ವಿಷಯಕ್ಕೆ ಹೋಗು

ಗದುಗಿನ ಭಾರತ ಪದಕೋಶ -ದ, ಧ,

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

1. ದಂಡ ಧಾರನಗೆಲಿದು, ದಂಡಧಾರನನ್ನು ಗೆದ್ದು, ಸಭಾ ಪರ್ವ,4,7
2. ದಂಡಧರ, ಯಮ. (ಕಾಲದಂಡವನ್ನು ಹಿಡಿದಿರುವವನು) ಚಂಡಕರ, ಗದಾ ಪರ್ವ,10,3
3. ದಂಡನಾದ, ಗುರು ಹಿರಿಯ, ಉದ್ಯೋಗ ಪರ್ವ,4,26
4. ದಂಡವಲಗೆ, ಒಂದು ಬಗೆ ಗುರಾಣಿ, ಭೀಷ್ಮ ಪರ್ವ,4,35
5. ದಂಡಹೀನ, ಅಹಿಂಸಾಪರ, ದ್ರೋಣ ಪರ್ವ,16,27
6. ದಂಡಿ, ಸಾಮಥ್ರ್ಯ, ಶಲ್ಯ ಪರ್ವ,2,50,
7. ದಂಡಿ, ಸಾಟಿ, ಸಭಾ ಪರ್ವ,2,84
8. ದಂಡಿ, ವರಸೆ ( ಚಮತ್ಕಾರಿಕ ವರ್ತನೆ.), ಅರಣ್ಯ ಪರ್ವ,6,47
9. ದಂಡಿ, ವೈಪರೀತ್ಯ, ಗದಾ ಪರ್ವ,8,22
10. ದಂಡಿಗಾರ, ಸಮಾನವಾದವನು, ಅರಣ್ಯ ಪರ್ವ,1,33
11. ದಂಡಿಗೆ, ಪಲ್ಲಕ್ಕಿ , ಗದಾ ಪರ್ವ,4,11
12. ದಂಡಿಗೆ, ಪಲ್ಲಕ್ಕಿ, ಗದಾ ಪರ್ವ,4,20
13. ದಂಡಿಯಚರರು, ದಂಡಧಾರಿ ಸೇವಕರು, ಆದಿ ಪರ್ವ,2,29
14. ದಂಡಿಸು, ಶಿಕ್ಷಿಸು, ಸಭಾ ಪರ್ವ,1,30
15. ದಂಡೆ, ಸಾಮು, ದ್ರೋಣ ಪರ್ವ,12,17
16. ದಂಡೆ, ಮಲ್ಲಯುದ್ಧ ಮೊದಲಾದವುಗಳಲ್ಲಿ ಬಳಸುವ ಒಂದು ಪಟ್ಟು (ಇಲ್ಲಿ ಶಿವನು ಬಿಲ್ಲಿನ ಹೊಡೆತದಿಂದ ತಪ್ಪಿಸಿಕೊಂಡ ರೀತಿ., ಅರಣ್ಯ ಪರ್ವ,6,19
17. ದಂಡೆ, ಮಂಡಿಯೂರಿ ಕೂರುವುದು, ಗದಾ ಪರ್ವ,7,18
18. ದಂಡೆ, ವರಸೆ, ಭೀಷ್ಮ ಪರ್ವ,4,24
19. ದಂಡೆ, ಮಾಲೆ, ಆದಿ ಪರ್ವ,15,35
20. ದಂಡೆ, ಮೊಣಕಾಲೂರಿದ ಸ್ಥಿತಿ, ಕರ್ಣ ಪರ್ವ,19,44
21. ದಂಡೆ, ಯುದ್ಧದ ಪಟ್ಟು, ದ್ರೋಣ ಪರ್ವ,13,12
22. ದಂತದಂಶಿತ, ಹಲ್ಲುಗಳಿಂದ ಕಚ್ಚಲ್ಪಟ್ಟ, ಗದಾ ಪರ್ವ,9,43
23. ದಂತನಿಪೀಡಿತಾಧರ, ಹಲ್ಲಿನಿಂದ ಕಚ್ಚಲ್ಪಟ್ಟ ತುಟ್ಟಿಗಳು., ಗದಾ ಪರ್ವ,5,37
24. ದಂತಪಂಕ್ತಿ, ಹಲ್ಲಿನಸಾಲು, ಭೀಷ್ಮ ಪರ್ವ,3,77
25. ದಂತಿ, ದಂತವುಳ್ಳದ್ದು ಆನೆ, ಗದಾ ಪರ್ವ,12,8
26. ದಂತಿಘಟೆ, ಆನೆಯ ಸೈನ್ಯ, ವಿರಾಟ ಪರ್ವ,4,48
27. ದಂತಿಘಟೆ, ಆನೆಗಳ ಗುಂಪು, ಭೀಷ್ಮ ಪರ್ವ,6,2
28. ದಂತಿವ್ರಾತ, ಆನೆಸೇನೆ, ಭೀಷ್ಮ ಪರ್ವ,4,81
29. ದಂದುಗ, ವ್ಯಥೆ/ತೊಂದರೆ, ಉದ್ಯೋಗ ಪರ್ವ,3,101
30. ದಂದುಗಬಡು, ಗೊಂದಲಕ್ಕೀಡಾಗು, ಉದ್ಯೋಗ ಪರ್ವ,4,16
31. ದಂಪತಿವಕ್ಕಿ, ಚಕ್ರವಾಕ ಪಕ್ಷಿ, ಆದಿ ಪರ್ವ,5,9
32. ದಂಶಕ, ಕಚ್ಚಿ ತಿನ್ನುವ ಪದಾರ್ಥ, ಆದಿ ಪರ್ವ,10,17
33. ದಂಷ್ಟ್ರಾಂತರ, ಕೋರೆ ಹಲ್ಲುಗಳ ಮಧ್ಯೆ, ಅರಣ್ಯ ಪರ್ವ,13,43
34. ದಕ್ಕಡ, ಧೈರ್ಯ, ಕರ್ಣ ಪರ್ವ,19,49
35. ದಕ್ಕಡತನ, ಅತಿ ಸಾಹಸ, ಅರಣ್ಯ ಪರ್ವ,17,5
36. ದಕ್ಕಡರು, ಗಟ್ಟಿಗರು, ದ್ರೋಣ ಪರ್ವ,16,35
37. ದಕ್ಷಿಣ, ಬಲ, ಆದಿ ಪರ್ವ,18,29
38. ದಕ್ಷಿಣಕರ, ಬಲಗೈ, ಉದ್ಯೋಗ ಪರ್ವ,4,108
39. ದಕ್ಷಿಣಾಕ್ಷಿ, ಬಲಗಣ್ಣು, ಸಭಾ ಪರ್ವ,13,42
40. ದಟ್ಟಯಿಸು, ಒತ್ತಾಗಿಸೇರು, ಗದಾ ಪರ್ವ,8,22
41. ದಡಿ, ದಂಡ, ಕರ್ಣ ಪರ್ವ,17,44
42. ದಡಿಗ, ಬಲಶಾಲಿ, ದ್ರೋಣ ಪರ್ವ,15,44
43. ದಡಿಯ ಕೈಯವ, ದೊಣ್ಣೆಕಾರ, ಭೀಷ್ಮ ಪರ್ವ,4,39
44. ದಡಿವಲೆ, ದಡಿಗಳನ್ನುಳ್ಳ ಬಲೆ, ಆದಿ ಪರ್ವ,14,18
45. ದÀಡ್ಡಿ, ತೆರೆ, ಕರ್ಣ ಪರ್ವ,1,22
46. ದಡ್ಡಿ, ಮರೆ, ಕರ್ಣ ಪರ್ವ,4,13
47. ದಣವಟ್ಟೆ, ?, ಸಭಾ ಪರ್ವ,2,98
48. ದಣಿದು, ಆಯಾಸ ಹೊಂದಿ, ದ್ರೋಣ ಪರ್ವ,3,79
49. ದಣಿಬ, ಮಡಿಬಟ್ಟೆ, ವಿರಾಟ ಪರ್ವ,7,12
50. ದಣಿಸು, ತೃಪ್ತಿಗೊಂಡು, ದ್ರೋಣ ಪರ್ವ,1,16
51. ದನುಜರಾಯ, ರಾಕ್ಷಸರುಗಳು, ವಿರಾಟ ಪರ್ವ,10,49
52. ದನುಜರಿಪು, ರಾಕ್ಷಸರ ಶತ್ರು, ಆದಿ ಪರ್ವ,17,16
53. ದನುಜಾಂತಕ, ರಾಕ್ಷಸಸಂಹಾರಿ, ಭೀಷ್ಮ ಪರ್ವ,3,73
54. ದನುಜಾಳಿ (ದನುಜ+ಅಳಿ), ರಾಕ್ಷಸ ಸಮೂಹ, ವಿರಾಟ ಪರ್ವ,1,11
55. ದಯಾಂಬುಧಿ, ದಯಾ ಸಮುದ್ರ, ವಿರಾಟ ಪರ್ವ,3,74
56. ದರಚೀಟಿ, ರಹದಾರಿ ಪತ್ರ, ಗದಾ ಪರ್ವ,7,12
57. ದರಧುರ, ತೀವ್ರತೆ, ಆದಿ ಪರ್ವ,7,7
58. ದರಹಸಿತ, ಮುಗುಳು ನಗೆಯ, ಉದ್ಯೋಗ ಪರ್ವ,7,24
59. ದರಿ, ಗುಹೆ, ದ್ರೋಣ ಪರ್ವ,16,41,
60. ದರಿದ್ರರನು, ಬಡವರನ್ನು, ಸಭಾ ಪರ್ವ,1,30
61. ದರುಶನ, ಧರ್ಮ ತತ್ವ, ಭೀಷ್ಮ ಪರ್ವ,3,50
62. ದರ್ಪ, ಸೊಕ್ಕು, ಆದಿ ಪರ್ವ,11,32
63. ದರ್ಪ, ಅಹಂಕಾರ, ಗದಾ ಪರ್ವ,13,19
64. ದರ್ಪಕಾಹಿತ, ಮನ್ಮಥನ ಶತ್ರು, ಆದಿ ಪರ್ವ,2,7
65. ದರ್ಪದನುವು, ದರ್ಪದ ಅನುವು (ಪರಾಕ್ರಮದ ರೀತಿ), ವಿರಾಟ ಪರ್ವ,10,65
66. ದರ್ಭಾಂಕುರ ಶಯನ, ಹುಲ್ಲಿನ ಹಾಸಿಗೆ, ದ್ರೋಣ ಪರ್ವ,9,7
67. ದರ್ಭಾಸ್ತರಣ, ದರ್ಭೆಯ ಹಾಸು, ಆದಿ ಪರ್ವ,4,28
68. ದರ್ಭೆ, ಹೋಮ ಹವನಾದಿಗಳಲ್ಲಿ ಉಪಯೋಗಿಸುವ ಒಂದು ಬಗೆಯ ಪವಿತ್ರವಾದ ಹುಲ್ಲು, ಆದಿ ಪರ್ವ,15,17
69. ದರ್ವಿ, ಬಡಿಸುವ ಸೌಟು, ಸಭಾ ಪರ್ವ,16,44
70. ದರ್ವೀಕರ, ಅಡಿಗೆಯವನು, ಆದಿ ಪರ್ವ,8,51
71. ದಲ್ಲಣ, ಸೀಳು, ಆದಿ ಪರ್ವ,9,6
72. ದವದಾಹ, ಕಾಳ್ಗಿಚ್ಚಿನ ದಾಹ, ದ್ರೋಣ ಪರ್ವ,17,24
73. ದವಾಗ್ನಿ, ಕಾಳ್ಗಿಚ್ಚು, ಭೀಷ್ಮ ಪರ್ವ,3,11
74. ದಶಕ, ಹತ್ತು ಜನಗಳ ಗುಂಪು, ಕರ್ಣ ಪರ್ವ,19,10
75. ದಶನಾಮಾವಳಿ, ಹತ್ತು ಹೆಸರುಗಳು, ವಿರಾಟ ಪರ್ವ,6,45
76. ದಶನಾವಳಿ, ದಂತಪಂಕ್ತಿ, ಆದಿ ಪರ್ವ,13,12
77. ದಶಶಿರ, ರಾವಣ, ಉದ್ಯೋಗ ಪರ್ವ,3,133
78. ದಹನ, ಸುಡುವಿಕೆ, ಆದಿ ಪರ್ವ,20,0
79. ದಳ, ಸಹದೇವನ ಸೈನ್ಯ, ಸಭಾ ಪರ್ವ,5,6
80. ದಳ, ಅರ್ಜುನನ ಸೈನ್ಯ, ಸಭಾ ಪರ್ವ,3,61
81. ದಳ, ಹೂವಿನ ಎಸಳು, ಗದಾ ಪರ್ವ,5,2
82. ದಳ, ದಟ್ಟ, ಆದಿ ಪರ್ವ,20,50
83. ದಳದುಳ, ಬಲವಾದ ಸೂರೆ, ಆದಿ ಪರ್ವ,2,32
84. ದಳದುಳಕಾರ, ಕೊಳ್ಳೆ ಹೊಡೆಯುವವ, ಕರ್ಣ ಪರ್ವ,12,0
85. ದಳನಾಯಕರು, ಸೇನಾನಾಯಕರು, ಶಲ್ಯ ಪರ್ವ,1,14
86. ದಳವನ್ನು ನಾಶ ಮಾಡುವವನು ದಾವಾನಲ, ಕಾಳ್ಗಿಚ್ಚು, ವಿರಾಟ ಪರ್ವ,7,34
87. ದಳವಾಯ್, ಸೇನಾನಾಯಕ, ಶಲ್ಯ ಪರ್ವ,1,20
88. ದಳವುಳ, ಸೂರೆಹೋಗು, ದ್ರೋಣ ಪರ್ವ,6,31
89. ದಳವುಳ, ಕೊಳ್ಳೆ, ಸಭಾ ಪರ್ವ,1,45
90. ದಳವುಳಿಸಿದನು, ರಭಸದಿಂದ ಮುನ್ನುಗ್ಗಿದದು, ಭೀಷ್ಮ ಪರ್ವ,6,4
91. ದಳವುಳಿಸು, ಸೂರೆಗೊಳ್ಳು, ಗದಾ ಪರ್ವ,2,38
92. ದಳವುಳಿಸು, ಘೋರಾಕ್ರಮಣ ಮಾಡು, ಭೀಷ್ಮ ಪರ್ವ,4,4
93. ದಳವೇರು, ಹೆಚ್ಚುತ್ತಾ ಹೋಗುವುದು., ಗದಾ ಪರ್ವ,1,62
94. ದಳಿತ, ಬಿದ್ದ, ಉದ್ಯೋಗ ಪರ್ವ,7,27
95. ದಳ್ಳಿಸುತ, ಜ್ವಲಿಸುತ್ತ, ಭೀಷ್ಮ ಪರ್ವ,9,39
96. ದಳ್ಳುರಿ, ಮಹಾಬೆಂಕಿ, ದ್ರೋಣ ಪರ್ವ,3,54
97. ದಳ್ಳುರಿ, ಕೊಬ್ಬಿನ ಮೆರೆದಾಟ., ವಿರಾಟ ಪರ್ವ,7,4
98. ದಳ್ಳುರಿ, ದಟ್ಟ ಬೆಂಕಿ, ಭೀಷ್ಮ ಪರ್ವ,6,34
99. ದಾಂತಿ, ಆತ್ಮ ನಿಗ್ರಹ, ಅರಣ್ಯ ಪರ್ವ,5,19
100. ದಾಕ್ಷಿಣ್ಯ, ಹಂಗು, ಭೀಷ್ಮ ಪರ್ವ,6,44
101. ದಾಡಿಮ, ದಾಳಿಂಬೆ, ಸಭಾ ಪರ್ವ,16,64
102. ದಾತಾರ, ಒಡೆಯ(ಯಜಮಾನ), ಉದ್ಯೋಗ ಪರ್ವ,4,82
103. ದಾತಾರ (ದ್ಭ), ದಾತೃ (ಸಂ), ಆದಿ ಪರ್ವ,1,1,
104. ದಾನವ ಧ್ವಂಸಿ, ಕೃಷ್ಣ (ದಾನವರನ್ನು ನಾಶಮಾಡುವವನು), ಆದಿ ಪರ್ವ,17,11
105. ದಾನವ ರಾಯ ಕುಂಜರ, ದಾನವ ರಾಜ ಎಂಬ ಆನೆ, ವಿರಾಟ ಪರ್ವ,10,34
106. ದಾನವಧ್ವಂಸಿ, ಶ್ರೀಕೃಷ್ಣ, ಭೀಷ್ಮ ಪರ್ವ,7,23
107. ದಾನವ್ಯಯ, ದಾನನೀಡುವ ಮೂಲಕ ಖರ್ಚು ಮಾಡುವುದು, ಗದಾ ಪರ್ವ,6,10
108. ದಾಯ, ಸಮಯ, ಉದ್ಯೋಗ ಪರ್ವ,4,11
109. ದಾಯ, ಪಾಲು, ಶಲ್ಯ ಪರ್ವ,3,7
110. ದಾಯ, ಪಾಲಿಗೆ ಬಂದದ್ದು, ಗದಾ ಪರ್ವ,12,3
111. ದಾಯ, ಪಟ್ಟು+ರೀತಿ, ಉದ್ಯೋಗ ಪರ್ವ,3,97
112. ದಾಯ, ಪಣ, ಆದಿ ಪರ್ವ,15,0
113. ದಾಯ, ಪಗಡೆಯ ದಾಳದ ಗೆರೆ, ಗದಾ ಪರ್ವ,8,12
114. ದಾಯ, ಅನುಕೂಲವಾದ ಹೊತ್ತು, ಕರ್ಣ ಪರ್ವ,18,19
115. ದಾಯ, ಗರ, ಆದಿ ಪರ್ವ,13,45
116. ದಾಯ, ಗೆಲವು, ಗದಾ ಪರ್ವ,4,44, ,
117. ದಾಯ, ಚೈತನ್ಯ, ಗದಾ ಪರ್ವ,7,10
118. ದಾಯದೂಟ, ಪಂಕ್ತಿ ಭೋಜನ, ಕರ್ಣ ಪರ್ವ,13,2
119. ದಾಯಭಾಗ, ಪ್ರಾಚೀನ ಕರ್ಮದ ಫಲ ಭೋಗ, ಗದಾ ಪರ್ವ,12,3
120. ದಾಯಭಾಗ, ಬರಬೇಕಾದ ಪಾಲು, ಶಲ್ಯ ಪರ್ವ,3,30
121. ದಾಯಭಾಗ, ಆಸ್ತಿಯಭಾಗ, ಗದಾ ಪರ್ವ,8,20
122. ದಾಯಭಾಗಿಗಳು, ಆಸ್ತಿಹಂಚಿಕೊಳ್ಳುವವರು, ಆದಿ ಪರ್ವ,8,51
123. ದಾಯಾದಿ ವಿಷಯ, ಪಿತ್ರಾರ್ಜಿತವಾದ ಆಸ್ತಿಯ ವಿಷಯ, ಆದಿ ಪರ್ವ,8,63
124. ದಾಯಿಗ, ಭಾಗಸ್ಥ, ಶಲ್ಯ ಪರ್ವ,1,11
125. ದಾಯಿಗ, ಭಾಗಾದಿ, ಕರ್ಣ ಪರ್ವ,10,12
126. ದಾಯಿಗ, ಪುಣ್ಯಶಾಲಿ, ಆದಿ ಪರ್ವ,13,64
127. ದಾಯಿಗರು, ಆಸ್ತಿಯಲ್ಲಿ ಭಾಗ ಕೇಳುವವರು, ಗದಾ ಪರ್ವ,7,53
128. ದಾಯಿಗರು, ಹಕ್ಕುದಾರರು, ಶಲ್ಯ ಪರ್ವ,2,13
129. ದಾರಿದ್ರ್ಯ, ಬಡತನ, ಆದಿ ಪರ್ವ,6,25
130. ದಾವ, ಕಾಳ್ಗಿಚ್ಚು, ಆದಿ ಪರ್ವ,20,0
131. ದಾವಣಿ, ಗುಂಪು, ವಿರಾಟ ಪರ್ವ,10,47
132. ದಾವಾಗ್ನಿ, ಪ್ರಚಂಡ ಬೆಂಕಿ, ಗದಾ ಪರ್ವ,4,25
133. ದಾಸೋಹ, ನಾನು ದಾಸ ಎಂಬ ಭಾವನೆ, ಉದ್ಯೋಗ ಪರ್ವ,4,75
134. ದಿಂಡು, ಹೊರೆ, ಭೀಷ್ಮ ಪರ್ವ,9,13
135. ದಿಂಡುಗೆಡಹು, ಅಡ್ಡ ಬೀಳಿಸು, ಆದಿ ಪರ್ವ,7,67
136. ದಿಂಡುಗೆಡೆ, ಉರುಳಿ ಬೀಳು, ವಿರಾಟ ಪರ್ವ,4,49
137. ದಿಂಡುಗೆಡೆದವು, ಬುಡಸಹಿತ ಉರುಳುವುವು, ಭೀಷ್ಮ ಪರ್ವ,7,13
138. ದಿಂಡುಗೆಡೆದಳು, ಉರುಳಿದಳು, ಆದಿ ಪರ್ವ,5,19
139. ದಿಂಡುದರಿ, ಇಡೀ ಗುಂಪನ್ನು ಕೊಚ್ಚಿ ಹಾಕು, ವಿರಾಟ ಪರ್ವ,8,8
140. ದಿಂಡುದರಿ, ಕೊಚ್ಚುಹಾಕು, ಉದ್ಯೋಗ ಪರ್ವ,5,15
141. ದಿಂಡುರುಳಿಸಿದರು, ಕೆಳಕ್ಕೆ ಕೆಡವಿದರು, ಭೀಷ್ಮ ಪರ್ವ,4,66
142. ದಿಕ್ಕರಿ, ಸುಪ್ರತೀಕ ಗಜ, ದ್ರೋಣ ಪರ್ವ,3,13
143. ದಿಕ್ಕರಿ, ದಿಗ್ಗಜ, ದ್ರೋಣ ಪರ್ವ,3,11
144. ದಿಕ್ಕರಿ, ದಿಗ್ಗಜಗಳು, ಭೀಷ್ಮ ಪರ್ವ,4,4
145. ದಿಕ್ಕರಿ, ಅಷ್ಟದಿಗ್ಗಜಗಳು, ಭೀಷ್ಮ ಪರ್ವ,4,57
146. ದಿಗಂಗನೆ, ದಿಕ್ಕಿನ ಕನ್ಯೆ, ವಿರಾಟ ಪರ್ವ,2,50
147. ದಿಗಂಗನೆ, ದಿಗ್ದೇವತೆ, ಭೀಷ್ಮ ಪರ್ವ,4,7
148. ದಿಗಂತ, ದಿಕ್ಕಿನ ಅಂತ್ಯದ ಸ್ಥಳ , ಗದಾ ಪರ್ವ,4,45
149. ದಿಗಿಭ, ದಿಕ್ಕಿನ ಆನೆ, ವಿರಾಟ ಪರ್ವ,7,23
150. ದಿಗಿಭ, ದಿಗ್ಗಜ, ದ್ರೋಣ ಪರ್ವ,3,9
151. ದಿಗುಜಾತ, ಗಂಧರ್ವ ದೇವತೆಗಳು, ಕರ್ಣ ಪರ್ವ,22,8
152. ದಿಗುಜಾಲ, ದಿಕ್ಕುಗಳ ಸಮೂಹ, ಭೀಷ್ಮ ಪರ್ವ,3,24
153. ದಿಗುವಳಯ, ಎಲ್ಲ ದಿಕ್ಕುಗಳಲ್ಲಿಯೂ, ಗದಾ ಪರ್ವ,8,4
154. ದಿಗ್ಬಲಿಯಿಕ್ಕಿ, ಕೊಂದು, ಭೀಷ್ಮ ಪರ್ವ,1,22
155. ದಿಗ್‍ವಳಯ, ದಿಕ್ಕಿನ ಭಾಗ, ದ್ರೋಣ ಪರ್ವ,1,45
156. ದಿಟ್ಟ, ಧೀರ, ದ್ರೋಣ ಪರ್ವ,2,52
157. ದಿಟ್ಟೆ, ಧೈರ್ಯಸ್ಥೆ, ಉದ್ಯೋಗ ಪರ್ವ,4,80
158. ದಿನಪ, ಸೂರ್ಯ, ಭೀಷ್ಮ ಪರ್ವ,1,28, ,
159. ದಿನೇಶವಾರ, ಭಾನುವಾರ, ಗದಾ ಪರ್ವ,13,4
160. ದಿವ, ಸ್ವರ್ಗ., ಗದಾ ಪರ್ವ,4,36
161. ದಿವದಾಸೆಗಾರರು, ಹೋರಾಡಿ ಸತ್ತು ಸ್ವರ್ಗ ಸೇರುವವರು., ಭೀಷ್ಮ ಪರ್ವ,4,65
162. ದಿವಸ ಸ್ಥಿತಿ, ದಿನಗಳ ಲೆಕ್ಕ, ವಿರಾಟ ಪರ್ವ,4,22
163. ದಿವಿಜದಳ, ದೇವ ಸೇನೆ, ವಿರಾಟ ಪರ್ವ,2,45
164. ದಿವಿಜಪತಿಯೋಪಾದಿ, ದೇವೇಂದ್ರನಂತೆಯೇ, ಸಭಾ ಪರ್ವ,3,22
165. ದಿವಿಜರ ಗಣಿಕೆಯರು, ದೇವಲೋಕದ ಸುರಸುಂದರಿಯರು, ಭೀಷ್ಮ ಪರ್ವ,4,40
166. ದಿವಿಜರ ರಾಯ, ದೇವೇಂದ್ರ ದೇವರು (ಅಧಿಕಾರಿಗಳು ಮಹಾರಾಜನನ್ನು ಸಂಬೋಧಿಸುವ ರೀತಿ ಇದು) (ವಿರಾಟ) = ನೀವು, ವಿರಾಟ ಪರ್ವ,10,8
167. ದಿವಿಜರಾಯನ ತನಯ, ದೇವೇಂದ್ರ ಪುತ್ರನಾದ ಅರ್ಜುನ, ವಿರಾಟ ಪರ್ವ,1,34
168. ದಿವಿಜಶ್ರೀ, ಸ್ವರ್ಗಸಿರಿ, ಭೀಷ್ಮ ಪರ್ವ,4,25
169. ದಿವಿಜಾಂಗನಾ ಕಾಮುಕರ ಮಾಡಿ, ಕೊಂದು, ಭೀಷ್ಮ ಪರ್ವ,9,20
170. ದಿವ್ಯ, ಸುಂದರ., ಉದ್ಯೋಗ ಪರ್ವ,7,21
171. ದಿವ್ಯ, ದೇವಲೋಕದ, ಆದಿ ಪರ್ವ,11,38
172. ದಿಶಾಮಾತಂಗ, ಅಷ್ಟದಿಗ್ಗಜಗಳು, ಭೀಷ್ಮ ಪರ್ವ,1,50
173. ದಿಶಾವರ, ದೆಸೆ, ಆದಿ ಪರ್ವ,19,13
174. ದಿಶಾವಳಿ, ದಿಕ್ಕುಗಳು, ವಿರಾಟ ಪರ್ವ,7,3
175. ದೀಕ್ಷಾ ಕ್ರಮ, ದೀಕ್ಷಾ ನಿಯಮ, ಆದಿ ಪರ್ವ,8,85
176. ದೀಕ್ಷಿತ, ದೀಕ್ಷೆಯನ್ನು ಹೊಂದಿದವನು, ಉದ್ಯೋಗ ಪರ್ವ,10,19
177. ದೀನ, ದುಃಖಿತ, ಆದಿ ಪರ್ವ,10,10
178. ದೀಪನ ಚೂರ್ಣ, ಜೀರ್ಣ ಶಕ್ತಿ ಹೆಚ್ಚಿಸುವ, ದ್ರೋಣ ಪರ್ವ,10,52
179. ದೀಪ್ತ, ಪ್ರಕಾಶಗೊಂಡ, ದ್ರೋಣ ಪರ್ವ,3,79
180. ದೀಪ್ತಜ್ವಲನ, ಹೊಳೆಯುವ ಸೂರ್ಯ, ಆದಿ ಪರ್ವ,2,30
181. ದೀರ್ಘಮಯ ವೇಣಿಕರು, ದೀರ್ಘವಾದ ಜಡೆಗಳನ್ನು ಬಿಟ್ಟವರು, ಸಭಾ ಪರ್ವ,3,51
182. ದೀವಸಿ, ಧೈರ್ಯಸ್ಥ., ಗದಾ ಪರ್ವ,5,44
183. ದೀಹ, ಬೇಟೆಯ ಲಕ್ಷ್ಯವಾಗಿರಿಸಿದ ಮೃಗ, ಆದಿ ಪರ್ವ,8,53
184. ದೀಹ, ದೀಹಮೃಗ, ಅರಣ್ಯ ಪರ್ವ,13,16
185. ದುಕೂಲ, ಪಟ್ಟೆವಸ್ತ್ರ, ಆದಿ ಪರ್ವ,13,9
186. ದುಕೂಲ, ಬಟ್ಟಿ, ಉದ್ಯೋಗ ಪರ್ವ,3,57
187. ದುಕೂಲ, ರೇಷ್ಮೆ ವಸ್ತ್ರ, ಆದಿ ಪರ್ವ,12,11
188. ದುಕೂಲ, ರೇಷ್ಮೆಯ ವಸ್ತ್ರಗಳು., ಶಲ್ಯ ಪರ್ವ,3,40
189. ದುಗುಡ, ವ್ಯಸನ, ಗದಾ ಪರ್ವ,4,45
190. ದುಗುಡ, ದುಮ್ಮಾನ, ಆದಿ ಪರ್ವ,8,8
191. ದುಗುಡ, ದುಃಖ, ಗದಾ ಪರ್ವ,7,41
192. ದುಗುಳ, ದುಕೂಲ, ಗದಾ ಪರ್ವ,1,26
193. ದುಗ್ಧ, ಹಾಲು, ಆದಿ ಪರ್ವ,11,6
194. ದುಗ್ಧಾಬ್ದಿ, ಕೀರ ಸಮುದ್ರ, ಉದ್ಯೋಗ ಪರ್ವ,4,120
195. ದುಮ್ಮಾನ, ವ್ಯಸನ/ಚಿಂತೆ, ಉದ್ಯೋಗ ಪರ್ವ,11,2
196. ದುಮ್ಮಾನ, ದುಗುಡ , ಗದಾ ಪರ್ವ,1,62
197. ದುಮ್ಮಾನ, ದುಗುಡ, ವಿರಾಟ ಪರ್ವ,4,61
198. ದುರಂತರ, ದಟ್ಟವಾದ, ಕರ್ಣ ಪರ್ವ,7,39
199. ದುರಾಗ್ರಹ, ಹಠಮಾರಿತನ, ಆದಿ ಪರ್ವ,19,35
200. ದುರಾಗ್ರಹ, ಕೆಟ್ಟಹಠ, ಉದ್ಯೋಗ ಪರ್ವ,10,35
201. ದುರಾತ್ಮಕ, ದುಷ್ಟಸ್ವಭಾವದ, ಗದಾ ಪರ್ವ,13,6
202. ದುರಾತ್ಮಕರು, ಪಾಪಿಗಳು, ಗದಾ ಪರ್ವ,4,51
203. ದುರಾಸದ, ಜಯಿಸಲು ಅಸಾಧ್ಯವಾದ, ಆದಿ ಪರ್ವ,16,48
204. ದುರಾಹವ, ಯುದ್ಧದಲ್ಲಿ ಸೋಲಿಸಲು ಅಸಾಧ್ಯನಾದವನು, ಶಲ್ಯ ಪರ್ವ,2,55
205. ದುರಿತ, ಪಾತಕ, ವಿರಾಟ ಪರ್ವ,10,60
206. ದುರಿತ ಭಾಜನರಾಗಿ, ಪಾಪಕ್ಕೆ ಭಾಗಿಗಳಾಗಿ, ಸಭಾ ಪರ್ವ,1,81
207. ದುರಿತಭಾಜನ, ದುಷ್ಟಕಾರ್ಯನಿರತ, ಭೀಷ್ಮ ಪರ್ವ,3,29
208. ದುರುದುಂಬಿ, ನಿಚ, ಸಭಾ ಪರ್ವ,2,17
209. ದುರುದುಂಬಿತನ, ಒರಟುತನ, ವಿರಾಟ ಪರ್ವ,7,18
210. ದುರುದುರಿಪ, ಸುರಿಯುತ್ತಿರುವ, ಗದಾ ಪರ್ವ,6,33
211. ದುರುದುರಿಪ, ಚಿಮ್ಮುವ, ಕರ್ಣ ಪರ್ವ,8,8
212. ದುರುದುರಿಪ, ಉಕ್ಕಿಬರುವ, ಗದಾ ಪರ್ವ,5,32
213. ದುರುದುರಿಸು, ದಳದಳನೆ (ಸುರಿ), ವಿರಾಟ ಪರ್ವ,8,59
214. ದುರುಪದಿ, ದ್ರೌಪದಿ, ವಿರಾಟ ಪರ್ವ,9,21
215. ದುರುಪದಿ, ದ್ರೌಪದಿ ಶಬ್ದದ ಕನ್ನಡೀಕರಣ ದುರುಪದಿ, ವಿರಾಟ ಪರ್ವ,1,2
216. ದುರುಳ, ಕೆಟ್ಟವ, ಆದಿ ಪರ್ವ,6,10
217. ದುರುಳ, ಕೆಟ್ಟವನು, ಉದ್ಯೋಗ ಪರ್ವ,8,66
218. ದುರ್ಗವೀಧಿ, ಕೋಟೆಯೊಳಗಿನ ಬೀದಿ, ಗದಾ ಪರ್ವ,13,3
219. ದುರ್ಜನರು, ಕೆಟ್ಟಜನರು, ಸಭಾ ಪರ್ವ,1,27
220. ದುರ್ಜಯ, ಸೋಲು ಇಲ್ಲದ್ದು, ವಿರಾಟ ಪರ್ವ,8,42
221. ದುರ್ಧರ, ಸಹಿಸಲುಸಾಧ್ಯವಾದ, ಶಲ್ಯ ಪರ್ವ,2,48
222. ದುರ್ಧರುಷ, ಪ್ರತಿಭಟಿಸಲಾಗದ , ಭೀಷ್ಮ ಪರ್ವ,8,56
223. ದುರ್ನೀತಿಕಾರರು, ಕೆಟ್ಟನಡತೆಯವರು, ಆದಿ ಪರ್ವ,8,74
224. ದುರ್ಬೋಧೆ, ಕೆಟ್ಟ ಉಪದೇಶ, ಆದಿ ಪರ್ವ,8,54
225. ದುರ್ಭಿಕ್ಷ, ಬರ, ಉದ್ಯೋಗ ಪರ್ವ,3,42
226. ದುರ್ಮತಿಗಳು, ಕೆಟ್ಟಬುದ್ಧಿಯುಳ್ಳವರು, ಗದಾ ಪರ್ವ,11,56
227. ದುರ್ಮೇಳ, ಕೆಟ್ಟ ಕೂಟ, ಆದಿ ಪರ್ವ,8,43
228. ದುರ್ವಿದಗ್ಧ, ಅವಿವೇಕಿ/ಕೆಟ್ಟಪಂಡಿತ, ಉದ್ಯೋಗ ಪರ್ವ,4,24
229. ದುರ್ವಿದಗ್ಧರು, ಗರ್ವಾತಿಶಯರು, ಭೀಷ್ಮ ಪರ್ವ,9,33
230. ದುರ್ವೃತ್ತ, ಕೆಟ್ಟ ನಡತೆಯ, ಆದಿ ಪರ್ವ,7,43
231. ದುರ್ವೃತ್ತ, ಕೆಟ್ಟನಡತೆಯವನು ತಾರತಮ್ಯ, ಉದ್ಯೋಗ ಪರ್ವ,4,101
232. ದುರ್ವೃತ್ತರು, ದುರಾಚಾರರು, ಆದಿ ಪರ್ವ,8,34
233. ದುವ್ರ್ಯಸನ ಪ್ರಪಂಚ, ಕೆಟ್ಟ ಘಟನೆಗಳ ಸರಮಾಲೆ., ಗದಾ ಪರ್ವ,12,20
234. ದುವ್ರ್ರಣ, ದುರ್ವಾಸನೆಯ ಗಾಯ, ಭೀಷ್ಮ ಪರ್ವ,5,40
235. ದುವ್ವಾಳಿ, ಮೇಲೆ ಬೀಳುವುದು, ಶಲ್ಯ ಪರ್ವ,2,37
236. ದುವ್ವಾಳಿ, ಕುದುರೆಯ ಗತಿಯಲ್ಲಿನೊಂದು ಬಗೆ, ಆದಿ ಪರ್ವ,7,2
237. ದುವ್ವಾಳಿಯಲಿ, ನಾಗಾಲೋಟದಿಂದ., ದ್ರೋಣ ಪರ್ವ,2,32
238. ದುವ್ವಾಳಿಸಿತು, ಆಕ್ರಮಣ ಮಾಡಿತು, ಅರಣ್ಯ ಪರ್ವ,12,55
239. ದುವ್ವಾಳಿಸು, ಬೇಗ ಬೇಗ ಮುಂದುವರಿ, ಕರ್ಣ ಪರ್ವ,15,1
240. ದುವ್ವಾಳಿಸು, ಸಂಚರಿಸು, ವಿರಾಟ ಪರ್ವ,5,10
241. ದುವ್ವಾಳಿಸು, ನಾಗಾಲೋಟ, ಶಲ್ಯ ಪರ್ವ,3,62
242. ದುವ್ವಾಳಿಸು, ವೇಗವಾಗಿ ಓಡಿಸು, ದ್ರೋಣ ಪರ್ವ,2,59
243. ದುವ್ವಾಳಿಸು, ವೇಗವಾಗಿ ಹೋಗು, ಗದಾ ಪರ್ವ,1,44
244. ದುವ್ವಾಳಿಸು, ರಭಸವಾಗಿ ಓಡು, ಶಲ್ಯ ಪರ್ವ,3,73
245. ದುವ್ವಾಳಿಸು, ಓಡಿಸು, ಕರ್ಣ ಪರ್ವ,11,24
246. ದುವ್ವಾಳಿಸು, ಕುದುರೆಯನ್ನು ವೇಗವಾಗಿ ಓಡಿಸು, ಗದಾ ಪರ್ವ,1,63
247. ದುವ್ವಾಳಿಸು, ತೀವ್ರಗತಿಯಲ್ಲಿ ಚಲಿಸು, ಗದಾ ಪರ್ವ,1,6
248. ದುವ್ವಾಳಿಸು, ಧಾವಿಸು, ವಿರಾಟ ಪರ್ವ,8,74
249. ದುವ್ವಾಳಿಸು, ಧುಮುಕು, ಅರಣ್ಯ ಪರ್ವ,8,31
250. ದುಶ್ಚೇಷ್ಟೆ, ಕೆಟ್ಟ ನಡವಳಿಕೆ, ಗದಾ ಪರ್ವ,8,28
251. ದುಷ್ಕೀರ್ತಿ, ಕೆಟ್ಟಹೆಸರು , ಗದಾ ಪರ್ವ,11,59
252. ದುಷ್ಕøತ, ದುರದೃಷ್ಟ , ಗದಾ ಪರ್ವ,7,39,
253. ದುಷ್ಕøತಿ, ಪಾತಕ, ಆದಿ ಪರ್ವ,4,31
254. ದುಷ್ಪೂರ್ವ, ದುಷ್ ದುರ್ ಎಂಬ ಉಪಸರ್ಗದಿಂದ ಕೂಡಿದವರೇ ನನ್ನ ಮಕ್ಕಳೆಲ್ಲ (ದುರ್ಯೋಧನ, ಸಭಾ ಪರ್ವ,15,49, , , ದುಷ್ಕರ್ಣ ಇ),
255. ದುಸ್ತರಣ, ದಾಟಲು ಕಷ್ಟವಾದುದು, ಗದಾ ಪರ್ವ,2,10
256. ದುಸ್ಸಂಗ, ಕೆಟ್ಟ ಸಹವಾಸ, ಗದಾ ಪರ್ವ,8,1
257. ದುಸ್ಸಹ, ಸಹಿಸಲಸಾಧ್ಯವಾದ, ಆದಿ ಪರ್ವ,18,3
258. ದುಸ್ಸಾಧುಗಳು, ದುರ್ಜನರು, ಗದಾ ಪರ್ವ,11,5
259. ದುಹಾರ, ?, ಸಭಾ ಪರ್ವ,12,36
260. ದೂಟಿ, ನೆಗೆದು, ಗದಾ ಪರ್ವ,7,12
261. ದೂಟು, ಹಾರು, ಭೀಷ್ಮ ಪರ್ವ,4,26
262. ದೂಪಿಸಿದ, ಸುವಾಸನಾವಸ್ತುಗಳನ್ನು ಲೇಪಿಸಿದ್ದ, ಗದಾ ಪರ್ವ,1,26
263. ದೂರತರಪಥರ, ದೂರದ ದಾರಿಯನ್ನು ನಡೆದು ಬಂದವರ, ಗದಾ ಪರ್ವ,11,26
264. ದೂರು, ದೂಷಿಸು, ಆದಿ ಪರ್ವ,8,10
265. ದೂರು, ಚಾಡಿ ಹೇಳು, ಆದಿ ಪರ್ವ,13,41
266. ದೂರು, ದೋಷಾರೋಪಣೆ, ಭೀಷ್ಮ ಪರ್ವ,7,8
267. ದೂರ್ವಾ, ಗರಿಕೆ, ಸಭಾ ಪರ್ವ,1,7
268. ದೂರ್ವೆ, ಗರಿಕೆ, ಸಭಾ ಪರ್ವ,2,53
269. ದೂಷಕ, ನಿಂದಕ, ಉದ್ಯೋಗ ಪರ್ವ,4,65
270. ದೂಸಕ, ಪಾಪಿ, ಅರಣ್ಯ ಪರ್ವ,2,20
271. ದೂಸರ, ಮೆತ್ತಿಗೆ, ಉದ್ಯೋಗ ಪರ್ವ,4,111
272. ದೂಹತ್ತಿ, ಎರಡಲಗಿನ ಖಡ್ಗ, ಅರಣ್ಯ ಪರ್ವ,19,53
273. ದೂಹತ್ತಿ, ಎರಡು ಕೈಗಳಿಂದ ಹಿಡಿದು ಯುದ್ಧ ಮಾಡುವ ಕತ್ತಿ, ಗದಾ ಪರ್ವ,1,35
274. ದೃಗು ಯುಗಳ, (ದೃಗು, ವಿರಾಟ ಪರ್ವ,8,84
275. ದೃಗುಯುಗಳ, ಎರಡು ಕಣ್ಣುಗಳು, ದ್ರೋಣ ಪರ್ವ,12,1
276. ದೃಗುವಿಹೀನ, ಕುರುಡ, ಭೀಷ್ಮ ಪರ್ವ,1,54
277. ದೃಢತೆ, ಸ್ಥೈರ್ಯ. ಅಭಿಲಾಷೆ, ಉದ್ಯೋಗ ಪರ್ವ,8,23
278. ದೃಷ್ಟ, ನೋಟ, ಉದ್ಯೋಗ ಪರ್ವ,4,22
279. ದೃಷ್ಟನ್ನಷ್ಟ, ನೋಡಿದರೆ ಸಾಯುವುದು, ದ್ರೋಣ ಪರ್ವ,7,35
280. ದೃಷ್ಟಿವಾಳ, ಸೂಕ್ಷ್ಮ ನೋಟ, ದ್ರೋಣ ಪರ್ವ,5,6
281. ದೆಖ್ಖಾದೆಖ್ಖಿ, ಗೊಂದಲ, ದ್ರೋಣ ಪರ್ವ,5,62
282. ದೆಖ್ಖಾಳ, <ದೆಖ್ಖಾಣ, ವಿರಾಟ ಪರ್ವ,1,33
283. ದೆಖ್ಖಾಳ, ವಿಲಾಸ, ಆದಿ ಪರ್ವ,7,28
284. ದೆಖ್ಖಾಳ, ಆಧಿಕ್ಯ , ಅರಣ್ಯ ಪರ್ವ,11,10
285. ದೆಖ್ಖಾಳ, ಆಟೋಪ , ಗದಾ ಪರ್ವ,1,60
286. ದೆಖ್ಖಾಳ, ಆಡಂಬರ, ಶಲ್ಯ ಪರ್ವ,2,3
287. ದೆಖ್ಖಾಳ, ಕೋಲಾಹಲ, ಕರ್ಣ ಪರ್ವ,13,45
288. ದೆಖ್ಖಾಳ, ದೃಶ್ಯ, ಉದ್ಯೋಗ ಪರ್ವ,11,15
289. ದೆಖ್ಖಾಳಿಸಿದುದು, ಸಂಭ್ರಮಗೊಂಡವು, ಭೀಷ್ಮ ಪರ್ವ,3,
290. ದೆಸೆ, ಅನುಕೂಲಸ್ಥಿತಿ, ಆದಿ ಪರ್ವ,8,35
291. ದೆಸೆ, ಕಡೆ, ಭೀಷ್ಮ ಪರ್ವ,4,101
292. ದೆಸೆದೆಸೆಗೆ, ದಿಕ್ಕುದಿಕ್ಕಿಗೆ, ಗದಾ ಪರ್ವ,10,13
293. ದೇಗುವರು, ಏಗುವರು, ವಿರಾಟ ಪರ್ವ,2,29
294. ದೇವಕೀ ನಂದನನು, ದೇವಕಿಯ ಮಗ ಕೃಷ್ಣ, ಸಭಾ ಪರ್ವ,5,35
295. ದೇವದತ್ತ, ಅರ್ಜುನನ ಬಳಿ ಇದ್ದ ಶಂಖ, ವಿರಾಟ ಪರ್ವ,6,38
296. ದೇವದುಂದುಭಿರವ, ದೇವತೆಗಳ ಮಂಗಳ ವಾದ್ಯದ ಧ್ವನಿ, ಗದಾ ಪರ್ವ,13,15
297. ದೇವನಾಮದ ಜೋಡು, Err:509, ಭೀಷ್ಮ ಪರ್ವ,6,43
298. ದೇವಪ್ರಕರ, ದೇವಸಮೂಹ, ಗದಾ ಪರ್ವ,9,31
299. ದೇವರು, ಒಡೆಯರು, ಗದಾ ಪರ್ವ,10,5
300. ದೇವಸಂತತಿ, ದೇವತೆಗಳ ಸಮೂಹÀ, ಗದಾ ಪರ್ವ,13,0
301. ದೇವಾಳಿ, ದೇವಸಮೂಹ, ಆದಿ ಪರ್ವ,20,29
302. ದೇಶಕಾತಿ, ನಾಡಚೆಲುವೆ, ಸಭಾ ಪರ್ವ,13,30
303. ದೇಶವ್ರಾತ, ಪ್ರದೇಶ ಸಮೂಹ, ವಿರಾಟ ಪರ್ವ,4,12
304. ದೇಶಿಗ, ದಿಕ್ಕಿಲ್ಲದವ, ವಿರಾಟ ಪರ್ವ,3,96, ,
305. ದೇಶಿಗ, ಪರನಾಡಿನವನು , ವಿರಾಟ ಪರ್ವ,3,19, ,
306. ದೇಶಿಗರು, ಪರದೇಶಿಗಳು, ಆದಿ ಪರ್ವ,5,20
307. ದೇಸಿ, ಬೆಡಗು., ಉದ್ಯೋಗ ಪರ್ವ,8,46
308. ದೇಸಿಗರು, ದಿಕ್ಕಿಲ್ಲದವರು, ಗದಾ ಪರ್ವ,11,54
309. ದೇಸಿಗರು, ಪರದೇಶಿಗಳು (ಅನಾಥರು), ಉದ್ಯೋಗ ಪರ್ವ,5,7
310. ದೇಸಿಯಲ್ಲಿ, ಸುಂದರವಾಗಿ., ಗದಾ ಪರ್ವ,5,41
311. ದೇಹಾಂತರ, ಸಾವು, ಅರಣ್ಯ ಪರ್ವ,8,45
312. ದೇಹಿ, ದೇಹವನ್ನು ಹೊಂದಿರುವುದು, ದ್ರೋಣ ಪರ್ವ,7,27
313. ದೇಹಿ, ದೇಹವನ್ನುಳ್ಳ ಜೀವ, ವಿರಾಟ ಪರ್ವ,10,66
314. ದೈತ್ಯರ, ರಾಕ್ಷಸರನ್ನು, ಗದಾ ಪರ್ವ,13,13
315. ದೈತ್ಯರ ಪ್ರಸರ, ರಾಕ್ಷಸರ ಗುಂಪು, ಭೀಷ್ಮ ಪರ್ವ,6,32
316. ದೈತ್ಯರಿಪು, ರಾಕ್ಷಸರ ಶತ್ರು , ಗದಾ ಪರ್ವ,8,43
317. ದೈತ್ಯಾರಿ, ರಾಕ್ಷಸರ ಶತ್ರು, ಗದಾ ಪರ್ವ,5,8
318. ದೈನ್ಯ, ದೀನತನ, ಆದಿ ಪರ್ವ,11,20
319. ದೈನ್ಯಂಬಡವುದು, ದೀನತನವನ್ನು ಅನುಭವಿಸುವುದು, ಆದಿ ಪರ್ವ,6,12
320. ದೈನ್ಯದಲಿ, ದೀನತೆಯಿಂದ, ಸಭಾ ಪರ್ವ,5,15
321. ದೈವ ಹೊಡೆ, ದೆವ್ವ ಬಡಿ, ಆದಿ ಪರ್ವ,8,36
322. ದೈವಕೃತ, ವಿಧಿಯ ಆಟ., ಶಲ್ಯ ಪರ್ವ,1,18
323. ದೈವಕೃತಿ, ದೇವತೆಗಳು ಹೇಳಿರುವ ಕೆಲಸ, ಗದಾ ಪರ್ವ,7,44
324. ದೈವಜ್ಞರು, ಜೋಯಿಸರು, ಆದಿ ಪರ್ವ,11,12
325. ದೈವಯೋಗ, ವಿಧಿಬರಹ, ಗದಾ ಪರ್ವ,4,42
326. ದೈವವಿಹೀನರು, ದೈವಬಲವಿಲ್ಲದವರು., ಗದಾ ಪರ್ವ,3,4
327. ದೈವಾಭಿಪಾಕಕೆ, ದೈವವೇ ತಯಾರಿಸಿದ ಅಡುಗೆಗೆ, ಸಭಾ ಪರ್ವ,16,44
328. ದೈವಾಭಿಯೋಗ, ದೈವದ ಒತ್ತಾಯ, ಗದಾ ಪರ್ವ,9,12
329. ದೈವಾಯತ, ದೈವದ ಅಧೀನಕ್ಕೊಳಗಾದ., ಗದಾ ಪರ್ವ,6,18
330. ದೈವಿಕಶರಹತಿ, ದೇವಾನುದೇವತೆಗಳಿಂದ ಬಂದ ಬಾಣಗಳ ಹೊಡೆತ., ಗದಾ ಪರ್ವ,8,51
331. ದೊಂಡೆ, ಗುಪ್ಪೆ, ದ್ರೋಣ ಪರ್ವ,10,5
332. ದೊಠಾರ, ನಿಂದಕ, ಸಭಾ ಪರ್ವ,9,39
333. ದೊಠಾರ, ಗರ್ವಿತ, ದ್ರೋಣ ಪರ್ವ,9,42
334. ದೊಠಾರ, ಗಟ್ಟಿ ಮನಸ್ಸಿನವನು, ದ್ರೋಣ ಪರ್ವ,4,59
335. ದೊಠಾರ, ದೃಢಮನಸ್ಸಿನಿಂದ, ಸಭಾ ಪರ್ವ,2,21
336. ದೊಠಾರರು, ಬಲಿಷ್ಠರು, ಕರ್ಣ ಪರ್ವ,24,41
337. ದೊಠಾರಿಸಿ, ಸೊಕ್ಕಿ, ದ್ರೋಣ ಪರ್ವ,16,45
338. ದೊಠಾರಿಸಿ, ಹದ್ದುಮೀರಿ, ಭೀಷ್ಮ ಪರ್ವ,9,36
339. ದೊಠಾರಿಸು, ಬಲಿಷ್ಠನಾಗು, ಕರ್ಣ ಪರ್ವ,26,33
340. ದೊದ್ದೆ, ಸಾಮಾನ್ಯ, ಕರ್ಣ ಪರ್ವ,15,6
341. ದೊದ್ದೆ, ಬಲಹೀನ ಸೇನಾದಳ, ಭೀಷ್ಮ ಪರ್ವ,8,21
342. ದೊದ್ದೆ, ಗುಂಪು, ದ್ರೋಣ ಪರ್ವ,16,13
343. ದೊದ್ದೆ, ದೊಂಬಿ, ದ್ರೋಣ ಪರ್ವ,1,53
344. ದೊದ್ದೆಗರ, ಸಾಮಾನ್ಯ ಸೈನಿಕ, ದ್ರೋಣ ಪರ್ವ,5,76
345. ದೊದ್ದೆಗರು, ಗುಂಪಿನವರು, ದ್ರೋಣ ಪರ್ವ,17,29
346. ದೊರಕೊಳದು, ಉಂಟಾಗುವುದಿಲ್ಲ., ವಿರಾಟ ಪರ್ವ,3,49
347. ದೊರೆಯ, ಸಮಾನನಾದ, ಭೀಷ್ಮ ಪರ್ವ,1,34
348. ದೊಳ್ಳು, ಹೊಟ್ಟೆ, ವಿರಾಟ ಪರ್ವ,5,25
349. ದೋಷ, ಕಲುಷಿತ, ಆದಿ ಪರ್ವ,13,14
350. ದೋಷ, ಕುಂದು, ಆದಿ ಪರ್ವ,16,37
351. ದೋಷರಹಿತ, ದೋಷವಿಲ್ಲದ, ಗದಾ ಪರ್ವ,13,4
352. ದೌರ್ಜನ್ಯವಲ್ಲಿ, ದುಷ್ಟತನವೆಂಬ ಬಳ್ಳಿ, ಗದಾ ಪರ್ವ,3,17
353. ದ್ಯೂತ, ಜೂಜು, ಗದಾ ಪರ್ವ,5,12
354. ದ್ಯೂತಕೇಳಿ, ಜೂಜಾಟ ಅವನಿಪತಿ, ವಿರಾಟ ಪರ್ವ,9,11
355. ದ್ರವಿಣ, ದ್ರವ್ಯ, ಆದಿ ಪರ್ವ,16,16
356. ದ್ರವ್ಯಾದಿಗಳು, ಶ್ರೇಷ್ಠ ವಸ್ತುಗಳೇ ಮೊದಲಾದವುಗಳು, ಗದಾ ಪರ್ವ,13,18
357. ದ್ರಾವಕ, ಕರಗಿಸುವ, ಆದಿ ಪರ್ವ,12,21
358. ದ್ರಾವಕ, ಚತುರ, ಉದ್ಯೋಗ ಪರ್ವ,2,27
359. ದ್ರುಪದಕುಮಾರಿ, ದ್ರುಪದನ ಮಗಳು, ಗದಾ ಪರ್ವ,7,46
360. ದ್ರುಪದನಂದನ, ದ್ರುಪದರಾಜನ ಮಗ , ಗದಾ ಪರ್ವ,9,26
361. ದ್ರುಪದನಸೂನು, ದ್ರುಪದನಮಗ, ಗದಾ ಪರ್ವ,10,6
362. ದ್ರುಪದಾತ್ಮಜೆ, ದ್ರೌಪದಿ, ಗದಾ ಪರ್ವ,9,33
363. ದ್ರುಮ, ಗಿಡ, ಉದ್ಯೋಗ ಪರ್ವ,7,26
364. ದ್ರೋಣ, ದೊನ್ನೆ, ಆದಿ ಪರ್ವ,6,22
365. ದ್ರೋಣ (ಕೋಲು, ಬಾಣ), ಗದಾ ಪರ್ವ,4,1
366. ದ್ರೋಣಿ, ಕಣಿವೆ, ಸಭಾ ಪರ್ವ,3,29
367. ದ್ವಾರಪಾಲಕ, ?, ಸಭಾ ಪರ್ವ,5,27
368. ದ್ವಿಗುಣ, ಎರಡರಷ್ಟು, ವಿರಾಟ ಪರ್ವ,6,61
369. ದ್ವಿಜಪತಿ, ನಕ್ಷತ್ರಗಳ ಒಡೆಯ, ಸಭಾ ಪರ್ವ,9,22
370. ದ್ವಿಷತೆ, ಹಗೆತನ/ವೈರ, ಉದ್ಯೋಗ ಪರ್ವ,3,71
371. ದ್ವೈತ, ಎರಡು, ಉದ್ಯೋಗ ಪರ್ವ,4,66
372. ದ್ವೈತ, ದ್ವಂದ್ವ, ಉದ್ಯೋಗ ಪರ್ವ,4,75
373. ದ್ವೈಪಾಯನ, ವ್ಯಾಸ (ದ್ವೀಪದಲ್ಲಿ ಜನಿಸಿದ್ದರಿಂದ ಈ ಹೆಸರು), ಗದಾ ಪರ್ವ,11,0
374. ದ್ವೈಪಾಯನ, ವ್ಯಾಸ (ಯಮುನಾನದಿಯ ಒಂದು ದ್ವೀಪದಲ್ಲಿ ಜನಿಸಿದವನಾದುದರಿಂದ), ಆದಿ ಪರ್ವ,2,0
375. ಧಕ್ಕಡ, ದೃಢವೀರ, ಕರ್ಣ ಪರ್ವ,19,13
376. ಧಗಧಗಿಸು, ಪ್ರಜ್ವಲಿಸು, ಆದಿ ಪರ್ವ,20,27
377. ಧಗೆ ಉಂಟು ಮಾಡು (ಮಸೆ, ಉಜ್ಜು) ಹಮ್ಮೈಸು, ವಿರಾಟ ಪರ್ವ,2,6
378. ಧಟ್ಟಣೆ, ಹೊಡತೆ, ಗದಾ ಪರ್ವ,2,35
379. ಧಟ್ಟು, ದಪ್ಪವಾಗಿ, ಆದಿ ಪರ್ವ,10,2
380. ಧನಂಜಯ, ಅರ್ಜುನ , ಗದಾ ಪರ್ವ,2,21
381. ಧನಂಜಯ, ಅಗ್ನಿ , ಅರಣ್ಯ ಪರ್ವ,10,31
382. ಧನಂಜಯ , ಪಾರ್ಥ, ಆದಿ ಪರ್ವ,7,7, ,
383. ಧನಪತಿ, ಶ್ರೀಮಂತ, ಆದಿ ಪರ್ವ,6,39
384. ಧನುರ್ಧರಾಗ್ರಣಿ, ಬಿಲ್ವಿದ್ಯೆಯ ನಿಪುಣ., ದ್ರೋಣ ಪರ್ವ,5,52
385. ಧನುರ್ವೇದ, ಬಿಲ್ವಿದ್ಯೆಯೆಂಬ ವೇದ, ಶಲ್ಯ ಪರ್ವ,3,49
386. ಧನುವ ಮಾತಾಡಿಸು, ಲೀಲಾಜಾಲವಾಗಿ ಬಿಲ್ಲನ್ನು ಬಳಸು, ಭೀಷ್ಮ ಪರ್ವ,3,24
387. ಧನುಶ್ರುತಿ, ಧನುರ್ವೇದ, ಆದಿ ಪರ್ವ,6,23
388. ಧನುಷ್ಟಂಕಾರ, ಅರ್ಜುನನ ಗಾಂಡಿವದ ಶಬ್ದ, ವಿರಾಟ ಪರ್ವ,6,63
389. ಧನ್ಯ, ಪುಣ್ಯವಂತ, ಆದಿ ಪರ್ವ,16,59
390. ಧನ್ಯ, ಕೃತಾರ್ಥ, ಆದಿ ಪರ್ವ,2,5
391. ಧನ್ಯರು, ಪುಣ್ಯವಂತರು, ಉದ್ಯೋಗ ಪರ್ವ,4,93
392. ಧಯ, ಪಾನ ಮಾಡುತ್ತಿರುವ, ಅರಣ್ಯ ಪರ್ವ,4,39
393. ಧರಣಿ, ರಾಜ್ಯ, ಸಭಾ ಪರ್ವ,1,50
394. ಧರಣಿ ಆನಲಾಪುದೆ, ಭೂಮಿ ಹೊರಲು ಸಾಧ್ಯವೇ, ಸಭಾ ಪರ್ವ,4,14
395. ಧರಣಿಪತಿ, ಧರ್ಮಜ, ಭೀಷ್ಮ ಪರ್ವ,7,6
396. ಧರಣಿಪಾಲ, ದೊರೆ, ವಿರಾಟ ಪರ್ವ,8,93
397. ಧರಣೀಪಾಲವರ್ಗ, ರಾಜರ ಸಮೂಹ, ಗದಾ ಪರ್ವ,12,1
398. ಧರದುರ, ಭೀಕರವಾದ ಯುದ್ಧ, ದ್ರೋಣ ಪರ್ವ,14,10
399. ಧರಧುರ, ಭೀಕರ, ಗದಾ ಪರ್ವ,7,17, ,
400. ಧರಧುರ, ಯುದ್ಧಕ್ಕೆ ಸಡಗರ, ಸಭಾ ಪರ್ವ,10,27
401. ಧರಧುರ, ಅಬ್ಬರ, ಉದ್ಯೋಗ ಪರ್ವ,3,63
402. ಧರಧುರ, ಆಧಿಕ್ಯ , ಗದಾ ಪರ್ವ,5,7,
403. ಧರಧುರ, ಹೆಚ್ಚಳ, ಗದಾ ಪರ್ವ,1,60
404. ಧರಧುರದ, ಆವೇಶದಿಂದ ಕೂಡಿದ, ಸಭಾ ಪರ್ವ,15,38
405. ಧರಧುರದ, ಉದ್ದಾಮ, ವಿರಾಟ ಪರ್ವ,7,4
406. ಧರಾಂಗನೆ, ಭೂದೇವಿ, ಗದಾ ಪರ್ವ,8,2
407. ಧರಿತ್ರಿ, ಭೂಮಿ, ವಿರಾಟ ಪರ್ವ,10,23
408. ಧರಿತ್ರೀಪಾಲ, ದೊರೆ, ಭೀಷ್ಮ ಪರ್ವ,7,1
409. ಧರಿತ್ರೀಪಾಳ, ದೊರೆ, ಭೀಷ್ಮ ಪರ್ವ,3,
410. ಧರಿಸು, ಹೊರು, ಆದಿ ಪರ್ವ,8,3
411. ಧರ್ಮಕ್ಷಮೆ, ಧರ್ಮಕಾಪಾಡಿಕೊಳ್ಳುವುದಕ್ಕಾಗಿ ಸಹನೆ, ವಿರಾಟ ಪರ್ವ,3,33
412. ಧರ್ಮಗತಿ, ಧರ್ಮಮಾರ್ಗ , ಗದಾ ಪರ್ವ,7,44
413. ಧರ್ಮದ್ರುಮ, ಧರ್ಮವೆಂಬ ಮರ, ಗದಾ ಪರ್ವ,11,12
414. ಧರ್ಮವಿಕೃತಿ, ಅಧರ್ಮ, ಗದಾ ಪರ್ವ,7,43
415. ಧರ್ಮವಿಲಾಸ, ಧರ್ಮದ ನಡವಳಿಕೆಗಳು, ಗದಾ ಪರ್ವ,11,2
416. ಧರ್ಮವಿಸ್ತರ, ವಿಶಾಲವಾದ ಧರ್ಮ, ಗದಾ ಪರ್ವ,8,32
417. ಧರ್ಮಸ್ಥಳ, ಧರ್ಮವಿರುವ ಜಾಗ, ಗದಾ ಪರ್ವ,6,5
418. ಧರ್ಮೈಕರಕ್ಷಕರು, ಧರ್ಮವನ್ನು ರಕ್ಷಿಸುವವರು , ಗದಾ ಪರ್ವ,8,24, ,
419. ಧವ¼ಚ್ಛ್ಚತ್ರ, ಬೆಳ್ಗೊಡೆ, ಭೀಷ್ಮ ಪರ್ವ,8,4
420. ಧಾತು, ಸಪ್ತಧಾತುಗಳು, ಆದಿ ಪರ್ವ,13,14
421. ಧಾತು, ಸಪ್ತಧಾತುಗಳು (ಟಿಪ್ಪಣಿ ನೋಡಿ) ಕಾಹುಕಟ್ಟು, ಭೀಷ್ಮ ಪರ್ವ,1,4
422. ಧಾತು, ವಾತ, ಕರ್ಣ ಪರ್ವ,22,6, , , ರಕ್ತ , ಮಾಂಸ , ಮೇದ , ಆಸ್ತಿ , ಮಜ್ಜ , ವೀರ್ಯ ಮೊದಲಾದ ಲೋಹೇತರ ವಸ್ತು,
423. ಧಾತು, ಧೈರ್ಯ, ಗದಾ ಪರ್ವ,3,33
424. ಧಾತುಗುಂದು, ಶಕ್ತಿಹೀನನಾಗು, ಆದಿ ಪರ್ವ,14,10
425. ಧಾತುಗುಂದು, ಶಕ್ತಿಗುಂದು, ಗದಾ ಪರ್ವ,7,45
426. ಧಾರಾಸಾರ, ಒಂದೇ ಸಮನೆ ಸುರಿಯುವ ಮಳೆ, ಆದಿ ಪರ್ವ,20,33
427. ಧಾರಿಡುವ, ಧಾರೆಯಾಗಿ ಹರಿಯುವ, ಗದಾ ಪರ್ವ,7,49
428. ಧಾರಿಸು, ಧಾರೆಯಾಗಿಹರಿ, ಗದಾ ಪರ್ವ,7,52
429. ಧಾರುಣಿಯ ದೇವವ್ರಾತ, ಭೂಸುರ ಸಮೂಹ, ಆದಿ ಪರ್ವ,12,23
430. ಧಾರುಣೀಸುರ, ವಿಪ್ರ, ಆದಿ ಪರ್ವ,11,0
431. ಧಾರೆ, ಒಂದೇ ಸಮನಾಗಿ ಬಿಡು, ಆದಿ ಪರ್ವ,20,25
432. ಧಾರೆ, ಹರಿತವಾದ ಅಲಗು, ಗದಾ ಪರ್ವ,9,39
433. ಧಾರೆಯ, ಹರಿತವಾದ, ದ್ರೋಣ ಪರ್ವ,3,3
434. ಧಾಳಾಧೂಳಿ, ಆಕ್ರಮಣ., ಕರ್ಣ ಪರ್ವ,11,9
435. ಧಾಳಿ, ಮುತ್ತಿಗೆ, ಆದಿ ಪರ್ವ,7,64
436. ಧಾಳಿಯೆನಲು, ಧಾಳಿ ಎಂದೊಡನೆ, ಸಭಾ ಪರ್ವ,5,11
437. ಧಿಮ್ಮನೆ, ತಟಕ್ಕನೆ, ಉದ್ಯೋಗ ಪರ್ವ,8,17
438. ಧಿರು, ಮೆಚ್ಚಿಗೆಯನ್ನು ಸೂಚಿಸುವ ಮಾತು, ಕರ್ಣ ಪರ್ವ,22,13
439. ಧೀರ, ಧೈರ್ಯಶಾಲಿ, ಆದಿ ಪರ್ವ,13,22
440. ಧೀವರ, ಬೆಸ್ತ, ಆದಿ ಪರ್ವ,2,27
441. ಧೀವಶಿ, ಸಾಹಸಿ, ದ್ರೋಣ ಪರ್ವ,15,42
442. ಧೀವಸಿ, ಧೈರ್ಯವಾಗಿ, ಕರ್ಣ ಪರ್ವ,16,34
443. ಧುರ, ಭಾರ , ಆದಿ ಪರ್ವ,4,3
444. ಧುರ, ಭಾರ, ಗದಾ ಪರ್ವ,2,8
445. ಧುರ, ಯುದ್ಧ, ಗದಾ ಪರ್ವ,2,22
446. ಧುರ, ಯುದ್ಧ/ಕಾಳಗ, ಉದ್ಯೋಗ ಪರ್ವ,8,29
447. ಧುರ, ಹೊಣೆ, ಶಲ್ಯ ಪರ್ವ,1,19
448. ಧುರ ತೋರಹತ್ತರು, ಯುದ್ಧವೀರರು, ಅರಣ್ಯ ಪರ್ವ,19,43
449. ಧುರಚಮತ್ಕøತಿ, ರಣಕೌಶಲ್ಯ, ಭೀಷ್ಮ ಪರ್ವ,4,89
450. ಧುರದ, ಯುದ್ಧದ, ಗದಾ ಪರ್ವ,2,21
451. ಧುರದ ಗೆಲುವು, ಸಮರಜಯ, ಭೀಷ್ಮ ಪರ್ವ,5,23
452. ಧುರದ ಜಯಸಿರಿ, ಸಂಗ್ರಾಮ ಜಯಲಕ್ಷ್ಮಿ, ಭೀಷ್ಮ ಪರ್ವ,4,92
453. ಧುರಪಧ, ರಾಜಮಾರ್ಗ, ಗದಾ ಪರ್ವ,4,44
454. ಧುರಭರ, ಉಕ್ಕುತ್ತಿರುವ ಉದ್ದಾಮವಾದ , ವಿರಾಟ ಪರ್ವ,6,21
455. ಧುರಭರಕೆ, ನಿರ್ವಹಣೆಯ ಭಾರಹೊರುವಿಕೆ, ಭೀಷ್ಮ ಪರ್ವ,9,31
456. ಧುರವಿಶಾರದ, ರಣಕಲಿ, ಭೀಷ್ಮ ಪರ್ವ,5,25
457. ಧೂತ, ನಿವಾರಿಸಲ್ಪÀಟ್ಟ, ಆದಿ ಪರ್ವ,20,60
458. ಧೂತ, ಒಗೆದ, ಆದಿ ಪರ್ವ,18,13
459. ಧೂಪಿಸು, ಸಂತಪ್ತವಾಗು, ಕರ್ಣ ಪರ್ವ,23,29
460. ಧೂಮ ದರುಶನ, ಹೊಗೆಹಾಕುವುದು (ಮಸಿ ಬಳಿಯುವುದು) ವೈಹಾಳಿ, ಭೀಷ್ಮ ಪರ್ವ,8,9
461. ಧೂಮಧ್ವಜನ, ಹೊಗೆಯಹಾರಾಟ, ಗದಾ ಪರ್ವ,8,50
462. ಧೂರ್ಜಟಿ, ಭಾರಿಯಾದ ಜಡೆಯುಳ್ಳವ, ಆದಿ ಪರ್ವ,16,48
463. ಧೂಸರ, ದೂಳಿನ ಬಣ್ಣ, ಆದಿ ಪರ್ವ,20,13
464. ಧೂಳಿ ಕುಡಿದುದು ಬೆಮರನಾ, ಅವರ ಶರೀರದಿಂದ ಸುರಿಯುತ್ತಿದ್ದ, ಸಭಾ ಪರ್ವ,2,100
465. ಧೂಳಿಗೋಟೆ, ಧ್ವಂಸವಾದ ಕೋಟೆ, ಆದಿ ಪರ್ವ,7,64
466. ಧೂಳೀಪಟಲಧೂಸರ, ಮೇಲೆದ್ದು ಹೊರಬಿದ್ದ ಧೂಳು, ಭೀಷ್ಮ ಪರ್ವ,3,3
467. ಧೃತಿ, ಧೈರ್ಯ, ಆದಿ ಪರ್ವ,13,45
468. ಧೃತಿಗೆಡೆದಂತೆ, ದಿಟ್ಟತನ ಕಳೆಯದಂತೆ, ಭೀಷ್ಮ ಪರ್ವ,4,22
469. ಧೇನು, ಹಸು, ವಿರಾಟ ಪರ್ವ,10,4
470. ಧೌತ, ಮಡಿ ಮಾಡಿದ, ಆದಿ ಪರ್ವ,10,27
471. ಧ್ರುವ, ಖಚಿತÀ, ದ್ರೋಣ ಪರ್ವ,7,33
472. ಧ್ವಜ, ಬಾವುಟ , ಗದಾ ಪರ್ವ,8,5
473. ಧ್ವಜದ ಹಲಗೆ, ರಥದ ಮೇಲೆ ಬಾವುಟವನ್ನು ಕಟ್ಟಿರುವ ಮರದ ಹಲಗೆ, ಗದಾ ಪರ್ವ,8,50

[][][]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ