ಗದುಗಿನ ಭಾರತ ಪದಕೋಶ -ಚ.ಛ, ಜ, ಝ

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

ಚ, ಛ,ಜ,ಝ,[ಸಂಪಾದಿಸಿ]


1. ಚಂಚುಪುಟ, ಕೊಕ್ಕು, ಉದ್ಯೋಗ ಪರ್ವ,7,27
2. ಚಂಡ, ಪ್ರಚಂಡ, ವಿರಾಟ ಪರ್ವ,6,0
3. ಚಂಡ, ಉಗ್ರ, ಆದಿ ಪರ್ವ,3,0
4. ಚಂಡ, ತೀಕ್ಷ್ಣ, ದ್ರೋಣ ಪರ್ವ,5,70
5. ಚಂಡಕರ, ತೀಕ್ಷ್ಣ ಕಿರಣವುಳ್ಳವ , ಆದಿ ಪರ್ವ,3,0
6. ಚಂಡಭುಜಬಲ, ಭುಜಬಲಪರಾಕ್ರಮಿ, ಆದಿ ಪರ್ವ,6,39
7. ಚಂಡಸಮೀರ, ಚಂಡಮಾರುತ, ಗದಾ ಪರ್ವ,7,29
8. ಚಂಡಿ, ಪ್ರಚಂಡ, ಆದಿ ಪರ್ವ,14,16
9. ಚಂಡಿ, ಹಟ , ಗದಾ ಪರ್ವ,3,15
10. ಚಂಡಿ, ಹಟಮಾರಿ, ಆದಿ ಪರ್ವ,7,67
11. ಚಂಡಿತನ, ಅಸತ್ಯದಲ್ಲಿ ವರ್ತಿಸುವುದಿಲ್ಲ (ನಿರಾಯುಧರ ಮೇಲೆ ಅಸ್ತ್ರ ತೊಡುವುದಿಲ್ಲವೆಂಬ ಪ್ರತಿಜ್ಞೆ ್ಟ) ಎಂಬ ಹಠ, ಭೀಷ್ಮ ಪರ್ವ,7,26
12. ಚಂಡಿಯಾದವು, ಹಠಮಾರಿ ಆದವು, ಭೀಷ್ಮ ಪರ್ವ,4,84
13. ಚಂಡಿಸದೆ, ?, ಭೀಷ್ಮ ಪರ್ವ,4,13
14. ಚಂದ್ರಿಕೆ, ಬೆಳದಿಂಗಳು, ಅರಣ್ಯ ಪರ್ವ,8,33
15. ಚಂದ್ರಿಕೆ, ಚಂದ್ರನ ಕಿರಣ, ದ್ರೋಣ ಪರ್ವ,3,46
16. ಚಂದ್ರೋತ್ಪಲ, ಚಂದ್ರಕಾಂತ ಶಿಲೆ, ಆದಿ ಪರ್ವ,20,54
17. ಚಂದ್ರೋಪಲ, ಚಂದ್ರಕಾಂತಶಿಲೆ, ಗದಾ ಪರ್ವ,3,40
18. ಚಂಪಯ, ಡೇರೆ., ಗದಾ ಪರ್ವ,4,17
19. ಚಂಪೆಯ, ಒಂದು ಮಾದರಿ ಗೂಡಾರ, ಉದ್ಯೋಗ ಪರ್ವ,11,44
20. ಚಂಬಕ, ಒಂದು ವಿಧದ ತಮಟೆ, ವಿರಾಟ ಪರ್ವ,6,59
21. ಚಂಬಕ, ಒಂದು ಬಗೆಯ ತಮಟೆ, ವಿರಾಟ ಪರ್ವ,8,3
22. ಚಕಿತ ಚಾಪ, ಚಟುವಟಿಕೆಯ ಬಿಲ್ಲು (ಹಿಡಿದವರು). ಗಾಢ ಬದ್ಧ ಭ್ರುಕುಟಿ ಭೀಷಣ ಮುಖ, ವಿರಾಟ ಪರ್ವ,8,19
23. ಚಕಿತಚಾಪ, ಆಶ್ಚರ್ಯಕರ ರೀತಿಯಲ್ಲಿ ಬಿಲ್ಲಿನಿಂದ ಬಾಣ ಪ್ರಯೋಗಿಸುವವ (ಭೀಮ), ಗದಾ ಪರ್ವ,2,18
24. ಚಕ್ಕವಕ್ಕಿ, ಚಕ್ರವಾಕ, ಉದ್ಯೋಗ ಪರ್ವ,7,23
25. ಚಕ್ರ, ಸಮೂಹ, ಉದ್ಯೋಗ ಪರ್ವ,3,130
26. ಚಕ್ರವಾಕ, ಚಕ್ರವಾಕ ಪಕ್ಷಿಗಳು , ಗದಾ ಪರ್ವ,4,48
27. ಚಕ್ರಾಂಕ ಯುಗ, ಚಕ್ರವಾಕ ಪಕ್ಷಿಗಳ ಜೋಡಿ, ವಿರಾಟ ಪರ್ವ,2,51
28. ಚಕ್ರಾಯುಧನ, ಕೃಷ್ಣನ(ಚಕ್ರವನ್ನು ಆಯುಧವನ್ನಾಗುಳ್ಳವ) ಬೋಳೈಸಿ, ಗದಾ ಪರ್ವ,10,20
29. ಚಟುಲ, ಚುರುಕು, ಭೀಷ್ಮ ಪರ್ವ,3,3
30. ಚಟುಳ, ಬೇಗ, ಗದಾ ಪರ್ವ,5,55
31. ಚಟುಳ, ನಡುಗುವ, ಶಲ್ಯ ಪರ್ವ,2,28
32. ಚಟ್ಟ, ರಕ್ತದ ಹಸ್ತದಿಂದ ಗೋಡೆಗಳ ಮೇಲೆ ಹಸ್ತದ ಗುರುತನ್ನು ಮಂಡಿಸುವುದು, ಕರ್ಣ ಪರ್ವ,20,2
33. ಚಡಾಳಿಸು, ಪ್ರಜ್ವಲಿಸು, ದ್ರೋಣ ಪರ್ವ,18,30
34. ಚಡಾಳಿಸು, ಮೇಲಾಗು, ಅರಣ್ಯ ಪರ್ವ,5,26
35. ಚಡಾಳಿಸು, ಅತಿಶಯವಾದ, ಸಭಾ ಪರ್ವ,9,60
36. ಚಡಾಳಿಸೆ, ಹೆಚ್ಚಿಸಲು, ಉದ್ಯೋಗ ಪರ್ವ,6,27
37. ಚಡ್ಡಣೆ, ಅತಿ, ಕರ್ಣ ಪರ್ವ,20,9
38. ಚಢಾಳ, ಆಧಿಕ್ಯ, ಸಭಾ ಪರ್ವ,5,51
39. ಚತುರ, ಬುದ್ಧಿವಂತ, ಉದ್ಯೋಗ ಪರ್ವ,8,31
40. ಚತುರಂಗ ಪದಹತಿಗೆ, ಚತುರಂಗ ಸೇನೆಯ ಪಾದಗಳ ತುಳಿತವನ್ನು, ಸಭಾ ಪರ್ವ,5,3
41. ಚತುರಂಗಬಲ, ಆನೆ, ಭೀಷ್ಮ ಪರ್ವ,1,9
42. ಚತುರಾನನರು, ಬುದ್ಧಿಬ್ರಹ್ಮರು (ಪಂಡಿತರು), ಉದ್ಯೋಗ ಪರ್ವ,8,31
43. ಚತುರಾರ್ಣವ, ಚತುಃಸ್ಸಾಗರ, ಗದಾ ಪರ್ವ,4,8
44. ಚತುರಾಶ್ರಮ, ಬ್ರಹ್ಮಚರ್ಯ, ಆದಿ ಪರ್ವ,12,22
45. ಚತುರಾಸ್ಯ ಜನಕ, ಬ್ರಹ್ಮನ ಸೃಷ್ಟಿಕರ್ತ, ವಿರಾಟ ಪರ್ವ,10,56
46. ಚತುರೋಪಾಯ, ಸಾಮ, ಸಭಾ ಪರ್ವ,1,71, , , ದಂಡ,
47. ಚತುರ್ಥಿ, ನಾಲ್ಕನೆಯ ದಿನ, ವಿರಾಟ ಪರ್ವ,10,81
48. ಚತುರ್ದಶ ವಿದ್ಯೆ, 4 ವೇದಗಳು , ಸಭಾ ಪರ್ವ,1,90, , , ನ್ಯಾಯ , ಪುರಾಣ , ಧರ್ಮಶಾಸ್ತ್ರ (ಒಟ್ಟು 14),
49. ಚತುರ್ದಶಭುವನ, ಹದಿನಾಲ್ಕು ಲೋಕಗಳು (ಭೂ, ಗದಾ ಪರ್ವ,10,23, , , ಮಹರ್, ಜನ , ತಪೋ , ಸತ್ಯ ಎಂಬ ಏಳು ಲೋಕಗಳು ಮತ್ತು ಅತಲ , ವಿತಲ , ಸುತಲ , ರಸಾತಲ , ತಲಾತಲ, ಮಹಾತಲ , ಪಾತಾಲ,
50. ಚತುರ್ವಿಧ, ನಾಲ್ಕುವಿಧ, ಗದಾ ಪರ್ವ,11,31
51. ಚತುಷ್ಟಯ, ನಾಲ್ವರು, ವಿರಾಟ ಪರ್ವ,10,10
52. ಚದುರ, ಚೆಲುವ, ಆದಿ ಪರ್ವ,13,45
53. ಚದುರೆ, ಜಾಣೆ, ಆದಿ ಪರ್ವ,13,29
54. ಚಪಲ, ಶೀಘ್ರತೆ, ಆದಿ ಪರ್ವ,19,1
55. ಚಪಲ, ತೀವ್ರವಾದ ಆಸೆ, ಆದಿ ಪರ್ವ,3,7
56. ಚಪಲಾನೀಕ, ಚಂಚಲವಾದ ಸೈನ್ಯ, ಶಲ್ಯ ಪರ್ವ,2,20
57. ಚಪಲೆ, ಚಂಚಲ ಸ್ವಭಾವದವಳು, ಆದಿ ಪರ್ವ,15,21
58. ಚಪಳತೆ, ಚಟುವಟಿಕೆ , ಶಲ್ಯ ಪರ್ವ,3,54
59. ಚಪಳೆ, ಚಂಚಲ ಸ್ವಭಾವದವಳು, ಆದಿ ಪರ್ವ,15,36
60. ಚಪೇಟ, ಬಿಚ್ಚಿದ ಅಂಗೈ, ಅರಣ್ಯ ಪರ್ವ,1,32
61. ಚಪ್ಪರಣೆ, ಬೆನ್ನು ಚಪ್ಪರಿಸು, ಭೀಷ್ಮ ಪರ್ವ,4,98
62. ಚಪ್ಪರಣೆ, ಬೆನ್ನುತಟ್ಟುವ ಹುರಿದುಂಬಿಸುವ ದನಿ, ಭೀಷ್ಮ ಪರ್ವ,8,14
63. ಚಪ್ಪರಿಸು, (ಬೆನ್ನು) ತಟ್ಟು, ವಿರಾಟ ಪರ್ವ,7,30
64. ಚಮರ, ಚಮರ ಪಕ್ಷಿಯ ತುಪ್ಪುಳಿನ ಬೀಸಣಿಗೆ, ವಿರಾಟ ಪರ್ವ,4,32
65. ಚಮರ, ಚಮರ ಮೃಗದ ತುಪ್ಪುಳಿನಿಂದ ಮಾಡಿದ ಬೀಸಣಿಗೆ, ವಿರಾಟ ಪರ್ವ,4,30
66. ಚಮರಧಾರಿ, ಚಾಮರ ಹೊರುವವರು, ಗದಾ ಪರ್ವ,1,14
67. ಚಮರಿ, ಬೀಸುವ ಚಾಮರ, ಭೀಷ್ಮ ಪರ್ವ,3,15
68. ಚಮರಿ, ಚಮರೀಮೃಗ. ಶಾಕ್ವರ, ಕರ್ಣ ಪರ್ವ,7,7
69. ಚಮುವಿಸ್ತಾರ, ಸೈನ್ಯದ ವಿಸ್ತಾರ, ಗದಾ ಪರ್ವ,8,63
70. ಚಮೂಪತಿ, ಸೈನ್ಯಾಧಿಪತಿ, ಗದಾ ಪರ್ವ,8,63
71. ಚಮೂಪತಿ, ಸೈನ್ಯದ ಒಡೆಯ, ಗದಾ ಪರ್ವ,3,22
72. ಚಮೂರು, ಒಂದು ವಿಧದ ಜಿಂಕೆ, ಆದಿ ಪರ್ವ,1,2
73. ಚಮ್ಮಟಿಗೆ, ಚರ್ಮಪಟ್ಟಿಕಾ(ಸಂ), ಗದಾ ಪರ್ವ,8,49
74. ಚಮ್ಮಾವುಗೆಗಳು, ಪಾದರಕ್ಷೆಗಳು, ಸಭಾ ಪರ್ವ,16,36
75. ಚಯದ, ಗುಂಪಿನ, ದ್ರೋಣ ಪರ್ವ,4,29
76. ಚರ, ಸೇವಕ , ವಿರಾಟ ಪರ್ವ,10,43
77. ಚರ, ಗೂಢಚಾರ, ಆದಿ ಪರ್ವ,17,14
78. ಚರಣ ಅಂಬುರುಹ, ಪಾದಕಮಲ, ವಿರಾಟ ಪರ್ವ,10,30
79. ಚರಣಯುಗ, ಎರಡೂ ಪಾದಗಳು, ಗದಾ ಪರ್ವ,11,72
80. ಚರಣಾಯುಧ, ಹುಂಜ, ಭೀಷ್ಮ ಪರ್ವ,4,36
81. ಚರಮ, ಅಂತ್ಯ, ಆದಿ ಪರ್ವ,18,5
82. ಚರಾಚರ, ಚಲಿಸುವ ಚಲಿಸದ, ಭೀಷ್ಮ ಪರ್ವ,7,31
83. ಚರಿತ, ನಡವಳಿಕೆ, ಆದಿ ಪರ್ವ,19,31
84. ಚರಿತ, ನಡವಳಿಕೆಯುಳ್ಳವನು, ಉದ್ಯೋಗ ಪರ್ವ,4,37
85. ಚರಿತಜ್ಞಾತವಾಸ, ಕಳೆದ ಅಜ್ಞಾತವಾಸ, ವಿರಾಟ ಪರ್ವ,10,1, ,
86. ಚರಿತಾರ್ಥ ಭಾವ, ತಾನೆ ಆಚರಿಸಿದ ಭಾವ, ಉದ್ಯೋಗ ಪರ್ವ,4,1
87. ಚರಿಸು, ನಡೆದುಕೊಳ್, ಆದಿ ಪರ್ವ,16,42
88. ಚರಿಸು, ಆಚರಿಸು, ಗದಾ ಪರ್ವ,8,32
89. ಚರು, ಹೋಮಕ್ಕಾಗಿ ಸಿದ್ಧಪಡಿಸಿದ ಅನ್ನ, ಅರಣ್ಯ ಪರ್ವ,18,6
90. ಚರುವು, ಹವಿಸ್ಸು , ಗದಾ ಪರ್ವ,1,20, ,
91. ಚಲಗತಿ, ಚಂಚಲ ನಡಿಗೆ, ಗದಾ ಪರ್ವ,4,23
92. ಚಲಶಿಳೀಮುಖ, 1. ಸುತ್ತುತ್ತಿರುವ ದುಂಬಿಗಳು, ಭೀಷ್ಮ ಪರ್ವ,7,9
93. ಚಲಿತಲೋಚನೆ, ಚಂಚಲವಾದ ಕಣ್ಣುಳ್ಳವಳು, ವಿರಾಟ ಪರ್ವ,2,52
94. ಚಲಿಸು, ಮಾತಿಗೆ ತಪ್ಪುವುದು, ಗದಾ ಪರ್ವ,8,23
95. ಚಲ್ಲಣ, ಉದ್ದನೆಯ ಚಡ್ಡಿ, ಕರ್ಣ ಪರ್ವ,22,25
96. ಚಲ್ಲಬಡಿ, ಚೆಲ್ಲಾಪಿಲ್ಲಿಯಾಗುವಂತೆ ಹೊಡೆ, ಆದಿ ಪರ್ವ,2,33
97. ಚಲ್ಲಿತು, ಚಲ್ಲಾಪಿಲ್ಲಿಯಾಯಿತು , ಗದಾ ಪರ್ವ,8,26
98. ಚವುಕಿಗೆ, ರಕ್ಷಣಾಗೃಹ, ಗದಾ ಪರ್ವ,4,17
99. ಚಳ, ಹೊಳೆಯುವ , ಗದಾ ಪರ್ವ,2,8
100. ಚಳಕ, ಕರಕೌಶಲ, ಭೀಷ್ಮ ಪರ್ವ,5,17
101. ಚಳನಯನ, ಚÀಲಿಸುತ್ತಿರುವ ಕಣ್ಣಗುಡ್ಡೆಗಳು, ಗದಾ ಪರ್ವ,5,34
102. ಚಳಯ, ಲಗುಬಗೆ, ಕರ್ಣ ಪರ್ವ,18,25
103. ಚಳಯ, ವೇಗವಾಗಿ, ಕರ್ಣ ಪರ್ವ,14,35
104. ಚಳೆಯ, ಸಿಂಪಡಿಸುವ ಸಾಧ, ವಿರಾಟ ಪರ್ವ,10,48
105. ಚಳೆಯ, ಚಿಮುಕಿಸು, ಆದಿ ಪರ್ವ,12,8
106. ಚಳೆಯದು, ಚಿಮುಕಿಸಿದ, ಆದಿ ಪರ್ವ,12,10
107. ಚಾಂಡಾಲರವಧಿ, ಚಾಂಡಾಲಜಾತಿಯವರೆಗೆ, ಗದಾ ಪರ್ವ,13,1
108. ಚಾಗು, ನುಗ್ಗಿ, ಭೀಷ್ಮ ಪರ್ವ,10,1
109. ಚಾಚು, ಮುಂದೊಡ್ಡು, ಆದಿ ಪರ್ವ,11,35
110. ಚಾಚು, ಒತ್ತು, ಉದ್ಯೋಗ ಪರ್ವ,10,27
111. ಚಾತುರಂಗ, ಆನೆ ಕುದುರೆ ರಥ ಕಾಲಾಳು ಈ ನಾಲ್ಕು ಅಂಗದ ಸೇನೆ., ವಿರಾಟ ಪರ್ವ,5,2
112. ಚಾತುರ್ವರ್ಣ, ಬ್ರಾಹ್ಮಣ ಕ್ಷತ್ರಿಯ, ಆದಿ ಪರ್ವ,12,22, ,
113. ಚಾಪ, ಶಸ್ತ್ರ, ದ್ರೋಣ ಪರ್ವ,15,69
114. ಚಾಪಧರ, ಬಿಲ್ಗಾರ, ಭೀಷ್ಮ ಪರ್ವ,8,58
115. ಚಾಪಧೂರ್ಜಟಿ, ಶಸ್ತ್ರ ವಿದ್ಯೆಯಲ್ಲಿ ಶಿವನಿಗೆ ಸಮಾನನಾದವನು, ದ್ರೋಣ ಪರ್ವ,17,42
116. ಚಾಪರಹಸ್ಯವಿದ್ಯೆ, ಬಿಲ್ಲು ವಿದ್ಯಾ ರಹಸ್ಯಗಳ, ಭೀಷ್ಮ ಪರ್ವ,9,45
117. ಚಾಪಲ, ಚಪಲತೆಯಿಂದ ಕೂಡಿದ, ಅರಣ್ಯ ಪರ್ವ,1,32
118. ಚಾಪಲ, ಚಂಚಲತೆ , ವಿರಾಟ ಪರ್ವ,7,7
119. ಚಾಪವಮಿಡಿದು, ಬಿಲ್ಲನ್ನು ಝೇಂಕರಿಸಿ, ಗದಾ ಪರ್ವ,9,16
120. ಚಾಪವೇದ, ಧನುರ್ವೇದ, ವಿರಾಟ ಪರ್ವ,8,40
121. ಚಾಪವ್ಯಾಕರಣ, ಧನುರ್ವಿದ್ಯೆ, ಆದಿ ಪರ್ವ,14,32
122. ಚಾಪಳ, ಅಸ್ಥಿರತೆ, ಆದಿ ಪರ್ವ,20,2
123. ಚಾಪಳ, ಆಸಕ್ತಿ, ಆದಿ ಪರ್ವ,11,25
124. ಚಾಪಳಿ, ಚಪಲ, ದ್ರೋಣ ಪರ್ವ,2,40
125. ಚಾಮೀಕರ, ಬಂಗಾರ., ಉದ್ಯೋಗ ಪರ್ವ,8,29
126. ಚಾರಣ, ಸ್ತುತಿಪಾಠಕ, ಆದಿ ಪರ್ವ,12,25
127. ಚಾರಣ, ಚಲನೆ, ಕರ್ಣ ಪರ್ವ,19,35
128. ಚಾರಿ, ನಡವಳಿಕೆ, ಆದಿ ಪರ್ವ,8,75
129. ಚಾರಿ, ಒಂದು ಸಂಚಾರ, ಗದಾ ಪರ್ವ,6,22
130. ಚಾರು, ಸುಂದರ , ಆದಿ ಪರ್ವ,1,7
131. ಚಾರು, ಸುಂದರವಾದ, ಗದಾ ಪರ್ವ,7,52
132. ಚಾರು, ಸೊಗಸಾದ, ವಿರಾಟ ಪರ್ವ,9,16
133. ಚಾವಟೆಯ, ದುಷ್ಟ, ಅರಣ್ಯ ಪರ್ವ,20,34
134. ಚಾವಟೆಯರು, ಉದ್ಧಟರು, ಸಭಾ ಪರ್ವ,2,30
135. ಚಾವಟೆಯರು, ಉದ್ಧಟರು, ಕರ್ಣ ಪರ್ವ,9,22
136. ಚಾವಡಿ, ಆಶ್ರಯಸ್ಥಾನ, ಆದಿ ಪರ್ವ,11,25
137. ಚಾವಡಿ ಮನೆ, ಓಲಗ ಶಾಲೆ, ಭೀಷ್ಮ ಪರ್ವ,6,8
138. ಚಾಹಿ, ಛತ್ರಿ ಹಿಡಿಯುವವನು ?, ಕರ್ಣ ಪರ್ವ,24,32
139. ಚಾಹಿ, ಛತ್ರಿ ಹಿಡಿದವರು (?), ಗದಾ ಪರ್ವ,1,14
140. ಚಾಹಿ, ಚಾಮರವನ್ನು ಹಿಡಿಯುವವರು, ಶಲ್ಯ ಪರ್ವ,1,8
141. ಚಾಳನ, ಚಲನಶಕ್ತಿ, ಗದಾ ಪರ್ವ,7,1
142. ಚಾಳಿಸಿತು, ಹಿಮ್ಮೆಟ್ಟಿತು., ದ್ರೋಣ ಪರ್ವ,6,47
143. ಚಾಳಿಸು, ಬೇಸರಿಸು, ಕರ್ಣ ಪರ್ವ,12,5
144. ಚಾಳೆ, ನೃತ್ಯದಲ್ಲಿ ಹೆಜ್ಜೆ ಹಾಕುವ ಕ್ರಮ, ಸಭಾ ಪರ್ವ,1,21
145. ಚಾಳೆಯ, ಚಮತ್ಕಾರದ ನಡಗೆ, ಆದಿ ಪರ್ವ,13,29
146. ಚಾಳೆಯರ, ನೃತ್ಯಗಾರ್ತಿಯರ, ಸಭಾ ಪರ್ವ,1,21
147. ಚಾಳೈಸು, ಚಲಿಸುವಂತೆ ಮಾಡು, ಆದಿ ಪರ್ವ,13,5
148. ಚಿಂತಾಂಬುಧಿ, ಚಿಂತೆಯೆಂಬ ಸಾಗರ, ಸಭಾ ಪರ್ವ,12,8
149. ಚಿಂತಾಕುಲ, ಚಿಂತಾಕ್ರಾಂತ, ಭೀಷ್ಮ ಪರ್ವ,10,28
150. ಚಿಂತಾಮಣಿ, ಇಷ್ಟಾರ್ಥಿಸಿದ್ಧಿಯ ಕಲ್ಲು, ಭೀಷ್ಮ ಪರ್ವ,3,69
151. ಚಿಂತಾಮಣಿ, ಒಂದು ಬಗೆಯ ರತ್ನ, ವಿರಾಟ ಪರ್ವ,9,27
152. ಚಿಂತಾರಜನಿ, ಚಿಂತೆಯೆಂಬ ಕತ್ತಲು (ರಜನಿ, ಶಲ್ಯ ಪರ್ವ,3,47
153. ಚಿಗಿ, ಹಾರು, ಆದಿ ಪರ್ವ,19,1
154. ಚಿಗಿದು, ಹಾರಿ, ದ್ರೋಣ ಪರ್ವ,3,35
155. ಚಿಗುಳಿದುಳಿ, ಚಿಗುಳಿಯ ಉಂಡೆಯನ್ನು ತುಳಿದಂತೆ ತುಳಿ, ದ್ರೋಣ ಪರ್ವ,3,13
156. ಚಿಟಕಿಸು, ಚಿಟಿಕೆಹೊಡೆ, ಕರ್ಣ ಪರ್ವ,3,17
157. ಚಿಟ್ಟುಮುರಿಯಾಟ, ಮುಟ್ಟಾಟ/ಲಟಿಕೆ ಮುರಿತ, ಉದ್ಯೋಗ ಪರ್ವ,4,12
158. ಚಿಣ್ಣ, ಹುಡುಗ (ಕುಂತಿಯ ಚಿಣ್ಣ, ವಿರಾಟ ಪರ್ವ,3,50
159. ಚಿತ್ತ ನೀವು, ನೀವೇ ನನ್ನ ಮನಸ್ಸು ನನ್ನ ಅಂಗವಣೆಗೆ, ಸಭಾ ಪರ್ವ,2,33
160. ಚಿತ್ತ ವಿಭೇದ, ಮನಸ್ಸಿನ ದ್ವಂದ್ವ, ದ್ರೋಣ ಪರ್ವ,18,63
161. ಚಿತ್ತದ ನೆಲೆ, ಮನಸ್ಸಿನಲ್ಲಿರುವುದು, ಗದಾ ಪರ್ವ,11,49
162. ಚಿತ್ತದೊಳಾಳಿದರೆ, ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆ., ಗದಾ ಪರ್ವ,3,32
163. ಚಿತ್ತವಿಭ್ರಮ, ಮನೋವಿಕಾರ , ಗದಾ ಪರ್ವ,8,28
164. ಚಿತ್ತವಿಸು, ಮನಸ್ಸಿಟ್ಟು ಕೇಳು, ದ್ರೋಣ ಪರ್ವ,1,11
165. ಚಿತ್ತವಿಸು, ಕೇಳು, ಗದಾ ಪರ್ವ,8,29, ,
166. ಚಿತ್ತವಿಸುವುದು, ಮನಸ್ಸಿಟ್ಟು ಕೇಳುವುದು, ದ್ರೋಣ ಪರ್ವ,1,2
167. ಚಿತ್ತವೃತ್ತಿ, ಮನೋಧರ್ಮ, ಆದಿ ಪರ್ವ,9,8
168. ಚಿತ್ತವ್ಯಥೆ, ಮನಸ್ಸಿನಶೋಕ, ಗದಾ ಪರ್ವ,12,25
169. ಚಿತ್ತಸ್ಖಲಿತರು, ಅಳಿಮನದವರು, ಗದಾ ಪರ್ವ,7,19
170. ಚಿತ್ತೈಸು, ಮನಸ್ಸಿಗೆ ತಂದುಕೋ, ಆದಿ ಪರ್ವ,17,9
171. ಚಿತ್ತೈಸು, ಅನುಗ್ರಹಿಸು, ಆದಿ ಪರ್ವ,7,34
172. ಚಿತ್ತೈಸು, ಆಲೋಚಿಸು, ಆದಿ ಪರ್ವ,8,10
173. ಚಿತ್ರ, ಅದ್ಭುತ, ಆದಿ ಪರ್ವ,7,33
174. ಚಿತ್ರವಾಯ್ತು, ಅಚ್ಚರಿಯಾಯಿತು., ಭೀಷ್ಮ ಪರ್ವ,4,88
175. ಚಿತ್ರಸೇನ, ಕರ್ಣನ ಮಕ್ಕಳಲ್ಲಿ ಒಬ್ಬ., ಆದಿ ಪರ್ವ,13,57
176. ಚಿತ್ರಾವಳಿ, ಬಗೆಬಗೆಯ ಚಿತ್ರ ರಚನೆಯ ವಸ್ತ್ರ, ವಿರಾಟ ಪರ್ವ,9,10
177. ಚಿತ್ರಾವಳಿವಿಧಾನದ, ವಿವಿಧ ಚಿತ್ರಗಳನ್ನು ಬಿಡಿಸಿರುವ, ಗದಾ ಪರ್ವ,4,14
178. ಚಿನಕಡಿ, ಸಣ್ಣಸಣ್ಣಗೆ ಕತ್ತರಿಸು., ಗದಾ ಪರ್ವ,1,10
179. ಚಿನಕಡಿ, ಚೂರು ಚೂರಾಗಿ ಕಡಿ, ದ್ರೋಣ ಪರ್ವ,13,3
180. ಚಿನಕಡಿದು, ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ, ಗದಾ ಪರ್ವ,1,44
181. ಚಿನಕಡಿವಡೆದ, ಸಣ್ಣ ತುಂಡುಗಳಾಗಿ ಕತ್ತರಿಸಿದ, ಶಲ್ಯ ಪರ್ವ,2,6
182. ಚಿನಕರಡಿ ಮಾಡು, ಸಣ್ಣಗೆ ಕತ್ತರಿಸು., ಅರಣ್ಯ ಪರ್ವ,19,32
183. ಚಿನುಮಯ, ಚಿದ್ರೂಪಿ, ದ್ರೋಣ ಪರ್ವ,3,66
184. ಚಿನ್ಮಯ, ಚಿತ್‍ಸ್ವರೂಪಿ (ಜ್ಞಾನರೂಪಿ), ಭೀಷ್ಮ ಪರ್ವ,3,57
185. ಚಿನ್ಮಯ, ಜ್ಞಾನರೂಪಿ, ಭೀಷ್ಮ ಪರ್ವ,3,78
186. ಚಿಮ್ಮಂಡೆ, ಜೀರುಂಡೆ, ಅರಣ್ಯ ಪರ್ವ,17,21
187. ಚಿಮ್ಮುರಿಯ ಬಿಗಿಸು, ಹೆಡಮುರಿಗೆ ಕಟ್ಟಿಸು, ಸಭಾ ಪರ್ವ,2,30
188. ಚಿರಂತನ, ಶಾಶ್ವತವಾದ, ಗದಾ ಪರ್ವ,11,44
189. ಚಿರಾಯು, ಸಾವಿಲ್ಲದವನು, ಶಲ್ಯ ಪರ್ವ,1,3
190. ಚಿಹ್ನ, ಗುರುತು, ವಿರಾಟ ಪರ್ವ,9,16
191. ಚೀತ್ಕøತಿ, ರಥದ ಚೀತ್ಕಾರದ ಧ್ವನಿ, ವಿರಾಟ ಪರ್ವ,6,63
192. ಚೀಲಣ, ಉಳಿ, ದ್ರೋಣ ಪರ್ವ,10,31
193. ಚೀಲಾಯ, ಸಣ್ಣಕತ್ತಿ, ಕರ್ಣ ಪರ್ವ,25,31
194. ಚುಂಬಕ, ಮಾಯಾರೂಪ , ಅರಣ್ಯ ಪರ್ವ,4,7
195. ಚುಂಬಿಸು, ಸ್ಪರ್ಶಿಸು, ಆದಿ ಪರ್ವ,20,59
196. ಚುಕ್ಕಿ, ಚಿಹ್ನೆ, ಆದಿ ಪರ್ವ,13,58
197. ಚುಕ್ಕಿ, ಕ್ಷುದ್ರರು ಅಲ್ಪರು ಎಂಬರ್ಥದಲ್ಲಿ, ವಿರಾಟ ಪರ್ವ,7,7
198. ಚುಕ್ಕಿ, ಚುಕ್ಕಿಗೆ ನಕ್ಷತ್ರ ಎಂದರ್ಥ ಆದರೆ ದೂರದ ನಕ್ಷತ್ರಗಳು ಚುಕ್ಕಿಯಂತೆ ಸಣ್ಣವು ಎಂಬರ್ಥ ಇಲ್ಲಿದೆ, ವಿರಾಟ ಪರ್ವ,4,47
199. ಚುಕ್ಕಿಗರು, ಚಂಚಲರು, ದ್ರೋಣ ಪರ್ವ,16,4
200. ಚುಟ್ಟು ಮುರಿಯಾಟ, ಚಿಟ್ಟುಮುರಿಯಾಟ, ಭೀಷ್ಮ ಪರ್ವ,3,55
201. ಚುನ್ನವಾಡು, ನಿಂದಿಸು, ದ್ರೋಣ ಪರ್ವ,19,28
202. ಚುಬುಕ, ಗಲ್ಲ, ಭೀಷ್ಮ ಪರ್ವ,3,77
203. ಚುಳಕೋದಕ, ಅಂಗೈಯಲ್ಲಿ ತುಂಬುವಷ್ಟು ನೀರು, ಶಲ್ಯ ಪರ್ವ,1,26
204. ಚೂಣಿ, ಸೈನ್ಯದ ಮುಂಭಾಗ, ಶಲ್ಯ ಪರ್ವ,2,17
205. ಚೂಣಿ, ಮುಂಭಾಗದ ಸೇನೆ, ಭೀಷ್ಮ ಪರ್ವ,4,49
206. ಚೂಣಿ, ಮೊನೆ, ಭೀಷ್ಮ ಪರ್ವ,10,6
207. ಚೂಣಿಗರು, ಸೇನೆಯ ಮುಂದಿದ್ದ ಸೈನಿಕರು, ಭೀಷ್ಮ ಪರ್ವ,4,3
208. ಚೂಣಿಬಲ, ಅಗ್ರಭಾಗದ ಸೇನೆ, ವಿರಾಟ ಪರ್ವ,8,12
209. ಚೂಣಿಯಲಿ, ಸೇನೆಯ ಮುಂಭಾಗದಲಿ, ಸಭಾ ಪರ್ವ,5,11
210. ಚೂತಫಲ, ಮಾವಿನ ಹಣ್ಣು, ಸಭಾ ಪರ್ವ,2,42
211. ಚೂರಣ, ಕಿರುಗತ್ತಿ, ಕರ್ಣ ಪರ್ವ,25,26
212. ಚೂರಿಸು, ಇರಿ, ಶಲ್ಯ ಪರ್ವ,2,44
213. ಚೂರಿಸು, ಹರಿತವಾಗು, ಕರ್ಣ ಪರ್ವ,25,18
214. ಚೂರಿಸು, ಚೂರಿಯಿಂದ ಇರಿ, ಶಲ್ಯ ಪರ್ವ,3,62
215. ಚೂರಿಸು, ಚುಚ್ಚು ನಿಗುರು, ಗದಾ ಪರ್ವ,7,2
216. ಚೂರ್ಣ, ಸುಣ್ಣ, ಉದ್ಯೋಗ ಪರ್ವ,3,59
217. ಚೂಳಿ, ಆರಂಭ, ವಿರಾಟ ಪರ್ವ,10,11
218. ಚೂಳಿ, ತುದಿ, ದ್ರೋಣ ಪರ್ವ,19,16
219. ಚೂಳಿಕೆ, (ಸೇನೆಯ) ಮುಂಭಾಗ, ವಿರಾಟ ಪರ್ವ,4,50
220. ಚೂಳಿಕೆ, ಮುತ್ತಿನ ಗೊಂಚಲು, ಆದಿ ಪರ್ವ,12,13
221. ಚೂಳಿಕೆ, ಅಗ್ರಭಾಗ, ಆದಿ ಪರ್ವ,7,64
222. ಚೂಳಿಗಲಹ, ಮುಂಚೂಣಿ ಯುದ್ಧ, ಆದಿ ಪರ್ವ,8,1
223. ಚೆಂಬೂತ, ಕೆಂಪು ಕಾಗೆ, ಆದಿ ಪರ್ವ,20,53
224. ಚೆಲುವು, ಸುಂದರ., ಉದ್ಯೋಗ ಪರ್ವ,8,34
225. ಚೆಲುವು, ಸೌಂದರ್ಯ, ಆದಿ ಪರ್ವ,13,47
226. ಚೆಲ್ಲ ಬಡಿದು, ಚೆದುರುವಂತೆ ಬಡಿದು ಹಾಕಿ, ಸಭಾ ಪರ್ವ,3,33
227. ಚೆಲ್ಲಬಡಿ, ಚೆದರಿಹೋಗುವಂತೆ ಹೊಡೆ, ಆದಿ ಪರ್ವ,15,44
228. ಚೆಲ್ಲಿತು, ಹೊರಟಿತು, ಗದಾ ಪರ್ವ,12,4
229. ಚೆಲ್ಲಿದುವು, ಚಲ್ಲಾಪಿಯಾದವು, ಗದಾ ಪರ್ವ,1,50
230. ಚೆಲ್ಲೆಗಂಗಳು, ಹರಿದಾಡುವ ನೋಟ, ವಿರಾಟ ಪರ್ವ,2,19
231. ಚೆಲ್ಲೆಗಂಗಳು, ಚಂಚಲ ಕಣ್ಣುಗಳು, ಅರಣ್ಯ ಪರ್ವ,4,40
232. ಚೇತಃಕೃಪಣ, ಕುಗ್ಗಿದ ಮನಸ್ಸಿನ, ಗದಾ ಪರ್ವ,8,6
233. ಚೇತರಿಸಿ, ಶಕ್ತಿಹೊಂದಿ, ಗದಾ ಪರ್ವ,7,47
234. ಚೇತರಿಸಿ, ಎಚ್ಚರಗೊಳಿಸಿ, ಗದಾ ಪರ್ವ,11,10
235. ಚೇರಮಯ, ಚೇರರಾಜನಂತೆ, ಭೀಷ್ಮ ಪರ್ವ,4,54
236. ಚೇಷ್ಟಕ, ಪ್ರೇರಕ., ಉದ್ಯೋಗ ಪರ್ವ,7,10
237. ಚೇಷ್ಟೆ, ಅಲುಗಾಟ, ಕರ್ಣ ಪರ್ವ,17,53
238. ಚೈತನ್ಯ, ಪ್ರಜ್ಞೆ, ಆದಿ ಪರ್ವ,12,9
239. ಚೈತನ್ಯಗತಿ, ದೇಹದಲ್ಲಿನ ಶಕ್ತಿ, ಗದಾ ಪರ್ವ,10,10
240. ಚೈದ್ಯ, ಚೇದಿದೇಶದ ರಾಜ, ಆದಿ ಪರ್ವ,14,17
241. ಚೊಕ್ಕೆಯ, ವರಸೆ, ಕರ್ಣ ಪರ್ವ,19,44
242. ಚೊಕ್ಕೆಯ, ಕುಸ್ತಿಪಟ್ಟು, ಉದ್ಯೋಗ ಪರ್ವ,3,97
243. ಚೊಚ್ಚಲವ, ಮೊದಲನೆಯ ಮಗ, ಗದಾ ಪರ್ವ,9,23
244. ಚೊಲ್ಲೆಯ, ತುರುಬಿನ ಕೊನೆ, ಆದಿ ಪರ್ವ,13,30
245. ಚೋಧರ, ಯೋಧ, ಉದ್ಯೋಗ ಪರ್ವ,11,19
246. ಚೋಹ, ವೇಷ, ವಿರಾಟ ಪರ್ವ,8,23
247. ಚೋಹ, ರೂಪ, ದ್ರೋಣ ಪರ್ವ,2,52
248. ಚೋಹದ, ವೇಷದ, ಭೀಷ್ಮ ಪರ್ವ,8,31
249. ಚೌಕ, ಚೌಕಾಕಾರದ ಸ್ಥಳ, ಗದಾ ಪರ್ವ,12,23
250. ಚೌಕಿ, ನಡುಮನೆ, ಉದ್ಯೋಗ ಪರ್ವ,7,28
251. ಚೌಕಿ, ತೊಟ್ಟಿ, ಉದ್ಯೋಗ ಪರ್ವ,2,8
252. ಚೌಕಿಗೆ, ಕೈಸಾಲೆ, ಆದಿ ಪರ್ವ,20,49
253. ಚೌಧಾರೆ, ನಾಲ್ಕು ಅಲಗುಗಳು, ಭೀಷ್ಮ ಪರ್ವ,8,17
254. ಚೌಪಟ ಮಲ್ಲ, ನಾಲ್ಕೂದಿಕ್ಕಿನಿಂದಲೂ ಕಾದಾಡಬಲ್ಲ ವೀರ., ಶಲ್ಯ ಪರ್ವ,3,29
255. ಚೌಪಟದೊಳು, ನಾಲ್ಕು ದಿಕ್ಕಿನಲ್ಲಿ, ಭೀಷ್ಮ ಪರ್ವ,3,3
256. ಚೌಪಟಮಲ್ಲ, ವೀರಾಧಿವೀರ, ಭೀಷ್ಮ ಪರ್ವ,4,45
257. ಚೌಪಟಮಲ್ಲ, ನಾಲ್ಕು ದಿಕ್ಕುಗಳಿಂದ ಆಕ್ರಮಣ, ಸಭಾ ಪರ್ವ,2,75
258. ಚೌಪಟಮಲ್ಲ, ನಾಲ್ಕು ಕಡೆಗೂ ಕಾದಾಡ ಬಲ್ಲ ವೀರ, ಆದಿ ಪರ್ವ,14,9
259. ಚೌರಾಶೀತಿ, ಎಂಬತ್ನಾಲ್ಕು, ಸಭಾ ಪರ್ವ,2,77
260. ಚೌರಿ, ಪ್ರಾಣಿಗಳ ಕೂದಲಿನಿಂದ ಮಾಡಿದ ಗಾಳಿಬೀಸುವ ಸಾಧನ , ಗದಾ ಪರ್ವ,1,24
261. ಚೌರಿ, ಕೂದಲಿನಿಂದ ಮಾಡಿದ ಕುಚ್ಚು, ಶಲ್ಯ ಪರ್ವ,3,65
262. ಚೌರಿ, ಕೂದಲಿನಿಂದ ಮಾಡಿದ ಗಾಳಿಬೀಸುವ ಕುಚ್ಚುಗಳು, ಗದಾ ಪರ್ವ,4,14
263. ಚೌರಿ, ಚಾಮರ (ಚಮರಿಮೃಗದ ಕೂದಲಿಂದ ಮಾಡಿದ ಬೀಸಣಿಗೆ), ಭೀಷ್ಮ ಪರ್ವ,8,4
264. ಚ್ಯುತಿ, ಪತನ, ಆದಿ ಪರ್ವ,14,30
265. ಛಟಛಟಿಸು, ಛಟಛಟ ಎಂದು ಧ್ವನಿಮಾಡು, ಆದಿ ಪರ್ವ,20,27
266. ಛಡಾಳ, ಅತೀವ, ಭೀಷ್ಮ ಪರ್ವ,3,19
267. ಛಡಾಳ, ಉದ್ರೇಕ , ಗದಾ ಪರ್ವ,5,34
268. ಛಡಾಳದುಃಖ, ಹೊತ್ತಿಉರಿಯುತ್ತಿರುವ ದುಃಖ, ಗದಾ ಪರ್ವ,11,71
269. ಛಡಾಳಿಸಲು, ಉಕ್ಕಿ ಹಬ್ಬಲು, ಭೀಷ್ಮ ಪರ್ವ,8,14
270. ಛಡಾಳಿಸಿ, ಅತಿಶಯವಾಗಿ, ದ್ರೋಣ ಪರ್ವ,1,3
271. ಛಡಾಳಿಸಿ, ಉಗ್ರವಾಗಿ, ದ್ರೋಣ ಪರ್ವ,5,40
272. ಛÀÀಡಾಳಿಸು, ಅಧಿಕವಾಗು, ಆದಿ ಪರ್ವ,19,36
273. ಛಡಾಳಿಸು, ಭುಗಿಲೆಂದು ಹತ್ತು, ಶಲ್ಯ ಪರ್ವ,2,61
274. ಛಡಾಳಿಸು, ಅತಿಶಯವಾಗು, ಕರ್ಣ ಪರ್ವ,3,30
275. ಛಡಾಳಿಸು, ಉದ್ವಿಗ್ನಗೊಳಿಸು, ಕರ್ಣ ಪರ್ವ,16,1
276. ಛಡಾಳಿಸು, ಉಗ್ರವಾಗಿ, ದ್ರೋಣ ಪರ್ವ,5,61
277. ಛಡಾಳಿಸು, ಏರಿ ಹೋಗು, ವಿರಾಟ ಪರ್ವ,4,46
278. ಛಡಾಳಿಸು, ಒಮ್ಮೆಗೇ ಪ್ರಕಟಗೊಳ್ಳು, ಗದಾ ಪರ್ವ,7,14
279. ಛಡಾಳಿಸು, ಹೊಮ್ಮಿ ಹರಿ, ಭೀಷ್ಮ ಪರ್ವ,8,40
280. ಛಡಾಳಿಸು, ಹೆಚ್ಚಳವಾಗು, ಶಲ್ಯ ಪರ್ವ,3,54
281. ಛಲ, ಹಠ, ಗದಾ ಪರ್ವ,5,25
282. ಛಲ, ಚಲ, ಗದಾ ಪರ್ವ,6,5
283. ಛಲ, ಚಲ , ಗದಾ ಪರ್ವ,11,23
284. ಛಲದಂಕನು, ಹಠ ನೆರವೇರಿಸುವ ವೀರ, ಭೀಷ್ಮ ಪರ್ವ,5,12
285. ಛಲದಂಕರಾವುತರು, ಪ್ರತಿಜ್ಞಾ ವೀರರಾದ ರಾವುತರು. ತೋರಿಯ, ಭೀಷ್ಮ ಪರ್ವ,4,59
286. ಛಿದ್ರಿಸು, ಚೂರುಮಾಡು, ಉದ್ಯೋಗ ಪರ್ವ,8,35
287. ಜಂಕೆ, ಅಬ್ಬರ, ಆದಿ ಪರ್ವ,13,7
288. ಜಂಗಮ, ಚಲಿಸುವ (ಪ್ರಾಣಿ, ವಿರಾಟ ಪರ್ವ,7,43
289. ಜಂಗಮಜೀವ, ಜೀವಕೋಟಿಗೆ ಪ್ರಾಣಸ್ವರೂಪನು, ಭೀಷ್ಮ ಪರ್ವ,3,0
290. ಜಂಗುಳಿಸಿ, ಮುಳುಗಾಡಿ, ಭೀಷ್ಮ ಪರ್ವ,4,20
291. ಜಂಘಾಳ, ವೇಗವಾಗಿ ಓಡುವ, ಕರ್ಣ ಪರ್ವ,16,21
292. ಜಂಘಾಳತನ, ವೇಗವಾಗಿ ಓಡÀುವ ಸ್ವಭಾವ, ಗದಾ ಪರ್ವ,4,34
293. ಜಂಘೆ, ಕೆಳತೊಡೆ , ಗದಾ ಪರ್ವ,7,35
294. ಜಂಘೆ, ಕಿರುದೊಡೆ, ಆದಿ ಪರ್ವ,13,13
295. ಜಂಜಡ, ಚಿಂತೆ , ಗದಾ ಪರ್ವ,1,67
296. ಜಂತ್ರದ ಜೀವ ಪುತ್ರಿಗಳು, ಯಂತ್ರಮಯವಾದ , ಗದಾ ಪರ್ವ,4,15
297. ಜಂಬೀರಫಲ, ನಿಂಬೆಹಣ್ಣು, ಆದಿ ಪರ್ವ,13,27
298. ಜಂಬುಕೌಘ, ನರಿಗಳ ಸಮೂಹ., ಗದಾ ಪರ್ವ,8,56
299. ಜಂಬೂ, ನೇರಳೆ, ಸಭಾ ಪರ್ವ,2,57
300. ಜಂಬೂಫಲ, ನೇರಿಳೆ ಹಣ್ಣು, ಅರಣ್ಯ ಪರ್ವ,3,0
301. ಜಂಭ, ಜಂಭನೆಂಬ ಒಬ್ಬ ರಾಕ್ಷಸ, ಗದಾ ಪರ್ವ,6,34
302. ಜಂಭ, ಒಬ್ಬ ರಾಕ್ಷಸ, ಆದಿ ಪರ್ವ,7,32
303. ಜಕ್ಕವಕ್ಕಿ, ಚಕ್ರವಾಕ ಪಕ್ಷಿ, ವಿರಾಟ ಪರ್ವ,10,3
304. ಜಕ್ಕುಲಿಸು, ಆಟವಾಡು, ಕರ್ಣ ಪರ್ವ,17,8
305. ಜಕ್ಕುಲಿಸು, ಚಾಚಿ ಆಡಿಸು, ಭೀಷ್ಮ ಪರ್ವ,4,43
306. ಜಗ+ಓಘ+ಅನೀಕ, ಸಮಸ್ತ ಜಗತ್ತುಗಳ ಪರಿವಾರ, ಭೀಷ್ಮ ಪರ್ವ,3,60
307. ಜಗಜಟ್ಟಿ, ಪ್ರಸಿದ್ಧನಾದಮಲ್ಲ ಚೌಪಟಮಲ್ಲ, ಆದಿ ಪರ್ವ,7,30
308. ಜಗಝಂಪ, ಜಗತ್ತನ್ನೇ ಮೈಮರೆಸುವ, ಕರ್ಣ ಪರ್ವ,21,13
309. ಜಗದವಸಾನ, ಪ್ರಳಯ, ವಿರಾಟ ಪರ್ವ,6,65
310. ಜಗುಳಿದ, ಬಿದ್ದುಹೋದ (ಬಾಗಿದ), ಭೀಷ್ಮ ಪರ್ವ,1,35
311. ಜಗುಳಿದ, ಕಳಚಿದ, ಭೀಷ್ಮ ಪರ್ವ,1,47
312. ಜಗುಳ್ದು, ಜಾರಿ, ಗದಾ ಪರ್ವ,9,19
313. ಜಗುಳ್ವ, ಜಾರುವ, ಗದಾ ಪರ್ವ,6,23
314. ಜಘನ, ನಿತಂಬ, ಆದಿ ಪರ್ವ,13,11
315. ಜಜ್ಜಾರಿತನ, ಹೆಮ್ಮೆ, ದ್ರೋಣ ಪರ್ವ,18,72
316. ಜಜ್ಝಾರ, ವೀರರಾದ, ಶಲ್ಯ ಪರ್ವ,3,72
317. ಜಜ್ಝಾರ, ಧೀರ, ದ್ರೋಣ ಪರ್ವ,1,50
318. ಜಜ್ಝಾರ, ಧೈರ್ಯವಂತ, ಗದಾ ಪರ್ವ,2,30
319. ಜಜ್ಝಾರತನ, ಪರಾಕ್ರಮ, ದ್ರೋಣ ಪರ್ವ,16,37, ,
320. ಜಜ್ಝಾರತನ, ದುಷ್ಟತನ, ಸಭಾ ಪರ್ವ,16,1
321. ಜಟೆ, ಸಿಕ್ಕಾದ ಕೂದಲು, ಗದಾ ಪರ್ವ,9,17
322. ಜಠರ ಪರಾಯಣರು, ಹೊಟ್ಟೆ ಹೊರೆದುಕೊಳ್ಳುವವರು, ಭೀಷ್ಮ ಪರ್ವ,9,1
323. ಜಠgಜÀ, ಹೊಟ್ಟೆ, ಭೀಷ್ಮ ಪರ್ವ,3,4
324. ಜಠರತಾಡನ, ಹೊಟ್ಟೆಯನ್ನು ಬಡಿಯುವುದು, ಗದಾ ಪರ್ವ,11,28
325. ಜಠರಭರಣ, ಹೊಟ್ಟೆಯ ಪಾಡು, ವಿರಾಟ ಪರ್ವ,1,19
326. ಜಡಜೀವರು, ಮಂದಬುದ್ಧಿಯವರು, ಉದ್ಯೋಗ ಪರ್ವ,4,116
327. ಜಡದೇಹ, ಪಂಚ ಭೂತಗಳಿಂದ ನಿರ್ಮಾಣವಾದ ದೇಹ, ದ್ರೋಣ ಪರ್ವ,7,27
328. ಜಡರಲಿ, ಮೂರ್ಖರಲ್ಲಿ, ಸಭಾ ಪರ್ವ,1,40
329. ಜಡವಿಕಾರ, ಆಲಸ್ಯಭಾವ ಜಡ, ಭೀಷ್ಮ ಪರ್ವ,3,60
330. ಜಡಾತ್ಮ, ಜಡನರ, ಭೀಷ್ಮ ಪರ್ವ,3,86
331. ಜಡಿ, ಬೊಬ್ಬೆ, ಗದಾ ಪರ್ವ,5,1, , ,
332. ಜಡಿ, ಭದ್ರ, ಉದ್ಯೋಗ ಪರ್ವ,5,12
333. ಜಡಿ, ನಡುಗು, ವಿರಾಟ ಪರ್ವ,4,33
334. ಜಡಿ, ಹೊಡೆ, ಗದಾ ಪರ್ವ,5,19
335. ಜಡಿ, ಗದರಿಸು/ಬೆದರಿಸು., ಉದ್ಯೋಗ ಪರ್ವ,9,33
336. ಜಡಿದವು, ಬಾರಿಸಿದವು, ಗದಾ ಪರ್ವ,2,7
337. ಜಡಿದು, ಬಾರಿಸು ಕುಟ್ಟು , ವಿರಾಟ ಪರ್ವ,5,21
338. ಜಡಿದುದು, ಬಡಿಯಿತು, ಗದಾ ಪರ್ವ,11,66
339. ಜಡಿದುದು, ತುಂಬಿ ತುಳುಕಿತು, ಭೀಷ್ಮ ಪರ್ವ,9,11
340. ಜಡಿಯೆ, ಪ್ರಜ್ವಲಿಸಲು , ಗದಾ ಪರ್ವ,12,1
341. ಜಡಿಯೆ, ತುಂಬಿ ಕೊಳ್ಳಲು, ದ್ರೋಣ ಪರ್ವ,2,27
342. ಜಡಿವ, ಜೋರಾಗಿ ಶಬ್ದ ಮಾಡುವ, ಗದಾ ಪರ್ವ,3,38
343. ಜಡಿವ, ಗರ್ಜಿಸುವ, ದ್ರೋಣ ಪರ್ವ,15,27
344. ಜಡಿವ, ತೂಗುವ, ಗದಾ ಪರ್ವ,9,17
345. ಜತುಗೇಹದಾಹ, ಅರಗಿನ ಮನೆಯನ್ನು ಸುಡುವುದು, ಗದಾ ಪರ್ವ,11,4
346. ಜತ್ತರಟ್ಟ, ಯುದ್ಧಯಂತ್ರ, ಕರ್ಣ ಪರ್ವ,2,11
347. ಜನಪ, (ವಿರಾಟ) ದೊರೆ, ವಿರಾಟ ಪರ್ವ,9,4
348. ಜನಪರಿವಾದ, ಜನವಾದಿಸುವ ವಿಚಾರ, ಗದಾ ಪರ್ವ,9,13
349. ಜನರಾಗ, ಪ್ರಜೆಗಳ ಪ್ರೀತಿ, ಸಭಾ ಪರ್ವ,1,48
350. ಜನಾಳಿ, ಜನರ ಗುಂಪು, ಉದ್ಯೋಗ ಪರ್ವ,6,22
351. ಜನ್ಮ ದುರಿತ, ಜನ್ಮದ ಪಾತಕ, ವಿರಾಟ ಪರ್ವ,10,34
352. ಜಪಪರಿಕÀರಣ, ಜಪವನ್ನು ವ್ಯವಸ್ಥಿತವಾಗಿ ಮಾಡುವಕ್ರಿಯೆ, ಗದಾ ಪರ್ವ,3,42
353. ಜಬ್ಬುಲಿಯ, ದುರ್ಬಲಗೊಂಡ, ಸಭಾ ಪರ್ವ,16,57
354. ಜಯ ವಿಸ್ತರಣ, ಜಯದ ವಿಸ್ತಾರ, ಗದಾ ಪರ್ವ,3,45, ,
355. ಜಯಕಾಮಿನಿ, ಜಯವನ್ನು ಆಶಿಸುವ ಮಹಿಳೆ, ಗದಾ ಪರ್ವ,4,34
356. ಜಯಜೀವಿ, ಜಯವನ್ನೇ ಉಸಿರಾಗುಳ್ಳವನು, ಶಲ್ಯ ಪರ್ವ,1,20
357. ಜಯಪ್ರಚಂಡರು, ಜಯವನ್ನು U, ಗದಾ ಪರ್ವ,10,1
358. ಜಯವಧು, ಗೆಲುವು, ಭೀಷ್ಮ ಪರ್ವ,7,6
359. ಜಯವಾಸ, ಜಯಲಕ್ಷ್ಮಿಯನೆಲೆ, ಭೀಷ್ಮ ಪರ್ವ,3,81
360. ಜಯಸಿರಿ, ಜಯಲಕ್ಷ್ಮಿ, ಶಲ್ಯ ಪರ್ವ,1,16
361. ಜಯಾಧ್ವರವಿಧಿ, ಜಯ ಸಂಪಾದಿಸುವ ಯುದ್ಧವೆಂಬ ಯಜ್ಞ ಕ್ರಮ, ಗದಾ ಪರ್ವ,11,60
362. ಜಯಾವಲಂಬನ, ಜಯವನ್ನು ಅವಲಂಬಿಸುವುದು, ಗದಾ ಪರ್ವ,7,43
363. ಜರಡ, ಅಲ್ಪ, ಕರ್ಣ ಪರ್ವ,20,33
364. ಜರಡು, ಅಲ್ಪ, ದ್ರೋಣ ಪರ್ವ,15,68
365. ಜರಡು, ಜಳ್ಳು, ಸಭಾ ಪರ್ವ,10,53
366. ಜರಿ, ಹೀನಾಯಿಸು, ಆದಿ ಪರ್ವ,7,57
367. ಜರಿತ, ಸೋರಿದ, ಭೀಷ್ಮ ಪರ್ವ,4,70
368. ಜರಿದ ಜೋಡು, ಜಾರಿ ಬೀಳುವ ಕವಚ, ದ್ರೋಣ ಪರ್ವ,15,19
369. ಜರಿದವದ್ರಿಗಳು, ಬೆಟ್ಟಗಳೇ ಕೂಸಿದುವಂತೆ, ಸಭಾ ಪರ್ವ,3,55
370. ಜರಿದು, ಬೈದು, ಗದಾ ಪರ್ವ,4,3
371. ಜರಿದುದು, ಸರಿಯಿತು, ದ್ರೋಣ ಪರ್ವ,5,16
372. ಜರಿದುದು (ಸರಿದುದು), ದೂರಾಯಿತು, ಭೀಷ್ಮ ಪರ್ವ,10,14
373. ಜರಿದುದೊ ? ಹಿಂದೆ ಸರಿಯಿತೋ? ತಳಿತ ಸಂದಣಿ, ಸೇರಿದ ಜನಸಂದಣಿ, ವಿರಾಟ ಪರ್ವ,4,34
374. ಜರಿವ, ಕೆಳಗೆ ಇಳಿಯುವ, ಶಲ್ಯ ಪರ್ವ,3,45
375. ಜರಿವೊಡೆ, ಭೇದಿಸು, ಭೀಷ್ಮ ಪರ್ವ,8,47
376. ಜರುಗು, ಚಿನ್ನದ ಸೂಕ್ಷ್ಮ ಕಣಗಳು ಇರುವ ಮಣ್ಣು, ಅರಣ್ಯ ಪರ್ವ,10,27
377. ಜರುಗು, ಜಾರು, ಗದಾ ಪರ್ವ,8,25
378. ಜರುಹು, ಜಗ್ಗು, ಭೀಷ್ಮ ಪರ್ವ,9,10
379. ಜರೆ, ಭಂಗಿಸು, ಗದಾ ಪರ್ವ,8,34, ,
380. ಜರೆ, ಧಿಕ್ಕರಿಸು, ಆದಿ ಪರ್ವ,14,24
381. ಜರೆ, ಮುಪ್ಪು, ಸಭಾ ಪರ್ವ,1,73
382. ಜರೆದ, ನಿಂದಿಸಿದ, ಉದ್ಯೋಗ ಪರ್ವ,5,0
383. ಜರೆದನು, ಬೈದನು, ದ್ರೋಣ ಪರ್ವ,6,38
384. ಜರೆದು, ನಿಂದಿಸಿ, ಗದಾ ಪರ್ವ,7,9
385. ಜರ್ಝರ, ನುಚ್ಚು ನೂರಾಗು, ಆದಿ ಪರ್ವ,7,43
386. ಜರ್ಝರ, ಹರಿದ, ಶಲ್ಯ ಪರ್ವ,3,25
387. ಜಲಚರ, ಮೀನು, ವಿರಾಟ ಪರ್ವ,6,2
388. ಜಲಜ, ತಾವರೆ , ಗದಾ ಪರ್ವ,4,12
389. ಜಲಜ ವಿಶಿಖ, ಪುಷ್ಪ ಬಾಣ (ಮನ್ಮಥ), ವಿರಾಟ ಪರ್ವ,2,9
390. ಜಲದಾನ, ಜಲಾಂಜಲಿ, ಗದಾ ಪರ್ವ,12,24
391. ಜಲಧರಪಟ, ಮೋಡಗಳ ಸಮೂಹ, ಕರ್ಣ ಪರ್ವ,10,22
392. ಜಲಧಿ, ಸಮುದ್ರ (ಬಲ ಜಲಧಿ, ವಿರಾಟ ಪರ್ವ,8,68
393. ಜಲರಾಶಿ, ಸಮುದ್ರಜಲ, ವಿರಾಟ ಪರ್ವ,4,34
394. ಜಲರುಹ + ಅಕ್ಷ, ಜಲರುಹಾಕ್ಷ, ಉದ್ಯೋಗ ಪರ್ವ,3,134
395. ಜಲರುಹಾಕ್ಷ, ಕಮಲದಂತೆ ಕಣ್ಣುಳ್ಳವನು, ಆದಿ ಪರ್ವ,16,14
396. ಜವ, ಯಮ (ಸಂ) ಸಿವಡಿ, ಗದಾ ಪರ್ವ,3,24
397. ಜವ, ಯಮ(ಸಂ.) ಬೇಗೆ, ಗದಾ ಪರ್ವ,13,16
398. ಜವಗುಂದು, ಶಕ್ತಿಗುಂದು, ದ್ರೋಣ ಪರ್ವ,16,12
399. ಜವಗೆಡಿಸು, ಶಕ್ತಿಗುಂದಿಸು, ಕರ್ಣ ಪರ್ವ,14,2
400. ಜವಗೆಡೆ, ಕಂಗೆಡು, ಭೀಷ್ಮ ಪರ್ವ,5,14
401. ಜವನಪುರಿ, ಯಮಲೋಕ, ಭೀಷ್ಮ ಪರ್ವ,9,22
402. ಜವನಿಕೆ, ಯವನಿಕಾ(ಸಂ) , ಗದಾ ಪರ್ವ,4,50, ,
403. ಜವನಿಕೆ, ಯವನಿಕಾ(ಸಂ)ತೆರೆ, ಗದಾ ಪರ್ವ,10,7
404. ಜವನಿಕೆ, ತೆರೆ , ಅರಣ್ಯ ಪರ್ವ,6,53
405. ಜವಳಿ, ಅವಳಿ, ಗದಾ ಪರ್ವ,11,42
406. ಜವಳಿ, ಜೋಡಿ , ಗದಾ ಪರ್ವ,8,25
407. ಜವಳಿದೆಗೆ, ಒಣಗು, ದ್ರೋಣ ಪರ್ವ,15,38
408. ಜವಳಿವಾತು, ದ್ವಂದ್ವಾರ್ಥದ ಮಾತು., ಕರ್ಣ ಪರ್ವ,22,24
409. ಜವಾಜಿ, ಸುಗಂಧ ದ್ರವ್ಯಗಳು, ಗದಾ ಪರ್ವ,5,40
410. ಜವಾಯಿಲತನ, ವೇಗ (ಜವ, ಗದಾ ಪರ್ವ,10,12
411. ಜವಾಯ್ಲ, ಗುಂಪು, ಅರಣ್ಯ ಪರ್ವ,13,19
412. ಜವಿವಲೆ, ಒಂದು ಬಗೆಯ ಬಲೆ, ಅರಣ್ಯ ಪರ್ವ,22,4
413. ಜವ್ವನ, ಯವ್ವನ, ಉದ್ಯೋಗ ಪರ್ವ,3,39
414. ಜವ್ವನ, ಯೌವನ, ಆದಿ ಪರ್ವ,8,57
415. ಜಸ, ಯಶಸ್ಸು, ಶಲ್ಯ ಪರ್ವ,3,52
416. ಜಸ, ಕೀರ್ತಿ, ಆದಿ ಪರ್ವ,7,32
417. ಜಹ್ನುಸುತೆ, ಜಾಹ್ನವಿ, ಗದಾ ಪರ್ವ,9,23
418. ಜಳ್ಳುಗ, ಬಲಹೀನ, ಕರ್ಣ ಪರ್ವ,24,43
419. ಜಾಗ, ಊರು, ವಿರಾಟ ಪರ್ವ,1,2
420. ಜಾಗರಣ, ಎಚ್ಚರ, ದ್ರೋಣ ಪರ್ವ,3,70
421. ಜಾಗು, ಭಲೆ, ದ್ರೋಣ ಪರ್ವ,1,36
422. ಜಾಗು, ಭಲೇ, ದ್ರೋಣ ಪರ್ವ,15,63
423. ಜಾಜಿನಗಿರಿ, ಕೆಂಪು ಬಣ್ಣದ ಕಲ್ಲುಗಳ ಬೆಟ್ಟ, ಕರ್ಣ ಪರ್ವ,13,17
424. ಜಾಜಿನಗಿರಿ, ಕೆಮ್ಮಣ್ಣಿನ ಪರ್ವತ ಬೆಟ್ಟ, ವಿರಾಟ ಪರ್ವ,9,19
425. ಜಾಡನ ಹೆಂಡತಿ ಸೀರಿ ಕಾಣದೆ ಸತ್ತಳು ಎಂಬಗಾದೆಯೇ ಇದೆಯಲ್ಲ ! (ಜಾಡ, ನೇಯ್ಗೆಕಾರ), ವಿರಾಟ ಪರ್ವ,3,60
426. ಜಾಡಿ, ಕುರಿಯ ತುಪ್ಪಟದಿಂದ ತಯಾರಿಸಿದ ಹೊದಿಕೆ, ವಿರಾಟ ಪರ್ವ,4,38
427. ಜಾಡಿಗೆ, ಚೀಲ., ಉದ್ಯೋಗ ಪರ್ವ,7,16
428. ಜಾಡಿಸು ತಡಿ, ಜೀನು, ಶಲ್ಯ ಪರ್ವ,2,10
429. ಜಾಡ್ಯ, ಜಡ್ಡ್ವು, ಗದಾ ಪರ್ವ,4,49
430. ಜಾಡ್ಯರೇಖೆ, ಗೀಳು, ಗದಾ ಪರ್ವ,7,26
431. ಜಾಣ್, ವಿವೇಕ, ವಿರಾಟ ಪರ್ವ,1,27
432. ಜಾಣಪಣ, ಜಾಣತನ, ವಿರಾಟ ಪರ್ವ,7,45
433. ಜಾಣಾಯ್ಲತನ, ಜಾಣತನ, ಸಭಾ ಪರ್ವ,2,68
434. ಜಾಣಾಯ್ಲರು, ಜಾಣರಲ್ಲಿ ಸಮರ್ಥರಾದವರು, ಭೀಷ್ಮ ಪರ್ವ,9,33
435. ಜಾಣು, ಜ್ಞಾನ (ಸಂ). ತಿಳುವಳಿಕೆ, ಗದಾ ಪರ್ವ,6,30
436. ಜಾಣು, ಜಾಣತನÀ, ಅರಣ್ಯ ಪರ್ವ,15,25
437. ಜಾತ, ಹುಟ್ಟಿದವನು, ಗದಾ ಪರ್ವ,5,38
438. ಜಾತರೂಪ, ಚಿನ್ನ ವೀತಿಹೋತ್ರ, ಉದ್ಯೋಗ ಪರ್ವ,3,124
439. ಜಾತಶ್ರಮ, ಕಷ್ಟ ಉಂಟಾದವರು (?) ಹಿಮ್ಮೆಟ್ಟು, ಆದಿ ಪರ್ವ,14,0
440. ಜಾತಿ, ಸ್ವಭಾವ, ಉದ್ಯೋಗ ಪರ್ವ,4,66
441. ಜಾತಿ, ಹುಟ್ಟು, ಗದಾ ಪರ್ವ,5,15
442. ಜಾತಿಗೆಡು, ಬದಲಾಗು, ಗದಾ ಪರ್ವ,3,33
443. ಜಾತಿಸಂಕರ, ಬೇರೆಬೇರೆ, ಸಭಾ ಪರ್ವ,1,31
444. ಜಾತ್ಯಂಧ, ಹುಟ್ಟು ಕುರುಡ, ಆದಿ ಪರ್ವ,3,8
445. ಜಾನಪದಜನ, ರಾಜ್ಯದ ವಿವಿಧ ಪ್ರದೇಶಗಳ ಜನ, ಗದಾ ಪರ್ವ,12,24
446. ಜಾನಿಸು, ಧ್ಯಾನಿಸು, ಅರಣ್ಯ ಪರ್ವ,3,35
447. ಜಾನು, ಮಂಡಿ, ಗದಾ ಪರ್ವ,3,43
448. ಜಾನುದಘ್ನ, ಮಂಡಿಯವರೆಗೆ, ಗದಾ ಪರ್ವ,12,7
449. ಜಾಯಿಲ, ನಾಯಿ, ಅರಣ್ಯ ಪರ್ವ,5,43
450. ಜಾರ, ವಿಟ, ಉದ್ಯೋಗ ಪರ್ವ,8,71
451. ಜಾರ, ಸ್ತ್ರೀಲಂಪಟ, ವಿರಾಟ ಪರ್ವ,3,71
452. ಜಾರಿತು, ಹರಿದುಹೋಯಿತು, ಗದಾ ಪರ್ವ,11,66
453. ಜಾರು, ನುಸುಳು, ಗದಾ ಪರ್ವ,2,15
454. ಜಾರು, ಅದುಮು, ಭೀಷ್ಮ ಪರ್ವ,4,46
455. ಜಾರು, ಜಾರುವುದು, ಗದಾ ಪರ್ವ,3,8
456. ಜಾರುವರು, ಜಾರಿ ಹೋಗುತ್ತಾರೆ, ಗದಾ ಪರ್ವ,13,16
457. ಜಾರೆ, ವಿಟಸ್ತ್ರೀ, ವಿರಾಟ ಪರ್ವ,2,51
458. ಜಾಲ, ಹಿಂಡು/ಗುಂಪು, ಉದ್ಯೋಗ ಪರ್ವ,11,43
459. ಜಾವಳ, ಸಾಮಾನ್ಯ, ಕರ್ಣ ಪರ್ವ,4,14
460. ಜಾವಳರು, ಸಾಮಾನ್ಯರು, ಉದ್ಯೋಗ ಪರ್ವ,3,131
461. ಜಾವಳವೆ, ಸಾಮಾನ್ಯವೇ, ಸಭಾ ಪರ್ವ,1,89
462. ಜಾಹ್ನವಿ, ಗಂಗಾಮಾತೆ, ಭೀಷ್ಮ ಪರ್ವ,7,22
463. ಜಾಹ್ನವಿ, ಗಂಗೆ, ಆದಿ ಪರ್ವ,3,22
464. ಜಾಹ್ನವಿ, ಗಂಗೆ (ಜುಹ್ನು ಮಹರ್ಷಿಯ ಕಿವಿಯಿಂದ ಬಂದವಳು), ವಿರಾಟ ಪರ್ವ,2,5
465. ಜಾಳಾಂದ್ರಾಳಿಗಳನು, ಈ ಎಲ್ಲರನ್ನೂ, ಸಭಾ ಪರ್ವ,4,11
466. ಜಾಳಿಗೆ, ಜಾಳಂದ್ರ, ಸಭಾ ಪರ್ವ,13,25
467. ಜಾಳಿಗೆವೊರಜೆ, ಹಗ್ಗದ ಬಲೆ , ದ್ರೋಣ ಪರ್ವ,3,2
468. ಜಾಳಿಸು, ಹಿಂತೆಗೆ, ಕರ್ಣ ಪರ್ವ,20,34
469. ಜಾಳಿಸು, ನಡೆದುಕೊಂಡು ಹೋಗು ಚಲಿಸು., ವಿರಾಟ ಪರ್ವ,6,7
470. ಜಾಳಿಸು, ವ್ಯಾಪಿಸು, ಗದಾ ಪರ್ವ,7,30, ,
471. ಜಾಳಿಸು, ಅಲುಗಾಡು, ಕರ್ಣ ಪರ್ವ,25,1
472. ಜಾಳಿಸು, ಕಳೆ, ಉದ್ಯೋಗ ಪರ್ವ,8,28
473. ಜಾಳು, ಪೊಳ್ಳು, ಆದಿ ಪರ್ವ,13,5
474. ಜಿಗಿ, ಲೇಪನ, ಕರ್ಣ ಪರ್ವ,16,6
475. ಜಿಗಿ, ಅಂಟು, ಭೀಷ್ಮ ಪರ್ವ,4,84
476. ಜಿಗಿ, ಅಂಟು , ಗದಾ ಪರ್ವ,3,8
477. ಜಿಗಿ, ಅಂಟಿದ, ಶಲ್ಯ ಪರ್ವ,3,45
478. ಜಿತ, ಗೆಲ್ಲಲ್ಪಟ್ಟುದು, ಆದಿ ಪರ್ವ,13,19
479. ಜಿತವಿರೋಧ, ವಿರೋಧವನ್ನು ಗೆದ್ದ, ಗದಾ ಪರ್ವ,11,68
480. ಜಿತಸಂಗ್ರಾಮ, ಯುದ್ಧದಲ್ಲಿ ಜಯಶಾಲಿ, ವಿರಾಟ ಪರ್ವ,6,55
481. ಜಿತಾಕ್ಷ, ಜಿತೇಂದ್ರಿಯ, ಆದಿ ಪರ್ವ,13,20
482. ಜಿನುಗು, ಸೋನೆಮಳೆ, ಆದಿ ಪರ್ವ,19,21
483. ಜಿನುಗು, ಮತ್ತೆ ಮತ್ತೆ ಹೇಳು, ಉದ್ಯೋಗ ಪರ್ವ,1,21
484. ಜಿನುಗು, ವ್ಯರ್ಥವಾಗಿ ಹಲುಬು, ಆದಿ ಪರ್ವ,8,5
485. ಜಿನುಗು, ಮಾತಿನಮಳೆ (?) ಜರಿ, ಆದಿ ಪರ್ವ,17,16
486. ಜಿನುಗುವಾತು, ಪಿಸುಮಾತು, ಆದಿ ಪರ್ವ,16,62
487. ಜೀ ಯೆನಲ್, 1. ಪ್ರಭು ಎಂದು ಹೇಳಿದಾಗ, ವಿರಾಟ ಪರ್ವ,9,26
488. ಜೀಕೊಳವೆ, ಚಿಮ್ಮಿಸುವ ಕೊಳವೆ, ದ್ರೋಣ ಪರ್ವ,6,44
489. ಜೀಮೂತ, ಮೋಡ, ಕರ್ಣ ಪರ್ವ,9,30
490. ಜೀಯ, ರಾಜನೆ, ದ್ರೋಣ ಪರ್ವ,1,2
491. ಜೀಯ ಬಿನ್ನಹ, ಪ್ರಭು, ಸಭಾ ಪರ್ವ,5,28
492. ಜೀರ್ಕೊಳವಿ, ಪಿಚಕಾರಿ, ಭೀಷ್ಮ ಪರ್ವ,5,30
493. ಜೀವ ಭ್ರಮೆಯ ಬಾಹಿರ, ದೇಹವೇ ಜೀವಾತ್ಮ, ಭೀಷ್ಮ ಪರ್ವ,3,53
494. ಜೀವದಲಿ ಜಾರಿದರು, ಜೀವವನ್ನು ಬಿಟ್ಟರು, ಗದಾ ಪರ್ವ,12,9
495. ಜೀವಭಾವ, ಜೀವಾತ್ಮ, ಭೀಷ್ಮ ಪರ್ವ,3,41
496. ಜೀವವಿಳಾಸ, ಬದುಕಿನ ಶೋಭೆ, ವಿರಾಟ ಪರ್ವ,10,22
497. ಜೀವಸಮೀರ, ಪ್ರಾಣವಾಯು, ಗದಾ ಪರ್ವ,7,47
498. ಜೀವಾತ್ಮ, ದೇಹದಲ್ಲಿರುವ ಪ್ರಾಣವಾಯು, ಗದಾ ಪರ್ವ,10,12
499. ಜೀವಾಪಹಾರ, ಪ್ರಾಣವನ್ನು ತೆಗೆಯುವುದು, ಗದಾ ಪರ್ವ,11,65
500. ಜೀವಿತ, ವೇತನ, ಸಭಾ ಪರ್ವ,1,37
501. ಜುಂಜು, ಒರಟಾದ ಗುಂಗುರು ಕೂದಲು, ಆದಿ ಪರ್ವ,20,13
502. ಜುಜ್ಝಾರ, ಧೈರ್ಯಶಾಲಿ, ಕರ್ಣ ಪರ್ವ,20,13
503. ಜುಣಗು, ಜಾರು, ದ್ರೋಣ ಪರ್ವ,8,13
504. ಜುಣಿಗಿ, ತಪ್ಪಿಸಿಕೊಂಡು, ಗದಾ ಪರ್ವ,13,16
505. ಜುಣುಗಲು, ಜಾರಲು, ಭೀಷ್ಮ ಪರ್ವ,4,24
506. ಜುಣುಗಲು, ಜಾರಿಕೊಳ್ಳಲು, ದ್ರೋಣ ಪರ್ವ,19,47
507. ಜುಣುಗಿದ, ಅಡಗಿದ, ಸಭಾ ಪರ್ವ,16,56
508. ಜುಣುಗು, ಮಿಂಚಿ ಮರೆಯಾಗು, ಭೀಷ್ಮ ಪರ್ವ,4,35
509. ಜುಣುಗು, ಹಿಂದೆಗೆ, ವಿರಾಟ ಪರ್ವ,3,26
510. ಜುಣುಗು, ಪಕ್ಕನೆ ಅಡಗಿಕೊ, ಭೀಷ್ಮ ಪರ್ವ,4,46
511. ಜುಣುಗು, ಜಾರು, ಭೀಷ್ಮ ಪರ್ವ,8,28
512. ಜುಣುಗು, ಜಾರಿಹೋಗು, ಗದಾ ಪರ್ವ,4,50
513. ಜುರಿತ, ಸೋರುವ, ವಿರಾಟ ಪರ್ವ,3,37
514. ಜುರಿತ, ಜಿನುಗು, ಭೀಷ್ಮ ಪರ್ವ,9,13
515. ಜೂಟ, ಜುಟ್ಟು, ಗದಾ ಪರ್ವ,9,17
516. ಜೇಯ, ಜಯಿಸಲು ಯೋಗ್ಯನಾದ, ಶಲ್ಯ ಪರ್ವ,3,30
517. ಜೇವಡಿಸು, ಹಗ್ಗವನ್ನು ಮೀಟಿ ಶಬ್ದ ಮಾಡು, ವಿರಾಟ ಪರ್ವ,6,51
518. ಜೇವಣಿಗೆ, ಆಹಾರ , ಭೀಷ್ಮ ಪರ್ವ,5,40
519. ಜೇವೊಡೆ, ಬಿಲ್ಲಿನ ಹಗ್ಗವನ್ನೆಳೆದು ಧ್ವನಿಮಾಡು, ದ್ರೋಣ ಪರ್ವ,4,57
520. ಜೇವೊಡೆದು, ಧನುಸ್ಸನ್ನು ಮಿಡಿದು, ವಿರಾಟ ಪರ್ವ,8,78
521. ಜೇವೊಡೆಯ, ಬಿಲ್ಲನ್ನು ಠೇಂಕಾರಗೊಳಿಸಿದ, ಭೀಷ್ಮ ಪರ್ವ,4,13
522. ಜೊಂಡು, ನಾರುವ ಕಸ, ವಿರಾಟ ಪರ್ವ,4,49
523. ಜೊಂಡು, ಹುಲ್ಲಿನ ಕಂತೆ, ಶಲ್ಯ ಪರ್ವ,3,54
524. ಜೊಂಡು, ಹಗುರ, ಕರ್ಣ ಪರ್ವ,15,33
525. ಜೊಂಡೆ, ಜೊಂಪೆ, ಭೀಷ್ಮ ಪರ್ವ,9,13
526. ಜೊಂಡೆದ್ದು, ಕೆಸರಾದ, ಭೀಷ್ಮ ಪರ್ವ,10,11
527. ಜೊಂಪು, ಮರೆವು, ಕರ್ಣ ಪರ್ವ,20,1
528. ಜೊತ್ತಿನಾಹವ, ಮೋಸದಯುದ್ಧ, ಶಲ್ಯ ಪರ್ವ,2,62
529. ಜೊತ್ತಿಸು, ವಂಚಿಸು, ಅರಣ್ಯ ಪರ್ವ,8,38
530. ಜೊಮ್ಮು, ತೂಕಡಿಕೆ, ಗದಾ ಪರ್ವ,9,4
531. ಜೋಡನು, ಮೈಕವಚವನ್ನು, ಭೀಷ್ಮ ಪರ್ವ,4,14
532. ಜೋಡಿನ ಸರಪಳಿ, ಕಬ್ಬಿಣದ ಸರಪಳಿಯಿಂದ ಮಾಡಿದ ಅಂಗಿ, ಭೀಷ್ಮ ಪರ್ವ,6,23
533. ಜೋಡಿಸಿತು, ಸನ್ನಿಹಿತವಾಯಿತು, ಭೀಷ್ಮ ಪರ್ವ,6,30
534. ಜೋಡಿಸು, ಕೂಡಿಸು, ಉದ್ಯೋಗ ಪರ್ವ,11,5
535. ಜೋಡು, ಮೈಕವಚ, ಭೀಷ್ಮ ಪರ್ವ,8,47
536. ಜೋಡು, ಅಂಗರಕ್ಷೆ, ಭೀಷ್ಮ ಪರ್ವ,3,17
537. ಜೋಡು, ಜೊತೆ, ಆದಿ ಪರ್ವ,16,58
538. ಜೋಡು, ಕವಚ., ಕರ್ಣ ಪರ್ವ,11,26
539. ಜೋಡುಮಾಡು, ಒಟ್ಟಾಗು, ಕರ್ಣ ಪರ್ವ,4,27
540. ಜೋಡೆಯಲಿ, ಹಾದರಗಿತ್ತಿಯಲಿ, ಉದ್ಯೋಗ ಪರ್ವ,8,27
541. ಜೋದ, ಯೋಧ, ವಿರಾಟ ಪರ್ವ,8,5
542. ಜೋದ, ಆನೆಸವಾರ, ಭೀಷ್ಮ ಪರ್ವ,9,17
543. ಜೋದರ, ಯೋಧರ, ದ್ರೋಣ ಫರ್ವ,3,31
544. ಜೋದವಿದ್ಯೆ, ಮಾವಟಿಗನ ವಿದ್ಯೆ, ಆದಿ ಪರ್ವ,7,3
545. ಜೋದಾಳಿ, ವೀರ ಸಮೂಹ, ಭೀಷ್ಮ ಪರ್ವ,4,93
546. ಜೋಧ, ಮಾವಟಿಗ, ಭೀಷ್ಮ ಪರ್ವ,4,80
547. ಜೋಧ, ಮಾವಟಿಗರು, ಭೀಷ್ಮ ಪರ್ವ,4,91
548. ಜೋಧ, ಯೋಧ, ಉದ್ಯೋಗ ಪರ್ವ,3,102
549. ಜೋಧ, ಯೋಧ(ಸಂ) ಪಾರಕವ್ರಜ, ಗದಾ ಪರ್ವ,9,36
550. ಜೋಧ, ಆನೆಯ ಸವಾರ, ವಿರಾಟ ಪರ್ವ,8,83
551. ಜೋಧರು, ಮಾವಟಿಗ ಯೋಧ, ಭೀಷ್ಮ ಪರ್ವ,4,87
552. ಜೋಯಿಸ, ಭವಿಷ್ಯ, ಗದಾ ಪರ್ವ,3,34
553. ಜೋರು, ಸೋರು, ಗದಾ ಪರ್ವ,3,8
554. ಜೋರು, ಜಿನುಗುವರಕ್ತ, ಗದಾ ಪರ್ವ,7,13
555. ಜೋರು, ರಕ್ತದಧಾರೆ, ಭೀಷ್ಮ ಪರ್ವ,6,19
556. ಜೋಲಿಸು, ಜೋಲಿ ಹೊಡೆ, ವಿರಾಟ ಪರ್ವ,3,91
557. ಜೋಲೆಯ, ತೂಗಾಡುವ, ಆದಿ ಪರ್ವ,13,32
558. ಜೋವಳಿಸು, ಜೋಮು ಹಿಡಿದಂತೆ ಆಗು, ಕರ್ಣ ಪರ್ವ,20,11
559. ಜೋಹ, ವೇಷ, ಶಲ್ಯ ಪರ್ವ,3,35
560. ಜೋಳದ ಪಾಳಿಗೆ, ಅನ್ನದ ಹಂಗಿಗೆ, ಕರ್ಣ ಪರ್ವ,27,9
561. ಜೋಳವಾಳಿ, ಅನ್ನಋಣ, ಭೀಷ್ಮ ಪರ್ವ,6,10
562. ಜೋಳವಿಸು, ಜೋಳಿಸು, ಕರ್ಣ ಪರ್ವ,24,49
563. ಜೋಳಿ, ರಾಯಸ , ವಿರಾಟ ಪರ್ವ,10,45
564. ಜೋಳಿದೆಗೆ, ಜೋಡಿಯಾಗಿ ಎದುರಿಸು, ಕರ್ಣ ಪರ್ವ,21,22
565. ಜ್ಞಾತ, ತಿಳಿದ, ಉದ್ಯೋಗ ಪರ್ವ,4,66
566. ಜ್ವರಿತ, ಜ್ವರದಿಂದ ಪೀಡಿತವಾದುದು, ಆದಿ ಪರ್ವ,11,32
567. ಝಂಕಿಸಿ, ಗದರಿ, ವಿರಾಟ ಪರ್ವ,3,100
568. ಝಂಕಿಸು, ಬೆದರಿಸು, ಭೀಷ್ಮ ಪರ್ವ,4,24
569. ಝಂಕೆ, ಅಬ್ಬರ, ಗದಾ ಪರ್ವ,9,19
570. ಝಗೆಯ, ಜ್ವಲಿಸುತ್ತಿರಲು, ಭೀಷ್ಮ ಪರ್ವ,4,41
571. ಝಗೆಯ, ಕವಚಗಳನ್ನು, ಭೀಷ್ಮ ಪರ್ವ,4,62
572. ಝಗೆಯ ಲಹರಿ, ಕಾಂತಿಯ ಅಲೆ, ಸಭಾ ಪರ್ವ,13,25
573. ಝಡಿತೆ, ತ್ವರೆ, ವಿರಾಟ ಪರ್ವ,3,1
574. ಝಡಿವ, ಹೊಳೆವ, ಭೀಷ್ಮ ಪರ್ವ,4,95
575. ಝಲ್ಲರಿ, ಸತ್ತಿಗೆ, ಭೀಷ್ಮ ಪರ್ವ,3,23
576. ಝಲ್ಲರಿ, ಛತ್ರಿಯ ಕುಚು, ಕರ್ಣ ಪರ್ವ,11,35
577. ಝಲ್ಲರಿ, ಗೊಂಡೆಯ, ಉದ್ಯೋಗ ಪರ್ವ,11,18
578. ಝಲ್ಲರಿ, ತಾಳ, ವಿರಾಟ ಪರ್ವ,6,59
579. ಝಲ್ಲರಿ, ತೋರಣ, ಶಲ್ಯ ಪರ್ವ,2,26
580. ಝಲ್ಲರಿ, ಚವ, ವಿರಾಟ ಪರ್ವ,4,30
581. ಝಲ್ಲಿ, ಜಾಲರಿ, ಶಲ್ಯ ಪರ್ವ,2,26
582. ಝಲ್ಲಿ, ಗೊಂಡೆ, ಭೀಷ್ಮ ಪರ್ವ,3,17
583. ಝಷ, ಮೀನು, ಅರಣ್ಯ ಪರ್ವ,7,66
584. ಝಳ, ಬೇಗೆ, ವಿರಾಟ ಪರ್ವ,2,53
585. ಝಳ, ಬಿಸಿಯಗಾಳಿ, ಗದಾ ಪರ್ವ,7,14
586. ಝಳ, ಉರಿ, ಭೀಷ್ಮ ಪರ್ವ,3,11
587. ಝಳ, ಕೋಪದ ಬಿಸಿ, ಗದಾ ಪರ್ವ,11,66
588. ಝಳಕದ, ಪ್ರವಾಹದಂತೆ ಸಾಗುವ, ಭೀಷ್ಮ ಪರ್ವ,3,17
589. ಝಳದ ಹೊಯ್ಲು, ಶಾಖ ಪ್ರವಾಹ, ಭೀಷ್ಮ ಪರ್ವ,6,33
590. ಝಳಪ, ಬೀಸುವಿಕೆ., ಗದಾ ಪರ್ವ,7,35
591. ಝಳಪಿಸೆ, ಕಂಗೊಳಿಸಲು, ಭೀಷ್ಮ ಪರ್ವ,2,8
592. ಝಾಡಿ, ಪ್ರಖರತೆ, ದ್ರೋಣ ಪರ್ವ,15,29
593. ಝಾಡಿ, ಆಧಿಕ್ಯ, ಸಭಾ ಪರ್ವ,11,36
594. ಝಾಡಿ, ಝುಡಿತೆ, ಗದಾ ಪರ್ವ,6,26
595. ಝಾಡಿ, ಗಾಢತೆ, ದ್ರೋಣ ಪರ್ವ,17,12
596. ಝಾಡಿ, ದಟ್ಟ, ಕರ್ಣ ಪರ್ವ,24,35
597. ಝಾಡಿ, ದಟ್ಟವಾದ, ಭೀಷ್ಮ ಪರ್ವ,3,18
598. ಝಾಡಿಸಿ, ನಿಂದಿಸಿ , ಗದಾ ಪರ್ವ,4,3
599. ಝಾಡಿಸಿದ, ಒದ್ದುಬಿಟ್ಟ, ಸಭಾ ಪರ್ವ,13,63
600. ಝಾಡಿಸು, ಒದೆ, ಗದಾ ಪರ್ವ,6,23
601. ಝಾಡಿಸುವ, ಝಳಪಿಸುವ, ಭೀಷ್ಮ ಪರ್ವ,8,13
602. ಝೂಡಿಸಿ, ಕೊಡಹಿ, ಆದಿ ಪರ್ವ,14,7
603. ಝೂಡಿಸಿ, ದಬಾಯಿಸಿ, ಆದಿ ಪರ್ವ,14,24
604. ಝೇವಣಿಗೆಗೊಳ್É, ನುಂಗಿ ನಾಶ ಮಾಡು, ಸಭಾ ಪರ್ವ,9,15,
605. ಝೊಂಪಿಸು, ಬೆಚ್ಚಿಬೀಳು. ಒಗ್ಗು, ಕರ್ಣ ಪರ್ವ,6,32
606. ಝೊಂಪಿಸು, ಬೆದರು, ಗದಾ ಪರ್ವ,3,9
607. ಝೊಂಪಿಸು, ನಡುಗು, ಶಲ್ಯ ಪರ್ವ,2,60
608. ಝೊಂಬಿಸಲಿ, ಸೆಳೆಯಲಿ, ಗದಾ ಪರ್ವ,11,50
609. ಝೊಮ್ಮ, ಜೊಂಪು, ಆದಿ ಪರ್ವ,16,62
610. ಝೊಮ್ಮಿನಲಿ, ಮಬ್ಬಿನಲ್ಲಿ, ಗದಾ ಪರ್ವ,11,66
611. ಝೊಮ್ಮು, ಎಚ್ಚರತಪ್ಪು , ಗದಾ ಪರ್ವ,7,30
612. ಝೋಂಪಿಸಿ, ರಭಸದಿಂದ, ಸಭಾ ಪರ್ವ,15,1
613. ಝೋಂಪಿಸಿದನು, ನಡುಗಿಸಿದ, ಸಭಾ ಪರ್ವ,3,35
614. ಝೋಂಪಿಸು, ಬೆಚ್ಚಿಸಿ, ಕರ್ಣ ಪರ್ವ,14,29
615. ಝೋಂಪಿಸು, ನಿವಾರಿಸು, ಆದಿ ಪರ್ವ,12,15
616. ಝೋಂಪಿಸು, ಎಚ್ಚರ ತಪ್ಪಿಸು, ಆದಿ ಪರ್ವ,14,22
617. ಝೋಂಪಿಸು, ಗಾಬರಿಯಾಗು , ಗದಾ ಪರ್ವ,6,31
618. ಝೋಂಪಿಸು, ತುಯ್ದಾಡು, ಸಭಾ ಪರ್ವ,2,46
619. ಝೋಂಪು, ನಿದ್ರೆ, ಆದಿ ಪರ್ವ,9,5
620. ಝೋಂಪು, ಆವರಿಸುವಿಕೆ, ಆದಿ ಪರ್ವ,5,16
621. ಝೋಮಿಡೆ, ಮರಗಟ್ಟಲು, ವಿರಾಟ ಪರ್ವ,8,21
[೧][೨][೩]

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ