ವಿಷಯಕ್ಕೆ ಹೋಗು

ಐಶ್ವರ್ಯ - ಹುಡುಗಿ ಹುಡುಗಿ

ವಿಕಿಸೋರ್ಸ್ದಿಂದ

ಚಿತ್ರ: ಐಶ್ವರ್ಯ
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ಕುನಾಲ್ ಗಾಂಜವಾಲ


ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯ್ವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ..
ಪ್ರೀತ್ಸೆ!

ತುಟಿಯಲ್ಲಿ ಈ ಸ್ಮೈಲು ಕಂಡಾ ಕೂಡಲೆ
ಎದೆಯಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು
ಕಣ್ಣಲಿ ಸಿಹಿ ಲುಕ್ಕು ಕೊಟ್ಟ ಕೂಡಲೆ
ಮನಸೆಲ್ಲೊ ಗರಿ ಬಿಚ್ಚಿ ಹಾರಿ ಹೋಯಿತು
ನೀ ನಡೆಯೊ ದಾರಿಯಲ್ಲ ಹದಿನೇಳು ಚೈತ್ರವಾಯ್ತು
ನೀ ಹಾಡೋ ಹಾಡಿನಿಂದ ಕವಿಗಳಿಗೆ ಉಸಿರು ಬಂತು
ನಿನ್ನ ಮೌನ ನೋಡಿ ತಾನೆ ಗಾಳಿ ಹಾಡ ಹಾಡಿತು
ನಿನ್ನ ಮಾತು ಕೇಳಿ ತಾನೆ ಕೋಗಿಲೆ ಕೂಹು ಕರಿಯಿತು
ಪ್ರೀತಿನ ಪ್ರೀತಿ ಇಂದ ಪ್ರೀತಿ ಮಾಡುವೆ..
ಪ್ರೀತ್ಸೆ!

ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!

ಗಾಳೀಲಿ ನಿನ್ನ ಹೆಸರ ಕರೆದ ಕೂಡಲೆ
ಹೂವುಗಳು ಮೈನೆರೆದ ಕಥೆಯು ಹುಟ್ಟಿತೆ
ಮಳೆಯೊಳಗೆ ನಿನ್ನ ಹಾಡು ನೆನೆದ ಕೂಡಲೆ
ಚಿಪ್ಪೊಳಗೆ ಮುತ್ತುಗಳ ಹೋಳಪು ಹುಟ್ಟಿತೆ
ನೀ ಸೊಕೊ ನೆಲೆದಲೆಲ್ಲ ಚಿರುಗಳ ಹಬ್ಬವಂತೆ
ನೀ ತಾಕೊ ಕಡೆಯಲೆಲ್ಲ ಇಬ್ಬನಿಯ ದಿಬ್ಬವಂತೆ
ನಿನ್ನ ಮೋನಾಲಿಸ ನಗೆಯ ನಾ ಕಲಿಯೊ ಸಲುವಾಗಿ
ಪ್ರೀತಿ ತುಂಬಿಕೊಂಡ ಎದೆಯ ನಾ ಸೇರೊ ಕ್ಷಣಗಾಗಿ
ಮನಸಾರೆ ಸೋತು ಬಂದೆ ಒಮ್ಮೆ ಒಪ್ಪಿಕೊ..
ಪ್ರೀತ್ಸೆ!

ಹುಡುಗಿ ಹುಡುಗಿ ನಿನ್ನ ಕಂಡಾಗ
ನನ್ನೇ ಮರೆತೆ ನಾನೀಗ
ಮನಸು ಮನಸು ಮೆಚ್ಚಿಕೊಂಡಾಗ
ನಾನೆ ಇಲ್ಲ ನನಗೀಗ!
ನೀನು ಬಳುಕಿ ನಡೆಯ್ವಾಗ
ಮೋಡ ಮಳೆಯು ಆಯಿತೀಗ
ನೀನು ನಕ್ಕು ನಲಿಯುವಾಗ
ಕಲ್ಲು ಶಿಲೆಗಳಾಯ್ತು ಈಗ
ನಿನ್ನಾಣೆ ಪ್ರಾಣ ಕೊಟ್ಟು ಪ್ರೀತಿ ಮಾಡುವೆ..
ಪ್ರೀತ್ಸೆ!

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ