ವಿಷಯಕ್ಕೆ ಹೋಗು

ಎಲ್ಲೋ ಜೋಗಪ್ಪ ನಿನ್ನ ಅರಮಾನೆ

ವಿಕಿಸೋರ್ಸ್ದಿಂದ

ಎಲ್ಲೋ ಜೋಗಪ್ಪ ನಿನ್ನ ಅರಮಾನೆ - ಜನಪದ ಗೀತೆ


ಕಿನ್ನೂರಿ ನುಡಿಸೋನಾ, ದನಿ ಚಂದವೋ
ಕಿನ್ನೂರಿ ನುಡಿಸೋನಾ, ಬೆರಳಿನಂದ ಚಂದವೊ

ಚುಕ್ಕಿನುಂಗ್ರಕ್ಕೆ ನಾರಿ ಮನಸೋತಳೋ
ಬೆಳ್ಳಿನುಂಗ್ರಕ್ಕೆ ನಾರಿ ಮನಸೋತಳೋ
ನಾರಿ ಬೆಳ್ಳಿ ನುಂಗಕ್ಕೆ ನಾರಿ ಮನಸೋತಳೋ

ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ
ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ

||ಎಲ್ಲೋ ಜೋಗಪ್ಪ||

ಬೆಟ್ಟ ಹತ್ತೋಗಬೇಕು, ಬೆಟ್ಟ ಇಳಿದೋಗಬೇಕು |೨|
ಅಲ್ಲಾದೆ ಕಣೆ ನನ್ನಾರಮನೇ, ನಾರಿ
ಅಲ್ಲಾದೆ ಕಣೆ ನನ್ ತಳಮಾನೆ
ಅಲ್ಲಾದೆ ಕಣೆ ನನ್ನಾರಮನೇ
ಅಲ್ಲಾದೆ ಕಣೆ ನನ್ ತಳಮಾನೆ

||ಎಲ್ಲೋ ಜೋಗಪ್ಪ||

ಹಾರುವಾರ ಕೇರಿಯ ಗಾರೆ ಪಡಸಾಲೆ ಮೇಲೆ |೨|
ಲೋಲುಕಿ ನುಡಿಯ ನುಡಿಸೋನೆ, |೨|
ಮೊಗ್ಗಾಗಿ ಬಾರೋ ತುರುಬೀಗೆ |೨|

||ಎಲ್ಲೋ ಜೋಗಪ್ಪ||

ಎಳ್ಳಿನ ಹೊಲವಾ ಬಿಟ್ಟೆ
ಒಳ್ಳೆಯ ಗಂಡನ ಬಿಟ್ಟೆ
ತಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ? ನಾರಿ
ತಳ್ಳಾಡ್ತ ಜೋಗಿ ಕೂಡೆ ಹೋಗಬಹುದೇ |೩|

||ಎಲ್ಲೋ ಜೋಗಪ್ಪ||

ನಿನ್ನಾ ಕಂಡಾಗಲೆನ್ನ ಕಣ್ಣೂರಿ ಕಾಣೋ ಜೋಗಿ |೨|
ನಿನ್ನಲ್ಲಿ ನನಗೆ ಮನಸಾದೇ ಜೋಗಿ
ನಿನ್ನಲ್ಲಿ ನನಗೆ ಮನಸಾದೇ |೩|

||ಎಲ್ಲೋ ಜೋಗಪ್ಪ||

ಎಲ್ಲಾನು ಬಿಟ್ಟಮ್ಯಾಲೆ ನನ್ನನ್ಯಾಕೆ ಬಿಡ ಒಲ್ಲೆ |೨|
ನಿನ್ನಲ್ಲಿ ನನ್ನಗೆ ಮನಸಾದೆ ನಾರಿ
ನಿನ್ನಲ್ಲಿ ನನ್ನಗೆ ಮನಸಾದೆ |೩|

||ಎಲ್ಲೋ ಜೋಗಪ್ಪ||

ನನ್ನಾ ತೋಳಲ್ಲಿ ನಿನ್ನ ಕಿನ್ನೂರಿ ಮಾಡಿಕೊಂಡು |೨|
ಚಂದದ ಪದವ ನುಡಿಸೇನು ನಾರಿ
ಚಂದದ ಪದವ ನುಡಿಸೇನು |೨|

||ಎಲ್ಲೋ ಜೋಗಪ್ಪ||
||ಎಲ್ಲೋ ಜೋಗಪ್ಪ||
||ಎಲ್ಲೋ ಜೋಗಪ್ಪ||

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ