ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

(9) ಹೀಸ್, ಲೈಫ್, ಅಂಡ್ ಟೈಮ್ಸ್-ಹೀಸ್‌ ಫಿಲಾಸಫೀ-ಇಂಗ್ಲೀಷು. (His Life and Times-His Philosophy.) ಈ ಗ್ರಂಥದಲ್ಲಿದ್ದ ಅನೇಕ ದೋಷಗಳನ್ನು ತಿದ್ದಿ ಕೊಟ್ಟು, ಮುದ್ರಣಕ್ಕೆ ಅನು ಕೂಲವಾಗುವಂತೆ ಮಾಡಿದ ಮೈಸೂರು, ಧಾರ್ವಾಡ, ಚಿದಂಬರಂ, ಹಿಂದೂಪುರಂ, ಮೊದಲಾದ ಸ್ಥಳೀಯರಾದ ಅನೇಕ ವಿದ್ವಾಂಸರುಗಳಿಗೂ, ತಮ್ಮ ಅಮೋಘವಾದ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ, ವೇ|| ಸಿ, ವೆಂಕಟರಮಣಶಾಸ್ತ್ರಿಗಳಿಗೂ ಮತ್ತು ಬಹಳ ಅಂದವಾಗಿಯೂ ಜಾಗ್ರತೆಯಾಗಿಯೂ, ಮುದ್ರಣಮಾಡಿಸಿಕೊಟ್ಟ ರಾಯಲ್‌ಪ್ರೆಸ್ ಪ್ರೊಪ್ರೈಟರಾದ ಮ|| ರಾ|| ಬಿ. ವಿ. ನರಸಿಹ್ಮೈ೦ಗಾರ್ಯರಿಗೂ ನಾನು ಅಹರ್ನಿಶಿ ಯಲ್ಲಿಯೂ ಕೃತಜ್ಞನಾಗಿರುವೆನು. ವೃ| « ದೋಷವಕಂಡುತಿರ್ದಿ, ಗುಣದೊಳ್ಬೆರೆಸಾನರೆ ? ಮೋದಮುತ್ತಮ‌ರ್; | - ದೋಷವಕಂಡದಂಬಿಡುತ್ತೆ, ತೋಷಿಪರೈ ! ಗುಣದಿಂದೆ, ಮಧ್ಯಮರ್‌, || ದೋಷಮದಲ್ಪ ಮಿರ್ದೊಡೆಯುಮೆಲ್ಲ ವದೂಷಿಪರೆಂದುಮಲ್ಪರಾ; | ದೋಷಮೆಶೂನ್ಯ ಮಾದೊಡೆಯುಮೇಡಿಪರೈ ! ಕುಕವೀಂದ್ರಶೇಖರರ್ ||” ಎಂಬ ನೀತಿವಚನದಂತೆ ಗುಣಗ್ರಹಣತತ್ಪರರಾದ ಮಹನೀಯರು ಇದರಲ್ಲಿ ಪ್ರಮಾದದಿಂದ ಬಿದ್ದಿರುವ ದೋಷವನ್ನು ತಿಳಿಸಿದರೆ ಅದನ್ನು ಮುಂದಣ ಮುದ್ರಣ ದಲ್ಲಿ ಸರಿಪಡಿಸಿಕೊಳ್ಳುವೆನು. ಇತಿಶಂಕರಕಿಂಕರ, ರಾಕ್ಷಸ, ಸಂ|| ಫಾ|| ಶು|| ೯ ) ಡಿ. ಎಸ್. ಶಂಕರನಾರಾಯಣಶಾಸ್ತ್ರಿ, ಸೋಮವಾರ13-3-1916 ದಿಡ್ಡೆ ಪುರ(ಚಾಮರಾಜನಗರದತಾಲ್ಲೂಕು.) ಸರ್ವತನ್ತ್ರಸ್ವತನ್ತ್ರಾಯಸದಾತ್ಮಾದ್ವೈತವೇದಿನೇ || ಶ್ರೀಮತೇಶಂಕರಾರ್ಯಾಯವೇದಾನ್ತಗುರವೇನಮಃ ||