'52 || ಶ್ರೀ || ಷಷ್ಠಿ ಪರಿಚ್ಛೇದ. (ನಿರ್ಮತ್ಸರ ಪ್ರೇಮ) ಮತ್ಸರವೆಂಬುದು ಸ್ತ್ರೀನಾಮಾನ್ಯಕ್ಕೆ ತಪ್ಪಿದುದಲ್ಲವೆಂದು ಅಭಿಮಾನ ಪರರಾದ ಪುರುಷರಾಡುವರು. ಆದರೆ, ಅದು ಎಷ್ಟರ ಮಟ್ಟಗೆ ನಿಜವಿರ ಬಹುದೆಂಬದನ್ನು ಇಲ್ಲಿ ವಿಚಾರಮಾಡುವುದು ನಮ್ಮ ಕರ್ತವ್ಯಕ್ಕೆ ಸೇರಿದ್ದರೂ, ಅದನ್ನು ನಾವೇ ವಿಮರ್ಶಿಸುವುದನ್ನು ಬಿಟ್ಟು, ಪ್ರತ್ಯಕ್ಷ ಉದಾಹರಣೆಯಿಂದ ಅವರವರೇ ತಿಳಿದು ಹೇಳಬಹುದೆಂದೆಣಿಸಿ ನಮ್ಮ ಆದರ್ಶರಮಣಿಯರಾದ ಚಿತ್ರಕಲಾ ಮತ್ತು ಅವಳ ಸಖಿ, ಚಂದ್ರಮತೀದೇವಿಯರ ಸರಸ ಸಲ್ಲಾಪ ವನ್ನೇ ಮುಂದಿಡುವೆವು; ವಾಚಕವರ್ಗವು ಸಾವಧಾನದಿಂದ ಸಾಮಲೋಚಿಸಲಿ ! ರಮಣಿಯರಿಬ್ಬರೂ ಬೀದಿಯ ಕಡೆಯ ಅಂಗಳದಲ್ಲಿ ಕುಳಿತು, ತಮ್ಮ ನೈಸರ್ಗಿಕ ಪ್ರೇಮಮಯಮೂರ್ತಿಗಳ ಕಾಂತಿಯಿಂದ ತಮ್ಮ ಸುತ್ತಮುತ್ತಲ ಪ್ರವೇಶವನ್ನೇ ಬೆಳಗಿಸುತ್ತಿರುವರು. ಹೊತ್ತು, ಸಾಯಂಕಾಲ ನಾಲ್ಕು ಗಂಟೆ ! ಉಳಿದ ವಿಚಾರ ನಮಗೇಕೆ? ಚಂದ್ರ:-ಚಿತ್ರಕಲಾ ! ' ಬಿನ್ನ ರೂಚಿಹಿ೯ಲೋಕಃ' ಎಂಬುದು ನಿಜವಾಗಿರಬೇಕಲ್ಲವೇ? ನಾದಾನಂದನ ಮನೋಭಾವಕ್ಕೂ ನಮ್ಮ ಅಚಲ ಚಂದ್ರನ ಮನೋಭಾವಕ್ಕೂ ಇರುವ ಅಂತರವೆಷ್ಟೆಂಬುದನ್ನು ನೋಡಿದರೆ ಸಾಕಲ್ಲವೇ? ಚಿತ್ರ:-ಹೇಗೆ ? ಚಂದ್ರ:-ನಮ್ಮವನು ಶುದ್ಧ ಸನಾತನ ಧರ್ಮಾನುಯಾಯಿಯೆಂದೂ ಜಡಬ್ರಹ್ಮಚಾರಿಯೆಂದೂ ಹೆಸಗೊ೯ಂಡಿರುವನು. ನಿಮ್ಮವನು ನಾಗರೀಕ ನಂದೂ ಸುಧಾರಕ ಮಹಾಶಯನೆಂದೂ ಪ್ರಸಿದ್ಧಿ ಹೊಂದಿರುವನು. ಇವರಿ
ಪುಟ:ಮಾತೃನಂದಿನಿ.djvu/೬೬
ಗೋಚರ