ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

77 ಮಾತೃನಂದಿನಿ ತ್ತಿದ್ದ ನಾರಾಯಣಶಬ್ದದಿಂದ ಪಾವನರಾದೆವೆಂದೆಣಿಸಿ, ಗುರುಗಳು ಸ್ವಹಸ್ತದಿಂದ ಕೊಡುವ ತೀರ್ಥವನ್ನು ಭಕ್ತಿಯಿಂದ ಕೈಕೊಂಡು, ಕೃತಾರ್ಥರಾದೆವೆಂಬ ಉಕ್ಕಿನಿಂದ ಕೆಲಕ್ಕೆ ನಾರುತ್ತಿದ್ದರು. ಸ್ವಾಮಿಗಳ ಬಳಿಯಲ್ಲಿ ಕುಳಿತಿದ್ದ ಸಂಗ್ರಹಕಾರರಿಬ್ಬರು ಶಿಷ್ಯಮಂಡಲಿಯವರಿಂದ ಸಮರ್ಪಿಸಲ್ಪಡುತ್ತಿದ್ದ ಕಾಣಿಕೆಗಳನ್ನು ಪೀಠದ ಎಡಗಡೆಯಲ್ಲಿದ್ದ ದೇವರ ಹಣದ ಪೆಟ್ಟಿಗೆಗೆ ತುಂಬುತ್ತ, ಕಾಣಿಕೆಗಳನ್ನೊಪ್ಪಿಸಿದವರ ಕುಲ-ಗೋತ್ರಗಳನ್ನು ಉದ್ಘೊಷಿಸಿ, ಅವರಿಂದ ಅಬದ್ಧವೋ ಸುಬದ್ಧವೋ, ಹೇಗೂ ಕಂಠಪಾಠ ಮಾಡಿಕೊಂಡಿದ್ದ ಒಂದೆರಡು ಮಂತ್ರಗಳನ್ನು ಹೇಳಿಸಿ, ಪರಿಶುದ್ಧ ರಾದಿರೆಂದು ಹೇಳಿ ಅವರನ್ನು ಮೊದಲಿದ್ದೆಡೆಗೆ ಕಳುಹುತ್ತ ಬಂದರು. ಒಂದೆರಡು ಗಂಟೆಯೊಳಗಾ ಗಿಯೇ ಬಂದಿದ್ದವರೆಲ್ಲರಿಂದಲೂ ಕಾಣಿಕೆಗಳು ಒಪ್ಪಿಸಲ್ಪಟ್ಟಂತಾಯಿತು. (ರಾಜಾಸ್ಥಾನದಲ್ಲಿ ಸಾಮಂತರೂ, ಅಧಿಕಾರಿಗಳೂ, ಪ್ರಸಾದವನ್ನು ಕೋರ ವವರೂ ಮಾಡುವ ಸಂಪ್ರದಾಯವನ್ನು ಕೇಳಿ ತಿಳಿದಿರಬಹುದಾಗ ನಾಗರಿಕರಿಗೆ, ಈ ನಮ್ಮ ಪರಮಹಂಸರ ರಾಜರೆಂಬದಾಗಿಯೂ, ಅವರ ಬಳಿಯಲ್ಲಿರುವವರೇ ರಾಜಾಸ್ಥಾನದ ಮುಖ್ಯ ಮುಖ್ಯ ಮಂತ್ರಿಗಳೆಂಬುದಾಗಿಯೂ, ಇಂದಿನ ಸಭೆಯೇ ಪೃಥ್ವೀಪಾಲಕರ ಸಭೆಯಾಗಿರಬಹುದೆಂಬುದಾಗಿಯೂ ತೋರುವುದಲ್ಲವೇ? ಅದು ಹೇಗಾದರೂ ಇರಲಿ; ನಮಗೇನು ? ಇದ್ದುದನ್ನು ಇದ್ದಂತೆ ವಿವರಿಸುವುದೊಂದೇ ನಮ್ಮ ಕೆಲಸವು. ಮುಂದಿನ ವಿಚಾರ ವಿಮರ್ಶಯು ವಾಚಕರದೇ ಸರಿ.)

  ಕಪ್ಪಕಾಣಿಕೆಗಳ ಅಬ್ಬರವೆಲ್ಲವೂ ಮುಗಿದುವು. ಈವರೆಗೆ ಸ್ವಾಮಿಗಳವರು ಧ್ಯಾನಾ (ಎಂತಹಧ್ಯಾನ?-ಬಕಧ್ಯಾನವೊ?) ಸಕ್ತರಾಗಿದ್ದು ಈಗಲೇ ಬಹಿಮು೯ಖರಾದಂತೆ ಕಣ್ಣೆರೆದು ಸುತ್ತಮುತ್ತಲಿದ್ದವರನ್ನೂ ಕುತೂಹಲದಿಂದ ಕಟಾಕ್ಷಿಸಿದರು. ನೆರೆದಿದ್ದವರೆಲ್ಲರೂ ಜಗದ್ಗುರು ಕೃಪಾಕಟಾಕ್ಷವು ತಮ್ಮೆಲ್ಲರನ್ನೂ ಪವಿತ್ರರನ್ನಾಗಿ ಮಾಡಿತೆಂದು ತಿಳಿದು ನಲಿದರು. ಆದರೆ, ಸ್ವಾಮಿಗಳ ಮುಖಬಿಂಬವು ಮಾತ್ರ ಕೌತುಕ-ವಿಷಯ-ಕ್ರೋಧಗಳಿಂದ ಮಿಶ್ರ ವರ್ಣಕ್ಕೆ ತಿರುಗಿತಲ್ಲದೆ ಪ್ರಸನ್ನತೆಯನ್ನು ಸೂಚಿಸಲಿಲ್ಲ. ಕಾರಣವೇನಿರಬಹುದೂ ನಮಗೆ ತಿಳಿಯದು.
  ಸ್ವಾಮಿಗಳ ಈ ಬಗೆಯ ವೀಕ್ಷಣದಿಂದ ಗಣೇಶಸಂತರು ಚಕಿತರಾಗಿ