ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦ಕೃಷ್ಣಲೀಲೆ

ದಯದಿಂದ ತಾವಿಲ್ಲಿಗೆ ದಯಮಾಡಿಸಿದಿರಿ, ತಮ್ಮ ಪಾದಧೂಳಿಯಿಂದ
ನಮ್ಮೀ ಗೋಕುಲವೆಲ್ಲವೂ ಪವಿತ್ರವಾಯಿತು.
    [ಎಂದು ಸ್ತೋತ್ರಮಾಡುತ್ತ ನಂದನು. ಪುನಃ ವಂದಿಸುವನು.

ನಾರದ:-ಎಲೈ, ನಂದಗೋಪನೆ! ನನ್ನ ವಿಚಾರವು ಹಾಗಿರಲಿ.
ಬ್ರಹ್ಮೇ೦ದ್ರಾದಿ ದೇವತೆಗಳಿಗೆ ಸಹಾ ಅಲಭ್ಯವಾದ ಮಹಾಭಾಗ್ಯವು
ನಿನಗೆ ಸುಲಭವಾಗಿ ಲಭಿಸಿರುವುದು. ನೀನು ಎಂತಹ ಪುಣ್ಯಶಾಲಿ
ಯೆಂಬ ರಹಸ್ಯವನ್ನು ನಾನು ಬಲ್ಲೆನು. ಮತ್ತು ನಿಮ್ಮ ಕುಲಗುರು
ಗಳಾದ ಈ ಗರ್ಗಾಚಾರ್ಯರು ಬಲ್ಲರು.

ನಂದ:-ಪೂಜ್ಯರೆ! ಎಲ್ಲವೂ ತಮ್ಮಾಶೀರ್ವಾದ ಬಲವು.

ನಾರದ:- ಪುಣ್ಯಾತ್ಮನೆ! ನಿನ್ನ ಮನೆಯಲ್ಲವತರಿಸಿರುವ ಯಶೋ
ದಾದೇವಿಯ ಮುದ್ದು ಬಾಲಕನಿಗೆ ಶ್ರೀಕೃಷ್ಣನಂತಲೂ ವಸುದೇವನ ಪತ್ನಿ
ಯಾದ ರೋಹಿಣೀದೇವಿಯ ಪುತ್ರನಿಗೆ ರಾಮನೆಂತಲೂ, ಭಗವದಾಜ್ಞಾ
ನುಸಾರವಾಗಿ ನಾಮಕರಣಮಾಡಿರುವೆನು. ಉಳಿದ ಪದ್ಧತಿಗಳನ್ನೆಲ್ಲಾ
ಈ ಗಾರ್ಗಾಚಾರ್ಯರು ನಡಿಸುವರು. ನಾನು ಮತ್ತೊಂದು ವೇಳೆ
ಬರುವೆನು. ಆಗ್ಗೆ ನಿನಗೆ ಕೆಲವು ರಹಸ್ಯಗಳನ್ನು ತಿಳಿಸುವೆನು.

  ನಂದ:-ಮಹಾತ್ಮರೆ! ತಮ್ಮಾಜ್ಞೆಯನ್ನು ಶಿರಸಾವಹಿಸುವೆನು.

  ನಾರದ:-ಎಲ್ಲರಿಗೂ ವಂದನೆಗಳು. ನಾನಿನ್ನು ತೆರಳುವೆನು.

   [ನಾರದರು ಮಧುರಾಪುರವನ್ನು ಕುರಿತು ತೆರಳುವರು. ನಂದ
ಗೋಪನು ಪರಿವಾರದೊಂದಿಗೆ ಪಟ್ಟಣಕ್ಕೆ ತೆರಳುವನು.]

          ** ** ** ** ** ** ** ** ** ** ** **

          ತೃತಿಯಾಂಕಂ:-ಪಂಚಮರಂಗಂ.

             ಪ್ರದೇಶ:-ಮಧುರಾಪುರ.

              ಕಂಸನ ದರ್ಬಾರ್

ಕಂಸನು ಸಿಂಹಾಸನದಮೇಲೆ ಕುಳಿತು ಚಿಂತಾಕ್ರಾಂತನಾಗಿರು
ವನು. ಅಘಾಸುರ-ಬಕಾಸುರ-ಧೇನುಕಾಸುರ,ವತ್ಸಾಸುರ, ಪ್ರಲಂಬಾ
ಸುರ, ಚಾಣೂರ ಮುಂತಾದವರು ಸುತ್ತಲೂ ಕುಳಿತಿರುವರು.