೨೫ ಶಕ್ತಿಮಯಿ ಏನಾದರೂ ದೋಷವಿದ್ದರೆ ಅದು ಅವನ ಸ್ವಂತದ್ದೇ ಆಗಿತ್ತು, ಅವನು ರಾಜಪುರುಷನು, ಶತವಿವಾಹಗಳಾದರೂ ಅವನಿಗೆ ಶಾಸ್ತ್ರ ಸಮ್ಮತವೇ ಆಗಿರಲು ಎರಡನೆಯ ಲಗ್ನ ಮಾಡಿಕೊಳ್ಳಲಿಕ್ಕೆ ಅವನಿಗೆ ಯಾವದೋಷವೂ ತಟ್ಟುವಂತಿದ್ದಿಲ್ಲ. ಆದರೆ ಯಾವಶಕ್ತಿಯು ಪರಸ್ತ್ರೀ ಯಾಗುವದಕ್ಕಿಂತ ಮೊದಲೇ ಅವನ ಹೃದಯವನ್ನು ಆಕ್ರಮಿಸಿದ್ದಳೋ ಆ ಶಕ್ತಿಯು ಇವಳಲ್ಲ. ಆಕೆಯು ಅವನ ಬಾಲ್ಯ ಸಬೀ-ಕುಮಾರಿ ಶಕ್ತಿಮಯಿಯು. ಆ ಶಕ್ತಿಮಯಿಯು ಈಗ ರಮಣಿಯಾಗಿ ಅನ್ಯ ರ ಸ್ತ್ರೀಯಾಗಿರಲು, ಈಗಲೂ ಆಕೆಯನ್ನು ಸ್ಮರಿಸುವದರಿಂದ ಇಹ ಲೋಕ ಪರಲೋಕಗಳುಯ ತಪ್ಪಿಗೆಗುರಿಯಾಗಬಹುದು ಎಂಬ ಅನೇಕವೀತಾರಗಳಿಂದ ಬಾಡಿ ಕಪ್ಪಿಟ್ಟ ಆತನ ಮುಖಮಂಡಲವು ಶಕ್ತಿ ಯ ದೃಷ್ಟಿಗೆ ಬಿತ್ತು. ಆಕೆಯು ತನ್ನ ಕೊರಳೊಳಗಿನಮಾಲೆಯನ್ನು ಗೆದು ಕೈಯಲ್ಲಿ ತಕ್ಕೊಂಡು ಇನ್ನು ಕುಮಾರನಕೊರಳಲ್ಲಿ ಹಾಕಬೇ ಕೆಂದಿದ್ದಳು; ಆದರೆ ಆಕೆಯಮಲೆಯು ಆಕೆಯ ಕೈಯಲ್ಲೇ ಉಳಿ ದುಬಿಟ್ಟಿತು. ಮುಂದೆ ಆಕೆಯ ಕೈಯು ಏಳಲೇಇಲ್ಲ. ಕುಮಾರ-ಶಕ್ತಿ, ಅದು ಆಟದೊಳಗಿನಮಾಲೆ. ಆ ಆಟವು ಇನ್ನೂ ಮರೆತಿಲ್ಲವೆ? ಅದು ಹುಡುಗರ ಆಟ; ನೀನು ಅದನ್ನು ಮರೆ ತುಬಿಡುವದು ಯೋಗ್ಯವಾಗಿದೆ. ಇದನ್ನು ಕೇಳಿ ಶಕ್ತಿಯಜೀವಕ್ಕೆ ಭಯಂಕರಬಾಧೆಯಾಗಲು ಆಕೆಯು--ನೀನು ಅದನ್ನು ಮರೆತು ಬಿಟ್ಟಿಯಾಗಿ ಕುಮಾರ-ಮರೆತಿಲ್ಲ-ಆದರೆ ಮರೆಯುವದು ಯೋಗ್ಯವೆಂದು ನಾನು ಅನ್ನುತ್ತೇನೆ. ಶಕ್ತಿ, ನೀನು ಯಾವಾಗ ಒಮ್ಮಿಂದೊಮ್ಮೆ ಈ ದೇಶಬಿಟ್ಟು ಹೋದೆಯೋ, ಆವಾಗ ನಾನು ನಿನ್ನನ್ನು ಎಷ್ಟು ಹುಡುಕಿ ದೆನಲ್ಲ? ಆದರೂ ನೀನು ಸಿಗಲಿಲ್ಲ. ಆಗ ಪೂರ್ವನಿಮಿಷದಲ್ಲಿಯ ಆಘಾತವಾದ ವೇದನೆಗಳನ್ನು ಮರೆತು ಶಕ್ತಿಯು ಸ್ಪೂರ್ತಿ
ಪುಟ:ಶಕ್ತಿಮಾಯಿ.djvu/೩೪
ಗೋಚರ