ಪುಟ:ಮಾತೃನಂದಿನಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನಂದಿನಿ 97 (ನಂದಿನಿಯೂ ಮನೆಯೊಳಕ್ಕೆ ತೆರಳಿದಳು. ನಮ್ಮ ಸೋದರಿಯರೆಲ್ಲರೂ ಈ ಪರಿಚ್ಛೇದದ ಮರ್ಮವನ್ನು ತಿಳಿದು ವರ್ತಿಸುವರೆಂಬ ಭರವಸೆಯಲ್ಲಿ ಈ ಲೇಖನಿಯ ಈ ಪರಿಚ್ಛೇದಕ್ಕೆ ವಿರಾಮವನ್ನು ಕೊಟ್ಟ ಕುವದ:.) (ದಾಗ ಗಲಿ.) || ಶ್ರೀಃ || ದಶನು ಪರಿಚ್ಛೇದ. ++ + (ಅತ್ಯಾಚಾರಕ್ಕೆ ತಕ್ಕ ಪ್ರತೀಕಾರ) ವಿಚಾರತತ್ಪರರೇ! ಸಮಾಜಶಾಸನದಲ್ಲಿ ಈಚೀಚೆಗೆ ಸೇರಿಕೊಂಡಿರುವ ಅತ್ಯಾಚಾರದ ಭೀಕರಸ್ವರೂಪವು ವಿಚಾರಪರರಾದ ನಿಮ್ಮೆಲ್ಲರ ತಿಳಿವಿಗೂ ಬಂದೇ ಇರ ಬೇಕಲ್ಲವೆ? ಹಾಗೂ ಆ ಅತ್ಯಾಚಾರವು, ಬಡವರನ್ನು ವಿಶೇಷವಾಗಿ ಕಾಡಿ, ಅಂತವರು ಶಾಸನಕ್ಕೆ ಹೆದರಿ, ತಮ್ಮ ಶಾಶ್ವತ ಸುಖ-ಸಮಾಧಾನಗಳನ್ನಾದರೂ ಬಿಟ್ಟು, ಸಮಾಜಶಾಸನದ ಅತ್ಯಾಚಾರಕ್ಕೆ ತುತ್ತಾಗುವಂತೆ ಮಾಡಿಕೊಳ್ಳುತಿರುವುದು ಕೂಡ, ನಿಮಗೆ ಎಷ್ಟೋ ಕಡೆಯಲ್ಲಿ ನಿದರ್ಶನಕ್ಕೆ ಬಂದೇ ಇರುವುದಲ್ಲವೆ? ಆದರೆ, ವಿಚಾರಪರರಾದವರು ಇಂತಹ ಅತ್ಯಾಚಾರಕ್ಕೆವಶರಾಗದೆ, ದಕ್ಷತೆಯಿಂದಲೇ ತಮ್ಮ ಸುಖ-ಭೋಗ-ಸಂಪದಗಳನ್ನು ಅಭ್ಯುದಯ ಸ್ಥಿತಿಗೆ ತರಲು ದೀರ್ಘೋದ್ಯೋಗಿಗಳಾಗಿರುವುದೂ, ಅಂತವರ ಸತತೋದ್ಯಮದ ಫಲಸ್ವರೂಪವಾಗಿ ಅವರ ಮತ್ತು ಅವರ ಅನುಗಾಮಿಗಳ ಮೇಲೆ ತಿರುಗಿ ಬೀಳುವುದರಲ್ಲಿದ್ದ ಅತ್ಯಾಚಾರದ ಭೀಕರರೋಗವು ನಿವಾರಿಸಲ್ಪಟ್ಟ, ಸಮಾಜದ ಮುಖ್ಯ ತತ್ವವು ಶಾಶ್ವತಕೀರ್ತಿಸ್ವರೂಪದಿಂದ ಪ್ರಕಾಶಕ್ಕೆ ಬರುವುದೂ, ನಿಮ್ಮ ವಿಚಾರವಿಮರ್ಶೆಗೆ ಒಳಪಟ್ಟ ವಿಷಯವಾಗಿಯೇ ಇರ