ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಧುಸೂದನ

ನೋಡಲು ಅದು ತಾನು ಕಂಡುಹಿಡಿದ ಹರಿದುಹೋದ ಏಳುಬಣ್ಣದ ಕರವಸ್ತ್ರದಹಾ ಗಿತ್ತು, ಅದನ್ನು ನೋಡಿ ಅವನಿಗಿದ್ದ ಸಂಶಯಗಳೆಲ್ಲಾ ಅಡಗಿಹೋದವು. ಇವನೇ ಸರಿ ಯಾದಮನುಷ್ಯನೆಂದು ಯೋಚಿಸಿದನು. (ಇನ್ನೂ ಇವನಿಂದೇನಾದರೂ ಗುಟ್ಟುಗಳನ್ನು ಹೊರಪಡಿಸಬೇಕೆಂದು ಯೋಚಿಸಿ)

    ಭಾಸ್ಕರ:-ಆದರೆ ಅಣ್ಣಾ ಅದೇನೋ ಹಾಂಗಿದೆ-ಕರವಸ್ತ್ರ-ಹೊತ್ತಾಯಿತು ಗಂಟೆನೋಡಣ್ಣ ಹೋಗೋಣ.
    ಹರಿಚಂದ್ರ:-ಅದಾ ನಮ್ಮ ಸಂಘದ ಕರವಸ್ತ್ರ-ಅದ್ಯಾರೋ ನನ್ನನ್ನು ಕೇಳು ವದು ಹೋಗು-ನಾನು ಹೇಳುವದಿಲ್ಲ. ನಿನಾ ನಮ್ಮಣ್ಣ ಗಂಟೆನೋಡಾಲಾ (ಗಡಿಯಾರವನ್ನು ಹೊರಗೆ ತೆಗೆಯಲು ಭಾಸ್ಕರನು ಅವನಿಗೆ ತಿಳಿಯದಹಾಗೆ ಸರಪಣಿಯ ಕೊನೆಯಲ್ಲಿ ಎಂ (M) ಎಂಬಕ್ಷರದ ಗುಂಡಿಯನ್ನು ಕಿತ್ತುಕೊಂಡು ತನ್ನ ಜೋಬಿನಲ್ಲಿ ಭದ್ರಪಡಿಸುವನು) ಗಂಟೆ ಹದಿಮೂರಾಯಿತು. ಅಯ್ಯಯ್ಯೋ ಹೊತ್ತಾಯಿತಪ್ಪಾ ನಾನು ಹೋಗುತ್ತೇನೆ. ನಾಳೇದಿವಸ ನಮ್ಮ ಸಂಘದ ಮಾಟಿಂಗಿದೆ ಸೈ ರಾಜ ಅದೆಲ್ಲೋದಾರಿ (ಎದ್ದು ತಡವರಿಸುತ್ತಾ ಹೋಗುವನು)
 
    ಭಾಸ್ಕರ:-ಅದೇನಪ್ಪಾ ನಿಮ್ಮ ಸಂಘದ ಮಾಟಿಂಗ್ ರ್ನಾ ಬರಬಾರದಾ ನಾನೂ ಬರುತ್ತೇನೆ ನಡಿಯಪ್ಪಾ.

    ಹರಿಚಂದ್ರ:-ಮಾಟಿಂಗಾ ಹೂ ಮಾಟಿಂಗ್ ಉಂಟು. ನಾಳೆರಾತ್ರಿ ಹತ್ತು ಗಂಟೆಗೆ ಸರಿಯಾಗಿ. ನಿನಾ ನೀನ ಯಾರೋ ಎಲ್ಲೋ ನಿನ್ನ ಗುಂಡಿ (ಅಷ್ಟರಲ್ಲೇ ದಾರಿಯನ್ನು ಕಂಡು ಹೊರಕ್ಕೆ ಬಂದು ಚರಂಡಿಯಲ್ಲಿ ಬಿದ್ದು ಕೊಳ್ಳುವನು.) ಭಾಸ್ಕರನು ಎಷ್ಟು ಪ್ರಯತ್ನ ಮಾಡಿದರೂ ಅವನು ಏಳಲಿಲ್ಲಾ. ಜೋಬಿನಲ್ಲೇನಾದರೂ ಕಾಗದಗಳಿವೆಯೋ ಎಂದು ನೋಡಲು ಒಂದುಚೂರು ಕಾಗದವಿನಹಾ ಮತ್ತೇನೂ ಸಿಗಲಿಲ್ಲ. ಆ ಚೂರಿನಲ್ಲಿ "ಎಂ ಸಂಘದವರೆಲ್ಲಾ ನಾಳೇದಿವಸ ರಾತ್ರಿ ಹತ್ತು ಗಂಟೆಗೆ ಸರಿಯಾಗಿ ಗುಪ್ತಗೃಹಕ್ಕೆ ಬರಬೇಕು” ಎಂದು ಮಾತ್ರ ಬರೆದಿತ್ತು. ಅದನ್ನು ಜೋಬಿನಲ್ಲಿ ಹಾಕಿ ಕೊಂಡು ಸುತ್ತುಮುತ್ತಾ ನೋಡುತ್ತಾ ತನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲವೆಂದು ತಿಳಿದಮೇಲೆ ವೇಗವಾಗಿ ನಡೆದು ಅಲ್ಲೊಂದು ಸ್ಥಳದಲ್ಲಿ ತಾನು ಚೀಲದಲ್ಲಿ ತುಂಬಿಟ್ಟುಕೊಂಡಿದ್ದ ಮದ್ಯವನ್ನೆಲ್ಲಾ ಸುರಿದುಬಿಟ್ಟು, ಗೋವಿಂದನ ಮನೆಯನ್ನು ಸೇರಿ ಸ್ನಾನವನ್ನು ಮಾಡಿ ಶುಭ್ರವಸ್ತ್ರವನ್ನು ಧರಿಸಿ ಊಟಮಾಡಿಕೊಂಡು ಮಲಗಿ ನಿದ್ರೆ ಹೋದನು.