ಗದುಗಿನ ಭಾರತ ಪದಕೋಶ -ಬ, ಭ

ವಿಕಿಸೋರ್ಸ್ದಿಂದ

,ಗದುಗಿನ ಭಾರತ ಪದಕೋಶ

ಬ,ಭ,[ಸಂಪಾದಿಸಿ]

  1. ಬಂಜೆವಾತು, ವ್ಯರ್ಥಾಲಾಪ, ವಿರಾಟ ಪರ್ವ,6,27
  2. ಬಂಡಿನ ರಹಣಿ, ಬಂಡತನದ ಹೊಂದಾಣಿಕೆ, ಸಭಾ ಪರ್ವ,12,50
  3. ಬಂಡಿಸಿ, ಬೈದು, ಶಲ್ಯ ಪರ್ವ,2,20
  4. ಬಂದಿ, ಲೂಟಿ, ಆದಿ ಪರ್ವ,18,17
  5. ಬಂದಿ, ಒಳಗಾಗುವುದು, ಭೀಷ್ಮ ಪರ್ವ,3,49
  6. ಬಂದಿ, ಕಟ್ಟು, ಉದ್ಯೋಗ ಪರ್ವ,3,83
  7. ಬಂದಿಗೆ, ಸೆರೆ, ಕರ್ಣ ಪರ್ವ,20,14
  8. ಬಂದುಗೆ, ಬಂದೂಕ ಪುಷ್ಪ, ಅರಣ್ಯ ಪರ್ವ,6,43
  9. ಬಂಧ, ಜೋಡಣೆ, ಆದಿ ಪರ್ವ,13,33
  10. ಬಂಧ, ಕಟ್ಟು, ಆದಿ ಪರ್ವ,17,18
  11. ಬಂಧದ, ಸಿಕ್ಕಿಕೊಂಡಿರುವ, ಗದಾ ಪರ್ವ,9,43
  12. ಬಂಧಿಕಾರ, ಸೆರೆಹಿಡಿಯುವ, ಆದಿ ಪರ್ವ,13,62
  13. ಬಂಧಿಸು, ಕಟ್ಟು, ಆದಿ ಪರ್ವ,10,39
  14. ಬಂಧು, ಮಿತ್ರ, ಆದಿ ಪರ್ವ,16,26
  15. ಬಂಧುಕೃತ್ಯ, ಬಾಂಧವ್ಯ ಬೆಳಸುವ ಕಾರ್ಯ, ಭೀಷ್ಮ ಪರ್ವ,3,14
  16. ಬಂಧುಕೃತ್ಯ, ಬಂಧು ಪ್ರೇಮ, ಭೀಷ್ಮ ಪರ್ವ,3,68
  17. ಬಂಧುರ, ಸುಂದರವಾದ ಗಟ್ಟಿಯಾದ, ಗದಾ ಪರ್ವ,5,39
  18. ಬಂಧುರ, ಮನೋಹರವಾದ, ಆದಿ ಪರ್ವ,17,14
  19. ಬಂಧುರ, ಒರಟಾದ, ಆದಿ ಪರ್ವ,12,6
  20. ಬಂಧುರ, ಚೆಂದ, ಆದಿ ಪರ್ವ,6,38
  21. ಬಂಧುವ್ರಾತ, ಬಂಧುಗಳ ಸಮೂಹ, ಗದಾ ಪರ್ವ,11,69
  22. ಬಂಧುಹನನ, ಬಂಧುಗಳ ಹತ್ಯೆ, ಭೀಷ್ಮ ಪರ್ವ,3,37
  23. ಬಂಬಲ್ ಕರುಳ, ಕೋಮಲ ಕರುಳುಗಳನ್ನು, ಭೀಷ್ಮ ಪರ್ವ,10,8
  24. ಬಂಬಲು, ತಿರುಳು, ಉದ್ಯೋಗ ಪರ್ವ,10,19
  25. ಬಂಬಲು ಕರುಳು, ಜೊಂಪೆಜೊಂಪೆಯಾಗಿ ಹೆಣೆದುಕೊಂಡಿರುವ ಕರುಳು ಖಂಡದಿಂಡೆಯ, ದ್ರೋಣ ಪರ್ವ,2,57
  26. ಬಕವಿಡಂಬನ, ಬಕ ಪಕ್ಷಿ ಎಂದರೆ ಕೊಕ್ಕರೆ ನಿಶ್ಚಲವಾಗಿ ಧ್ಯಾನ ಮುದ್ರೆಯಲ್ಲಿ ನಿಂತಿದ್ದರೂ, ಕರ್ಣ ಪರ್ವ,22,20
  27. ಬಕವೈರಿ, ಬಕಾಸುರ ಶತ್ರುವಾದ ಭೀಮ, ಗದಾ ಪರ್ವ,3,29
  28. ಬಕಾರಿ, ಬಕನೆಂಬ ರಾಕ್ಷಸನನ್ನು ಕೊಂದ ಭೀಮ (ವಿವರಗಳಿಗೆ ಆದಿಪರ್ವದ ಬಕವಧಾ ಪ್ರಸಂಗವನ್ನು ಗಮನಿಸಿ) ನಿದ್ರಾಭಾರವಿಹ್ವಲಕರಣ, ವಿರಾಟ ಪರ್ವ,3,38
  29. ಬಕುಳ, ನಾಗಕೇಸರ, ಆದಿ ಪರ್ವ,20,48
  30. ಬಕ್ಕುಡಿಯ ಬೇಳಂಬ, ದೀನಸ್ಥಿತಿ, ಸಭಾ ಪರ್ವ,15,59
  31. ಬಗರಗೆÉ, ಚಿಪ್ಪು, ಸಭಾ ಪರ್ವ,9,44
  32. ಬಗಿದು, ಚುಚ್ಚಿ, ದ್ರೋಣ ಪರ್ವ,3,13
  33. ಬಗೆಗೊಳ್, ಲಕ್ಷಿಸು, ವಿರಾಟ ಪರ್ವ,10,63
  34. ಬಗೆದೊಡೆ, ಇಚ್ಛಿಸಿದರೆ, ಭೀಷ್ಮ ಪರ್ವ,3,86
  35. ಬಚ್ಚತ, ಬಚ್ಚತವೆ, ದ್ರೋಣ ಪರ್ವ,12,21
  36. ಬಚ್ಚತಗೊಳ್ಳು, ತಾಳಿಕೊ, ಭೀಷ್ಮ ಪರ್ವ,6,6
  37. ಬಚ್ಚಿಸು, ? ಸೀದು, ಗದಾ ಪರ್ವ,9,18
  38. ಬಟ್ಟೆಯ, ದಾರಿಯ, ಸಭಾ ಪರ್ವ,1,74
  39. ಬಡಗಲವರದು, ಉತ್ತರ ಭಾಗ ಅವರದು ಅಂದರೆ ಕೌರವರದು, ವಿರಾಟ ಪರ್ವ,1,3
  40. ಬಡಗಲು, ಉತ್ತರ, ಸಭಾ ಪರ್ವ,14,39
  41. ಬದಗಿ, ವೇಶ್ಯೆ, ಸಭಾ ಪರ್ವ,15,14
  42. ಬಡಗು, ಉತ್ತರ, ವಿರಾಟ ಪರ್ವ,5,8
  43. ಬಡಬವಹ್ನಿ, ಸಾಗರಾಗ್ನಿ, ಭೀಷ್ಮ ಪರ್ವ,4,42
  44. ಬಡವ, ತೆಳು, ಆದಿ ಪರ್ವ,8,28
  45. ಬಡಿ ತುಷ್ಟಿಸು, ತೃಪ್ತಿಪಡು, ಶಲ್ಯ ಪರ್ವ,2,35
  46. ಬಡಿಹೋರಿ, ಬೀಜ ಒಡೆಸಿಕೊಂಡು ನಿವೀರ್ಯವಾದ ಹೋರಿ, ವಿರಾಟ ಪರ್ವ,3,61
  47. ಬಡಿಹೋರಿ, ಜೀತದ ಎತ್ತು, ಕರ್ಣ ಪರ್ವ,2,18
  48. ಬಡಿಹೋರಿ, ಗೂಳಿಯಂತೆ ಹೊಡೆಸಿಕೊಳ್ಳುವವ, ದ್ರೋಣ ಪರ್ವ,13,45
  49. ಬಣಗು, ಅಲ್ಪ, ಆದಿ ಪರ್ವ,19,33
  50. ಬಣಗು, ಅಯೋಗ್ಯ, ಸಭಾ ಪರ್ವ,3,8
  51. ಬಣಗು, ಕ್ಷುದ್ರ, ಗದಾ ಪರ್ವ,8,39
  52. ಬಣಗು, ಕೈಲಾಗದ., ಆದಿ ಪರ್ವ,15,17
  53. ಬಣಗು, ತಿಳಿಗೇಡಿ, ಕರ್ಣ ಪರ್ವ,2,21
  54. ಬಣಬೆ, ಮೆದೆ., ಅರಣ್ಯ ಪರ್ವ,2,32
  55. ಬಣ್ಣಿಸು, ವಿವರಿಸು, ಉದ್ಯೋಗ ಪರ್ವ,10,15
  56. ಬಣ್ಣಿಸು, ವರ್ಣಿಸು, ಆದಿ ಪರ್ವ,7,46
  57. ಬತ್ತಳಿಕೆ, ಬಾಣದ ಚೀಲ, ಭೀಷ್ಮ ಪರ್ವ,4,12
  58. ಬದರಾವಳೀ ಮಂದಿರ, ಬದರೀವೃಕ್ಷಗಳ ಸಮೂಹದಲ್ಲಿನ ತನ್ನ ಮನೆ , ಗದಾ ಪರ್ವ,3,7
  59. ಬದಿ, ಮಗ್ಗುಲು, ಆದಿ ಪರ್ವ,9,20
  60. ಬದ್ದರ, ಭದ್ರ, ವಿರಾಟ ಪರ್ವ,10,68
  61. ಬದ್ದರ, ಭದ್ರ(ಸಂ), ಶಲ್ಯ ಪರ್ವ,2,38
  62. ಬದ್ದರ, ಆಯುಧ ಅವುಚಿದವು, ದ್ರೋಣ ಪರ್ವ,2,35
  63. ಬದ್ದರದ ಬಂಡಿ, ಬಲವತ್ತರವಾದ ಆತ್ಮರಕ್ಷಣಾರ್ಥ ಆಯುಧಗಳ ಬಂಡಿ, ಭೀಷ್ಮ ಪರ್ವ,8,44
  64. ಬದ್ದುಗೆದಾರ, ಹೆಣೆಯದ ಅಂಚಿನದಾರ (ಸೆರಗಿನದಾರ), ಭೀಷ್ಮ ಪರ್ವ,4,34
  65. ಬದ್ಧ ವಿಘಾತಿ, ಖಚಿತವಾದ ಸಂಗತಿ. ತಪ್ಪಿಸಿಕೊಳ್ಳಲಾಗದ ಪೆಟ್ಟು, ವಿರಾಟ ಪರ್ವ,3,4
  66. ಬದ್ಧರ, ಭದ್ರವಾದ, ಗದಾ ಪರ್ವ,4,11
  67. ಬಧಿರ, ಕಿವುಡ, ಆದಿ ಪರ್ವ,12,21
  68. ಬಧಿರತ್ವ, ಕಿವುಡು, ಉದ್ಯೋಗ ಪರ್ವ,4,70
  69. ಬನದ ರಾಜಕುಮಾರ, ವನವಾಸ ಕಾಲದಲ್ಲಿ ಕಾಡಿನ ರಾಜಕುಮಾರ, ವಿರಾಟ ಪರ್ವ,8,23
  70. ಬನ್ನಣೆಯ ಮಾತು, ಅಲಂಕಾರದ ಮಾತು, ವಿರಾಟ ಪರ್ವ,4,18
  71. ಬಯಲ ವಿಡಂಬ, ಒಣಹೆಮ್ಮೆ, ಭೀಷ್ಮ ಪರ್ವ,1,59
  72. ಬಯಲಡೊಂಬು, ಬರಿಯ ಆಡಂಬರ, ವಿರಾಟ ಪರ್ವ,9,28
  73. ಬಯಲಾಡಂಬರ, ವ್ಯರ್ಥವಾದ ಪ್ರದರ್ಶನ, ಕರ್ಣ ಪರ್ವ,22,32
  74. ಬಯಲಾಯ್ತು, ಶೂನ್ಯವಾಯಿತು, ಭೀಷ್ಮ ಪರ್ವ,8,61
  75. ಬಯಲಿನ ಆಡಂಬರ, ಬೂಟಾಟಿಕೆ (ಬಾಹ್ಯ ನಾಟಕ), ಭೀಷ್ಮ ಪರ್ವ,6,40
  76. ಬಯಲು, ಶೂನ್ಯ, ಉದ್ಯೋಗ ಪರ್ವ,4,38
  77. ಬಯಲು, ಮರಣ, ಆದಿ ಪರ್ವ,5,15
  78. ಬಯಲು, ವ್ಯರ್ಥ., ಉದ್ಯೋಗ ಪರ್ವ,4,55
  79. ಬಯಲು, ತೋರಿಕೆ, ಆದಿ ಪರ್ವ,14,7
  80. ಬಯಸಿಕೆ, ಬೆಸೆದೊಕೊಂಡಿರುವ, ಅರಣ್ಯ ಪರ್ವ,5,5
  81. ಬಯಸು, ಆಶಿಸು, ಆದಿ ಪರ್ವ,8,10
  82. ಬರತ, ಒಣಗಿದ, ವಿರಾಟ ಪರ್ವ,5,6
  83. ಬರತುದು, ಬತ್ತಿತು., ಶಲ್ಯ ಪರ್ವ,3,9
  84. ಬರಬರ, ಕ್ರಮೇಣ, ಉದ್ಯೋಗ ಪರ್ವ,9,56
  85. ಬರವ ಕೊಟ್ಟ, ಆಹ್ವಾನಿಸಿದ, ವಿರಾಟ ಪರ್ವ,10,3
  86. ಬರವಿ, ಬರತೆ, ಕರ್ಣ ಪರ್ವ,22,45
  87. ಬರವು, ಬರವಿಕೆ, ಆದಿ ಪರ್ವ,11,3
  88. ಬರಹ, ಹಣೆಬರಹ , ಗದಾ ಪರ್ವ,2,33, , , E0B6E5B6ECB6, , , , , , , , , ,
  89. ಬರಿ, ಸೊಂಟದ ಪ್ರದೇಶ, ಶಲ್ಯ ಪರ್ವ,3,44
  90. ಬರಿಕಡಗ, ಕುದುರೆಯ ಪಕ್ಕಗಳ ಸುತ್ತ ಹಾಕುವ ಚರ್ಮದ ಪಟ್ಟಿ, ಭೀಷ್ಮ ಪರ್ವ,4,51
  91. ಬರಿಕೈ, ಬರಿದು ಮಾಡು, ಉದ್ಯೋಗ ಪರ್ವ,9,73
  92. ಬರಿಕೈದು, ಸ್ತಬ್ಧರನ್ನಾಗಿ ಮಾಡಿ, ವಿರಾಟ ಪರ್ವ,3,102
  93. ಬರಿಕೈದು, ನಾಶಮಾಡಿ, ಆದಿ ಪರ್ವ,7,64
  94. ಬರಿದೇ, ವ್ಯರ್ಥವಾಗಿ, ಆದಿ ಪರ್ವ,8,57
  95. ಬರಿದೊರೆ, ಬ¾Âದೊರೆ , ವಿರಾಟ ಪರ್ವ,2,12,
  96. ಬರಿಸು, ಬಡಿಸು, ಗದಾ ಪರ್ವ,4,33
  97. ಬರೆದನು, ಹೇಳಿದನು, ಸಭಾ ಪರ್ವ,1,6
  98. ಬರೆಬರೆ, ಬರುತ್ತಿರಲು, ಗದಾ ಪರ್ವ,12,15
  99. ಬರೆಹರಿಗಾಳೆಗ, ಇದಕ್ಕೆ ತುರುಹರಗಾಳೆಗ ಎಂಬ ಪಾಠಾಂತರವಿದೆ (ವಿರಾಟಪರ್ವ, ವಿರಾಟ ಪರ್ವ,5,3
  100. ಬರ್ಹಿಮುಖ, ವಿಮುಖ, ಆದಿ ಪರ್ವ,8,37
  101. ಬರ್ಹಿರ್ಮುಖರು, ದೇವತೆಗಳು (ಅಗ್ನಿಯ ಮೂಲಕ ಹವಿಸ್ಸನ್ನು ಸೇವಿಸುವವರು), ಆದಿ ಪರ್ವ,20,17
  102. ಬಲನ, ಬಲರಾಮನ, ಗದಾ ಪರ್ವ,8,28
  103. ಬಲವಂಕ, ಬಲಬದಿ, ವಿರಾಟ ಪರ್ವ,6,60
  104. ಬಲವಂದು, ಪ್ರದಕ್ಷಿಣೆ ಮಾಡಿ, ವಿರಾಟ ಪರ್ವ,1,225
  105. ಬಲವನ, ಸೇನೆಯೆಂಬ ಕಾಡು, ಭೀಷ್ಮ ಪರ್ವ,9,23
  106. ಬಲವರು, ಪ್ರದಕ್ಷಿಣೆ ಬರು, ಅರಣ್ಯ ಪರ್ವ,6,44
  107. ಬಲವೆಂದೆರಗಿ, ಪ್ರದಕ್ಷಿಣೆ ಬಂದು ನಮಸ್ಕರಿಸಿ, ಸಭಾ ಪರ್ವ,3,15
  108. ಬಲವೊರಜೆ, (ಬಲ+ಪೊರಜೆ) ಬಲಭಾಗದಿಂದ ಕಟ್ಟಿದ ಹಗ್ಗ, ದ್ರೋಣ ಪರ್ವ,3,2
  109. ಬಲಹು, ಬಲವಾದುದು, ಗದಾ ಪರ್ವ,7,28
  110. ಬಲಹೊರಳಿ, ಬಲಶಾಲಿ ಸೇನಾ ಸಮೂಹ, ಭೀಷ್ಮ ಪರ್ವ,9,24
  111. ಬಲಾರಿ ಚಾಪ, ಕಾಮನ ಬಿಲ್ಲು, ಅರಣ್ಯ ಪರ್ವ,10,37
  112. ಬಲಿ, ದೃಢ, ಆದಿ ಪರ್ವ,9,23
  113. ಬಲಿದ, ಗಟ್ಟಿಗೊಂಡ, ಗದಾ ಪರ್ವ,10,2
  114. ಬಲಿದರು, ಬಲವಾಗಿ ನಿಂತರು, ದ್ರೋಣ ಪರ್ವ,2,66
  115. ಬಲಿದರು, ಬಲವಾಗಿ ಸಿದ್ಧರಾದರು., ಭೀಷ್ಮ ಪರ್ವ,6,1
  116. ಬಲಿದು, ಬಿಗಿ ಮಾಡಿ, ಗದಾ ಪರ್ವ,4,40
  117. ಬಲಿದು, ಒಗ್ಗೂಡಿಸಿ, ಗದಾ ಪರ್ವ,4,3
  118. ಬಲಿದುದು, ಬಲವಾಯಿತು., ಭೀಷ್ಮ ಪರ್ವ,6,6
  119. ಬಲಿದುದು, ಹೆಚ್ಚಿತು, ಭೀಷ್ಮ ಪರ್ವ,7,34
  120. ಬಲಿದುಸುರÀು, ನಿಟ್ಟುಸಿರು, ಭೀಷ್ಮ ಪರ್ವ,10,15
  121. ಬಲಿಮಥನ, ಬಲಿಯನ್ನು ಸಂಹರಿಸಿದವ , ಗದಾ ಪರ್ವ,8,28
  122. ಬಲಿಯಿರೇ, ಸಾಧಿಸಿ ತೋರಿರಿ, ಭೀಷ್ಮ ಪರ್ವ,9,30
  123. ಬಲಿವುದು, ಹೆಚ್ಚಾಗುವುದು., ಉದ್ಯೋಗ ಪರ್ವ,4,95
  124. ಬಲಿಸು, ಬಲಪಡಿಸು, ವಿರಾಟ ಪರ್ವ,5,12
  125. ಬಲುಕಣಿ, ಬಲ್ಲಿದರು, ಕರ್ಣ ಪರ್ವ,7,43
  126. ಬಲುಗಡಿಯ, ಶೂರ, ದ್ರೋಣ ಪರ್ವ,19,3
  127. ಬಲುಗಡಿಯ, ಮಹಾಪರಾಕ್ರಮಶಾಲಿ, ಅರಣ್ಯ ಪರ್ವ,11,7
  128. ಬಲುಗತ್ತಲೆ, ಕಗ್ಗತ್ತಲೆ, ಆದಿ ಪರ್ವ,16,15
  129. ಬಲುಗಿಡಿ, ದಪ್ಪಕಿಡಿ, ಆದಿ ಪರ್ವ,20,22
  130. ಬಲುಗುಳ, ಆನೆಯ ಪಕ್ಕೆಗಳಿಗೆ ಹಾಕುವ ಬಟ್ಟೆಯ ಹೊದಿಕೆ, ದ್ರೋಣ ಪರ್ವ,3,52
  131. ಬಲುಗೈ, ಬಲಶಾಲಿ, ಕರ್ಣ ಪರ್ವ,14,40
  132. ಬಲುಗೈ, ಬಲುಪರಾಕ್ರಮಿ, ಭೀಷ್ಮ ಪರ್ವ,2,14
  133. ಬಲುಗೈ, ಹೆಚ್ಚು ಬಲಶಾಲಿ ಆದ್ದರಿಂದ, ಸಭಾ ಪರ್ವ,2,23
  134. ಬಲುಗೋಲು, ಬಲವಾದ ಬಾಣ, ಭೀಷ್ಮ ಪರ್ವ,6,7
  135. ಬಲುಜವ, ಅತಿವೇಗ, ಭೀಷ್ಮ ಪರ್ವ,4,69
  136. ಬಲುಭುಜರು, ಸಾಹಸಿಗಳು, ಭೀಷ್ಮ ಪರ್ವ,4,42
  137. ಬಲುಮೆ, ಕೆಚ್ಚು, ಉದ್ಯೋಗ ಪರ್ವ,8,41
  138. ಬಲುವಾಸಿ, ಅಪಾರವಾದ ಕೀರ್ತಿ, ಕರ್ಣ ಪರ್ವ,13,6
  139. ಬಲುಹಾದನೈ, ಬಲುಗಟ್ಟಿಗನು, ದ್ರೋಣ ಪರ್ವ,14,4
  140. ಬಲುಹು, ಬಲುಮೆ, ಆದಿ ಪರ್ವ,17,17
  141. ಬಲುಹು, ಯೋಗ್ಯತೆ, ಉದ್ಯೋಗ ಪರ್ವ,3,89
  142. ಬಲುಹು, ಹೆಚ್ಚು., ಗದಾ ಪರ್ವ,9,10
  143. ಬಲುಹು, ದೃಢತೆ, ಉದ್ಯೋಗ ಪರ್ವ,2,45
  144. ಬಲುಹೊರೆ, ಬಲುಭಾರವಾಗಿ, ಭೀಷ್ಮ ಪರ್ವ,3,14
  145. ಬಲ್ಲಂದದಲಿ, ತಿಳಿದ ರೀತಿಯಲ್ಲಿ, ಆದಿ ಪರ್ವ,3,22
  146. ಬಲ್ಲನೆ, ತಿಳಿಯನೆ, ಆದಿ ಪರ್ವ,11,9
  147. ಬಲ್ಲಹ, ವಲ್ಲಭ , ವಿರಾಟ ಪರ್ವ,10,18
  148. ಬಲ್ಲಾಳದಡ್ಡಿ, ತೆರೆ (ತಡಿಕೆ), ಆದಿ ಪರ್ವ,12,11
  149. ಬಲ್ಲಿದ, ಬಲಿಷ್ಠ , ವಿರಾಟ ಪರ್ವ,2,14
  150. ಬಲ್ಲಿದರು, ಸಾಹಸವಂತರು, ಭೀಷ್ಮ ಪರ್ವ,1,36
  151. ಬಲ್ಲಿದರು, ಶಕ್ತಿಶಾಲಿಗಳು, ಗದಾ ಪರ್ವ,11,6
  152. ಬಲ್ಲು, ಬಿರುಸಿನ, ಉದ್ಯೋಗ ಪರ್ವ,8,41
  153. ಬಲ್ಲೆಹ, ಭಲ್ಲೆ ಎಂಬ ಆಯುಧ, ವಿರಾಟ ಪರ್ವ,2,19
  154. ಬವಣೆ, ಭ್ರಮಣೆ , ಸಭಾ ಪರ್ವ,2,117
  155. ಬವರ, ಕಾಳಗ, ಉದ್ಯೋಗ ಪರ್ವ,9,16
  156. ಬವರ, ಕದನ, ಉದ್ಯೋಗ ಪರ್ವ,3,102
  157. ಬವರಿ, ಭ್ರಮರಿ, ಗದಾ ಪರ್ವ,6,25, ,
  158. ಬವರಿ, ಭ್ರಮಣ, ಸಭಾ ಪರ್ವ,10,2
  159. ಬವರಿ, ಸುತ್ತು ತಿರುಗುವಿಕೆ, ಆದಿ ಪರ್ವ,7,2
  160. ಬವರಿ, ಸುತ್ತುವಿಕೆ, ವಿರಾಟ ಪರ್ವ,3,89
  161. ಬವರಿ, ಸುತ್ತಿಸು, ಗದಾ ಪರ್ವ,1,56
  162. ಬವರಿ, ತಿರುಗುವಿಕೆ, ಆದಿ ಪರ್ವ,7,28
  163. ಬವರಿಗ, ಯುದ್ಧವೀರ, ಭೀಷ್ಮ ಪರ್ವ,2,9
  164. ಬವರಿಗರು, ಯೋಧರು, ಭೀಷ್ಮ ಪರ್ವ,5,16
  165. ಬಸವಳಿ, ಪ್ರಜ್ಞೆÀತಪ್ಪು, ವಿರಾಟ ಪರ್ವ,8,38
  166. ಬಸವಳಿ, ವಶತಪ್ಪು , ವಿರಾಟ ಪರ್ವ,3,59, ,
  167. ಬಸವಳಿ, ಆಯಾಸವನ್ನು ಹೊಂದು, ದ್ರೋಣ ಪರ್ವ,5,33
  168. ಬಸಿದು, ಧಾವಿಸಿಬಂದು, ಸಭಾ ಪರ್ವ,14,127
  169. ಬಸಿದುಬೀಳು, ಸಾರಸರ್ವಸ್ವವನ್ನೂ ಹನಿಗೂಡಿಸಿ ತೊಟ್ಟಿಕ್ಕುವುದು, ಗದಾ ಪರ್ವ,10,8
  170. ಬಸಿರು, ಹೊಟ್ಟೆ, ಭೀಷ್ಮ ಪರ್ವ,4,85
  171. ಬಸಿವ, ಸುರಿಯುವ, ದ್ರೋಣ ಪರ್ವ,1,20
  172. ಬಸಿವ, ಜಿನುಗುತ್ತಿರುವ, ಭೀಷ್ಮ ಪರ್ವ,9,39
  173. ಬಸುರುಚ್ಚು, ಹೊಟ್ಟೆ ಸಡಿಲವಾಗಿ., ಗದಾ ಪರ್ವ,2,24
  174. ಬಸೆ, ನೆಣ, ಭೀಷ್ಮ ಪರ್ವ,4,48
  175. ಬಸೆ, ಮೇದಸ್ಸು , ಗದಾ ಪರ್ವ,3,11
  176. ಆರ್ತ, ಬಾಯಾರಿದ, ಭೀಷ್ಮ ಪರ್ವ,10,27
  177. ಬಹಳಾಕ್ಷೋಹಿಣೀಭಟರ, ಅನೇಕ ಅಕ್ಷೋಹಿಣಿಗಳ ಯೋಧರ, ಗದಾ ಪರ್ವ,12,23
  178. ಬಹಳಾಗ್ನಿ, ಹೆಚ್ಚು ಅಗ್ನಿ, ಗದಾ ಪರ್ವ,12,23
  179. ಬಹಳೋತ್ಸೇಧ, ಮಹಾ ಎತ್ತರ, ಸಭಾ ಪರ್ವ,3,30
  180. ಬಹುಕಾಂತಾಕದಂಬಕ, ಬಹು ಸಂಖ್ಯೆಯ ಮಹಿಳೆಯರ ಸಮೂಹ, ಗದಾ ಪರ್ವ,11,22
  181. ಬಹುಭಂಗ ಅನ್ವಯಕೆ, ಅನ್ವಯ, ವಿರಾಟ ಪರ್ವ,8,76
  182. ಬಹುಮಾನ, ಸಂಭಾವನೆ, ಉದ್ಯೋಗ ಪರ್ವ,4,67
  183. ಬಹುಮುಖ, ಚಂಚಲವಾಗಿರುವುದು, ಆದಿ ಪರ್ವ,8,37
  184. ಬಹುರೂಪು, ನಾಟಕದಲ್ಲಿ ಬಹುರೂಪಗಳನ್ನು ಮಾಡಬಲ್ಲವರನ್ನು ಬಹುರೂಪಿ ಎನ್ನುತ್ತಾರೆ , ವಿರಾಟ ಪರ್ವ,6,47
  185. ಬಹುಳತೆ, ಹೆಚ್ಚು ಸಂಖ್ಯೆ , ವಿರಾಟ ಪರ್ವ,3,26
  186. ಬಹೆನು, ಬರುತ್ತೇನೆ, ದ್ರೋಣ ಪರ್ವ,2,44
  187. ಬಳಕೆ, ಪದ್ಧತಿ, ಆದಿ ಪರ್ವ,6,16
  188. ಬಳಕೆ, ರೂಢಿ/ಉಪಯೋಗ, ಉದ್ಯೋಗ ಪರ್ವ,8,21
  189. ಬಳಕೆಯ ಹೊರೆಯ ಹೆಸರು, ರೂಢಿಯಲ್ಲಿ ಇಟ್ಟುಕೊಂಡ ಹೆಸರು , ವಿರಾಟ ಪರ್ವ,10,16
  190. ಬಳಚು, ಸವರು, ಕರ್ಣ ಪರ್ವ,13,31
  191. ಬಳಚು, ಜಾರು, ದ್ರೋಣ ಪರ್ವ,16,16
  192. ಬಳಚು, ಕತ್ತರಿಸಿ ಹೋಗು, ಗದಾ ಪರ್ವ,8,35
  193. ಬಳಲು, ದಣಿವು, ಆದಿ ಪರ್ವ,9,4
  194. ಬಳಲುಗಚ್ಛೆ, ಜೋತಾಡುವಂತೆ ಕಟ್ಟಿದ ಕಚ್ಚೆ, ಆದಿ ಪರ್ವ,15,15
  195. ಬಳಲುಡಿಗೆ, ಜೋತುಬಿದ್ದು ಉಟ್ಟಿರುವ ವಸ್ತ್ರ , ಆದಿ ಪರ್ವ,20,13
  196. ಬಳವಿಗೆ, ಬೆಳವಣಿಗೆ, ಅರಣ್ಯ ಪರ್ವ,5,4
  197. ಬಳಸಿ, ಸುತ್ತುವರಿದು, ಗದಾ ಪರ್ವ,8,55
  198. ಬಳಸಿ, ಉಪಯೋಗಿಸಿ, ಗದಾ ಪರ್ವ,8,36
  199. ಬಳಸಿನಲಿ, ಸುತ್ತಲೂ., ಗದಾ ಪರ್ವ,2,8
  200. ಬಳಸು, ಸುತ್ತು, ಉದ್ಯೋಗ ಪರ್ವ,11,46
  201. ಬಳಸು, ಆಶ್ರಯಿಸು, ಗದಾ ಪರ್ವ,6,5
  202. ಬಳಸು, ಉಪಯೋಗಿಸು, ಆದಿ ಪರ್ವ,16,12
  203. ಬಳಸು, ಹೊಂದು, ಆದಿ ಪರ್ವ,10,1
  204. ಬಳಾಕ, ಒಂದು ಪಕ್ಷಿ, ಗದಾ ಪರ್ವ,9,20
  205. ಬಳಿ, ಹತ್ತಿರ , ವಿರಾಟ ಪರ್ವ,1,9
  206. ಬಳಿ, ದಾರಿ, ಉದ್ಯೋಗ ಪರ್ವ,3,49
  207. ಬಳಿಕಿನೊಳು, ಅನಂತರದಲ್ಲಿ, ಸಭಾ ಪರ್ವ,5,19
  208. ಬಳಿದು, ಒರಸಿಕೊಂಡು, ಭೀಷ್ಮ ಪರ್ವ,9,39
  209. ಬಳಿಯನಟ್ಟು, ದೂತರನ್ನು ಕಳುಹಿಸು, ವಿರಾಟ ಪರ್ವ,10,44
  210. ಬಳಿಯಹತ್ತು, ಬೆನ್ನು ಬೀಳು, ವಿರಾಟ ಪರ್ವ,7,31
  211. ಬಳಿವಿಡಿ, ಹಿಂಬಾಲಿಸು, ಉದ್ಯೋಗ ಪರ್ವ,3,99
  212. ಬಳಿಸಂದು, ಅನುಸರಿಸಿ, ಆದಿ ಪರ್ವ,8,45
  213. ಬಳಿಸಂದುವು, ಸಮೀಪಕ್ಕೆ ಬಂದುವು, ಶಲ್ಯ ಪರ್ವ,2,32
  214. ಬಳುವಳಿ, ಕಾಣಿಕೆ, ವಿರಾಟ ಪರ್ವ,10,84
  215. ಬಳ್ಳ, ನಾಲ್ಕು ಸೇರಿನ ಅಳತೆ (ಎರಡು, ಆದಿ ಪರ್ವ,10,11
  216. ಬಾಚಿಸಿದು, ಮಾತನಾಡಿಕೊಳ್ಳುತ್ತ ನೋಡಿದು , ಶಲ್ಯ ಪರ್ವ,1,9
  217. ಬಾಜಿಸು ಸನ್ನೆ, ಸೌಂಜ್ಞೆ, ಶಲ್ಯ ಪರ್ವ,2,3
  218. ಬಾಡಿಸು, ಬೇಯಿಸು, ಗದಾ ಪರ್ವ,3,11
  219. ಬಾಣ ಪಥಿಕರಿಗೆ, ಬಾಣಗಳೆಂಬ ಪ್ರಯಾಣಿಕರಿಗೆ, ಭೀಷ್ಮ ಪರ್ವ,9,38
  220. ಬಾಣತ್ರಯ, ಮೂರು ಬಾಣಗಳು, ದ್ರೋಣ ಪರ್ವ,3,51
  221. ಬಾಣಧಾರಾತೀರ್ಥ, ಬಾಣದ ಮೊನೆಯೆಂಬ ಪುಣ್ಯ ಕ್ಷೇತ್ರ., ದ್ರೋಣ ಪರ್ವ,6,10
  222. ಬಾಣವ ತೂಗು, ಬಾಣವನ್ನು ಹೆದೆಯೇರಿಸಿ ಹೂಡು, ಭೀಷ್ಮ ಪರ್ವ,3,24
  223. ಬಾಣವ್ರಾತ, ಬಾಣಸಮೂಹ, ಭೀಷ್ಮ ಪರ್ವ,8,37
  224. ಬಾಣಶಯನ, ಬಾಣಗಳ ಹಾಸಿಗೆ, ಗದಾ ಪರ್ವ,13,12
  225. ಬಾಣಸ, ಅಡಿಗೆ ಮನೆ, ವಿರಾಟ ಪರ್ವ,3,36
  226. ಬಾಣಸವಿದ್ಯೆ, ಅಡಿಗೆ ವಿದ್ಯೆ, ಭೀಷ್ಮ ಪರ್ವ,8,23
  227. ಬಾಣಸಿ, ಅಡಿಗೆಯವನು, ವಿರಾಟ ಪರ್ವ,1,22
  228. ಬಾಣಸಿಗ, ಅಡಿಗೆಯವ, ಸಭಾ ಪರ್ವ,1,58
  229. ಬಾಣಸು, ಪಾಕಶಾಲೆ, ವಿರಾಟ ಪರ್ವ,3,104
  230. ಬಾಣಾದ್ವೈತ, ಬಾಣಗಳೆಲ್ಲವೂ ಭೂಮಿಯನ್ನು ಆವರಿಸಿವೆ ಎಂಬರ್ಥ, ವಿರಾಟ ಪರ್ವ,8,22
  231. ಬಾಣಾಬ್ಧಿ, ಬಾಣಸಾಗರ, ಭೀಷ್ಮ ಪರ್ವ,9,37
  232. ಬಾಣೋತ್ಕರ, ಬಾಣಗಳ ಸಮೂಹ, ಶಲ್ಯ ಪರ್ವ,2,48
  233. ಬಾಣೌಘ, ಬಾಣ+ಓಘ=ಬಾಣ ಸಮೂಹ, ವಿರಾಟ ಪರ್ವ,8,57
  234. ಬಾದಣ, ರಂಧ್ರ, ಭೀಷ್ಮ ಪರ್ವ,8,47
  235. ಬಾದಣ, ತೂತು, ಭೀಷ್ಮ ಪರ್ವ,10,6, ,
  236. ಬಾದಣಗೊರೆದ, ತೂತುಮಾಡಿದ , ಗದಾ ಪರ್ವ,7,54, ,
  237. ಬಾಧಕ, ತೊಂದರೆ ಕೊಡುವವ, ಆದಿ ಪರ್ವ,8,58
  238. ಬಾಧಿಸು, ನೋಯಿಸು, ಸಭಾ ಪರ್ವ,1,30
  239. ಬಾಯತಂಬುಲ, ಬಾಯಿಯಲ್ಲಿರುವ ತಾಂಬೂಲ, ಗದಾ ಪರ್ವ,11,55
  240. ಬಾಯಿಗೇಳು, ಮಾತುಕೇಳುವಂತೆ ಮಾಡು., ಗದಾ ಪರ್ವ,4,52
  241. ಬಾಯಿಧಾರೆ, ಬಾಯಿಂದ ಬರುವ ಉರಿ, ಕರ್ಣ ಪರ್ವ,7,42
  242. ಬಾಯೆಣಿಕೆ, ಬಾಯಿ ಮಾತು, ಭೀಷ್ಮ ಪರ್ವ,8,61
  243. ಬಾಯ್‍ಹೊಯ್, ಬಾಯಿ ಬಡಿಯಿರಿ, ಭೀಷ್ಮ ಪರ್ವ,8,63
  244. ಬಾರಂಗಿ, ಒಂದು ಬಗೆಯ ಔಷಧಿ ಸಸ್ಯ, ಭೀಷ್ಮ ಪರ್ವ,5,41
  245. ಬಾರದೂ ಹತ್ತಿಗಳ, ಚರ್ಮದ ಪಟ್ಟಿಯಲ್ಲಿ ತೂಗು ಹಾಕಿದ ಇಬ್ಬಾಯ ಕತ್ತಿಗಳನ್ನು, ಭೀಷ್ಮ ಪರ್ವ,4,74
  246. ಬಾರಸಂಕಲೆ, ಚರ್ಮದ ಪಟ್ಟಿಯ ಸರಪಳಿಗಳು, ಭೀಷ್ಮ ಪರ್ವ,4,74
  247. ಬಾರುಗುತ್ತು, ಪಣವೊಡ್ಡಿ ಆಡುವ ಒಂದು ಬಗೆಯ ಆಟ, ಆದಿ ಪರ್ವ,8,62
  248. ಬಾಲ ಹಿಮಕರ ಕಿರಣ, ಬಾಲ ಚಂದ್ರನ ಕಿರಣ, ಅರಣ್ಯ ಪರ್ವ,5,24
  249. ಬಾಲಕೇಳೀ, ಮಕ್ಕಳಾಟ, ಆದಿ ಪರ್ವ,6,1
  250. ಬಾಲಭಾಷೆಗೆ, ಬಾಲಕನ ಮಾತಿಗೆ, ಭೀಷ್ಮ ಪರ್ವ,8,35
  251. ಬಾಲಶಶಿಮೌಳಿ, ಬಾಲಚಂದ್ರನನ್ನು ತಲೆಯಲ್ಲಿ ಧರಿಸಿರುವವನು, ಆದಿ ಪರ್ವ,16,58
  252. ಬಾವುಲಿ, ಒಂದು ಬಗೆಯ ಕಿವಿಯ ಆಭರಣ, ದ್ರೋಣ ಪರ್ವ,15,44
  253. ಬಾಷ್ಕಳ ಗೆಡೆ, ಅಸಂಬದ್ಧವಾಗಿ ಮಾತಾಡು, ವಿರಾಟ ಪರ್ವ,6,24
  254. ಬಾಸಣಿಸು, ಆವರಿಸು, ಅರಣ್ಯ ಪರ್ವ,11,3
  255. ಬಾಸರ, ಶುಭ್ರ ವಸ್ತ್ರ, ಆದಿ ಪರ್ವ,20,13
  256. ಬಾಸರ, ಶುಭ್ರವಸ್ತ್ರ, ಆದಿ ಪರ್ವ,15,15
  257. ಬಾಸಿಂಗ, ಹಣೆಗೆ ಕಟ್ಟುವುದಕ್ಕೆ ರಚಿಸಿದ ಎಡಬಲಕ್ಕೆ ಗೊಂಚಲುಗಳುಳ್ಳ ಒಂದು ಬಗೆಯ, ಆದಿ ಪರ್ವ,12,12
  258. ಬಾಸುಳು, ಬಾಸುಂಡೆ, ವಿರಾಟ ಪರ್ವ,3,10
  259. ಬಾಹತ್ತರ, ಎಪ್ಪತ್ತೆರಡು, ಆರಣ್ಯ ಪರ್ವ,1,2
  260. ಬಾಹಪ್ಪಳಿಸು, ಭುಜತಟ್ಟು, ಆದಿ ಪರ್ವ,10,21
  261. ಬಾಹಿರ, ಸಲ್ಲದ, ಉದ್ಯೋಗ ಪರ್ವ,9,25
  262. ಬಾಹಿರ, ಹೀನ, ಉದ್ಯೋಗ ಪರ್ವ,5,14
  263. ಬಾಹಿರ, ನೀಚವ್ಯಕ್ತಿ, ಆದಿ ಪರ್ವ,8,86
  264. ಬಾಹಿರ, ಅಲ್ಪ, ಅರಣ್ಯ ಪರ್ವ,21,58
  265. ಬಾಹಿರ, ಹೊರಹಾಕಲ್ಪಟ್ಟವನು, ಸಭಾ ಪರ್ವ,10,3
  266. ಬಾಹಿರ ಮಗಧ, ಹೊರಗಿಡಲ್ಪಟ್ಟ ಮಾಗಧನೇ, ಸಭಾ ಪರ್ವ,2,87
  267. ಬಾಹುಮೂಲ, ಭುಜ , ಗದಾ ಪರ್ವ,4,7
  268. ಬಾಹುರಕೆ, ಬಾಹುರಕ್ಷೆ, ದ್ರೋಣ ಪರ್ವ,3,40
  269. ಬಾಹುರಕೆ, ಪಕ್ಕರಕ್ಕೆ, ಭೀಷ್ಮ ಪರ್ವ,5,36
  270. ಬಾಹುಸ್ಪುರಣಶಕ್ತಿ, ತೋಳುಗಳ ಚಲನೆಯಿಂದುಂಟಾಗುವ ಶಕ್ತಿ, ಗದಾ ಪರ್ವ,3,30
  271. ಬಾಹೆ, ಹೊರಪ್ರದೇಶ, ಆದಿ ಪರ್ವ,10,39
  272. ಬಾಹೆ, ಹೊರಗೆ , ಶಲ್ಯ ಪರ್ವ,3,56
  273. ಬಿಂಕ, ಶೌರ್ಯಯುಕ್ತ ಗರ್ವ, ಭೀಷ್ಮ ಪರ್ವ,2,10
  274. ಬಿಂಕ, ಬಿನ್ನಾಣ, ಆದಿ ಪರ್ವ,14,7
  275. ಬಿಂಕ, ಬಿಗುಮಾನ, ಶಲ್ಯ ಪರ್ವ,2,13
  276. ಬಿಂಕ, ಗರ್ವ, ಶಲ್ಯ ಪರ್ವ,2,46
  277. ಬಿಂಕ ಬೀಯದು, ಗರ್ವ ಅಡಗಲಿಲ್ಲ, ಸಭಾ ಪರ್ವ,2,111
  278. ಬಿಂದು, ಪರಮಾತ್ಮನ ಸಾನ್ನಿಧ್ಯ, ದ್ರೋಣ ಪರ್ವ,18,68
  279. ಬಿಂದು, ಚುಕ್ಕಿ, ಆದಿ ಪರ್ವ,11,26
  280. ಬಿಂಪು, ಬಿಣ್ಪು, ಕರ್ಣ ಪರ್ವ,16,5
  281. ಬಿಂಬಾಧರ, ತೊಂಡೆಹಣ್ಣಿನಂತೆ ಕೆಂಪಾದ ತುಟಿ, ಆದಿ ಪರ್ವ,13,12
  282. ಬಿಕ್ಕು, ಬೀಸು, ಗದಾ ಪರ್ವ,1,57
  283. ಬಿಗಿ, ಹೆಮ್ಮೆ, ಆದಿ ಪರ್ವ,7,74
  284. ಬಿಗಿದ, ಆವರಿಸಿದ, ಆದಿ ಪರ್ವ,15,30
  285. ಬಿಗಿದ, ಹೆದೆಯೇರಿಸಿದ, ಭೀಷ್ಮ ಪರ್ವ,2,4
  286. ಬಿಗಿದ, ಗಂಟಿಕ್ಕಿದ, ಭೀಷ್ಮ ಪರ್ವ,3,11
  287. ಬಿಗಿದು, ಕಟ್ಟಿ, ಆದಿ ಪರ್ವ,10,27
  288. ಬಿಗಿಯೆ, ಅಳವಡಿಸು, ಆದಿ ಪರ್ವ,9,14
  289. ಬಿಗುಡು, ಬಿಗಿ, ದ್ರೋಣ ಪರ್ವ,6,26
  290. ಬಿಗುವು ಸಹಿತ, ಬಿಗಿಯಾಗಿ, ವಿರಾಟ ಪರ್ವ,8,84
  291. ಬಿಗುಹಡಗಿ, ಸಡಿಲವಾಗಿ, ಗದಾ ಪರ್ವ,11,19
  292. ಬಿಗುಹು, ಬಿಗಿ, ಆದಿ ಪರ್ವ,2,34
  293. ಬಿಗುಹು, ಬಿಗಿಯಾದ ಸ್ಥಿತಿ, ದ್ರೋಣ ಪರ್ವ,1,22
  294. ಬಿಗುಹುಏರಿ, ರಭಸ ಏರಿ, ವಿರಾಟ ಪರ್ವ,9,19
  295. ಬಿಚ್ಚು, ನಿವಾರಿಸು, ಆದಿ ಪರ್ವ,20,66
  296. ಬಿಚ್ಚುಗಂಗಳು, ಅಗಲವಾಗಿ ತೆರೆದಿರುವ ಕಣ್ಣುಗಳು, ಗದಾ ಪರ್ವ,9,18
  297. ಬಿಜಯಂಗೈ, ದಯಮಾಡು, ಆದಿ ಪರ್ವ,18,24
  298. ಬಿಜಯಂಗೈಯ್, ತೆರಳು, ಆದಿ ಪರ್ವ,18,16
  299. ಬಿಜಯಮಾಡುವುದು, ಪ್ರಯಾಣ ಮಾಡಬಹುದು, ವಿರಾಟ ಪರ್ವ,3,107
  300. ಬಿಟ್ಟಮಂಡೆ, ಜುಟ್ಟುಕೂಡ ಕಟ್ಟಿಕೊಳ್ಳದ ಸ್ಥಿತಿ, ವಿರಾಟ ಪರ್ವ,3,95
  301. ಬಿಟ್ಟರು, ಬೀಡುಬಿಟ್ಟರು, ಸಭಾ ಪರ್ವ,3,57
  302. ಬಿಟ್ಟುದು, ಬಿಡುಬಿಟ್ಟಿತು, ಸಭಾ ಪರ್ವ,3,39
  303. ಬಿಟ್ಟೇರು, ಉದ್ದವಾದ ಈಟಿ, ಶಲ್ಯ ಪರ್ವ,2,24
  304. ಬಿಡಯದಲಿ, ನಡುವೆ ಅವಕಾಶವಿದ್ದಲ್ಲಿ, ಸಭಾ ಪರ್ವ,12,35
  305. ಬಿಡವರಿದು, ತೆರವಾದ ಸ್ಥಳವನ್ನು ನೋಡಿ, ಗದಾ ಪರ್ವ,5,54
  306. ಬಿಡುಗುರಿತನವ, ಒರಟುತನವನ್ನು, ಭೀಷ್ಮ ಪರ್ವ,10,37
  307. ಬಿಡುತಲೆ, ಕೆದರಿದ ತಲೆ, ಭೀಷ್ಮ ಪರ್ವ,4,58
  308. ಬಿಡುಮಿದುಳ, ಹೊರಬಂದ ಮಿದುಳು, ಭೀಷ್ಮ ಪರ್ವ,4,62
  309. ಬಿಡುಮುಡಿ, ಬಿಚ್ಚಿದ ಮುಡಿ, ಆದಿ ಪರ್ವ,11,34
  310. ಬಿಡುವನಿಯ, ಬೀಳುತ್ತಿರುವ ಹನಿಗಳಿಂದ, ದ್ರೋಣ ಪರ್ವ,4,53
  311. ಬಿಡೆ, ಭಿಡೆ, ಕರ್ಣ ಪರ್ವ,12,13
  312. ಬಿಡೆನೋಡಿ, ನಿಟ್ಟಿಸಿ ನೋಡಿ, ಭೀಷ್ಮ ಪರ್ವ,10,37
  313. ಬಿಡೆಯ, ಸಂಕೋಚ, ಅರಣ್ಯ ಪರ್ವ,8,20
  314. ಬಿಡೆಯ, ಬಲವಾದ, ಕರ್ಣ ಪರ್ವ,19,43
  315. ಬಿಡೆಯ, ಮುಂದೆ ನಡೆಸುವುದು, ಆದಿ ಪರ್ವ,7,2
  316. ಬಿಡೆಯ, ಅಟ್ಟಹಾಸ, ಗದಾ ಪರ್ವ,7,2
  317. ಬಿಡೆಯ, ದಟ್ಟಣೆ (ಒತ್ತೊತ್ತು) ಮುಕುರ, ಆದಿ ಪರ್ವ,12,12
  318. ಬಿಡೆಯರಿದು, ಗುರಿಯನ್ನು ನೋಡು, ಕರ್ಣ ಪರ್ವ,20,8
  319. ಬಿತ್ತರಿಸು, ವಿಸ್ತರಿಸು(ಸಂ.) , ಗದಾ ಪರ್ವ,8,29
  320. ಬಿತ್ತರಿಸು, ವಾರ್ತೆಯಂತೆ ಹೇಳು , ಗದಾ ಪರ್ವ,3,5
  321. ಬಿತ್ತಿ, ಬೀಸಿ, ಗದಾ ಪರ್ವ,11,10
  322. ಬಿದಿರಿದೆಲುಗಳು, ಬಿದಿರಿದ+ಎಲುಗಳು, ವಿರಾಟ ಪರ್ವ,4,48
  323. ಬಿದಿರು, ನಡುಗು, ಉದ್ಯೋಗ ಪರ್ವ,9,62
  324. ಬಿದಿರು, ಕೊಡÀಹು, ಶಲ್ಯ ಪರ್ವ,2,10
  325. ಬಿದು, ಆನೆಗಳ ಗಂಡಸ್ಥಳ, ಗದಾ ಪರ್ವ,1,57
  326. ಬಿದುರಿ, ಕೊಡಹಿ, ಆದಿ ಪರ್ವ,4,21
  327. ಬಿದುರುತ, ಮಿಡಿಯುತ್ತ, ಸಭಾ ಪರ್ವ,14,103
  328. ಬಿದ್ದಣ, ? ವೇಲೆಯಲಿ, ಸಭಾ ಪರ್ವ,3,44
  329. ಬಿದ್ದಣವಾಯ್ತಲಾ, ಔತಣದ ಭೋಜನವಿಕ್ಕಿದಂತಾಯಿತು ಅಲ್ಲವೇ ! ಸುರಪಾಲ ಪದವಿ, ಸಭಾ ಪರ್ವ,3,44
  330. ಬಿದ್ದಿನ, ಅತಿಥಿ, ದ್ರೋಣ ಪರ್ವ,18,7
  331. ಬಿದ್ದಿನ, ಔತಣ, ಭೀಷ್ಮ ಪರ್ವ,8,57
  332. ಬಿದ್ದಿನರು, ಅತಿಥಿಗಳು, ಭೀಷ್ಮ ಪರ್ವ,8,23
  333. ಬಿದ್ದುದು, ಮಡಿದುದು, ಗದಾ ಪರ್ವ,3,32
  334. ಬಿನುಗ, ಸಾಮಾನ್ಯ, ದ್ರೋಣ ಪರ್ವ,1,53
  335. ಬಿನುಗು, ಅಲ್ಪ, ವಿರಾಟ ಪರ್ವ,5,14
  336. ಬಿನುಗು, ಕ್ಷುದ್ರ, ದ್ರೋಣ ಪರ್ವ,3,33
  337. ಬಿನ್ನಣ, ಒಯ್ಯಾರ, ಸಭಾ ಪರ್ವ,14,96
  338. ಬಿನ್ನಣ, ಕೌಶಲ, ಆದಿ ಪರ್ವ,7,53
  339. ಬಿನ್ನಪ, ಕೋರಿಕೆ, ವಿರಾಟ ಪರ್ವ,6,45
  340. ಬಿನ್ನಪವನು, ವಿಜ್ಞಾಪನೆಯನ್ನು, ಸಭಾ ಪರ್ವ,1,62
  341. ಬಿನ್ನವಿಸು, ವಿಜ್ಞಾಪಿಸು., ಉದ್ಯೋಗ ಪರ್ವ,7,15
  342. ಬಿನ್ನವಿಸು, ನಿವೇದಿಸು , ವಿರಾಟ ಪರ್ವ,4,1
  343. ಬಿನ್ನಹ, ಪ್ರಾರ್ಥನೆ, ವಿರಾಟ ಪರ್ವ,2,42
  344. ಬಿನ್ನಹ, ಮನವಿ , ಗದಾ ಪರ್ವ,4,49
  345. ಬಿನ್ನಹ, ಅರಿಕೆ, ಆದಿ ಪರ್ವ,8,32
  346. ಬಿನ್ನಹದ ಬಿರುಬು, ಉಗ್ರ ಪ್ರಾರ್ಥನೆ, ವಿರಾಟ ಪರ್ವ,5,7
  347. ಬಿನ್ನಾಣ, ಜಾಣ್ಮೆ, ಆದಿ ಪರ್ವ,8,71
  348. ಬಿನ್ನಾಣ, ತಂತ್ರ, ಕರ್ಣ ಪರ್ವ,7,32
  349. ಬಿನ್ನೈಸು, ಪ್ರಾರ್ಥಿಸು, ಗದಾ ಪರ್ವ,5,13
  350. ಬಿಮ್ಮು, ಬಿಂಕ ಘನತೆ, ವಿರಾಟ ಪರ್ವ,8,53
  351. ಬಿರಿದು, ಜೋರಾಗಿ, ಆದಿ ಪರ್ವ,9,7
  352. ಬಿರಿಮುಗುಳ, ಅರಳಿದ ಮೊಗ್ಗು, ದ್ರೋಣ ಪರ್ವ,6,42
  353. ಬಿರುಕೋಲು, ಕಠಿಣವಾಗಿದ್ದ ಬಾಣ, ವಿರಾಟ ಪರ್ವ,7,47
  354. ಬಿರುಗೋಲು, ತೀಕ್ಷ್ಣವಾದ ಬಾಣ, ಭೀಷ್ಮ ಪರ್ವ,4,87
  355. ಬಿರುದ ಕೆದರು, (ತನ್ನ) ಪೌರುಷದ ಬಗೆಗೆ ಕೊಚ್ಚಿಕೊ, ವಿರಾಟ ಪರ್ವ,5,12
  356. ಬಿರುದಂಕರು, ಅತಿಸಾಹಸಿಗಳು, ಭೀಷ್ಮ ಪರ್ವ,4,60
  357. ಬಿರುದರ, ಸಾಹಸಿಗಳ, ಭೀಷ್ಮ ಪರ್ವ,2,4
  358. ಬಿರುದರ, ವೀರರ, ವಿರಾಟ ಪರ್ವ,4,47
  359. ಬಿರುದು, <ವಿರುಂದು>ಬಿರ್ದು>ಬಿರುದು=ಹಬ್ಬ, ವಿರಾಟ ಪರ್ವ,3,12
  360. ಬಿರುದು, ಪ್ರಶಸ್ತಿಗಳನ್ನು ಪಡೆದ, ದ್ರೋಣ ಪರ್ವ,1,58
  361. ಬಿರುದು, ಅಗ್ಗಳಿಕೆ, ವಿರಾಟ ಪರ್ವ,9,22
  362. ಬಿರುದು, ಉಗ್ರತೆ, ಭೀಷ್ಮ ಪರ್ವ,4,35
  363. ಬಿರುದುಪಾಡು, ಗುಣಗಾನ, ಆದಿ ಪರ್ವ,8,1
  364. ಬಿರುನುಡಿ, ಒರಟು ಮಾತು, ಉದ್ಯೋಗ ಪರ್ವ,8,66
  365. ಬಿರುಬಿಮ್ಮಿನಲಿ, ಗಡÀಸುತನದಲ್ಲಿ, ಗದಾ ಪರ್ವ,6,29
  366. ಬಿರುಬು, ಆವೇಶ, ದ್ರೋಣ ಪರ್ವ,17,31
  367. ಬಿರುಬು, ಕಠಿಣವಾದ ಮಾತು, ವಿರಾಟ ಪರ್ವ,2,22
  368. ಬಿರುವರಿ, ಜೋರಾಗಿ ಓಡು, ವಿರಾಟ ಪರ್ವ,7,50
  369. ಬಿರುವೊಯ್ಲ, ಕಠೋರವಾದ ಮಾನಸಿಕ ಆಘಾತದಿಂದ, ದ್ರೋಣ ಪರ್ವ,7,12
  370. ಬಿಲು, ಸಾಯಕ, ಶಲ್ಯ ಪರ್ವ,3,24
  371. ಬಿಲು ಸೆಳೆಯೆ ಕೈದುಗಳು ಕೈಯಿಂ ಚಲಿಸಲು, (ಆ ಅತಿರಥ ವೀರರ ಸ್ಥಿತಿ ಇದು. ಎಚ್ಚರವಿಲ್ಲ. ಆದರೆ ನಿದ್ರಾವಸ್ಥೆಯಲ್ಲೂ ಅವರ ಕೈ ಬಿಲ್ಲನ್ನು ಸೆಳೆಯುತ್ತಿವೆ. ಕತ್ತಿಗಳ ಮೇಲೆ ಕೈ ಆಡುತ್ತಿವೆ), ವಿರಾಟ ಪರ್ವ,8,85
  372. ಬಿಲುದಿರು, ಬಿಲ್ಲಿನ ಹಗ್ಗ, ಭೀಷ್ಮ ಪರ್ವ,8,39
  373. ಬಿಲುದಿರುವು, ಬಿಲ್ಲಿನ ತಿರುವು , ಶಲ್ಯ ಪರ್ವ,3,31
  374. ಬಿಲುದುಡುಕಿ, ಬಿಲ್ಲನ್ನು ಹಿಡಿದು, ದ್ರೋಣ ಪರ್ವ,5,27
  375. ಬಿಲ್ಲವರು, ಬಿಲ್ಲುಗಾರರು, ಭೀಷ್ಮ ಪರ್ವ,4,15
  376. ಬಿಸಿಲ ಝಳ, ಬಿಸಿಲಿನ ಕಾವು, ಗದಾ ಪರ್ವ,11,26
  377. ಬಿಸುಟರು, ಬಿಟ್ಟು ಹೊರಟರು, ಗದಾ ಪರ್ವ,11,15
  378. ಬಿಸುಟರು, ಹರಹಿದರು (ಹೇಳಿದರು), ಶಲ್ಯ ಪರ್ವ,1,28
  379. ಬಿಸುಟರು, ಹರಿಯ ಬಿಟ್ಟರು, ಭೀಷ್ಮ ಪರ್ವ,6,12
  380. ಬಿಸುಸುಯ್, ನಿಟ್ಟುಸಿರು ಬಿಡು, ವಿರಾಟ ಪರ್ವ,4,40
  381. ಬಿಸುಸುಯಿಲು, ಬಿಸಿ ಉಸಿರು, ಭೀಷ್ಮ ಪರ್ವ,10,15
  382. ಬಿಸುಸುಯ್ದ, ನಿಟ್ಟುಸಿರು ಬಿಟ್ಟ., ಸಭಾ ಪರ್ವ,2,39
  383. ಬಿಸುಸುಯ್ಯುತ್ತ, ನಿಟ್ಟುಸಿರು ಬಿಡುತ್ತ, ಉದ್ಯೋಗ ಪರ್ವ,3,1
  384. ಬಿಸುಸುಯ್ಲು, ಬಿಸಿಯುಸಿರು, ಗದಾ ಪರ್ವ,5,32
  385. ಬೀಕಲಿನ, ಬಾಡಿದ, ಸಭಾ ಪರ್ವ,15,14
  386. ಬೀಗು, ಮೆರೆ, ಶಲ್ಯ ಪರ್ವ,3,16
  387. ಬೀಜಮಂತ್ರ, ಉಪದೇಶ, ವಿರಾಟ ಪರ್ವ,4,16
  388. ಬೀಡಾಡಿ, ನೆಲೆಯಿಲ್ಲದವನು, ಉದ್ಯೋಗ ಪರ್ವ,8,27
  389. ಬೀಡಾರ, ತಂಗುವ ಸ್ಥಳ, ಆದಿ ಪರ್ವ,17,26
  390. ಬೀಡಿP, ನೆಲೆಸು, ಕರ್ಣ ಪರ್ವ,14,10
  391. ಬೀಡು, ಪಾಳೆಯ, ಆದಿ ಪರ್ವ,12,7
  392. ಬೀಡು, ಶಿಬಿರ, ವಿರಾಟ ಪರ್ವ,4,24
  393. ಬೀತ, ಹಣ್ಣು ಬಿಡದ, ವಿರಾಟ ಪರ್ವ,4,12
  394. ಬೀತ, ಕಳೆದು ಹೋದ, ಶಲ್ಯ ಪರ್ವ,1,7
  395. ಬೀತ ತರು, ಒಣಗಿದ ಮರ, ಅರಣ್ಯ ಪರ್ವ,16,36
  396. ಬೀತುದು, ನಾಶವಾಗು, ಅರಣ್ಯ ಪರ್ವ,16,28
  397. ಬೀತುದು, ನಶಿಸಿತು, ಭೀಷ್ಮ ಪರ್ವ,6,26
  398. ಬೀತುದು, ಪರಿಹಾರವಾಯಿತು, ವಿರಾಟ ಪರ್ವ,10,40
  399. ಬೀತುದು, ವ್ಯಯವಾಯಿತು, ದ್ರೋಣ ಪರ್ವ,4,5
  400. ಬೀತುದು, ಮುಗಿಯಿತು, ಶಲ್ಯ ಪರ್ವ,2,46
  401. ಬೀತುದು, ಮರೆಯಾಗುವುದು, ಆದಿ ಪರ್ವ,11,27
  402. ಬೀತುದು, ಮಾಯವಾಯಿತು, ವಿರಾಟ ಪರ್ವ,10,67
  403. ಬೀತುದು, ಒಣಗಿಹೋಗಿದೆ, ದ್ರೋಣ ಪರ್ವ,1,8
  404. ಬೀತುದು, ಕೊನೆಗಂಡಿತು, ಆದಿ ಪರ್ವ,13,38
  405. ಬೀತುದೇ, ಬೀ, ವಿರಾಟ ಪರ್ವ,8,52
  406. ಬೀದಿವರಿ, ಸ್ವೇಚ್ಛೆಯಿಂದ ತಿರುಗು., ಗದಾ ಪರ್ವ,9,36
  407. ಬೀದಿವರಿ, ಸ್ವೇಚ್ಛೆಯಾಗಿ ಹರಿ, ಶಲ್ಯ ಪರ್ವ,1,25
  408. ಬೀದಿವರಿ, ಓಟ, ದ್ರೋಣ ಪರ್ವ,14,4
  409. ಬೀದಿವರಿ, ಓಡು, ದ್ರೋಣ ಪರ್ವ,3,13
  410. ಬೀದಿವರಿವರಿವ, ಹರಿದಾಡುತ್ತ, ಭೀಷ್ಮ ಪರ್ವ,4,33
  411. ಬೀದಿವಿಸಟಂಬರಿವ, ಸ್ವಚ್ಚಂದವಾಗಿ ವಿಹರಿಸುವ, ಭೀಷ್ಮ ಪರ್ವ,3,64
  412. ಬೀಯ, ನಿಂತು ಹೋಗುವುದು, ಅರಣ್ಯ ಪರ್ವ,21,30
  413. ಬೀಯ, ವ್ಯಯ , ಗದಾ ಪರ್ವ,12,3, ,
  414. ಬೀಯ, ವ್ಯಯ, ಗದಾ ಪರ್ವ,1,32
  415. ಬೀಯ, ಆಹಾರ, ಗದಾ ಪರ್ವ,4,33
  416. ಬೀಯ, ಖರ್ಚು, ದ್ರೋಣ ಪರ್ವ,1,16
  417. ಬೀಯು, ಹಾಳಾಗು, ಉದ್ಯೋಗ ಪರ್ವ,4,83
  418. ಬೀರಿದನು, ತೋರಿಸಿದನು, ಶಲ್ಯ ಪರ್ವ,3,76
  419. ಬೀಸರ, ವಿನಾಶ, ಕರ್ಣ ಪರ್ವ,1,17
  420. ಬೀಸರ, ಅಂತ್ಯ, ಅರಣ್ಯ ಪರ್ವ,2,20
  421. ಬೀಸುಗೊಳ್ಳಿ, ಅತ್ತಿತ್ತ ಅಲುಗಾಡಿಸುತ್ತಿರುವ ಕೊಳ್ಳಿ, ಆದಿ ಪರ್ವ,11,26
  422. ಬೀಸುವಲೆ, ಬೀಸುಬಲೆ, ಆದಿ ಪರ್ವ,14,18
  423. ಬೀಳಕುತ್ತುವುದು, ಹೊಡೆದು ಕೆಡವಿರಿ (ಬೀಳ ಹೊಡೆಯಿರಿ), ಭೀಷ್ಮ ಪರ್ವ,8,63
  424. ಬೀಳಗೆಡಹಿಸಿ, ನೆಲದಲ್ಲಿ ಬೀಳುವಂತೆ ಮಾಡಿ, ಭೀಷ್ಮ ಪರ್ವ,6,13
  425. ಬೀಳಲು, ಬಿಳಲುಗಳು, ಭೀಷ್ಮ ಪರ್ವ,4,75
  426. ಬೀಳುಕೊಳ್, ಹೊರಟು ಹೋಗು, ವಿರಾಟ ಪರ್ವ,2,13
  427. ಬೀಳುಡೆÉ, ಉಟ್ಟುತೆಗೆದು ಹಾಕಿದ ಬಟ್ಟೆ, ಗದಾ ಪರ್ವ,11,55
  428. ಬೀಳ್ಕೊಂಡು, ಕಳಿಸಿಕೊಂಡು, ಭೀಷ್ಮ ಪರ್ವ,7,34
  429. ಬೀಳ್ಕೊಂಡುದು, ಇಂಗಿತು, ಭೀಷ್ಮ ಪರ್ವ,10,28
  430. ಬೀಳ್ಕೊಡಿಸು, ದೂರ ಮಾಡು, ವಿರಾಟ ಪರ್ವ,10,37
  431. ಬೀಳ್ವನ್ನ ಬರ, ಬೀಳ್ವ ಅನ್ನವರ > ಅನ್ನಬರ, ವಿರಾಟ ಪರ್ವ,6,21
  432. ಬುದುಬುದ, ನೀರ ಮೇಲಿನ ಗುಳ್ಳೆಗಳು, ಆದಿ ಪರ್ವ,15,19
  433. ಬುದುಬುದಿಸಿ, ಉಕ್ಕಿ ಉಕ್ಕಿ (ಅನುಕರಣ ಶಬ್ದ), ದ್ರೋಣ ಪರ್ವ,10,6
  434. ಬುದ್ಧಿ ಕಲಿಸುವೆನು, ಹೇಳಿಕೊಡುತ್ತೇನೆ., ಭೀಷ್ಮ ಪರ್ವ,2,29
  435. ಬುದ್ಬುದ, ಬೊಬ್ಬಳಿ, ಗದಾ ಪರ್ವ,5,32
  436. ಬುಧಜನ, ವಿದ್ವಾಂಸರು, ಸಭಾ ಪರ್ವ,1,34
  437. ಬುಧರು, ಜ್ಞಾನಿಗಳು, ಗದಾ ಪರ್ವ,8,36
  438. ಬೂತಾಟ, ಬೂಟಾಟಿಕೆ, ಸಭಾ ಪರ್ವ,13,47
  439. ಬೂತು, ನಾಚಿಕೆಗೆಟ್ಟ, ಸಭಾ ಪರ್ವ,15,14
  440. ಬೂತು, ಅಲ್ಪರು , ಗದಾ ಪರ್ವ,5,15
  441. ಬೂತುಗಳು, ಭಂಡರು, ದ್ರೋಣ ಪರ್ವ,15,25
  442. ಬೂತುಗೆಡೆವನೊಳು, ಹೊಲಸುನಡೆಯುಳ್ಳವನೊಡನೆ, ಸಭಾ ಪರ್ವ,15,10
  443. ಬೂತುಬಲ, ಭಂಡರ ಸೈನ್ಯ, ದ್ರೋಣ ಪರ್ವ,19,44
  444. ಬೂರಿ, ಅಧಿಕವಾದ, ಉದ್ಯೋಗ ಪರ್ವ,5,21
  445. ಬೃಹಂತಕನ, ಬೃಹಂತಕನೆಂಬುವನನ್ನು, ಸಭಾ ಪರ್ವ,3,25
  446. ಬೆಂಗೊಡಲಿ, ಹಿಂತಿರುಗೋಣ, ಭೀಷ್ಮ ಪರ್ವ,5,10
  447. ಬೆಂಗೊಡು, ಬೆನ್ನು ತೋರಿಸು, ವಿರಾಟ ಪರ್ವ,8,12
  448. ಬೆಂಡು, ಪೊಳ್ಳು, ಆದಿ ಪರ್ವ,19,36
  449. ಬೆಂಡೇಳು, ತೇಲು, ಭೀಷ್ಮ ಪರ್ವ,4,9
  450. ಬೆಂಡೇಳೆ, ನಿಸ್ಸಾರವಾಗುವಂತೆ, ಭೀಷ್ಮ ಪರ್ವ,4,29
  451. ಬೆಂದುದ ಬೆದಕಿ ನೋಯಿಸಬೇಡ,"ಇದೊಂದು ಪಡೆನುಡಿ. ಮೊದಲೇ ಮೈಯೆಲ್ಲ ಬೆಂದು ವ್ಯಕ್ತಿ ಗೋಳಾಡುತ್ತಿದ್ದರೆ ಕೆಲವರು ಅದನ್ನು ಕೆದಕಲು ಹೋಗುತ್ತಾರೆ ಆಗ ಇನ್ನಷ್ಟು ಯಾತನೆ. ""ಬೆಂದುದನು ಕೀಸುವರೆ ಕಂಬಿಯಲಿ""", ವಿರಾಟ ಪರ್ವ,9,31
  452. ಬೆಂದೊಡಲ, ಸುಟ್ಟದೇಹವನ್ನು, ಗದಾ ಪರ್ವ,11,54
  453. ಬೆಂದೊಡಲ ಹೊರುವಿರಿ, ಭಂಡಬಾಳನ್ನು ಹೊರುತ್ತಿದ್ದೀರಿ. (ಬೆಂದೊಡಲ ಹೊರೆವಿರಿ ಎಂದೂ ಹೇಳಬಹುದೇನೋ)., ವಿರಾಟ ಪರ್ವ,3,64
  454. ಬೆಂಬತ್ತಳಿಕೆ, ಬೆನ್ನಿಗೆ ಕಟ್ಟಿಕೊಂಡಿದ್ದ ಮೂಡಿಗೆ, ವಿರಾಟ ಪರ್ವ,8,85
  455. ಬೆಂಬತ್ತು, ಅಟ್ಟಿಸಿಕೊಂಡು ಹೋಗು, ವಿರಾಟ ಪರ್ವ,3,15
  456. ಬೆಂಬಳಿ, ಹಿಂಬಾಲಿಸುವುದನ್ನು, ವಿರಾಟ ಪರ್ವ,3,42
  457. ಬೆಂಬಳಿ, ಹಿಂದೆಯೇ, ವಿರಾಟ ಪರ್ವ,6,14
  458. ಬೆಂಬಳಿಯಲಿ, ಬೆನ್ನಹಿಂದೆ, ಉದ್ಯೋಗ ಪರ್ವ,7,9
  459. ಬೆಂಬಳಿವಿಡಿ, ಹಿಂಬಾಲಿಸು, ವಿರಾಟ ಪರ್ವ,4,43
  460. ಬೆಂಬಿಡು, ಹಿಂಬಾಲಿಸದಿರು, ಆದಿ ಪರ್ವ,9,0
  461. ಬೆಗಡು, ಬೆರಗು, ಸಭಾ ಪರ್ವ,12,30
  462. ಬೆಗಡು, ದಿಗ್ಭ್ರಮೆ, ವಿರಾಟ ಪರ್ವ,3,98
  463. ಬೆಗಡು, ಅಚ್ಚರಿ, ಭೀಷ್ಮ ಪರ್ವ,8,0
  464. ಬೆಗಡು, ಉದ್ರೇಕ, ದ್ರೋಣ ಪರ್ವ,3,13
  465. ಬೆಗಡುಗೊಳಿಸು, ಭಯಗೊಳಿಸು, ಭೀಷ್ಮ ಪರ್ವ,7,12
  466. ಬೆಚ್ಚಂತೆ, ಉಂಟಾಗುವಂತೆ, ಆದಿ ಪರ್ವ,8,44
  467. ಬೆಚ್ಚವಳು, ಬೆಸೆದವಳು, ಸಭಾ ಪರ್ವ,2,48
  468. ಬೆಚ್ಚವು, ಬೆಸೆದವು, ಸಭಾ ಪರ್ವ,1,11
  469. ಬೆಚ್ಚಿದೆ, ಹೆದರಿದೆ , ಗದಾ ಪರ್ವ,5,45
  470. ಬೆಚ್ಚು, ಬೆದರು, ಗದಾ ಪರ್ವ,9,18
  471. ಬೆಟ್ಟಿತು, ಉಗ್ರ, ಆದಿ ಪರ್ವ,8,20
  472. ಬೆಟ್ಟಿತು, ಉಗ್ರವಾಯಿತು, ಉದ್ಯೋಗ ಪರ್ವ,5,7
  473. ಬೆಟ್ಟಿತು, ಕಠಿಣವಾಗಿದೆ (ಕಲ್ಲಾಗಿದೆ), ಭೀಷ್ಮ ಪರ್ವ,3,28
  474. ಬೆಟ್ಟಿದನು, ಒತ್ತಿದನು, ದ್ರೋಣ ಪರ್ವ,2,82
  475. ಬೆಡಗು, ಸೊಬಗು, ಆದಿ ಪರ್ವ,8,68
  476. ಬೆದಕಿ, ಪರೀಕ್ಷಿಸಿ, ಭೀಷ್ಮ ಪರ್ವ,3,58
  477. ಬೆದರು, ಬೆದರಿಕೆ, ಭೀಷ್ಮ ಪರ್ವ,10,13
  478. ಬೆನಕ, ಗಣಪ, ಆದಿ ಪರ್ವ,19,18
  479. ಬೆನ್ನಲಿ, ಹಿಂದೆಯೇ, ವಿರಾಟ ಪರ್ವ,5,39
  480. ಬೆನ್ನಲೆವ, ಬೆನ್ನಲಿ ತೂಗಾಡುವ, ಭೀಷ್ಮ ಪರ್ವ,4,12
  481. ಬೆಬ್ಬಳೆ, ಬೆರಗು, ಶಲ್ಯ ಪರ್ವ,3,8
  482. ಬೆಬ್ಬಳೆ, ಗಾಬರಿ, ಶಲ್ಯ ಪರ್ವ,2,39
  483. ಬೆರಗು, ವಿಸ್ಮಯ, ಆದಿ ಪರ್ವ,9,10
  484. ಬೆರಗು, ದಿಗ್ಭ್ರಮೆ, ಆದಿ ಪರ್ವ,8,88
  485. ಬೆರಗು, ಚಾತುರ್ಯ, ಆದಿ ಪರ್ವ,8,71
  486. ಬೆರಗು ಬಲಿದುದು, ಗಾಬರಿ ಹೆಚ್ಚಿತು., ಭೀಷ್ಮ ಪರ್ವ,6,5
  487. ಬೆರಗುಬಲಿ, ದಿಗ್ಭ್ರಾಂತನಾಗು, ಭೀಷ್ಮ ಪರ್ವ,7,7
  488. ಬೆರತು, ಕಂಗೆಡು, ಆದಿ ಪರ್ವ,8,36
  489. ಬೆರಸಿದುದು, ಎದುರಾದುದು , ಶಲ್ಯ ಪರ್ವ,2,13
  490. ಬೆರಸು, ಬೆನ್ನಟ್ಟು, ಕರ್ಣ ಪರ್ವ,2,6
  491. ಬೆರಸು, ಸೇರಿಸು, ಆದಿ ಪರ್ವ,17,19
  492. ಬೆರಳ ಮೂಗಿನಲ್ಲಿ, ಆಶ್ಚರ್ಯದಿಂದ ಅಥವಾ ಚಿಂತೆಯಿಂದ ಬೆರಳನ್ನು ಮೂಗಿನ ಮೇಲಿಡುಸುವುದು, ಗದಾ ಪರ್ವ,4,48
  493. ಬೆರಳುಗಳ ಬಾಯಲಿ, ಬಾಯೊಳಗೆ ಬೆರಳಿಟ್ಟು, ಗದಾ ಪರ್ವ,9,30
  494. ಬೆರೆ, ಗರ್ವಿಸು, ಕರ್ಣ ಪರ್ವ,4,1
  495. ಬೆಲೆಮಾಡು, ಬೆಲೆಕಟ್ಟು, ಗದಾ ಪರ್ವ,1,66
  496. ಬೆಸಕೈ, ಸೇವಿಸು ಸೇರು, ಉದ್ಯೋಗ ಪರ್ವ,10,13
  497. ಬೆಸಕೈವ, ಸೇವೆ ಸಲ್ಲಿಸುವ, ಭೀಷ್ಮ ಪರ್ವ,5,15
  498. ಬೆಸಕೈವ, ಸೇವೆ ಮಾಡುವ, ವಿರಾಟ ಪರ್ವ,7,17
  499. ಬೆಸಗೈದಪವಿದಾರಿಗೆ, ಯಾರ ಆಜ್ಞೆಯಂತೆ ನಡೆದುಕೊಳ್ಳುತ್ತವೆ ? ಯಾರ ಸೇವೆಯನ್ನು ಮಾಡುತ್ತವೆ ?, ವಿರಾಟ ಪರ್ವ,6,39
  500. ಬೆಸಗೈದು, ಸೇವೆ ಮಾಡಿ, ಆದಿ ಪರ್ವ,19,35
  501. ಬೆಸಗೊಂಡ, ಕೇಳಿದ., ವಿರಾಟ ಪರ್ವ,1,17
  502. ಬೆಸಗೊಳ್ಳಿ, ಕೇಳಿ, ವಿರಾಟ ಪರ್ವ,8,29
  503. ಬೆಸದ, ಕೆಲಸಗಾರ/ಕಾರ್ಮಿಕ, ಉದ್ಯೋಗ ಪರ್ವ,3,100
  504. ಬೆಸಲಾಗಲಿ, ಬಾಣಗಳನ್ನು ಹಡೆಯುವಂತಾಗಲಿ, ದ್ರೋಣ ಪರ್ವ,3,73
  505. ಬೆಸಲು, ಹೆರಿಗೆ, ಉದ್ಯೋಗ ಪರ್ವ,11,15
  506. ಬೆಸಸು, ಅಪ್ಪಣೆ ಮಾಡು , ವಿರಾಟ ಪರ್ವ,1,6
  507. ಬೆಸುಗೆ, ಸೇರಿಕೆ, ಆದಿ ಪರ್ವ,12,9
  508. ಬೆಳಗು, ಪ್ರಕಾಶಿಸು, ಆದಿ ಪರ್ವ,8,9
  509. ಬೆಳವಿಗೆ, ಬೆಳವಣಿಗೆ, ಆದಿ ಪರ್ವ,8,23
  510. ಬೆಳವಿಗೆ, ಏಳಿಗೆ/ಬೆಳವಣಿಗೆ., ಉದ್ಯೋಗ ಪರ್ವ,8,10
  511. ಬೆಳುಗವತೆ, ದರೋಡೆ, ಆದಿ ಪರ್ವ,18,17
  512. ಬೆಳುಗವಿತೆ, ದಡ್ಡಕವಿತೆ, ಸಭಾ ಪರ್ವ,1,45
  513. ಬೆಳುನಗೆ, ಪ್ರಸನ್ನ ನಗೆ, ಆದಿ ಪರ್ವ,15,19
  514. ಬೆಳೆಸಿರಿ, ಬೆಳೆಯ ಸಂಪತ್ತು, ಗದಾ ಪರ್ವ,12,2
  515. ಬೆಳ್ಳಾಳ ಹಬ್ಬುಗೆ, ಹುರುಳಿಲ್ಲದ ಉಬ್ಬಟೆ ?, ಸಭಾ ಪರ್ವ,12,13
  516. ಬೇಗಡೆ, ರಂಧ್ರ, ಕರ್ಣ ಪರ್ವ,4,15
  517. ಬೇಗಡೆ, ರಂಧ್ರ, ಕರ್ಣ ಪರ್ವ,26,14
  518. ಬೇಗಡೆ, ಕವಚ, ಅರಣ್ಯ ಪರ್ವ,8,44, , , E0BECBB6D5BD, , , , , , , , , ,
  519. ಬೇಗಡೆ, ಕಾಂತಿ, ಶಲ್ಯ ಪರ್ವ,2,30, , , E0BECBB6D5BD, , , , , , , , , ,
  520. ಬೇಗುದಿ, ಹೊಟ್ಟೆಕಿಚ್ಚು, ಗದಾ ಪರ್ವ,1,62
  521. ಬೇಗುದಿ, ತೀವ್ರವಾದ ಬೇಗೆ, ಆದಿ ಪರ್ವ,14,29
  522. ಬೇಗೆ, ಉರಿ, ಗದಾ ಪರ್ವ,4,48
  523. ಬೇಗೆ, ತಾಪ, ಆದಿ ಪರ್ವ,20,30
  524. ಬೇಗೆ, ದಹನ, ಆದಿ ಪರ್ವ,20,65
  525. ಬೇಟ, ಪ್ರೇಮ, ವಿರಾಟ ಪರ್ವ,8,29
  526. ಬೇಟೆಗಾರರ ಬಳಗವುಳ್ಳವನಹೆ, ಸೂತರು ರಥ ನಿರ್ಮಾಣ ಮಾಡುವ, ವಿರಾಟ ಪರ್ವ,8,24
  527. ಬೇರ್ವರಿ ಬೇರು+ಪರಿ, ಬೇರು ಬಿಟ್ಟಿದೆ, ವಿರಾಟ ಪರ್ವ,2,46
  528. ಬೇಸರದೆ, ಬೇಸರಗೊಳ್ಳದೆ ಮತ್ತೆ, ಸಭಾ ಪರ್ವ,3,57
  529. ಬೇಸರಿನ ಬೇಗೆಯಲಿ, ಬೇಸರದ ದುಃಖದಿಂದ, ಸಭಾ ಪರ್ವ,1,62
  530. ಬೇಸರು, ವ್ಯರ್ಥಶ್ರಮ, ಭೀಷ್ಮ ಪರ್ವ,3,58
  531. ಬೇಹ, ಬೇಕಾಗುವ, ಭೀಷ್ಮ ಪರ್ವ,1,29
  532. ಬೇಹ, ಬೇಕಾದ, ಗದಾ ಪರ್ವ,3,32
  533. ಬೇಹ, ಬೇಕಾದ, ಗದಾ ಪರ್ವ,1,45
  534. ಬೇಹ, ಬೇಕಾದವರು, ಆದಿ ಪರ್ವ,8,78
  535. ಬೇಹ, ಸಮರ್ಥರಾದ, ಕರ್ಣ ಪರ್ವ,18,30
  536. ಬೇಹ, ಆಪ್ತ , ಅರಣ್ಯ ಪರ್ವ,19,20
  537. ಬೇಹಭಟರು, ವೀರ ಭಟರು, ಉದ್ಯೋಗ ಪರ್ವ,8,28
  538. ಬೇಹವ, ತನ್ನ ಕಡೆಯವರಿಗೆ, ಅರಣ್ಯ ಪರ್ವ,18,39
  539. ಬೇಹವರು, ಆಪ್ತರು, ದ್ರೋಣ ಪರ್ವ,18,46
  540. ಬೇಹಿನವರು, ಗೂಢಚಾರರು, ಉದ್ಯೋಗ ಪರ್ವ,1,17
  541. ಬೇಹು, ಶೋಧ, ಕರ್ಣ ಪರ್ವ,17,14
  542. ಬೇಹು, ಗೂಢಚರ್ಯೆ, ವಿರಾಟ ಪರ್ವ,4,10
  543. ಬೇಹುಗಾರರು, ಗೂಢಚಾರರು, ಆದಿ ಪರ್ವ,16,15
  544. ಬೇಳಂಬ, ಮೋಸ , ಕರ್ಣ ಪರ್ವ,9,31
  545. ಬೇಳಂಬ, ಕೇಡು, ಆದಿ ಪರ್ವ,8,91
  546. ಬೇಳಾಗು, ಮಂಕಾಗು, ಸಭಾ ಪರ್ವ,10,7
  547. ಬೇಳಿದ, ಅರ್ಪಿಸಿದ, ಉದ್ಯೋಗ ಪರ್ವ,4,89
  548. ಬೇಳಿದುದು, ಬೇಯಿಸಿತು, ಗದಾ ಪರ್ವ,11,48
  549. ಬೇಳು, ಯಾಗ ಮಾಡು, ಕರ್ಣ ಪರ್ವ,24,12
  550. ಬೇಳು, ಅಹುತಿಕೊಡು, ವಿರಾಟ ಪರ್ವ,7,9
  551. ಬೇಳುವನು, ಆಹುತಿ ಸ್ವೀಕರಿಸುವನು, ಭೀಷ್ಮ ಪರ್ವ,7,32
  552. ಬೇಳುವೆ, ಬೆಂದುಹೋದ, ಗದಾ ಪರ್ವ,7,19
  553. ಬೇಳುವೆ, ಮಾಯೆ, ಆದಿ ಪರ್ವ,19,36
  554. ಬೇಳುವೆ, ಕಳವಳ , ಆದಿ ಪರ್ವ,4,29
  555. ಬೇಳುವೆ, ದುರಾಲೋಚನೆ, ಆದಿ ಪರ್ವ,8,84
  556. ಬೈಚಿಡು, ಮುಚ್ಚಿಡು, ಭೀಷ್ಮ ಪರ್ವ,8,33
  557. ಬೈಸಿಕೆ, ಬೆಸುಗೆ, ದ್ರೋಣ ಪರ್ವ,16,44
  558. ಬೈಸಿಕೆ, ದೃಢತೆ., ಸಭಾ ಪರ್ವ,12,28
  559. ಬೈಸಿಗೆದೆಗೆ, ಕುಳಿತು ಎದ್ದು ಮಾಡುವ ಬಸ್ಕಿ, ಕರ್ಣ ಪರ್ವ,21,12
  560. ಬೊಂಬಾಳ ದೀಪ, ಕಂಬಗಳಿಗೆ ಹಾಕಿರುವ ಬೊಗಸೆಯಾಕಾರದ ದೀಪ, ದ್ರೋಣ ಪರ್ವ,1,19
  561. ಬೊಂಬಾಳ ದೀವಿಗೆ, ಪಂಜು, ದ್ರೋಣ ಪರ್ವ,15,48
  562. ಬೊಂಬಾಳ ದೀವಿಗೆ, ಪ್ರಕಾಶಮಾನವಾಗಿರುವ ದೀಪ, ದ್ರೋಣ ಪರ್ವ,8,43
  563. ಬೊಂಬುಳಿ, ಒಂದು ಬಗೆಯ ತಮಟೆ, ವಿರಾಟ ಪರ್ವ,8,3
  564. ಬೊಗ್ಗು, ಬಾಗಿದ ಕಹಳೆ, ಭೀಷ್ಮ ಪರ್ವ,6,9
  565. ಬೊಗ್ಗು, ಹೆಗ್ಗಹಳೆ, ಭೀಷ್ಮ ಪರ್ವ,4,61
  566. ಬೊಡ್ಡಿ, (ಐವರಿಗೆ ಹೆಂಡತಿಯಾದ) ಆ ಹಾದರಗಿತ್ತಿ, ಸಭಾ ಪರ್ವ,12,43
  567. ಬೊಡ್ಡಿ, ಸೂಳೆÉ, ವಿರಾಟ ಪರ್ವ,8,29
  568. ಬೊಪ್ಪನಭಾವ, ಧರ್ಮರಾಯನ ತಂದೆ ಪಾಂಡುರಾಜನ ಪತ್ನಿಯಾದ ಮಾದ್ರಿಯ ಅಣ್ಣ ಶಲ್ಯ. ಅಂಘೈಸು, ಶಲ್ಯ ಪರ್ವ,1,29
  569. ಬೊಬ್ಬಳಿಕೆ, ನೀರಿನ ಗುಳ್ಳೆಗಳು, ಗದಾ ಪರ್ವ,5,32
  570. ಬೊಬ್ಬಾಟ, ಕೂಗಾಟ (ಈ ಸಂದರ್ಭದಲ್ಲಿ ಪ್ರತಿಜ್ಞೆಗಳು), ಗದಾ ಪರ್ವ,6,16
  571. ಬೊಬ್ಬುಲಿ, ಜಾಲಿಗಿಡ, ಆದಿ ಪರ್ವ,8,5
  572. ಬೊಬ್ಬುಳಿಕೆ, ನೀರಿನಗುಳ್ಳೆ, ಗದಾ ಪರ್ವ,5,2
  573. ಬೊಮ್ಮಚರಿಯ, ಬ್ರಹ್ಮಚರ್ಯ, ಅರಣ್ಯ ಪರ್ವ,15,1
  574. ಬೊಮ್ಮನ ಸತಿ, ಬ್ರಹ್ಮನ ಹೆಂಡತಿ, ವಿರಾಟ ಪರ್ವ,2,11
  575. ಬೋಧಿಸಿದ, ಗೀತೋಪದೇಶ ಮಾಡಿದನು., ಭೀಷ್ಮ ಪರ್ವ,3,0
  576. ಬೋಳ, ಮೃತ್ಯು , ಭೀಷ್ಮ ಪರ್ವ,3,29
  577. ಬೋಳಯಿಸಿ, ಚಪ್ಪರಿಸಿ, ಭೀಷ್ಮ ಪರ್ವ,3,2
  578. ಬೋಳಯಿಸಿದನು, ಮೈಸವರಿದನು., ಭೀಷ್ಮ ಪರ್ವ,3,3
  579. ಬೋಳವಿಸು, ಸಮಾಧಾನ ಪಡಿಸು, ಕರ್ಣ ಪರ್ವ,24,49
  580. ಬೋಳೆ, ಮರದ ಬಾಣ, ಕರ್ಣ ಪರ್ವ,18,21
  581. ಬೋಳೆಯಂಬು, ಕವಲಂಬು (ಎರಡು ಮೊನೆಗಳುಳ್ಳ ಬಾಣ) ಕೈಕೊಂಡು, ಭೀಷ್ಮ ಪರ್ವ,10,1
  582. ಬೋಳೆಯಂಬು, ಕುದುರೆಲಾಳದ ಆಕಾರದ ತುದಿಯಿರುವ ಬಾಣ, ಗದಾ ಪರ್ವ,2,35
  583. ಬೋಳೆಯಂಬುಗಳು, ಕವಲು ಬಾಣಗಳು, ಭೀಷ್ಮ ಪರ್ವ,10,9
  584. ಬೋಳೈಸಿ, ಪ್ರಶಂಸೆ ಮಾಡುತ್ತ, ಭೀಷ್ಮ ಪರ್ವ,4,96
  585. ಬೋಳೈಸು, ಪ್ರೀತಿಯಿಂದ ಮುದ್ದಾಡು, ಗದಾ ಪರ್ವ,1,26
  586. ಬೋಳೈಸು, ಸವರು, ಆದಿ ಪರ್ವ,14,14
  587. ಬೋಳೈಸು, ಸಮಾಧಾನ ಮಾಡು., ಗದಾ ಪರ್ವ,8,35
  588. ಬ್ರಹ್ಮಾಂಡಮಂಡಲ, ಬ್ರಹ್ಮನಿಂದ ನಿರ್ಮಿತವಾದ ಲೋಕಗಳು., ಗದಾ ಪರ್ವ,12,17
  589. ಬ್ರಾಹ್ಮ, ಪರಬ್ರಹ್ಮ ವಿಷಯಕವಾದದು, ಆದಿ ಪರ್ವ,11,44
  590. ಬ್ರಾಹ್ಮಣ್ಯ, ಬ್ರಾಹ್ಮಣನ ಆಚಾರ, ಉದ್ಯೋಗ ಪರ್ವ,3,30
  591. ಭಂಗ, ಮುರಿಯುವಿಕೆ, ಆದಿ ಪರ್ವ,2,37
  592. ಭಂಗ, ಅವಮಾನ, ಗದಾ ಪರ್ವ,3,27
  593. ಭಂಗ, ಅಡ್ಡಿ/ಕೋಲು, ಉದ್ಯೋಗ ಪರ್ವ,3,136
  594. ಭಂಗಿ, ಬಂಗಿ, ಗದಾ ಪರ್ವ,11,63
  595. ಭಂಗಿ, ರೂಪ, ಆದಿ ಪರ್ವ,7,41
  596. ಭಂಗಿ, ರೀತಿ., ಆದಿ ಪರ್ವ,13,14
  597. ಭಂಗಿತ, ಅವಮಾನಕ್ಕೆ ಗುರಿಯಾದವ, ವಿರಾಟ ಪರ್ವ,3,57
  598. ಭಂಗಿಸು, ತೊಂದರೆ ಕೊಡು, ಗದಾ ಪರ್ವ,12,3
  599. ಭಂಜನ, ಸಂಹಾರ, ಉದ್ಯೋಗ ಪರ್ವ,8,51
  600. ಭಂಜವಣೆ, ಬಾಗುವಿಕೆ, ಆದಿ ಪರ್ವ,13,25
  601. ಭಂಜಿಕೆ, ಮೂರ್ತಿ, ಆದಿ ಪರ್ವ,12,14
  602. ಭಂಡಾರಿಸಿತು, ಆಯುಧಾಗಾರಕ್ಕೆÀ ಸೇರಿತು, ಉದ್ಯೋಗ ಪರ್ವ,1,39
  603. ಭಕ್ಷಿಸಿದ, ತಿಂದ., ಉದ್ಯೋಗ ಪರ್ವ,4,92
  604. ಭಗಣರತ್ನ, ತಾರಾರತ್ನ, ಭೀಷ್ಮ ಪರ್ವ,4,18
  605. ಭಗದತ್ತಾಂಕ, ಭಗದತ್ತ ಎಂಬ ಹೆಸರಿನ ವ್ಯಕ್ತಿ, ದ್ರೋಣ ಪರ್ವ,3,77
  606. ಭಗ್ನೋತ್ಕರುಷ ಹರುಷಿತ, ಸಂತೋಷ ಸಂಭ್ರಮಗಳ ಭಾವ ಭಂಗಗೊಂಡ, ವಿರಾಟ ಪರ್ವ,8,28
  607. ಭಣಿತೆ, ಮಾತಿನ ರೀತಿ, ಕರ್ಣ ಪರ್ವ,9,21
  608. ಭದ್ರ, ಅಂದವಾದ, ಆದಿ ಪರ್ವ,7,14
  609. ಭದ್ರ, ಗಟ್ಟಿಗ, ಉದ್ಯೋಗ ಪರ್ವ,3,116
  610. ಭದ್ರಗಜ, ಮಂಗಳಕರವಾದ ಆನೆ, ಗದಾ ಪರ್ವ,10,9
  611. ಭದ್ರದುಪ್ಪರ ಶಾಲೆ, ಗಟ್ಟಿಯಾದ ಮಹಡಿಯ ಮನೆ, ಉದ್ಯೋಗ ಪರ್ವ,11,44
  612. ಭದ್ರಮಂಟಪ, ಮಂಗಳ ಮಂಟಪ, ಆದಿ ಪರ್ವ,14,1
  613. ಭದ್ರಾಕಾರ, ಸುಂದರವಾದ ರೂಪ, ಆದಿ ಪರ್ವ,15,14
  614. ಭದ್ರಾಸನ, ಉತ್ತಮವಾದ ಪೀಠ, ಆದಿ ಪರ್ವ,7,55
  615. ಭದ್ರಾಸ್ತರಣ, ಭದ್ರಾಸ್ತರಣ ಎನ್ನುವುದು ಅಧಿಷ್ಠಾನದ ವಿಧ ಎಂಬುದು ಸ್ಪಷ್ಟವಾಗುತ್ತದೆ, ಆದಿ ಪರ್ವ,8,69
  616. ಭದ್ರೋಪರಿ, ಮಂಗಳಕರವಾದ ಉಪ್ಪರಿಗೆಯಮನೆ, ಗದಾ ಪರ್ವ,3,40
  617. ಭಯತಿಮಿರ, ಭಯವೆಂಬ ಕತ್ತಲೆ, ಗದಾ ಪರ್ವ,4,19
  618. ಭಯಭರವಿವರ್ಜಿತ, ಭಯದಿಂದ ದೂರನಾದ, ಭೀಷ್ಮ ಪರ್ವ,6,31
  619. ಭಯಾನಕರಸ, ಭಯವೆಂಬ ಸ್ಥಾಯೀ ಭಾವದಿಂದ ಉಂಟಾದ ರಸ, ಭೀಷ್ಮ ಪರ್ವ,8,18
  620. ಭರ, ಉತ್ಕಟೇಚ್ಛೆ, ಆದಿ ಪರ್ವ,19,26
  621. ಭರ, ತಂತ್ರ, ಉದ್ಯೋಗ ಪರ್ವ,9,41
  622. ಭರಣ, ಪೋಷಣೆ, ಉದ್ಯೋಗ ಪರ್ವ,1,4
  623. ಭರಣ, ಉಳಿಸುವಿಕೆ, ವಿರಾಟ ಪರ್ವ,6,32
  624. ಭರಣರು, ಕಾಪಾಡುವವರು, ವಿರಾಟ ಪರ್ವ,1,23
  625. ಭರಣಿ, ಕರಂಡ, ಆದಿ ಪರ್ವ,12,16
  626. ಭರತ, ಭರತಮುನಿಯ ನಾಟ್ಯಶಾಸ್ತ್ರ, ಆದಿ ಪರ್ವ,15,6
  627. ಭರತಕುಲ, ದುಷ್ಯಂತನ ಮಗನಿಂದಾಗಿ ಕುರುವಂಶಕ್ಕೆ 'ಭರತಕುಲ'ವೆಂ, ಗದಾ ಪರ್ವ,11,43
  628. ಭರದ, ಹೆಚ್ಚಳದ, ಉದ್ಯೋಗ ಪರ್ವ,6,9
  629. ಭರದಲಿ, ವೇಗವಾಗಿ, ಗದಾ ಪರ್ವ,8,54
  630. ಭರದಿನೈದುತ, ಶೀಘ್ರ ಗತಿಯಲ್ಲಿ ಬg, ಸಭಾ ಪರ್ವ,3,66
  631. ಭರಿಕೈ, ಆನೆಯ ಸೊಂಡಿಲು, ಗದಾ ಪರ್ವ,1,35
  632. ಭರ್ಗ, ರುದ್ರ, ವಿರಾಟ ಪರ್ವ,8,80
  633. ಭರ್ತೃ, ಯಜಮಾನ, ದ್ರೋಣ ಪರ್ವ,8,38
  634. ಭವ, ಜನ್ಮ (ಹುಟ್ಟು, ದ್ರೋಣ ಪರ್ವ,7,28
  635. ಭವ, ಹುಟ್ಟು ಸಾವುಗಳೆಂಬ ಚಕ್ರ, ಗದಾ ಪರ್ವ,1,22
  636. ಭವ, ಹುಟ್ಟುಸಾವುಗಳು, ಗದಾ ಪರ್ವ,11,44
  637. ಭವ, ಹುಟ್ಟುಸಾವುಗಳೆಂಬ ಚಕ್ರ, ಗದಾ ಪರ್ವ,13,16
  638. ಭವಜಲಧಿ, ಹುಟ್ಟುಸಾವುಗಳೆಂಬ ಸಾಗರ, ಗದಾ ಪರ್ವ,11,33
  639. ಭವಣಿ, ತೊಂದರೆ, ವಿರಾಟ ಪರ್ವ,6,65
  640. ಭವಣಿಗೆ, ಬವಣಿಗೆ, ಅರಣ್ಯ ಪರ್ವ,1,11
  641. ಭವಣಿಗೆ, ಬವಣಿಗೆ , ವಿರಾಟ ಪರ್ವ,10,41, , , ಸಂಕಟ,
  642. ಭವತ್, ನಿನ್ನೆ, ಸಭಾ ಪರ್ವ,1,27
  643. ಭವನಭಕ್ತಿ, ಮನೆಯ ಮೋಹ, ಕರ್ಣ ಪರ್ವ,7,33
  644. ಭವನಿಕೆ, ಒಂದು ಬಗೆಯ ಮಂಟಪ., ಆದಿ ಪರ್ವ,7,14
  645. ಭವವಿಂಧ್ಯ, ಸಂಸಾರವೆಂಬ ವಿಂಧ್ಯಾಟವಿ, ಭೀಷ್ಮ ಪರ್ವ,3,37
  646. ಭವಸಿಂಧು, ಸಂಸಾರ ಸಾಗರ, ಭೀಷ್ಮ ಪರ್ವ,3,27
  647. ಭವಾಂತರ, ಜನ್ಮಾಂತರ, ಆದಿ ಪರ್ವ,4,60
  648. ಭಾಗದೇಯ, ವಿಧಿಬರಹ, ಗದಾ ಪರ್ವ,8,62
  649. ಭಾಗದೇಯ, ಅದÀೃಷ್ಟ , ಗದಾ ಪರ್ವ,7,20
  650. ಭಾಗಧೇಯ, ಬಾಧ್ಯಸ್ಥ, ಕರ್ಣ ಪರ್ವ,17,40
  651. ಭಾಗವತ, ವಿಷ್ಣು ಭಕ್ತ, ಭೀಷ್ಮ ಪರ್ವ,8,12
  652. ಭಾಗವತ ಮಸ್ತಕ ರತ್ನ, ಭಕ್ತ ಶಿರೋಮಣಿ., ಉದ್ಯೋಗ ಪರ್ವ,8,4
  653. ಭಾಗ್ಯ, ಪುಣ್ಯ , ಗದಾ ಪರ್ವ,4,2
  654. ಭಾಗ್ಯ, ಅದೃಷ್ಟ, ಆದಿ ಪರ್ವ,15,14
  655. ಭಾಗ್ಯದ, ಅದೃಷ್ಟದ, ಸಭಾ ಪರ್ವ,4,1
  656. ಭಾಜನ, ಭಾಂಡ, ಆದಿ ಪರ್ವ,13,43
  657. ಭಾಜನ, ಪಾತ್ರನಾದವನು, ಆದಿ ಪರ್ವ,16,57
  658. ಭಾಣ, ಕುದುರೆಯ ಬಾಯಿಗೆ ಕಟ್ಟುವ ಆಹಾರದ ಚೀಲ / ಹುಲ್ಲಿನ ಚೀಲ, ದ್ರೋಣ ಪರ್ವ,10,36
  659. ಭಾನು, ಸೂರ್ಯ , ವಿರಾಟ ಪರ್ವ,4,61
  660. ಭಾನು ಸನ್ನಿಭ, ಸೂರ್ಯನಿಗೆ ಸಮನಾದವನು, ದ್ರೋಣ ಪರ್ವ,1,32
  661. ಭಾನುಸನ್ನಿಭ, ಸೂರ್ಯನಿಗೆ ಸಮನಾದವನು , ಶಲ್ಯ ಪರ್ವ,1,12
  662. ಭಾಪು, ಭಲೆ , ಭೀಷ್ಮ ಪರ್ವ,6,12
  663. ಭಾರ, ಹೊಣೆಗಾರಿಕೆ, ಆದಿ ಪರ್ವ,17,7
  664. ಭಾರಂಕ, ಸ್ಪರ್ಧೆ, ಗದಾ ಪರ್ವ,5,55
  665. ಭಾರಂಕ, ಮಹಾಯುದ್ಧ, ಕರ್ಣ ಪರ್ವ,19,2
  666. ಭಾರಂಕ, ಹೊಣೆ , ಗದಾ ಪರ್ವ,12,20
  667. ಭಾರಂಕ, ಘೋರ ಸಮರ, ಭೀಷ್ಮ ಪರ್ವ,2,20
  668. ಭಾರಂಕದಾಳು, ಯೋಧÀರು, ಕರ್ಣ ಪರ್ವ,3,14
  669. ಭಾರಣೆ, ಭಯಂಕರವಾದ , ಗದಾ ಪರ್ವ,9,18
  670. ಭಾರಣೆ, ಭರ, ವಿರಾಟ ಪರ್ವ,3,7
  671. ಭಾರಣೆ, ಶಕ್ತಿ, ಗದಾ ಪರ್ವ,1,53, ,
  672. ಭಾರಣೆ, ಆಟಾಟೋಪ, ಭೀಷ್ಮ ಪರ್ವ,8,6
  673. ಭಾರಣೆ, ಹೊರೆ , ದ್ರೋಣ ಪರ್ವ,14,1,
  674. ಭಾರಣೆ, ಹೊಡೆತ, ಶಲ್ಯ ಪರ್ವ,3,36
  675. ಭಾರಣೆ, ಕರ್ತವ್ಯ ನಿರ್ವಹಣೆ, ಭೀಷ್ಮ ಪರ್ವ,8,53
  676. ಭಾರಣೆ, ಘನತೆ, ಆದಿ ಪರ್ವ,13,27
  677. ಭಾರಣೆ ಬಿಗುಹು, ಪರಾಕ್ರಮದ ಹಿರಿಮೆ, ಭೀಷ್ಮ ಪರ್ವ,1,12
  678. ಭಾರತ, ಭಾರತವಂಶ, ಗದಾ ಪರ್ವ,12,2
  679. ಭಾರದ ಹೊರಿಗೆ, ಕಾಪಾಡುವ ಹೊಣೆ, ಭೀಷ್ಮ ಪರ್ವ,7,19
  680. ಭಾರದಲಿ, ಅತಿಯಾದ, ಗದಾ ಪರ್ವ,13,6
  681. ಭಾರದ್ವಾಜ, ಭರದ್ವಾಜ ಋಷಿಯ ಮಗ , ವಿರಾಟ ಪರ್ವ,8,36
  682. ಭಾರವಣೆ, ಭಾರವಾದ ಹೃದಯ, ಗದಾ ಪರ್ವ,4,46
  683. ಭಾರವಣೆ, ಸಾಂದ್ರತೆ, ದ್ರೋಣ ಪರ್ವ,1,14
  684. ಭಾರವಣೆ, ಅಟಾಟೋಪ, ಆದಿ ಪರ್ವ,7,28
  685. ಭಾರವಣೆ, ಘನತೆ , ಗದಾ ಪರ್ವ,6,0, , , ಭಾರ, ಹೆಚ್ಚಳ,
  686. ಭಾರಾಂಕ, ಮಹಾಯುದ್ಧ, ದ್ರೋಣ ಪರ್ವ,15,3
  687. ಭಾರಾಂಕಣ, ವಿಸ್ತಾರವಾದ ಅಂಕಣ, ಸಭಾ ಪರ್ವ,7,35
  688. ಭಾರಾಂಕಲವುಡಿ, ಭಾರಿಯ ಕಬ್ಬಿಣದ ಆಯುಧ., ಭೀಷ್ಮ ಪರ್ವ,4,53
  689. ಭಾರಿ, ಮಹತ್ತ್ವ, ಆದಿ ಪರ್ವ,6,27
  690. ಭಾರಿ, ದೊಡ್ಡ, ಆದಿ ಪರ್ವ,14,3
  691. ಭಾರಿಸಿತು, ಮೊಳಗಿತು, ಭೀಷ್ಮ ಪರ್ವ,6,36
  692. ಭಾರಿಸಿತು, ಹೊಡೆಯಿತು , ಗದಾ ಪರ್ವ,8,51
  693. ಭಾರಿಸು, ಭಾರವಾಗು, ವಿರಾಟ ಪರ್ವ,6,9
  694. ಭಾರ್ಗವ, ಶುಕ್ರಚಾರ್ಯ, ಕರ್ಣ ಪರ್ವ,22,6
  695. ಭಾರ್ಗವ, ಪರಶುರಾಮ, ಗದಾ ಪರ್ವ,13,2
  696. ಭಾವ, ಭಾವನಾದ ಕೌರವ, ವಿರಾಟ ಪರ್ವ,3,64
  697. ಭಾವ, ಸ್ವರೂಪ, ಆದಿ ಪರ್ವ,13,14
  698. ಭಾವ, ಸ್ಥಿತಿ, ಉದ್ಯೋಗ ಪರ್ವ,5,7
  699. ಭಾವ, ಮನಸ್ಸಿನ ಸ್ಥಿತಿ, ಆದಿ ಪರ್ವ,13,57
  700. ಭಾವಜ್ಞ, ಮನಸ್ಸಿನ ಇಂಗಿತವನ್ನು ಅರಿಯುವವನು, ಕರ್ಣ ಪರ್ವ,18,1
  701. ಭಾವಶುದ್ಧಿ, ಶುಚಿಯಾದ ಚಿಂತನೆ, ದ್ರೋಣ ಪರ್ವ,1,33
  702. ಭಾವಿತ, ಉಂಟಾದ, ಆದಿ ಪರ್ವ,19,30
  703. ಭಾವಿಸು, ಆದರಿಸು, ಆದಿ ಪರ್ವ,8,26
  704. ಭಾವೋತ್ಸವ, ಮನಸ್ಸಿನ ಸಂಭ್ರಮ, ಆದಿ ಪರ್ವ,15,25
  705. ಭಾಷಾಚರಣ, ನುಡಿದಂತೆ ನಡೆಯುವುದು, ಗದಾ ಪರ್ವ,8,61
  706. ಭಾಷೆ, ವಚನ, ಉದ್ಯೋಗ ಪರ್ವ,10,28
  707. ಭಾಷೆ (ಕೊಟ್ಟರೇ), ಮಾತು (ಕೊಟ್ಟರೇ), ಭೀಷ್ಮ ಪರ್ವ,1,20
  708. ಭಾಷೆ ಅತಿಬಳರು, ಪಣತೊಟ್ಟು ಹೋರಾಡುವ ಸಾಹಸಿಗಳು, ಭೀಷ್ಮ ಪರ್ವ,4,40
  709. ಭಾಷೆಗಳುಪರು, ಕೊಟ್ಟ ಮಾತಿಗೆ ತಪ್ಪರು (ಅಳುಪು, ಗದಾ ಪರ್ವ,7,50
  710. ಭಾಷೆಯ ಬಳಿಗೆ, ಭಾಷೆಯ ಅನುಸಾರ, ಭೀಷ್ಮ ಪರ್ವ,6,6
  711. ಭಾಸುರ, ಜಾಜ್ವಲ್ಯಮಾನ, ಭೀಷ್ಮ ಪರ್ವ,3,63
  712. ಭಾಳ, ಹಣೆ., ಗದಾ ಪರ್ವ,7,21
  713. ಭಾಳದಕ್ಕರ, ಹಣೆಯ ಬರಹ, ವಿರಾಟ ಪರ್ವ,8,27
  714. ಭಾಳನೇತ್ರ, ರುದ್ರ (ಹಣೆಗಣ್ಣಿನವ) ನೋಟಕ, ವಿರಾಟ ಪರ್ವ,8,21
  715. ಭಾಳನೇತ್ರ, ಹಣೆಗಣ್ಣ, ಸಭಾ ಪರ್ವ,2,75
  716. ಭಾಳಭೂತಿಯ, ಹಣೆಯಲ್ಲಿ ವಿಭೂತಿ ಧರಿಸಿದ, ಭೀಷ್ಮ ಪರ್ವ,4,41
  717. ಭಾಳಾಕ್ಷ, ಶಿವ, ಭೀಷ್ಮ ಪರ್ವ,10,10
  718. ಭಿಂಡಿವಾಳ, ಕವಣೆ, ಭೀಷ್ಮ ಪರ್ವ,3,20
  719. ಭಿಡೆ, ಸಂಕೋಚ, ಗದಾ ಪರ್ವ,3,10, ,
  720. ಭಿತ್ತಿಯ ಚಿತ್ರ, ಗೋಡೆಯ ಮೇಲೆ ಬರೆದ ಚಿತ್ರ., ಭೀಷ್ಮ ಪರ್ವ,10,16
  721. ಭಿನ್ನ, ಬೇರೆ, ಉದ್ಯೋಗ ಪರ್ವ,9,71
  722. ಭಿನ್ನ, ಭೇದ, ಉದ್ಯೋಗ ಪರ್ವ,4,44
  723. ಅಭಿವಾದ, ನಮಸ್ಕಾರ, ಅರಣ್ಯ ಪರ್ವ,4,9
  724. ಭೀತ, ಭಯಗೊಂಡ, ಆದಿ ಪರ್ವ,7,39
  725. ಭೀತ, ಹೆದರಿದವ, ವಿರಾಟ ಪರ್ವ,8,76
  726. ಭೀತಾಕುಳ, ಹೆದರಿದವನು, ವಿರಾಟ ಪರ್ವ,5,13
  727. ಭೀತಿ, ಹೆದರಿಕೆ, ಆದಿ ಪರ್ವ,7,7
  728. ಭೀತಿ ಬೀತುದು, ಅಂಜಿಕೆ ದೂರವಾಯಿತು, ಭೀಷ್ಮ ಪರ್ವ,10,14
  729. ಭೀಭತ್ಸೆ, ಜುಗುಪ್ಸೆ, ಆದಿ ಪರ್ವ,16,44
  730. ಭೀಮ ಸನ್ನಿಭರು, ಭೀಮನಿಗೆ ಸಮನಾದವರು, ವಿರಾಟ ಪರ್ವ,3,57
  731. ಭೀಮತನು, ಭೀಮನ ಪ್ರತಿಮೆ, ಗದಾ ಪರ್ವ,11,39
  732. ಭೀಮನ ಜನಕ, ವಾಯು., ಗದಾ ಪರ್ವ,3,37
  733. ಭೀಮವಿಕ್ರಮ, ಭಯಂಕರ ಪರಾಕ್ರಮ, ಗದಾ ಪರ್ವ,10,21
  734. ಭೀಷಣ, ಭಯಾನಕವಾದ, ಶಲ್ಯ ಪರ್ವ,3,59
  735. ಭುಕ್ತ, ತಿಂದ, ಆದಿ ಪರ್ವ,16,45
  736. ಭುಗಿಲ್, ಧಗಧಗಿಸಿ, ಆದಿ ಪರ್ವ,20,55
  737. ಭುಗಿಲ್ ಎನ್ನು, ಕೂಡಲೇ ಸಿಟ್ಟಿಗೇಳು, ವಿರಾಟ ಪರ್ವ,3,3
  738. ಭುಗಿಲೆನ್ನು, ತಟಕ್ಕನೆ ಕೆರಳು, ವಿರಾಟ ಪರ್ವ,3,39
  739. ಭುಜಂಗ ಪ್ರಸರದಲಿ, ನಾಗಲೋಕದ ಜನರಲ್ಲಿ, ಭೀಷ್ಮ ಪರ್ವ,1,13
  740. ಭುಜಗ, ಸರ್ಪ (ಲೋಕ), ವಿರಾಟ ಪರ್ವ,8,61
  741. ಭುಜಗೇಶ್ವರ, ಸರ್ಪರಾಜ, ಸಭಾ ಪರ್ವ,1,88
  742. ಭುಜಬಲನು, ತೋಳ ಶಕ್ತಿಯವನು, ಆದಿ ಪರ್ವ,9,10
  743. ಭುಲ್ಲಣೆ, ಹರ್ಷ, ದ್ರೋಣ ಪರ್ವ,17,33
  744. ಭುಲ್ಲಣೆಯ, ಅತಿಶಯವಾಗುತ್ತಿದ್ದ, ಸಭಾ ಪರ್ವ,10,60
  745. ಭುಲ್ಲಯಿಸು, ಆವೇಶಗೊಳ್ಳು, ಕರ್ಣ ಪರ್ವ,17,2
  746. ಭುಲ್ಲವಣೆ, ಉಬ್ಬುವಿಕೆ, ಆದಿ ಪರ್ವ,15,25
  747. ಭುಲ್ಲವಿಸು, ಸಂತೋಷದಿಂದ ಉಬ್ಬು, ಸಭಾ ಪರ್ವ,9,65
  748. ಭುಲ್ಲವಿಸು, ಉಬ್ಬು, ಅರಣ್ಯ ಪರ್ವ,1,10
  749. ಭುಲ್ಲೈಸಿ, ಉತ್ಸಾಹಿಸಿ, ಗದಾ ಪರ್ವ,13,14
  750. ಭುವನ, ಭೂಮಿ, ಗದಾ ಪರ್ವ,7,4
  751. ಭುವನ, ಜಗತ್ತು, ವಿರಾಟ ಪರ್ವ,1,8
  752. ಭುವನಕರ್ತು, ಲೋಕದ ಸೃಷ್ಟಿಕರ್ತ, ಅರಣ್ಯ ಪರ್ವ,6,50
  753. ಭುವನಖ್ಯಾತ, ವಿಶ್ವವಿಖ್ಯಾತ, ಗದಾ ಪರ್ವ,3,35
  754. ಭುವನಖ್ಯಾತಿ, ಲೋಕಪ್ರಸಿದ್ಧಿ, ವಿರಾಟ ಪರ್ವ,8,52
  755. ಭುವನಜನವಿಖ್ಯಾತ, ಲೋಕಪ್ರಸಿದ್ಧ, ವಿರಾಟ ಪರ್ವ,10,15
  756. ಭುವನದ, ಲೋಕದ, ದ್ರೋಣ ಪರ್ವ,1,43
  757. ಭುವನಪತಿ, ಕೌರವ, ವಿರಾಟ ಪರ್ವ,6,60
  758. ಭುವನಪ್ರಾಣನಾತ್ಮಜ, ವಾಯುವಿನ ವರದಿಂದ ಹುಟ್ಟಿದವ, ಗದಾ ಪರ್ವ,11,41
  759. ಭೂಕಾಮಿನಿ, ಭೂದೇವಿ, ಗದಾ ಪರ್ವ,5,46
  760. ಭೂಜನಜಾಲ, ಭೂಮಿಯ ಜನ ಸಮೂಹ, ಗದಾ ಪರ್ವ,13,1
  761. ಭೂಜರಾಜಿ, ಮರಗಳ ಸಾಲು, ದ್ರೋಣ ಪರ್ವ,12,24
  762. ಭೂತ, ಜೀವಿ, ಉದ್ಯೋಗ ಪರ್ವ,4,99
  763. ಭೂತ ಕದಂಬ, ಭೂತ ಸಮೂಹ, ವಿರಾಟ ಪರ್ವ,9,38
  764. ಭೂತಗಳ ಸಮೂಹ, ಪ್ರಾಣಿಗಳ ಸಮೂಹ, ಆದಿ ಪರ್ವ,20,59
  765. ಭೂತನಾಥ, ಈಶ್ವರ., ಉದ್ಯೋಗ ಪರ್ವ,4,53
  766. ಭೂತಭಾವನ, ಎಲ್ಲ ಪ್ರಾಣಿಗಳಲ್ಲಿ ಅಡಗಿರುವವನು, ಭೀಷ್ಮ ಪರ್ವ,3,81
  767. ಭೂತಳಾಧಿಪ, ಮಹಾರಾಜ ! (ವ್ಯಂಗ್ಯವನ್ನು ಗಮನಿಸಿ), ವಿರಾಟ ಪರ್ವ,8,76
  768. ಭೂತಾಳಿ, ಪ್ರಾಣಿಗಳ ಸಮೂಹ, ಆದಿ ಪರ್ವ,20,67
  769. ಭೂದಾರ, ಕಾಡುಹಂದಿ, ಆದಿ ಪರ್ವ,9,9
  770. ಭೂಪತಿಯ ನೇಮದಲಿ, ಧೃತರಾಷ್ಟ್ರ ರಾಜನ ಅಪ್ಪಣೆಯಂತೆ ಆ ಪಾರ್ಥ, ಸಭಾ ಪರ್ವ,3,0
  771. ಭೂಪತಿವ್ರಾತ, ರಾಜರ ಸಮೂಹ, ಸಭಾ ಪರ್ವ,1,5
  772. ಭೂಪಾಲ, ದೊರೆ (ಪಾಂಡು), ವಿರಾಟ ಪರ್ವ,10,42
  773. ಭೂಪಾಲಕರು, ಆ ಧರಣಿಪಾಲಕರಾದ ಮೂವರೂ, ಸಭಾ ಪರ್ವ,2,63
  774. ಭೂಭಾರ, ಭೂಮಿಗೆ ಭಾರವಾಗುವಷ್ಟು ಜನಸಂಖ್ಯೆ, ಗದಾ ಪರ್ವ,13,13
  775. ಭೂಭಾರಭಂಜಕ, ಭೂಮಿಯ ಭಾರವನ್ನು ನಾಶ ಮಾಡುವವನು, ಗದಾ ಪರ್ವ,9,24, ,
  776. ಭೂಭುಜರ, ಕ್ಷತ್ರಿಯರು, ಉದ್ಯೋಗ ಪರ್ವ,1,11
  777. ಭೂಮಂಡಲಾಧಿಪ, ಭೂಮಂಡಲಕ್ಕೆ ಒಡೆಯ, ಗದಾ ಪರ್ವ,10,3
  778. ಭೂಮಾನ, ಅಖಾಡ, ಭೀಷ್ಮ ಪರ್ವ,4,69
  779. ಭೂಮಿಪತಿ, (ಧರ್ಮರಾಯ) ರಾಜ, ವಿರಾಟ ಪರ್ವ,1,225
  780. ಭೂಮಿಲಂಬ, ಭೂಮಿಯ ಅಗಲವನ್ನು ವ್ಯಾಪಿಸಿ ಕೊಂಡಿರುವುದು, ಆದಿ ಪರ್ವ,12,1
  781. ಭೂಯಂತ್ರ, ಭೂಮಿಯೆಂಬ ಯಂತ್ರ, ದ್ರೋಣ ಪರ್ವ,8,62
  782. ಭೂರಿ, ಅಪಾರ, ಭೀಷ್ಮ ಪರ್ವ,1,4
  783. ಭೂರಿ, ಹೇರಳ, ಉದ್ಯೋಗ ಪರ್ವ,8,54
  784. ಭೂರಿ, ಹೆಚ್ಚಾದ , ಗದಾ ಪರ್ವ,5,40
  785. ಭೂರಿ, ದೊಡ್ಡದಾದ, ಗದಾ ಪರ್ವ,4,13
  786. ಭೂರಿಬಲ, ಮಹಾಸೇನೆ, ಭೀಷ್ಮ ಪರ್ವ,8,11
  787. ಭೂರಿಬಲ, ಅಧಿಕವಾದ ಸೈನ್ಯ, ಗದಾ ಪರ್ವ,12,14
  788. ಭೂರಿಬಾಣ, ದೊಡ್ಡಬಾಣ, ಭೀಷ್ಮ ಪರ್ವ,9,43
  789. ಭೂರುಹ, ವೃಕ್ಷ, ದ್ರೋಣ ಪರ್ವ,18,54
  790. ಭೂವರ, ರಾಜ (ಇಲ್ಲಿ ಧರ್ಮರಾಯ) ಯಮಳರು, ಗದಾ ಪರ್ವ,3,30
  791. ಭೂಸುರಾಗ್ರಣಿ, ಬ್ರಾಹ್ಮಣರಲ್ಲಿ ಅಗ್ರಗಣ್ಯನಾದವನು, ಗದಾ ಪರ್ವ,11,52
  792. ಭೃಗುಸುತ, ಪರಶುರಾಮ, ಆದಿ ಪರ್ವ,2,36
  793. ಭೃತ್ಯ, ಭಕ್ತ , ಭೀಷ್ಮ ಪರ್ವ,7,16
  794. ಭೇಕ, ಕಪ್ಪೆ, ಸಭಾ ಪರ್ವ,1,54
  795. ಭೇದಗೊಳದ, ವಾದಸರಣಿಗೆ ಒಳಗಾಗದ, ಭೀಷ್ಮ ಪರ್ವ,3,64
  796. ಭೇದಿಸಿದರು, ತಿಳಿದರು , ಗದಾ ಪರ್ವ,13,6
  797. ಭೈತ್ರ, ನಾವೆ, ಅರಣ್ಯ ಪರ್ವ,14,20
  798. ಭೋಕ್ತವ್ಯ, ಅನುಭವಿಸತಕ್ಕದ್ದು, ಕರ್ಣ ಪರ್ವ,17,16
  799. ಭೋಗ, ಅನುಭವಿಸುವುದು, ದ್ರೋಣ ಪರ್ವ,1,10
  800. ಭೋಗವತೀ, ಪಾತಾಳಲೋಕದಲ್ಲಿನ ಒಂದು ಸುಂದರವಾದ ಪಟ್ಟಣ, ಆದಿ ಪರ್ವ,18,14
  801. ಭೋಗಿಸು, ಅನುಭವಿಸು, ಆದಿ ಪರ್ವ,14,31
  802. ಭೋಜ, ಕೃತವರ್ಮ, ಗದಾ ಪರ್ವ,10,1
  803. ಭೋಜ್ಯ, ಉಣ್ಣುವ, ಉದ್ಯೋಗ ಪರ್ವ,3,62
  804. ಭೋರನೆ, ರಭಸದಿಂದ, ಉದ್ಯೋಗ ಪರ್ವ,8,54
  805. ಭೌಮ, ಭೂಮಿಗೆ ಸಂಬಂಧಿಸಿದ, ಗದಾ ಪರ್ವ,1,21
  806. ಭೌಮ, ಮಂಗಳಗ್ರಹ, ಸಭಾ ಪರ್ವ,13,3
  807. ಭ್ರಮಣ, ಸುತ್ತುವಿಕೆ, ಆದಿ ಪರ್ವ,19,1
  808. ಭ್ರಮಣ, ತಿರುಗಾಟ, ಆದಿ ಪರ್ವ,19,8
  809. ಭ್ರಮಿತ, ಭ್ರಮೆಗೊಳಗಾದವನು, ಆದಿ ಪರ್ವ,15,13
  810. ಭ್ರಮೆ, ಒಂದು ವಸ್ತುವಿನಲ್ಲಿ ಉಂಟಾಗುವ ತದೇಕ ಧ್ಯಾನ ಅಥವಾ ಅತ್ಯಾಸೆ, ಭೀಷ್ಮ ಪರ್ವ,7,20
  811. ಭ್ರುಕಟಿ, ಹುಬ್ಬುಗಂಟಿಕ್ಕು, ಆದಿ ಪರ್ವ,19,44
  812. ಭ್ರುಕುಟಿ, ಹುಬ್ಬು, ಗದಾ ಪರ್ವ,9,43
  813. ಭ್ರೂಲತೆ, ಹುಬ್ಬು, ಉದ್ಯೋಗ ಪರ್ವ,6,17
  814. ಭ್ರೂಲತೆ, ಹುಬ್ಬಿನ ಬಳ್ಳಿ, ಆದಿ ಪರ್ವ,13,34
  815. ಮಂಗಳ ಪಾಠಕರ, ಉದಯರಾಗ ಪಾಡುವವರ, ಭೀಷ್ಮ ಪರ್ವ,8,3
  816. ಮಂಜಿಡಿಕೆ, ಮಂಕು ಕವಿಯುವುದು. ಬದಗ, ಅರಣ್ಯ ಪರ್ವ,19,25
  817. ಮಂಡಲಿಸಿ, ಸುತ್ತುವರಿದು, ದ್ರೋಣ ಪರ್ವ,6,38

[೧][೨][೩]

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ