೩೨ಕೃಷ್ಣಲೀಲೆ
ಅಣುವುಗಳು ಬ್ರಹ್ಮಾಂಡಗಳಾಗಿಯೂ, ಬ್ರಹ್ಮಾಂಡಗಳು ತೃಣಗಳಾಗಿ
ಯೂ ಕ್ಷಣಮಾತ್ರದಲ್ಲಿ ಪರಿಣಮಿಸುತ್ತವೆ. ಪುರುಷೋತ್ತಮಾ | ಈ
ಸಂದರ್ಭದಲ್ಲಿ ನಾನು ಮಾಡಬೇಕಾದ ಕಾರ್ಯವೇನೆಂಬುದನ್ನು ಅಜ್ಞಾ
ಪಿಸು-ಶಿರಸಾವಹಿಸಿ ಮಾಡುವೆನು.
ವಿಷ್ಣು:- ನಿತ್ಯಮಂಗಳ ಸ್ವರೂಪಿಣಿಯಾದ ಪರಾಶಕ್ತಿಯೇ! ಸ
ರ್ವಜ್ಣತ್ವಾದಿ ಕಲ್ಯಾಣ ಗುಣೋಪೇತಳೂ, ಸದಾನಂದ ತುಂದಿಲಳೂ
ಆದ ನಿನ್ನ೦ದಲೇ ಸಮಸ್ತ ಕಾರ್ಯಗಳೂ ನಡೆಯಬೇಕಾಗಿರುವುವು.
ವಸುದೇವನ ಭಾರ್ಯೆಯರಲ್ಲಿ ರೋಹಿಣಿ ಎ೦ಬ ಒಬ್ಬಾಕೆಯ ಹೊರತು
ಮಿಕ್ಕವರೆಲ್ಲರೂ ಕಂಸನಿಂದ ಬಂಧಿಸಲ್ಪಟ್ಟಿರುವವರು, ರೋಹಿಣಿ
ಯೊಬ್ಬಳು : ಮಾತ್ರ ಕಂಸನ ಬಂಧನಕ್ಕೆ ಸಿಲುಕದೆ ತಪ್ಪಿಸಿಕೊಂಡು ಹೋಗಿ
ನಂದಗೋಕುಲದಲ್ಲಿ ಸೇರಿರುವಳು. ದೇವಕಿಯು ಈಗ ಏಳನೇ ಗರ್ಭ
ವನ್ನು ಧರಿಸಿ ಕಾರಾಗೃಹದಲ್ಲಿ ಪರಿತಪಿಸುತ್ತಿರುವಳು. ನೀನು ಈಗಲೇ
ಮಧುರಾಪುರಕ್ಕೆ ಹೋಗಿ ದೇವಕಿಯ ಗರ್ಭದಲ್ಲಿರುವ ಶೇಷಾಂಶವಾದ
ತೇಜಸ್ಸನ್ನು ಸಂಗ್ರಹಿಸಿ ನಂದಗೋಕುಲದಲ್ಲಿರುವ ರೋಹಿಣೀದೇವಿ
ಯ ಗರ್ಭದಲ್ಲಿಡು. ದೇವಕೀ ವಸುದೇವರಿಗೆ ಹಿಂದಿನ ಜನ್ಮದಲ್ಲಿ ನಾನು
ಕೊಟ್ಟಿದ್ದ ವರವನ್ನು ಪರಿಪಾಲಿಸುವುದಕ್ಕಾಗಿ ನಾನು ಅವರಿಗೆ ಪುತ್ರ
ನಾಗಿ ಅವತರಿಸುವೆನು, ನೀನು ನಂದಗೋಪನ ಸುಂದರಿಯಾದ ಯ
ಶೋದಾ ದೇವಿಗೆ ಪುತ್ರಿಯಾಗಿ ಅವತರಿಸು. ನಂತರ ಕಾಲೋಚಿತವಾದ
ಕಾರ್ಯಕರಣಗಳನ್ನು ನಡೆಸುತ್ತ, ದನುಜರನ್ನು ಸಂಹರಿಸೋಣ!
ಯೋಗಮಾಯೆ:- ಭಗವಂತನೇ ! ನಿನ್ನಾಜ್ಞೆಯಂತೆ ನಡೆಯ
ಲು ಸಿದ್ದಳಾಗಿರುವೆನು.
ವಿಷ್ಣು :- ಎಲೌ ಪರಾಶಕ್ತಿಯೇ! ಈ ಕಾರ್ಯವು ಲೋಕ ಸಂರ
ಕ್ಷಣಾರ್ಥವಾದುದು. ಇದರಿಂದ ನಿನ್ನ ಕೀರ್ತಿಯು ಜಗದ್ವ್ಯಾವಕವಾ
ಗುವುದು. ಜನರು ನಿನ್ನನ್ನು, ಕಾಂಚೀಪುರದಲ್ಲಿ ಕಾಮಾಕ್ಷಿಯೆಂತಲೂ
ಮಧುರಾಪುರದಲ್ಲಿ ಮೀನಾಕ್ಷಿಯೆಂತಲೂ, ಕಾಶಿಯಲ್ಲಿ ವಿಶಾಲಾಕ್ಷಿಯೆಂ
ತಲೂ, ಭದ್ರೇಶ್ವರದಲ್ಲಿ ಭದ್ರಕಾಳಿಯೆಂತಲೂ, ವರಾಹಗಿರಿಯಲ್ಲಿ ವಿಜ
ಯೆಯೆಂತಲೂ, ಮಾತೃಕಾಕ್ಷೇತ್ರದಲ್ಲಿ ವೈಷ್ಣವಿಯೆಂತಲೂ ಮಾನಸ
ಪುಟ:ಶ್ರೀ ಕೃಷ್ಣ ಲೀಲೆ.djvu/೪೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ