ಮಾತೃನಂದಿನಿ 165 ನಿಯ ಗಾನದೊಡನೆ ತಾವೂ ಸಂಭ್ರಮದಿಂದ ಹಾಡುತ್ತಿರುವರು. ಇವರ ಬಳಿಯಲ್ಲಿ ಅಚಲಚಂದ್ರ, ನಾರಾನಂದ, ಭಕ್ತಿಸಾರ, ಸೇವಾನಂದರೂ ಕುಳಿತ , ಗರ್ಭಾಂಕಣದಲ್ಲಿರುವವರ ಸ್ವರೋತ್ತೇಜಿತವಾಗುವಂತೆ ಅವರಿಂದ ಹೇಳಲ್ಪಟ್ಟಿದ್ದ ಸ್ವಾತಿ(ಗೀತೆ)ಯನ್ನು ಮತ್ತು ಮತ್ತು ಒತ್ತಿಯೊತ್ತಿ ಹೇಳುತ್ತಿರುವರು. ಸಾಲದುದಕ್ಕೆ ಇವರ ಬಳಿಯಲ್ಲಿಯೇ ನಗೇಶ, ಶರಚ್ಚಂದ್ರ. ಜ್ಞಾನಸಾರ, ವಿದ್ಯಾನಂದರೂ ಕುಳಿತು-ತಾಳಹಾಕುತ್ತೆ-ನಡುನಡುವೆ ಗೀತ ಪಲ್ಲವಗಳನ್ನೆತ್ತಿ ಹೇಳುತ್ತಿರುವರು. ಮಂದಿರದ ಮಧ್ಯಾಂಕಣದ ವಿಶಾಲಪ್ರದೇಶದಲ್ಲಿ ಇಕ್ಕೆಲಗಳಲ್ಲಿಯ ಸಾಲುಸಾಲಾಗಿ ಕುಳಿತಿರುವ ಮಹಿಳೆಯರೊಡನೆ ಕಲೆಕ್ಟರರ ಪತ್ನಿ ಮತ್ತು ವಿದ್ಯಾನಂದನ ಭಾರ್ಯೆಯರನ್ನು ಮುಂದೆ ಬಿಟ್ಟ, ಬತ್ರಕಲೆ, ಚಂದ್ರಮತಿ ಯರು ಕುಳಿತು, ತಮ್ಮ ಮನದಣಿವಂತೆ ಮಾತೃಗೀತೆಯನ್ನು ಸಮನೆ ಹರವಾಗಿ ಹಾಡುತ್ತಿದ್ದರು. ಅಲ್ಲಿಂದ ಮುಂದೆಯೆಂದರೆ, ಮಂದಿರದ ಪ್ರಾಕಾರದೊಳಗಡೆಯಲ್ಲಿಯೂ ಹೊರಗಡೆಯ ವನಪ್ರದೇಶದಲ್ಲಿಯೂ. ಸೇವೆಗೆ ಬಂದಿರುವ ಅಸಂಖ್ಯಾಕ ಪ್ರಜೆಗಳು, ಕಾಲುನಾಲಾಗಿ ಕುಳಿತ. ನಿಂತು, ದೇವಿಯನ್ನೇ ನೋಡುತ್ತ ಸತ್ಯಾನಂವಾದ್ಯರ ಮಾತೃಗೀತೆಯನ್ನು ಸಾವಧಾನದಿಂದ ಕೇಳುತ್ತ, ಮುಂದಿನ ಉತ್ಪವಾವಲೋಕನದಲ್ಲಿ ಉತ್ಸುಕ -ರಾಗಿದ್ದರು. ಸತ್ಯಾನಂದನು ಗಾನಮಾಡುತ್ತ ಮಾಡುತ್ತ ಅನಂದಪಾರವಶತೆಯಿಂದ ದೇವಿಯ ಪಾದಪ್ರದೇಶದಲ್ಲಿ ಅನತನಾಗಿಮೌನವಾಂತನು. ಅನಂದನ ಮೌನ ಧಾರಣೆಯಿಂದ, ಬಳಿಯಲ್ಲಿ ಕುಳಿತಿದ್ದ ನಂದಿನಿ, ತಪಸ್ವಿನಿಯರೇ ಮೊದಲಾಗಿ ಸಮಸ್ತರೂ ಚಕಿತರಾಗಿ, ಧಿಗ್ಗನೆದ್ದು-ನಿಶ್ಶಬ್ದದಿಂದ ನೋಡುತ್ತಿದ್ದರು. ತಪಸ್ವಿನಿಯು ದೇವಿಯ ಕಡೆಗೆ ಕೈನೀಡಿ, ಉತ್ತೇಚಿತಸ್ವರದಿಂದ ಸ್ತುತಿಸತೊಡಗಿದಳು,- ಹೇಜನನಿ ! ಜಗದುದ್ಧೇನಿನಿ! ಕೃಪೆಮಾಡು; ಕಣ್ಣೆರೆದು ನೋಡು:- « ಯೋಗಾರಮ್ಭ ತ್ವರಿತಮನಸೋ ಯುಪ್ಮದೈಕಾಣ್ತ್ಯ, ಯುಕ್ತಂ ಧರ್ಮಂ ಪ್ರಾಪ್ತಂ ಪ್ರಥಮ ಮಹಯ ದಾರಯ
ಪುಟ:ಮಾತೃನಂದಿನಿ.djvu/೧೭೯
ಗೋಚರ