ಅರಳುತಿದೆ ಮೋಹ

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ನಾನೊಬ್ಬ ಕಳ್ಳ
ಗಾಯನ: ಡಾ| ರಾಜಕುಮಾರ್ ಮತ್ತು ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್ಗಂಡು:
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಹೆಣ್ಣು:
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ

ಗಂಡು:
ಈ ನಿನ್ನ ಮೊಗವು ಈ ನಿನ್ನ ನಗುವು, ಬಯಕೆಯ ತುಂಬುತ ಕುಣಿಸಿದೆ
ಈ ನಿನ್ನ ಪ್ರೇಮ ಸೆಳೆದು ನನ್ನನು, ಸನಿಹ ಕರೆಯಲು ನಾ ಬಂದೆ
ಹೆಣ್ಣು:
ಈ ನಿನ್ನ ಮನಸು ಈ ನಿನ್ನ ಸೊಗಸು, ಹೊಸ ಹೊಸ ಬೆಳಕನು ತರುತಿದೆ
ಎಂದೆಂದು ಹೀಗೆ ಸೇರಿ ಬಾಳುವ, ಆಸೆ ಮನದಲಿ ನೀತಂದೆ
ಆಸೆ ಮನದಲಿ ನೀ ತಂದೆ

ಗಂಡು:
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಹೆಣ್ಣು:
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ

ಹೆಣ್ಣು:
ಮಾತಲಿ ರಸಿಕ ಪ್ರೀತಿಲಿ ರಸಿಕ, ಬಲ್ಲೆನು ರಸಿಕರ ರಾಜನೆ
ಈ ನನ್ನ ಹೃದಯ ರಾಜ್ಯ ನೀಡುವೆ, ಸೋತು ಇಂದು ನಾನು ನಿನ್ನಲ್ಲಿ
ಗಂಡು:
ನೀ ನನ್ನ ಜೀವ ನಿನ್ನಲ್ಲೇ ಜೀವ, ಜೀವದೆ ಜೀವವು ಬೆರೆತಿದೆ
ನಿನ್ನಿಂದ ನಾನು ಬೇರೆಯಾದರೆ, ಜೀವ ಉಳಿಯದು ನನ್ನಲ್ಲಿ
ಜೀವ ಉಳಿಯದು ನನ್ನಲ್ಲಿ
ಹೆಣ್ಣು:
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ಈ ರೀತಿ ನನಗೇಕೆ
ಗಂಡು:
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂತ ಹೊಸ ಕಾಣಿಕೆ

ಗಂಡು:
ಅರಳುತಿದೆ ಮೋಹ ಹೃದಯದಲಿ ದಾಹ
ಲಾಲಾಲ ಆಹಾಹ ಆಹಾಹ ಆಹಾಹ ...