಸಂಯೋಗದದಿನಮಕ್ಕುಂ|

                           ------------------
                ಶಾಂತವೀರದೇಶಿಕ ಸು 1650  

ಈತನು ಶಿವಲಿಂಗಚಾರಿತ್ರ, ಶಿವಗಣಚಾರಿತ್ರ ಇವುಗಳನ್ನು ಬರೆದಿ ದ್ದಾನೆ: ಇವನು ವೀರಶೈವಕವಿ; ತನ್ನ ಪರಂಪರೆಯನ್ನು ಹೀಗೆ ಹೇಳಿದ್ದಾನೆ:ಶಿವಲಿಂಗಾರೄ, ಮಗ ವೀರೇಶಾದ್ಯ, ಮಗ ಚೆನ್ನವೀರೇಶ್ವರ, ಮಗ ಕವಿ ಶಾಂತವೀರದೇಶಿಕ ಪೂರ್ವಕವಿಗಳಲ್ಲಿ ಗುಬ್ಬಿಯವಲ್ಲಣಾರನನ್ನು (1530) ಸ್ಮರಿಸುವುದರಿಂದ ಕವಿ ಅವನ ಕಾಲಕ್ಕೆ ಈಚೆಯವನೆಂಬುದು ವ್ಯಕ್ತವಾ ಗಿದೆ. ತನ್ನ ತಂದೆ ಚಾಮರಾಜೇಂದ್ರನ ಸಭೆಯಲ್ಲಿ ರಾಮದೀಕ್ಷಿತನನ್ನು ವಾದದಲ್ಲಿ ಜಯಿಸಿದಂತ

    ಚಾಮರಾಜೇಂದ್ರನ ಸಭೆಯೊಳು ತರ್ಕಿಸುವ | ರಾವದೀಕ್ಷಿತನ ಭಂಜಿಸಿದ | ಶ್ರೀಮದ್ವೀರಣಾರಾಧ್ಯ ತನುಜ ಗುಣ | ಧಾಮ ಚೆನ್ನಾ ರೄ. ಎಂಬ ಪದ್ಯದಲ್ಲಿ ಹೇಳುತ್ತಾನೆ. ಈ ದೊರೆ 1617 ರಿಂದ 1637ರ ವರೆಗೆ ಆಳಿದ ಮೈಸೂರು ಚಾಮರಾಜನಾಗಿರಬೇಕು. ಆದುದರಿಂದ ಕವಿಯ ಕಾಲವು ಸುಮಾರು 1650 ಆಗಬಹುದು, ಕವಿ “ಆನಂದಾಗಮವೇದಶಂಕ ರಪುರಾಣಾಧ೯ಸತ್ತೋವಿದಂ, ನಾನಾಕಾ ವ್ಯವಿಚಾರಪೂರಕವಿತಾಕಾಣಾತಕೇಶ್ವರಂ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ.

48