ಕಂಡೇನು ಶ್ರೀರಂಗನಾಥನ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ / ಆಲ್ಬಂ: ಕಂಡೇನು ಶ್ರೀರಂಗನಾಥನ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ: ಮಹೇಶ್ ಮಹದೇವ್
ಸಾಹಿತ್ಯ: ಕೈವಾರ ತಾತಯ್ಯ
ಬಿಡುಗಡೆ ವರ್ಷ: ೨೦೨೦ ಪಿ.ಎಂ.ಆಡಿಯೋಸ್
ರಾಗ: ಚಕ್ರವಾಕ- ಶ್ರೀರಂಗಪ್ರಿಯ (ಗ್ರಹಭೇದ)
ತಾಳ: ೪/೪
ಲಯ: ೯೦ ಬಿಪಿಎಂ


ಪಲ್ಲವಿ:

ಕಂಡೇನು ಶ್ರೀರಂಗನಾಥನ |೨|
ಚೆಲುವಮೂರುತಿ ಚೆನ್ನಕೇಶವರಾಯನ
ಚೆಲುವಮೂರುತಿ ಚೆನ್ನಕೇಶವರಾಯನ
ಕಂಡೇನು ಶ್ರೀರಂಗನಾಥನ |೨|


ಚರಣ-೧
ಎಳೆ ತುಳಸಿ ವನಮಾಲೆ ಅಚ್ಯುತನ
ಮಕರ ಕುಂಡಲಮಣಿ ಮಕುಟ ಮಾಧವನ
ಎಳೆ ತುಳಸಿ ವನಮಾಲೆ ಅಚ್ಯುತನ
ಮಕರ ಕುಂಡಲಮಣಿ ಮಕುಟ ಮಾಧವನ
ತಿರುಮಲಗಿರಿ ತಿಮ್ಮರಾಯ ವೆಂಕಟನ
ತಿರುಮಲಗಿರಿ ತಿಮ್ಮರಾಯ ವೆಂಕಟನ
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನ
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನ
ಕಂಡೇನು ಶ್ರೀರಂಗನಾಥನ
ಕಂಡೇನು ಶ್ರೀರಂಗನಾಥನ


ಚರಣ-೨
ಅಂತರಂಗದ ಆತ್ಮಜ್ಯೋತಿ ರಾಘವನ
ಆ...ಆ...ಆ.........
ಅಂತರಂಗದ ಆತ್ಮಜ್ಯೋತಿ ರಾಘವನ
ದಾಸರ ಹೃದಯ ವಿನೋದ ವಿಠಲನ
ಪರಮಾತ್ಮ ಶ್ರೀಕೃಷ್ಣ ಪ್ರದ್ಯುಮ್ನ ಪಿತನ
ಪರಮಾತ್ಮ ಶ್ರೀಕೃಷ್ಣ ಪ್ರದ್ಯುಮ್ನ ಪಿತನ
ಭಕ್ತರ ಸಂಗಡ ಬಿಡದಿರುವವನ
ಭಕ್ತರ ಸಂಗಡ ಬಿಡದಿರುವವನ
ಕಂಡೇನು ಶ್ರೀರಂಗನಾಥನ
ಕಂಡೇನು ಶ್ರೀರಂಗನಾಥನ


ಚರಣ-೩
ವಿಶ್ವರೂಪ ವಿರಾಠ್ಠು ವಿಠಲನ
ಸಾಧನೆ ಕಲಿಸಿದ ಸದ್ಗುರುವರನ
ಕಾಯಪಟ್ಟಣ ಹಾದಿ ತೋರಿದ ಹರೀನವ
ಕಾಯಪಟ್ಟಣ ಹಾದಿ ತೋರಿದ ಹರೀನ
ಕರುಣಿಸಿ ಎನ್ನ ಸತ್ಕವಿಯ ಮಾಡಿದವನ
ಕರುಣಿಸಿ ಎನ್ನ ಸತ್ಕವಿಯ ಮಾಡಿದವನ
ಅಮರನಾರೇಯಣ ಸ್ವಾಮಿ ಪ್ರಸನ್ನನ
ಅಮರನಾರೇಯಣ ಸ್ವಾಮಿ ಪ್ರಸನ್ನನ
ಕಂಡೇನು ಶ್ರೀರಂಗನಾಥನ...
ಕಂಡೇನು ಶ್ರೀರಂಗನಾಥನ...
ಕಂಡೇನು ಶ್ರೀರಂಗನಾಥನ

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ