ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಕಾದಂಬರಿ: ಸಂಗ್ರಹ ಣಿಗೆ ತಿಳಿಸುವುದು ಅತಿ ಸುಲಭ, ಅವಳಾದರೋ ಅತಿ ಚತುರೆ, ಕುಶಲಮತಿ, ಇಂಧನ ಳಿಗೆ ಜಾಗ್ರತೆಯಾಗಿ ವಿದ್ಯೆಯು ಒರಲು ಅಭ್ಯಂತರವೇನಿರುವುದು ! ಅವಳು ಶಾಲೆಗೆ ಹೋದ ಸ್ವಲ್ಪ ಕಾಲದಲ್ಲಿಯೇ ಓದಿ ಬರೆವುದರಲ್ಲೂ ಗಣಿತದಲ್ಲೂ ಬುದ್ದಿ ಮತಿಯಾ ದಳು. ಆಗ ಸುಂದುಯಾದ ರೋಹಿಣಿಗೆ 16 ವರ್ಷಗಳು ತುಂಬಿದವು, ಕರುಣಾಂಬೆ ಯು ಅವಳ ಸೌಂದರ್ಯವನ್ನೂ ಅವಳ ಜಾಣ್ನೆಯನ್ನು ನೋಡಿ ಹಿಗ್ಗು ತಲಿದ್ದಳು. ವಾಚಕರೇ ಇನ್ನು ಕರುಣಾಕರ ದಯಾಕರ ವೃತ್ತಾಂತವನ್ನು ವಿವರಿಸುವೆವು ಇತ್ತ ಬನ್ನಿ

                                   ಚತುರ್ಥಲತುರಿ.                                                    ಲೋಕದಲ್ಲಿ ಸಾಮಾನ್ಯವಾಗಿ ಪಚ್ಚಕರ್ಪೂರ ಮುಂತಾದ ವಾಸ ನಾದ್ರವ್ಯಗಂದ.ಮಿಶ್ರಿತವಾದ ದಿವಸುಗಂಧಾನುಲೇಪನದಲ್ಲಿಯೂ ವಿವಿಧ ವಿಹಾರಗಳ ವ್ಯ, ನವನವಸವಾರ್ಧದರ್ಶನದಲ್ಲೂ ಉತ್ಸುಕರಾಗಿರುವರೇ ವಿನಾ -ದುಃಖಕಷ್ಟ ಗಳನ್ನನುಭವಿಸಲಾರರು.ಚಳಿಗಾಲಪ್ರಾಪ್ತವಾದರೆ ರಾತ್ರಿ ಕಾಲದಲ್ಲಿ ಕಂಬಳಿಗಳನ್ನು ಹೊದೆದುಕೊಳ್ಳುವುದರಲ್ಲಿ ಯ. ಬನಾತಿನ ಅಂಗಿಗಳನ್ನು ತೊಟ್ಟುಕೊಳ್ಳುವುದರ

ಯೂ. ಕಸ್ತೂರಿಯ ಬಲದಿಂದ ಸುವಾಸಿತವಾದ ಅಡಿಕೆಯೂ, ಚಂದ್ರಬಿ.ಬದಂತೆ ಛಳಥಳಿಸುವ ವೇಳೆ ಎದೆತಿಯ. ಶುಭ್ರವಾದ ಸುಣ್ಣವೂ ಇವುಗಳಿಂದ ರಂಜಿತವಾಗಿ ಕಾಂತಾಕರದಿಂದ ಅತವಾದ ತಾಂಬೂಲವನ್ನು ಸೇವಿಸುವುದರಲ್ಲಿ ಆಸಕ್ತರಾಗಿಯೂ. ಧೂಮವಿಲ್ಲದೆ ಜ್ವಲಿಸುವ ಕೆಂಡಗಳಿಂದ ತುಂಬಿರುವ ಅಗ್ಗಿಷ್ಟಿಕೆಯ ಸೇವನೆಯಲ್ಲಿ ಯ.ವಿಶಾಲವಾದ ವಟವೃಕ್ಷಛಾಯೆಯಲ್ಲಿ ವಿಹರಿಸುವುದರಲ್ಲಿಯೂ. ಶುಭ್ರವಾದ ಜಲದಲ್ಲಿ ಸ್ನಾನಮಾಡುವುದರಲ್ಲಿ ಯ. ವಿನೋದವ್ಯಾಪಾರಗಳಲ್ಲಿಯೂ ಆಶೆಯುಳ್ಳವರಾಗಿ ರುವರು. ಆ ಕಾಲದಲ್ಲಿ ಹಕ್ಕಿಗಳು ತಮ್ಮತಮ್ಮ ಗೂಡುಗಳಿಂದ ವಿಶೇಷವಾಗಿ ಹೊರಗೆ ಹೊರಡದೆ ತಮ್ಮ ತಮ್ಮ ಮರಿಗಳನ್ನು ರೆಕ್ಕೆಗಳಲ್ಲಿ ಮುಚ್ಚಿಕೊಂಡಿರುವುವು. ಗದ್ದೆಗ ಳಲ್ಲಿ ಭತ್ತದ ಪೈರುಗಳು ಸುವರ್ಣವರ್ಣದ ತೆನೆಗಳಿಂದ ಭೂಮಿಗೆ ಬಾಗಿರುವುವು. ವಸಂತಕಾಲದಲ್ಲಿ ಪಥಿಕರ ಶ್ರಮಸುಪಾರಕ್ಕಾಗಿ ಧರ್ಮಾತ್ಮರಿಂದ ಇಡಲ್ಪಟ್ಟಿದ್ದ ಅರವ ಟ್ಟಿಗೆಗಳು ಈಗ ಶೂನ್ಯವಾಗಿರುವುವು. ಉಷಃಕಾಲದಲ್ಲಿದ್ದು ನದಿಯಲ್ಲಿ ಸ್ನಾನಮಾಡಿ ಮೇಲಕ್ಕೆ ಬರುವ ತಾಪಸರ ತುಟಿಗಳು ಶೀತದಿಂದ ಗಡಗಡನೆ ನಡುಗುವುದನ್ನು ನೋಡಿದರೆ ಇಂತು ಉಪದ್ರವಕರವಾದ ಈ ಕಾಲವು ಶೀಘ್ರವಾಗಿ ತೊಲಗಿಹೋಗಲಿ ಎಂದು ಶಪಿಸುವಂತೆ ಕಾಣುವುವು. ವೃಕ್ಷಗಳನ್ನು ನೋಡಿದರೆ ಸದ್ಗುರುವಿನಂತಿರುವ