24 ತಿ ಸತೀ ಹಿತೈಷಿಣಿ ಮಲ್ಲದೆ ಮತ್ತಾವದು? . ಅನ್ನದಿಂದಲೇ ಪ್ರಾಣವ, ಪ್ರಾಣದಿಂದಲೇ ಸರಾಕ್ರಮವೂ ದೃಢವಾಗಬೇಕಲ್ಲವೇ ?” ಈ ಧರ್ಮಸೂಕ್ಷವನ್ನು ತಿಳಿದ ನಗೇಶರಾಯನೇ ಧನ್ಯಾತ್ಮನೆಂದು ಹೇಳಲು ಆಕ್ಷೇಪವೇನು ? ನಗೇಶರಾಯನ ಮನೆಯ ಊಟದ ಅಂಗಳದಲ್ಲಿ ಸಾಲುಸಾಲಾದ ಮಣೆಗಳೂ, ಮುಂದೆಯಲ್ಲಿ ಎಲೆಗಳೂ, ಬಳಿಯಲ್ಲಿಯೇ ಸೀನೀರುತುಂಬಿದ ಬೆಳ್ಳಿಯ ಪಾತ್ರೆಗಳೂ ಒರೆಗಾನಂದವನ್ನುಂಟುಮಾಡುತ್ತಿದ್ದುವು. ಪುಣ್ಯ ಪುರುಷನಾದ ನಮ್ಮ ನಗರರಾಯರು, ಅತಿ-ಅಭ್ಯಾಗತರಾಗಿ ಬಂದಿರುವೆ. ನಂಟರಿಷ್ಟರೊಡನೆ ಊಟಕ್ಕೆ ಕುಳಿತಿದ್ದನು. ನರಿತರಕರು ಬಡಿಸುವ ಕೆಲಸ ದಲ್ಲಿ ಬಲು ಎಚ್ಚರಿಕೆಯುಳ್ಳವರಾಗಿದ್ದರು. ನರೇಶರಾಯನ ಎಡಗಡೆ ಅಡ್ಡ ಸಾಲಿನಲ್ಲಿ, ಸ್ವರ್ಣಕುಮಾರಿಯೊಡನ ನಂದಿನಿಯ ಊಟಕ್ಕೆ ಕುಳಿತಿ ದ್ದಳು. ನಂದಿನಿಗೆ ಇದಿರಾಗಿಯೇ ನಾನಾನಂದು ಕುಳಿತು, ಕ್ಷಣಕ್ಷಣಕ್ಕೂ ತಲೆಯೆತ್ತಿ ನೋಡಿ ನಗುತ್ತ ಊಟಮಾಡುತ್ತಿದ್ದನು. ಊಟಮಾಡುತ್ತಿದ್ದವ ರಲ್ಲಿ ನರೆದಲೆಯವ ( ಬಿಳಿಯ ಕೂದಲ) ನೊಬ್ಬನು, ನರೇಶರಾಯನನ್ನು ಕುರಿತು,...ಏನಯ್ಯಾ, ನರೇಶರಾಯ! ನಿನ್ನ ಮಗಳಿಗೆ ಮದುವೆಯಾವಾಗ?” ನರೇಶ:-ಏನು ಹೇಳಿದಿರಿ, ಗಣೇಶಸಂತರೇ ! ಮಗಳಿಗೆ ಮದುವೆಯೇ ? ಇನ್ನೂ ಎರಡು ವರ್ಷಗಳು ಬೇಕು. ಗಣೇಶ:-ಕುಳಿತಂತೆಯೇ ಬೆದರಿ-11ನು, ಏಸು !! ಇನ್ನೂ ಎರಡು ವರ್ಷ !!! ಆವರೆಗೂ ವಿಳಂಬ? ಈಗಲೇ ಹನ್ನೆರಡುವರ್ಷ ! ವಾಲದುದಕ್ಕೆ ಮತ ಎರಡೇ? ಹದಿನಾಲ್ಕರಮೇಲೆ ಮದುವೆಯೇ? ಇದೇನು ಸಂತ್ರ್ಯ ರಾಯ ? ಎಲ್ಲಿಯ ನ್ಯಾಯ ?” (ಎಡಗಡೆಯಲ್ಲಿ ಕುಳಿತಿದ್ದ ಮತ್ತೊಬ್ಬ ಮುದುಕನನ್ನು ನೋಡಿ)-ಕೇಳಿದೆಯೇನಯ್ಯಾ, ವಿಶ್ವನಾಥರಾಯ! ನರೇಶ ರಾಯನು ಎಂತಹ ಸಾಂಪ್ರದಾಯಕಸ್ಮ” ಸಿಶ್ವನಾಥ:ತಿರಸ್ಕಾರಭಾವದಿಂದ, -ಎಷ್ಟಾದರೂ ಈ ನ ನಾಗ ರಿಕನಯ್ಯಾ? ಇವರ ಸಂಪ್ರದಾಯವೆಂಬುದು ವೂ ಹಣಕಲೆಯನ್ನೇ ಆಶ್ರ ಬಿಸಿ ಜೀವಿಸಿರುವುದು. ನಾವೇನು ಮಾಡಲಾkತು? ಕಾಲವೇ ಕೆಟ್ಟ ಹೋಗಿದೆ. ಇವರೆಲ್ಲಾ ಶ್ರೀಮಂತರಪ್ಪ! ಏನೇನು ಮಾಡಿದರೂ ಜಯಿಸಿ
ಪುಟ:ಮಾತೃನಂದಿನಿ.djvu/೪೦
ಗೋಚರ