ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪ ಕೃಷ್ಣಲೀಲೆ

ಕುರಿತು ಘೋರ ತಪವನ್ನಾಚರಿಸಿದಿರಿ, ನಿಮ್ಮ ತಪಸ್ಸಿಗೆ ಮೆಚ್ಚಿ ಪ್ರತ್ಯ
ಕ್ಷನಾದ ನಾನು, ನಿಮಗೆ ಬೇಕಾದ ವರಗಳನ್ನು ಕೇಳಬಹುದೆಂದು
ಸೂಚಿಸಲಾಗಿ, ನಿನ್ನಂತಹ ಪುತ್ರನಾಗಬೇಕೆಂದು ನೀವು ಬಯಸಿದಿರಿ.
ಅದರಂತೆಯೇ ನಾನು ನಿಮಗೆ ಪುತ್ರನಾಗಿ ಅವತರಿಸಿ “ಪ್ರಶ್ನಿಗರ್ಭ"
ನೆಂಬ ಹೆಸರನ್ನು ಪಡೆದೆನು. ಬಳಿಕ ನೀವು ಅದಿತಿ ಕಶ್ಯಪರೆಂಬ ದಂಪ
ತಿಗಳಾಗಿ ಹುಟ್ಟಲು ಪುನಃ ನಾನು ನಿಮಗೆ ಪುತ್ರನಾಗಿ ಅವತರಿಸಿ
ವಾಮನ ನೆಂಬ ಹೆಸರನ್ನು ಪಡೆದೆನು, ಸಾಧ್ವೀಮಣಿಯೆ! ಮೂರನೆಯ
ದಾದ ಈ ಜನ್ಮದಲ್ಲಿ ದೇವಕೀ ವಸುದೇವರೆಂಬ ದಂಪತಿಗಳಾಗಿರುವ
ನಿಮಗೆ ಈಗಲೂ ನಾನು ಪುತ್ರನಾಗಿ ಅವತರಿಸಿರುವನು.

ದೇವಕಿ:-ಜಗನ್ನಾಥಾ! ನಿನ್ನ ಚಿತ್ರ ಚರಿತ್ರಗಳು ಅತ್ಯದ್ಭುತ
ವಾಗಿರುವುವು.

ವಸುದೇವ-ಪರವಾತ್ಮನೆ ! ನಿನ್ನ ಲೀಲಾವಿಶೇಷಗಳು ಅನನ್ಯ ಸಾಮಾನ್ಯ
ವಾದುವುಗಳು.

ವಿಷ್ಣುವು:- ಎಲೈ ವಸುದೇವನೆ! ನೀನಿನ್ನು ಕಂಸನಿಗೆ ಹೆದರ
ಬೇಕಾಗಿಲ್ಲವು. ಪರಂತು ಎಲ್ಲರಿಗೂ ಶ್ರೇಯಸ್ಕರವಾದ ರೀತಿಯಲ್ಲಿ
ಕಾರ್ಯವನ್ನು ಸಾಧಿಸತಕ್ಕ ಸುಲಭೋಪಾಯವನ್ನು ಹೇಳುವೆನು.
ಕೇಳು.

ವಸುದೇವ:-ಭಗವಂತನೆ! ಶಿರಸಾವಹಿಸಿ ಕೇಳುವನು.

ವಿಷ್ಣುವು:-ಗೋಕುಲದಲ್ಲಿ ನಂದಗೋಪನ ಸುಂದರಿಯಾದ
ಯಶೋದಾದೇವಿಗೆ ಪುತ್ರಿಯಾಗಿ ನನ್ನ ಮಾಯಾಶಕ್ತಿಯು ಅವತರಿಸಿ
ರುವಳು. ನೀನು ಈಗಲೇ ನನ್ನನ್ನು ಗೋಕುಲಕ್ಕೆ ಕರೆದುಕೊಂಡು
ಹೋಗಿ ಯಶೋದೆಯ ಬಳಿಯಲಿಟ್ಟು, ಅಲ್ಲಿ ಶಿಶುರೂಪದಿಂದಿರುವ
ಯೋಗಮಾಯೆಯನ್ನು ಇಲ್ಲಿಗೆ ಕರೆದುತರುವನಾಗು. ಈ ಕಾರಾಗೃ
ಹದ ಬಾಗಿಲುಗಳೆಲ್ಲವೂ ತಾವಾಗಿಯೇ ತರೆಯುವುವು. ನಿನ್ನ ಕೈ
ಕಾಲುಗಳಿಗೆ ಬಂಧಿಸಿರುವ ಸಂಕಲೆಗಳು ಮುರಿದುಹೋಗುವುವು.
ದಾಟಲಶಕ್ಯವಾಗಿ ಕಾಣುವ ಯಮುನಾ ನದಿಯು ತಾನಾಗಿಯೇ ದಾರಿ
ಯನ್ನು ಬಿಡುವುದು.