ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಳಿ, , ಸ, ಚಂದಿಕ ಯ ಬೋಧವನ್ನು ಮಾಡಿಕೊಡಲಿಕ್ಕೆ ಶಕ್ತವಾಗಲಿಲ್ಲ. ಶಕ್ತಿಯು ಕೇವಲ ತನ್ನ ಹೃದಯಗತಿಯಿಂದ ಸಚೇತನಳಾಗಿ ಮೆಲ್ಲ ಮೆಲ್ಲನೆ ಎದ್ದು ಕುಳಿತು, ದೇಹವನ್ನು ಗಿಡದ ಬೊಡ್ಡೆಗೆ ಒರಗಿಸಿ, ಕಣ್ಣೀರುದು ರಿಸುತ್ತ, ತನ್ನ ಬಲಗೈ ಕಡೆಗೆ ನೋಡಿದಳು. ಕುಮಾರನ ಕೊರಳೊಳಗೆ ಹಾಕುವದಕ್ಕಾಗಿ ತನ್ನ ಕೊರಳೊಳಗಿನ ಮಾಲೆಯನ್ನು ತೆಗೆದು ಅಕೆ ಯು ಆ ಕೈಯಲ್ಲಿ ಹೇಗೆ ಹಿಡದಿದ್ದಳೋ, ಹಾಗೆಯೇ ಅದು ಈಗ ಲೂ ಆ ಕೈಯಿಂದ ಹಿಡಿಯಲ್ಪಟ್ಟಿತ್ತು. ಮಾಲೆಯನ್ನು ಕಂಡು ಅಕೆ ಯ ಹೃದಯವು ಈಗ ಪ್ರೇಮಭರಿತವಾಗಲಿಲ್ಲ, ಶಕ್ತಿಯ ವಿಶೇಷ ಪ್ರೀತಿಯ-ಆದರದ ಆ ಅಮಲ್ಯ ಹೂಮೊಲೆಯು ಇದಾಗಿದ್ದಿಲ್ಲ. ಯಾವದು ಆಶಾವಿಶ್ವಾಸಗಳ ಸೂತ್ರದಿಂದ ಕಟ್ಟಲ್ಪಟ್ಟಿದ್ದರಿಂದ ಅದು ಅಮಲ್ಯವಾಗಿತ್ತೋ ಆ ಆಶಾವಿಶ್ವಾಸಗಳೇ ಕಡಿದು ಹೋ ದದ್ದರಿಂದ ಈಗ ಇದರಲ್ಲಿ ಮಹತ್ವವೇನೂ ಇರದೆ, ಸುಮ್ಮನೆ ಒಣ ಹೂಗಳಿಂದ ಪೋಣಿಸಲ್ಪಟ್ಟ ದರಿದ್ರ ಮಾಲೆಯಾಗಿತ್ತು. ಮಾಲೆಯ ನ್ನು ನೋಡಿ ಶಕ್ತಿಯು ಉರಿಯುವ ಹೃದಯವು ಮತ್ತಿಷ್ಟು ಉರಿ ಯಹತ್ತಿತು. ಆಕೆಯ ಕಣ್ಣಳಗಿನ ನೀರು ಅಟ್ಟಿಸಿಹೋದವು. ಆ ದಿನ ಸಾಯಂಕಾಲದ ಅಪಮಾನದ ನೆನಪಿನಿಂದ ಆಕೆಯ ಶಕ್ತಿಹೀನ ದೇಹವು ಕೂಡಲೆ ಅಸ್ವಾಭಾವಕರೀತಿಯಿಂದ ಚೇತನಾಪೂರ್ಣವಾಯಿ ತು: ಶಕ್ತಿಯು ಹಲ್ಲುಗಳಿಂದ ತುಟಿಯನ್ನು ಕಚ್ಚಿ ಹೂಮಾಲೆಯ ದ್ವಾರವನ್ನು ಹುದು, ಹೂಗಳನ್ನು ಕೈಯಿಂದ ತಿಕ್ಕಿ ನುಗ್ಗು ನುಗ್ಗು ಮಾಡಿ ನೆಲದಮೇಲೆ ಬಿಸುಟಿಬಿಟ್ಟಳು. ಇದರಿಂದ ಆ ಹೂಗಳು ಕಣ ಕಣಗಳಾಗಿ ಮಕ್ಕೊಡನೆ ಕೂಡಿಹೋದವು. ಆಗ ಆಕೆಯು ಆ ಹೂಗಳ ಮೇಲೆ ಕಾಲಿಟ್ಟು ಗರ್ವಯುಕ್ತ ದೃಷ್ಟಿಯಿಂದ ಅವುಗಳ ನ್ನು ನೋಡತೊಡಗಿದಳು. ನೋಡನೋಡುವಷ್ಟರಲ್ಲಿ | ಆಕೆಯ ಕ್ರೋಧಪೂರ್ಣ ಕಣ್ಣುಗಳಲ್ಲಿ ಪುನಃ ಅತ್ತುಗಳುದುರಹತ್ತಿದವು.