ಎಕ್ಸ್‌ಕ್ಯೂಸ್ ಮಿ - ಪ್ರೀತ್ಸೆ ಅಂತ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಎಕ್ಸ್‌ಕ್ಯೂಸ್ ಮಿ
ಸಾಹಿತ್ಯ: ವಿ. ನಾಗೆಂದ್ರ ಪ್ರಸಾದ್
ಸಂಗೀತ: ಆರ್.ಪಿ. ಪಟ್ನಾಯಕ್
ಗಾಯನ: ಬಾಂಬೆ ಜಯಶ್ರೀ


ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನು ಯಾರು?

ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು?

ಇದೇನೊ ನಿನ್ನ ನೋಟ.. ಇದೇನಾ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?

ಪ್ರೀತ್ಸೇ ಅಂತ ಪ್ರಾಣ ತಿನ್ನೊ ಪ್ರೇಮಿ ನೀನುಯಾರು?
ನನ್ನೆ ಪ್ರೀತಿ ಮಾಡು ಅಂತ ಹೇಳಿಕೊಟ್ಟೊರ್ಯಾರು?

ನೀನೇ ಮೊದಲನೆ ಬಾರಿಗೆ.. ಬಂದೆ ಹೃದಯದ ಊರಿಗೆ.. ಇಳಿದೆ ಮನಸಿನ ಬೀದಿಗೆ ನೀನ್ಯಾರು?

ನಮ್ಮ ಮೊದಲನೆ ಭೆಟಿಗೆ.. ನೀನು ತಿಳಿಸುವ ವೇಳೆಗೆ.. ನಾನು ಬರುವುದು ಎಲ್ಲಿಗೆ ನೀನ್ಯಾರು?
ನನ್ನ ನೋಡೇ ಅಂತ ಹಿಂದೆ ಅಲ್ಲೆದೋನು ನೀನೇ ಏ.. ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ....

ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು?
ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು?

ನೀನು ಕರೆಯುವೆ ನನ್ನನೆ.. ಹೇಗೆ ಇರುವುದು ಸುಮ್ಮನೆ.. ನಾನು ಹುಡುಕಿದೆ ನಿನ್ನನೆ ನೀನ್ಯಾರು?

ಎಲ್ಲಾ ಹುಡುಗರ ಕಣ್ಣನೆ.. ಕದ್ದು ನೋಡುವೆ ಮೆಲ್ಲನೆ.. ಎಲ್ಲು ಕಾಣದ ಚೋರನೆ ನೀನ್ಯಾರು?
ನಿನಗಾಗಿ ಕಾದೆ ನೀನೇತಕೆ ಬರದೇ ಹೋದೆ? ನೀನಿರದೇ ನಾಳೆ ಹುಡುಗಾ ನನಗೇನಿದೆ?

ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು?
ನನ್ನೇ ಪ್ರೀತಿ ಮಾಡು ಅಂತ ಹೇಳಿಕೊಟ್ಟೋರ್ಯಾರು
ಇದೇನೋ ನಿನ್ನ ನೋಟ.. ಇದೇನ ಪ್ರೀತಿ ಆಟ?.. ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ?

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ